NEWS

Actor Darshan: ಬೆನ್ನು ನೋವಷ್ಟೇ ಅಲ್ಲ, ದರ್ಶನ್‌ಗೆ ಕಾಡ್ತಿದ್ಯಾ ಆ ಆರೋಗ್ಯದ ಸಮಸ್ಯೆ? ಕೋಟ್‌‌‌ನಲ್ಲಿ ವಕೀಲರು ಹೇಳಿದ್ದೇನು?

ನಟ ದರ್ಶನ್ ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಬಂಧನಕ್ಕೊಳಗಾಗಿದ್ದ ನಟ ದರ್ಶನ್‌ (Darshan) ಅವರಿಗೆ ಸದ್ಯ ದೀಪಾವಳಿಯ (Deepavali) ಸಂದರ್ಭದಲ್ಲಿ ಬಿಗ್ ರಿಲೀಫ್ ಸಿಕ್ಕಿದೆ. ದರ್ಶನ್ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಇಂದು (ಅಕ್ಟೋಬರ್ 30) ರಂದು 6 ವಾರಗಳ ಮಧ್ಯಂತರ ಜಾಮೀನು (Interim bail) ನೀಡಿ ಆದೇಶ ಹೊರಡಿಸಿದೆ. ದರ್ಶನ್‌ಗೆ ಕಾಡ್ತದೆ ಆರೋಗ್ಯ ಸಮಸ್ಯೆ ವಿಚಾರಣೆ ಸಂದರ್ಭದಲ್ಲಿ ದರ್ಶನ್‌ ಅವರ ಆರೋಗ್ಯ ಸಮಸ್ಯೆ ಬಗ್ಗೆ ದರ್ಶನ್ ಪರ ವಕೀಲರಾದ ಸಿ.ವಿ ನಾಗೇಶ್ ಅವರು ಇಂಚಿಂಚೂ ಮಾಹಿತಿ ನೀಡಿದ್ದಾರೆ. ಸೂಕ್ತ ಚಿಕಿತ್ಸೆ ಪಡೆಯದೇ ಇದ್ದರೆ ಭಾರಿ ಸಮಸ್ಯೆಯಾಗುತ್ತದೆ ಎಂದು ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಬೆನ್ನು ನೋವಿನ ಜೊತೆ ಹಲವು ಸಮಸ್ಯಗಳ ಉಲ್ಲೇಖ ಬೆನ್ನಿನ ನರದಲ್ಲಿ ನೋವು ಕಾಣಿಸಿಕೊಂಡಿದ್ದು, ನರದ ಸಮಸ್ಯೆಯಿಂದ ಪಾದದಲ್ಲಿ ಸ್ಪರ್ಶ ಕಡಿಮೆಯಾಗಿದೆ. ಮುಂದೆ ಮೂತ್ರನಾಳದ ಸಮಸ್ಯೆಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ದರ್ಶನ್‌ಗೆ ಫಿಸಿಯೋಥೆರಪಿ ಹಾಗೂ ಬೆನ್ನುಹುರಿ ನೋವಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಸದ್ಯ ಅವರಿಗೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ. ಇಲ್ಲದಿದ್ದರೆ ಅವರಿಗೆ ಲಕ್ವ ಹೊಡೆಯುವ (ಪಾರ್ಶ್ವವಾಯು) ಸಾಧ್ಯತೆ ಇದೆ ಎಂದು ದರ್ಶನ್ ಪರ ವಕೀಲರು ವಾದ ಮಂಡಿಸಿದ್ದರು. ದರ್ಶನ್‌ಗೆ ತುರ್ತು ಚಿಕಿತ್ಸೆ ಅಗತ್ಯ ಎಂಆರ್‌ಐ, ಸಿಟಿ ಸ್ಕ್ಯಾನ್ ಮಾಡಿಸಲಾಗಿದೆ. ಕುಟುಂಬದ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು. ನ್ಯೂರೋ ಸರ್ಜನ್ ಮೂರು ಅಂಶಗಳನ್ನು ಹೇಳಿದ್ದಾರೆ. ನಂಬ್‌ನೆಸ್ ಇದೆ, ರಕ್ತಪರಿಚಲನೆ ಆಗುತ್ತಿಲ್ಲ, ಇದರಿಂದ ಕಿಡ್ನಿಗೆ ಸಮಸ್ಯೆ ಆಗಬಹುದು. ಡಿಸ್ಕ್ ಸಮಸ್ಯೆ ಇದೆ. ತಕ್ಷಣ ಸರ್ಜರಿಗೆ ಸೂಚಿಸಿದ್ದಾರೆ. ಇಲ್ಲವಾದರೆ ಪ್ಯಾರಾಲಿಸಿಸ್ (ಲಕ್ವ) ಆಗಬಹುದು. ಕಾಲಿಗೆ ಲಕ್ವ ಹೊಡೆಯುವ (ಪಾರ್ಶ್ವವಾಯು) ಸಾಧ್ಯತೆ ಇದೆ. ಈ ಕಾರಣಕ್ಕಾಗಿ ಅವರಿಗೆ ಚಿಕಿತ್ಸೆ ಕೊಡಿಸಲು ಜಾಮೀನು ನೀಡಬೇಕೆಂದೇ ದರ್ಶನ್ ವಕೀಲರು ವಾದ ಮಂಡಿಸಿದ್ದರು. ಬೇಲ್ ಸಿಗಲು ಇದೇ ಪ್ರಮುಖ ಕಾರಣ! ಸದ್ಯ ನಟ ದರ್ಶನ್ ಅವರಿಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದ್ದು, ಅವರಿಗೆ 6 ವಾರಗಳ ಮಧ್ಯಂತರ ನೋಟಿಸ್ ನೀಡಿ ಆದೇಶ ಹೊರಡಿಸಿದೆ. ಹೈಕೋರ್ಟ್ ವೈದ್ಯಕೀಯ ಆಧಾರದ ಮೇಲೆ ಮಧ್ಯಂತರ ಆದೇಶ ನೀಡಿದೆ. ಮೈಸೂರಿನ ಅಪೋಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದು, ಚಿಕಿತ್ಸೆಗೆ ದಾಖಲಾದ ಒಂದು ವಾರದೊಳಗೆ ಚಿಕಿತ್ಸೆಯ ವಿವರವನ್ನು ಕೋರ್ಟ್‌ಗೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಷರತ್ತು ವಿಧಿಸಿದೆ. 131 ದಿನಗಳ ಜೈಲು ವಾಸದ ಬಳಿಕ ಕೊನೆಗೂ ನಟ ದರ್ಶನ್ ಅವರಿಗೆ ಬಿಡುಗಡೆಯಾ ಭಾಗ್ಯ ಸಿಕ್ಕಂತಾಗಿದೆ. ಇನ್ನೂ ದರ್ಶನ್ ಅವರು ಜೈಲಿನಿಂದ ಯಾವಾಗ ಆಚೆ ಬರುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.