NEWS

Google: ಗೂಗಲ್‌ಗೆ ಬರೋಬ್ಬರಿ 26,172 ಕೋಟಿ ದಂಡ! 15 ವರ್ಷಗಳ ಕಾನೂನು ಹೋರಾಟದಲ್ಲಿ ಗೆದ್ದ ದಂಪತಿ

ಸಾಂದರ್ಭಿಕ ಚಿತ್ರ Google ಕಳೆದ 15 ವರ್ಷಗಳಿಂದ ನಿರಂತರ ಕಾನೂನು (Law) ಹೋರಾಟದ ಬಳಿಕ ಇಂಗ್ಲೆಂಡ್ (England) ಮೂಲದ ದಂಪತಿಗೆ ಗೆಲುವು ಸಿಕ್ಕಿದ್ದು, ಟೆಕ್ ಜಾಯಿಂಟ್ ಗೂಗಲ್‌ಗೆ (Google) ಸೋಲಾಗಿದೆ. ಶಾಪಿಂಗ್ ಹೋಲಿಕೆ ಸೇವೆಯ ಮಾರುಕಟ್ಟೆ (Market) ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಸುಮಾರು 26,172 ಕೋಟಿ ರೂಪಾಯಿ (2.4 ಬಿಲಿಯನ್ ಪೌಂಡ್‌ಗಳನ್ನು) ದಂಡವಾಗಿ ಪಾವತಿಸಲು ಆದೇಶಿಸಲಾಗಿದೆ. ಟೆಕ್ ದೈತ್ಯ ಯುರೋಪ್‌ನ ಉನ್ನತ ನ್ಯಾಯಾಲಯದಲ್ಲಿ 2017 ರಲ್ಲಿ ಯುರೋಪಿಯನ್ ಕಮಿಷನ್ ವಿಧಿಸಿದ ದಂಡದ ತೀರ್ಪಿಗೆ ವಿರುದ್ಧವಾಗಿ ಮೇಲ್ಮನವಿ ಸಲ್ಲಿಸಿತ್ತು. ಯುರೋಪಿಯನ್ ಕೋರ್ಟ್ ಆಫ್ ಜಸ್ಟಿಸ್ (European Court of Justice) ಸೆಪ್ಟೆಂಬರ್‌ನಲ್ಲಿ ಗೂಗಲ್ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಿದೆ ಎಂದು ಬಿಬಿಸಿ ವರದಿ ಮಾಡಿದೆ. ವೆಬ್‌ಸೈಟ್‌ಗೆ ಹಿನ್ನಡೆ ಹಿನ್ನೆಲೆ ಕೋರ್ಟ್ ಮೊರೆ ಹೋದ ದಂಪತಿ ಇಂಗ್ಲೆಂಡ್‌ನ ಶಿವೌನ್ ಮತ್ತು ಆಡಂ ರೈಫ್‌ ದಂಪತಿಗಳು ಸೇರಿ 2006ರಲ್ಲಿ ‘ಪೌಂಡಮ್’ ಹೆಸರಿನ ವೆಬ್‌ಸೈಟ್ ಒಂದನ್ನು ಆರಂಭಿಸಿದ್ದರು. ಇದೊಂದು ಬೆಲೆ ಹೋಲಿಕೆಯ (Price Comparison) ವೆಬ್‌ಸೈಟ್ ಆಗಿದ್ದು, ಲೈವ್ ಹೋಗುತ್ತಿದ್ದಂತೆ ಇದರ ವಿಸಿಬಿಲಿಟಿ ಸತತವಾಗಿ ಕುಸಿತ ಕಾಣಲಾರಂಭಿಸಿತು. ವೆಬ್‌ಸೈಟ್‌ನ ವಿಸಿಬಿಲಿಟಿಗೆ ಹಿನ್ನಡೆ ವಿಶೇಷವಾಗಿ Googleನಲ್ಲಿ ‘price comparison’ ಮತ್ತು ‘shopping’ ಪದಗಳಲ್ಲಿ ವೆಬ್‌ಸೈಟ್ ಅನ್ನು ಸರ್ಚ್ ಮಾಡಲಾಗುತ್ತಿತ್ತು. ನಂತರ ಗೂಗಲ್‌ನ ಆಟೋಮೆಟಿಕ್ ಸ್ಪ್ಯಾಮ್ ಫಿಲ್ಟರ್‌ನ ಸರ್ಚ್ ಪೆನೆಲ್ಟಿಯಿಂದಾಗಿ ವೆಬ್‌ಸೈಟ್ ವಿಸಿಬಿಲಿಟಿ ಕಡಿಮೆಯಾಗಿದೆ ಎಂಬ ವಿಷಯ ದಂಪತಿಗೆ ಗೊತ್ತಾಗಿದೆ. ಇದರಿಂದ ತೀವ್ರ ನಿರಾಸೆಗೊಂಡ ದಂಪತಿಗಳು ಕೋರ್ಟ್ ಮೊರೆ ಹೋಗಿದ್ದರು. 