NEWS

Jobs in Koppal: ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿದೆ ಉದ್ಯೋಗಾವಕಾಶ- ಆಸಕ್ತರು ಇವತ್ತೇ ಅಪ್ಲೈ ಮಾಡಿ

ಸಾಂದರ್ಭಿಕ ಚಿತ್ರ DHFWS Koppal Recruitment 2024: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕೊಪ್ಪಳ (District Health and Family Welfare Society Koppal- DHFWS) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 14 ಸ್ಪೆಷಲಿಸ್ಟ್‌ ಡಾಕ್ಟರ್ಸ್‌, ನರ್ಸಿಂಗ್‌ ಆಫೀಸರ್‌ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್‌ 30, 2024 ಅಂದರೆ ಇವತ್ತೇ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಆಸಕ್ತರು ಆನ್‌ಲೈನ್‌(Online) ಮೂಲಕ ಅಪ್ಲೈ ಮಾಡಬೇಕು. ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಹುದ್ದೆಯ ಮಾಹಿತಿ: ಅರಿವಳಿಕೆ ತಜ್ಞ-1 ಶಿಶುವೈದ್ಯ -1 ವಿಕಿರಣಶಾಸ್ತ್ರಜ್ಞ - ನರ್ಸಿಂಗ್ ಅಧಿಕಾರಿ-11 ಇದನ್ನೂ ಓದಿ: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೋಟಿ ಗಾಯತ್ರಿಯಾಗ ಕಣ್ತುಂಬಿಕೊಂಡ ಜನರು ವಿದ್ಯಾರ್ಹತೆ: ಅರಿವಳಿಕೆ ತಜ್ಞ- ಡಿಎ, ಡಿಎನ್‌ಬಿ, ಎಂ.ಡಿ ಶಿಶುವೈದ್ಯ -ಡಿಸಿಎಚ್‌, ಡಿಎನ್‌ಬಿ, ಎಂ.ಡಿ ವಿಕಿರಣಶಾಸ್ತ್ರಜ್ಞ - ಎಂ.ಡಿ ನರ್ಸಿಂಗ್ ಅಧಿಕಾರಿ- ಬಿ.ಎಸ್ಸಿ, ಜಿಎನ್‌ಎಂ ವಯೋಮಿತಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಕೊಪ್ಪಳ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಅಕ್ಟೋಬರ್‌ 30, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 45 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ. ಅರ್ಜಿ ಶುಲ್ಕ: ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕ ಪಾವತಿಸುವಂತಿಲ್ಲ. ವೇತನ: ಅರಿವಳಿಕೆ ತಜ್ಞ- ಮಾಸಿಕ ₹ 1,30,000 ಶಿಶುವೈದ್ಯ - ಮಾಸಿಕ ₹ 1,30,000 ವಿಕಿರಣಶಾಸ್ತ್ರಜ್ಞ -ಮಾಸಿಕ ₹ 1,30,000 ನರ್ಸಿಂಗ್ ಅಧಿಕಾರಿ- ಮಾಸಿಕ ₹ 15,555 ಉದ್ಯೋಗದ ಸ್ಥಳ: ಕೊಪ್ಪಳ ಆಯ್ಕೆ ಪ್ರಕ್ರಿಯೆ: ಮೆರಿಟ್‌ ಲಿಸ್ಟ್‌ ಸಂದರ್ಶನ ಅರ್ಜಿ ಹಾಕೋದು ಹೇಗೆ? ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ. **ಪ್ರಮುಖ ದಿನಾಂಕಗಳು: ** ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 14/10/2024 ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್‌ 30, 2024 (ಇಂದು) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.