NEWS

MUDA Caseನಲ್ಲಿ ಸಿಎಂ ಆಪ್ತರಿಗೂ ಶಾಕ್! ರಾಕೇಶ್ ಪಾಪಣ್ಣ ಮನೆ ಮೇಲೆ ರೇಡ್; EDಯಿಂದ ಮಾಜಿ ಆಯುಕ್ತ ನಟೇಶ್ ವಿಚಾರಣೆ

ಮುಡಾ ಹರಗಣ (ಸಾಂದರ್ಭಿಕ ಚಿತ್ರ) ಮೈಸೂರು: 2020 ರಿಂದ 2022ರ ವರೆಗೆ ಮುಡಾ (MUDA Case) ಆಯುಕ್ತರಾಗಿದ್ದ ಡಿ.ಬಿ.ನಟೇಶ್‌ರನ್ನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು (Enforcement Directorate) ಬಂಧಿಸಿದ್ದಾರೆ. ನಿನ್ನೆ 14 ಗಂಟೆಗಳ ದಾಳಿ ನಡೆಸಿದ್ದರು. ನಿನ್ನೆಯೂ 8 ಗಂಟೆಗಳ ಕಾಲ ಮಲ್ಲೇಶ್ವರ ಹತ್ತನೇ ಕ್ರಾಸ್ ನಲ್ಲಿರುವ ನಟೇಶ್ ಮನೆಯಲ್ಲಿ ಶೋಧ ಮಾಡಿ 2 ಬ್ಯಾಗ್‌ನಲ್ಲಿ ದಾಖಲೆಗಳನ್ನ ವಶಪಡಿಸಿಕೊಂಡಿದ್ದಾರೆ. ಆಮೇಲೆ ಡಿ.ಬಿ.ನಟೇಶ್‌‌ರನ್ನ (TB Natesh) ಇಡಿ ಅಧಿಕಾರಿಗಳು ಬಂಧನ ಮಾಡಿದ್ದಾರೆ. ನಟೇಶ್‌ ಮುಡಾ ಆಯುಕ್ತರಾಗಿದ್ದಾಗಲೇ ಸಿಎಂ ಸಿದ್ದರಾಮಯ್ಯ (CM Siddaramaiah) ಪತ್ನಿಗೆ 50:50 ಅನುಪಾತದಲ್ಲಿ ವಿಜಯನಗರದಲ್ಲಿ 14 ಸೈಟ್ ಮಂಜೂರಾಗಿತ್ತು. ಸಿಎಂ ಬೆಂಬಲಿಗ ರಾಕೇಶ್‌ ಪಾಪಣ್ಣ ಇ.ಡಿ ವಶಕ್ಕೆ ಕಾಂಗ್ರೆಸ್‌ ನಾಯಕ ರಾಕೇಶ್ ಪಾಪಣ್ಣ ಮನೆಯಲ್ಲಿ ಅಹೋರಾತ್ರಿ ಕಳೆದ ಇ.ಡಿ ಅಧಿಕಾರಿಗಳು ಸಂಪೂರ್ಣ ತಲಾಶ್ ನಡೆಸಿದ್ದರು. ಹಿನಕಲ್ ನಿವಾಸದಲ್ಲಿ ರಾಕೇಶ್‌ ಪಾಪಣ್ಣ ಕುಟುಂಬದವರನ್ನೂ ಬೆಳಗ್ಗೆಯಿಂದ ಮನೆಯಲ್ಲೇ ತೀವ್ರ ವಿಚಾರಣೆ ಮಾಡಿದ್ದರು. ಕತ್ತಲಾಗ್ತಿದ್ದಂತೆ ರಾಕೇಶ್‌ ಪಾಪಣ್ಣನನ್ನೂ ಇ.ಡಿ ವಶಕ್ಕೆ ಪಡೆದುಕೊಂಡು ಬೆಂಗಳೂರಿನ ಇ.ಡಿ ಕಚೇರಿಗೆ ಕರ್ಕೊಂಡು ಬಂದು ವಿಚಾರಣೆ ನಡೆಸ್ತಿದ್ದಾರೆ. ಬಿಲ್ಡರ್‌ ಮಂಜುನಾಥ್‌ಗೂ ಬಂಧನದ ಭಯ ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಬಿಲ್ಡರ್‌ ಎನ್‌.ಮಂಜುನಾಥ್‌ ನಿವಾಸದಲ್ಲೂ ಇಡಿ ದಾಳಿ ಅಂತ್ಯಗೊಳಿಸಿದೆ. ಮೊನ್ನೆ 15 ಗಂಟೆ ಶೋಧ ನಡೆಸಿ ತೆರಳಿದ್ದ ಇ.ಡಿ ಅಧಿಕಾರಿಗಳು ನಿನ್ನೆಯೂ ಮತ್ತೆ ಬಿಲ್ಡರ್‌‌ ಮನೆಯನ್ನ ಇಂಚಿಂಚೂ ಶೋಧ ನಡೆಸಿದ್ದರು. ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ 50-50 ಅನುಪಾತಕ್ಕೆ ಸಂಬಂಧಿಸಿದಂತೆ ಕೆಲ ಪ್ರಮುಖ ರಾಜಕಾರಣಿಗಳ ಬೇನಾಮಿ ಆಸ್ತಿಗೂ ಸಂಬಂಧಿಸಿದ ಮಹತ್ವದ ದಾಖಲೆಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ ಇ.ಡಿ ಅಧಿಕಾರಿಗಳು, ಬಿಲ್ಡರ್‌ ಮಂಜುನಾಥ್‌‌ನನ್ನೂ ಇಡಿ ವಶಕ್ಕೆ ಪಡೆಯೋ ಸಾಧ್ಯತೆಯಿದೆ. ಗಾರೆ ಕೆಲಸಕ್ಕೆ ಬಂದವನು ನೂರಾರು ಕೋಟಿ ಒಡೆಯ ಮೈಸೂರಲ್ಲಿ ಜಯರಾಮ್‌ ಅನ್ನೋ ಉದ್ಯಮಿಯ ಮೇಲೂ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗಾರೆ ಕೆಲಸಕ್ಕೆ ಮೈಸೂರಿಗೆ ಬಂದಿದ್ದ ಜಯರಾಮ್ ಇಂದು ನೂರಾರು ಕೋಟಿ ಒಡೆಯ. ಮುಡಾ ಹಗರಣದಲ್ಲೂ ಪಾತ್ರಧಾರಿ, ಮುಡಾ ಮಾಜಿ ಆಯುಕ್ತ ದಿನೇಶ್‌ಕುಮಾರ್‌ಗೂ ಪರಮಾಪ್ತ. ಹಾಗಾಗಿನೇ ಜಯರಾಂಗೆ ಸೇರಿದ್ದ ಎಂ.ಎಂ.ಜಿ ಕನ್‌ಸ್ಟ್ರಕ್ಷನ್‌‌ ಮೇಲೆ ಇಡಿ ದಾಳಿ ಮಾಡಿ ಕೆಲ ದಾಖಲೆಗಳನ್ನ ಸೀಜ್‌ ಮಾಡಿದೆ. ಇದನ್ನೂ ಓದಿ: Actor Darshan: ಜಾಮೀನು ಅರ್ಜಿ ವಿಚಾರಣೆ ಮುನ್ನವೇ ನಟ ದರ್ಶನ್​ಗೆ ಗುಡ್‌ನ್ಯೂಸ್; ಈ ಕೇಸ್​​​ನಲ್ಲಿ ಕ್ಲೀನ್‌ಚಿಟ್ ಸಾಧ್ಯತೆ! ಪರಾರಿಯಾದ ದಿನೇಶ್‌ಕುಮಾರ್‌ಗಾಗಿ ಶೋಧ ಬೆಂಗಳೂರಿನ ಬಾಣಸವಾಡಿಯ ದೀಪಿಕಾ ರಾಯಲ್‌ ಅಪಾರ್ಟ್‌ಮೆಂಟ್‌ನಲ್ಲಿ ಇ.ಡಿ ಶೋಧ ಮುಗಿಸಿದೆ. ಮುಡಾದ ಹಿಂದಿನ ಆಯುಕ್ತ ದಿನೇಶ್‌ಕುಮಾರ್‌ ಫ್ಲಾಟ್‌ನಲ್ಲೆಲ್ಲಾ ಜಾಲಾಡಿ ಮಹತ್ವದ ದಾಖಲೆಗಳನ್ನ ಸೀಜ್‌ ಮಾಡಿದೆ. ಇ.ಡಿ ದಾಳಿ ಆಗ್ತಿದ್ದಂತೆ ಊರು ಬಿಟ್ಟಿರೋ ದಿನೇಶ್‌ಗಾಗಿ ಹುಡುಕಾಟ ನಡೆಯುತ್ತಿದೆ. ಇ.ಡಿಗೆ ಮತ್ತಷ್ಟು ದಾಖಲೆ ಕೊಟ್ಟ ಗಂಗರಾಜು ಮುಡಾ ಹಗರಣದಲ್ಲಿ ಮೂಲಕ್ಕೆ ಕೈ ಹಾಕಿದ ಇ.ಡಿ, ನೇರವಾಗಿ ಸಿಎಂ ಕೇಸ್ ಅಲ್ಲದೆ, ಸಂಪೂರ್ಣ ಹಗರಣದ ತನಿಖೆ ನಡೆಸ್ತಿದೆ. ಗಂಗರಾಜುರಿಂದ ಪಡೆದ ದಾಖಲೆಯನ್ನ ಪರಿಶೀಲನೆ ಮಾಡಿದ್ದಾರೆ. ಮತ್ತಷ್ಟು ದಾಖಲೆಗಳನ್ನ ಸಂಗ್ರಹಿಸಿರುವ ಇಡಿ ತನಿಖೆ ಚುರುಕುಗೊಳಿಸಿದೆ. (ವರದಿ: ಆನಂದ್‌ ಜೊತೆ ಗಂಗಾಧರ್ ವಾಗಟ, ನ್ಯೂಸ್‌ 18 ಕನ್ನಡ, ಬೆಂಗಳೂರು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.