2010ರಿಂದ ವೇಗ ಪಡೆದುಕೊಂಡಿದ್ದ ಪ್ರಕರಣ ಈ ಕುರಿತು ಬಿಬಿಸಿ ಜೊತೆ ಮಾತನಾಡಿರುವ ಆಡಂ, ನಮ್ಮ ಪೇಜ್ ಮತ್ತು Ranking ದಿನೇ ದಿನೇ ಕುಸಿಯಲಾರಂಭಿಸಿತು. ಇದರ ಬಳಿಕ ನಾವು ಸರಿಯಾಗಿ ಕೆಲಸ ಮಾಡಬೇಕೆಂದು ಯೋಚಿಸಿದೆವು. ವಿಶೇಷ ತಜ್ಞರ ಜೊತೆ ಚರ್ಚಿಸುವ ಕುರಿತು ಯೋಚಿಸಿದೆವು. ಎರಡು ವರ್ಷಗಳ ನಮ್ಮ ನಿರಂತರ ಪ್ರಯತ್ನದ ಹೊರತಾಗಿಯೂ ಗೂಗಲ್‌ನಿಂದ ಯಾವುದೇ ಬದಲಾವಣೆಗಳಾಗಲಿಲ್ಲ. ಫೌಂಡಮ್ ಟ್ರಾಫಿಕ್ ಸಹ ಹಂತ ಹಂತವಾಗಿ ಕ್ಷೀಣಿಸುತ್ತಲೇ ಇತ್ತು. ಇದಾದ ಬಳಿಕ ಆಡಂ 2010ರಲ್ಲಿ ಯುರೋಪಿಯನ್ ಕಮಿಷನ್ ಸಂಪರ್ಕಿಸಿದಾಗ ಪ್ರಕರಣದ ವೇಗ ಪಡೆದುಕೊಂಡಿತು ಎಂದರು. 2017ರಲ್ಲಿ ತೀರ್ಪು ನೀಡಿದ್ದ ಯುರೋಪಿಯನ್ ಕಮಿಷನ್ ಫೌಂಡಮ್ ಸ್ಪರ್ಧೆಗೆ ಹೋಲಿಸಿದ್ರೆ ಗೂಗಲ್ ತನ್ನದೇ ಶಾಪಿಂಗ್ ಸೇವೆಯನ್ನು ಉತ್ತೇಜಿಸುತ್ತಿದೆ ಎಂಬುವುದು ಆಂಟಿಟ್ರಸ್ಟ್ ತನಿಖೆ ಮೂಲಕ ತಿಳಿದು ಬಂದಿದೆ. 2017ರಲ್ಲಿ ತನಿಖಾ ವರದಿಯನ್ನು ಆಧರಿಸಿ ಯುರೋಪಿಯನ್ ಕಮಿಷನ್ ತೀರ್ಪು ನೀಡಿತ್ತು. ಗೂಗಲ್ ಮಾರುಕಟ್ಟೆಯ ಮೇಲಿನ ತನ್ನ ನಿಯಂತ್ರಣವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಹೇಳಿತು. ನಂತರ ಗೂಗಲ್‌ಗೆ 2.4 ಬಿಲಿಯನ್ ಪೌಂಡ್ ದಂಡ ವಿಧಿಸಿತು. ತೀರ್ಪು ಎತ್ತಿ ಹಿಡಿದ ಯುರೋಪಿಯನ್ ಕೋರ್ಟ್ ಯುರೋಪಿಯನ್ ಕಮಿಷನ್ ನೀಡಿದ್ದ ತೀರ್ಪು ಪ್ರಶ್ನಿಸಿ ಗೂಗಲ್ ಯುರೋಪಿಯನ್ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬರೋಬ್ಬರಿ 7 ವರ್ಷಗಳ ಸುಧೀರ್ಘ ವಿಚಾರಣೆ ನಡೆಸಿದ ಕೋರ್ಟ್ ಅಂತಿಮವಾಗಿ 2024ರಲ್ಲಿ ಯುರೋಪಿಯನ್ ಕಮಿಷನ್ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.