NEWS

Birth Mark: ನಿಮಗೆ ಈ ಜಾಗದಲ್ಲಿ ಮಚ್ಚೆ ಇದ್ಯಾ? ಇದರಲ್ಲೇ ತಿಳಿಯಬಹುದು ನಿಮ್ಮ ವ್ಯಕ್ತಿತ್ವ!

ಹುಟ್ಟಿದ ದಿನಾಂಕದಿಂದ (Date Of Birth) ಮಾತ್ರವಲ್ಲ ಮಚ್ಚೆಯಿಂದಲೂ ಒಬ್ಬರ ವ್ಯಕ್ತಿತ್ವವನ್ನು (Personality) ತಿಳಿಯಬಹುದು ಎಂದು ಹಲವರು ಹೇಳುತ್ತಾರೆ. ಆಧ್ಯಾತ್ಮಿಕ ದೃಷ್ಟಿಯಿಂದ ನಾವು ಜೀವನದಲ್ಲಿ ಕಲಿಯಬೇಕಾದ ಪಾಠಗಳು, ನಮ್ಮ ಹಿಂದಿನ ಜೀವನ ಸಂಬಂಧಗಳು, ಜೀವನದಲ್ಲಿ ನಾವು ಎದುರಿಸುತ್ತಿರುವ ಸವಾಲುಗಳು ಮತ್ತು ನಮ್ಮ ಗುರಿ ಏನು ಎಂಬುವುದನ್ನು ತಿಳಿಯಬಹುದು. ಅಲ್ಲದೇ ಕೆಲ ಮಂದಿ ಮಚ್ಚೆಗಳು ದೇವರು ನೀಡಿರುವ ಕಾಣಿಕೆ ಮತ್ತು ರಕ್ಷಣೆಯ ಸಂಕೇತವೆಂದು ನಂಬುತ್ತಾರೆ. ನಿಜಕ್ಕೂ ದೇಹದ ಮೇಲಿನ ಜನ್ಮ ಮಚ್ಚೆಗಳಿಂದ ವ್ಯಕ್ತಿತ್ವ (Birth Mark) ಮತ್ತು ಭವಿಷ್ಯವನ್ನು ಊಹಿಸಬಹುದು ಎಂದು ಹೇಳಲಾಗುತ್ತದೆ. ಮಚ್ಚೆಗಳಿಂದ ವ್ಯಕ್ತಿತ್ವವನ್ನು ಹೇಗೆ ತಿಳಿಯಬಹುದು? ಯಾವ ಸ್ಥಳದಲ್ಲಿರುವ ಮಚ್ಚೆ ಯಾವ ವ್ಯಕ್ತಿತ್ವವನ್ನು ಸೂಚಿಸುತ್ತದೆ ಎಂದು ನಿಮಗೆ ತಿಳಿದಿದ್ಯಾ? ಹಾಗಾದ್ರೆ ಈ ಬಗ್ಗೆ ಒಂದಷ್ಟು ಮಾಹಿತಿ ಇಲ್ಲಿದೆ ನೋಡಿ. ಪಾದ: ಪಾದದ ಮೇಲೆ ಮಚ್ಚೆ ಇರುವವರು ಮುಕ್ತವಾಗಿ ಜೀವನ ನಡೆಸಲು ಇಷ್ಟಪಡುತ್ತಾರೆ. ಎಂತಹ ಕಷ್ಟದ ಸನ್ನಿವೇಶಕ್ಕೂ ಬೇಗ ಒಗ್ಗಿಕೊಳ್ಳುತ್ತಾರೆ. ಯಾವುದೇ ಕಷ್ಟಗಳು ಬಂದರೂ ಧೈರ್ಯದಿಂದ ಎದುರಿಸುತ್ತಾರೆ. ಹೊಸ ವಿಚಾರಗಳನ್ನು ಕಲಿಯಲು ಇಷ್ಟಪಡುತ್ತಾರೆ. ಇವರು ಯಾರ ನಿಯಂತ್ರಣಕ್ಕೂ ಒಳಗಾಗದೆ ಸ್ವತಂತ್ರವಾಗಿ ಬದುಕಲು ಬಯಸುತ್ತಾರೆ. ಕೆನ್ನೆ: ಕೆನ್ನೆ ಮೇಲೆ ಮಚ್ಚೆ ಇರುವವರು ಸದಾ ಮನಸ್ಸಿನ ಶಾಂತಿಗಾಗಿ ಶ್ರಮಿಸುತ್ತಾರೆ. ಆಧ್ಯಾತ್ಮಿಕವಾಗಿ ಬೆಳೆಯಲು ಇಷ್ಟಪಡುತ್ತಾರೆ. ಇವರು ಜೀವನದಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಾರೆ. ಈ ಮಚ್ಚೆ ಇರುವವರು ತುಂಬಾ ಸೂಕ್ಷ್ಮ ಸ್ವಭಾವದವರಾಗಿರುತ್ತದೆ. ವರು ತಮ್ಮದೇ ಆದ ಪರಿಕಲ್ಪನೆಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಗಡ್ಡ: ಗಲ್ಲದ ಮೇಲೆ ಮಚ್ಚೆ ಇರುವವರು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ಸದೃಢರಾಗಿರುತ್ತಾರೆ ಎಂದು ಭಾವಿಸಲಾಗಿದೆ. ಇವರು ಎಲ್ಲಾ ಸಂದರ್ಭದಲ್ಲಿಯೂ ಧೈರ್ಯಶಾಲಿಯಾಗಿರುತ್ತಾರೆ. ಇವರ ನಿರ್ಧಾರಗಳು ಯಾವಾಗಲೂ ಸರಿಯಾಗಿರುತ್ತದೆ. ಅಲ್ಲದೇ, ಇವರು ತುಂಬಾ ನಂವಿಕೆಗೆ ಅರ್ಹ ವ್ಯಕ್ತಿಗಳಾಗಿರುತ್ತಾರೆ. ಯಾರಿಗಾದರೂ ತೊಂದರೆ ಅಂದ ತಕ್ಷಣ ಸಹಾಯ ಮಾಡಲು ಮುಂದಾಗುತ್ತಾರೆ. ತೊಡೆ: ತೊಡೆಯ ಮೇಲೆ ಮಚ್ಚೆ ಇರುವವರು ತುಂಬಾ ಒಳ್ಳೆಯ ಹೃದಯ ಹೊಂದಿರುವ ವ್ಯಕ್ತಿ ಆಗಿರುತ್ತಾರೆ. ಇವರು ಯಾವಾಗಲೂ ಇತರರಿಗಾಗಿ ಕೆಲಸ ಮಾಡಲು ಇಷ್ಟಪಡುತ್ತಾರೆ. ಎಡಗಡೆ ತೊಡೆಯ ಮೇಲೆ ಮಚ್ಚೆ ಹೊಂದಿದ್ದಾರೆ ತುಂಬಾ ಅದೃಷ್ಟವಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಬಲತೊಡೆಯ ಮೇಲೆ ಮಚ್ಚೆ ಇದ್ದರೆ ಅವರು ಶ್ರೀಮಂತರಾಗುತ್ತಾರೆ ಎಂಬ ನಂಬಿಕೆ ಇದೆ. ಕೈ: ಕೈಯಲ್ಲಿ ಮಚ್ಚೆ ಇರುವವರು ಸಾಕಷ್ಟು ಕೌಶಲ್ಯ ಹೊಂದಿರುತ್ತಾರೆ. ಎಡಗೈಯಲ್ಲಿ ಮಚ್ಚೆ ಇದ್ದರೆ, ಇತರರಿಗೆ ದಾನ ಮಾಡಲು ಇಷ್ಟಪಡುತ್ತಾರೆ ಎಂದು ಹೇಳಲಾಗುತ್ತದೆ. ಅದೇ ರೀತಿ ಬಲಗೈಯಲ್ಲಿ ಮಚ್ಚೆ ಹೊಂದಿರುವವರು ಹೆಚ್ಚು ಗ್ರಹಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಅಲ್ಲದೇ ಇವರು ಇತರರಿಂದ ಹೆಚ್ಚು ಪ್ರೀತಿ, ಗಮನ ಮತ್ತು ಸಹಾಯವನ್ನು ಪಡೆಯುತ್ತಾರೆ. ಮೂಗು: ಮೂಗಿನ ಮೇಲೆ ಮಚ್ಚೆ ಹೊಂದಿರುವವರು ತುಂಬಾ ಕ್ರಿಯೇಟಿವ್ ವ್ಯಕ್ತಿ ಆಗಿರುತ್ತಾರೆ. ಇವರು ಯಾವಾಗಲೂ ಹೊಸ ಆಲೋಚನೆಗಳನ್ನು ಮಾಡುತ್ತಿರುತ್ತಾರೆ. ಇವರು ಸಾಕಷ್ಟು ಕುತೂಹಲ ಹೊಂದಿರುವ ವ್ಯಕ್ತಿಗಳಾಗಿರುತ್ತಾರೆ. ಅವರು ತುಂಬಾ ಆಧ್ಯಾತ್ಮಿಕ ಅಥವಾ ತಾತ್ವಿಕ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಹಣೆ: ಹಣೆಯ ಮೇಲೆ ಮಚ್ಚೆ ಇರುವವರು ತುಂಬಾ ಬುದ್ಧಿವಂತರಾಗಿರುತ್ತಾರೆ. ಇವರು ಯಾವುದೇ ಸಮಸ್ಯೆ ಇದ್ದರೂ ಸುಲಭವಾಗಿ ಪರಿಹರಿಸುತ್ತಾರೆ. ಇತರರೊಂದಿಗೆ ಚೆನ್ನಾಗಿ ಮಾತನಾಡಬಲ್ಲರು. ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಯಾವಾಗಲೂ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ. ಕುತ್ತಿಗೆ: ಕುತ್ತಿಗೆಯ ಮೇಲೆ ಮಚ್ಚೆ ಇರುವವರು ಕಷ್ಟಪಟ್ಟು ಕೆಲಸ ಮಾಡುವ ವ್ಯಕ್ತಿಗಳಾಗಿರುತ್ತಾರೆ. ಇವರು ಎಂಥಹ ಪರಿಸ್ಥಿತಿಯಲ್ಲೂ ತಾಳ್ಮೆಗೆಡುವುದಿಲ್ಲ. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುತ್ತಾರೆ. ಸದಾ ತಮ್ಮ ಗುರಿ ಸಾಧಿಸಲು ಶ್ರಮಿಸುತ್ತಾರೆ. ಬೆನ್ನು: ಬೆನ್ನಿನ ಮೇಲೆ ಮಚ್ಚೆ ಇರುವವರು ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಇವರು ಇತರರಿಗೆ ಉತ್ತಮ ಮಾರ್ಗದರ್ಶಕರಾಗಿರುತ್ತಾರೆ. ತುಂಬಾ ಜವಾಬ್ದಾರಿಯುತ ವ್ಯಕ್ತಿಗಳಾಗಿರುತ್ತಾರೆ. ಇತರರಿಗೆ ಸಹಾಯ ಸದಾ ಮುಂದಿರುತ್ತಾರೆ. ಕಿವಿ: ಕಿವಿಯ ಮೇಲೆ ಮಚ್ಚೆ ಹೊಂದಿರುವವರು ಕೆಲಸದಲ್ಲಿ ತುಂಬಾ ಕ್ರಿಯಾಶೀಲರಾಗಿರುತ್ತಾರೆ. ಜವಾಬ್ದಾರಿಗಳನ್ನು ಚೆನ್ನಾಗಿ ನಿಭಾಯಿಸುತ್ತಾರೆ. ಯಾವಾಗಲೂ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಇತರರ ಮಾತುಗಳನ್ನು ಕೇಳುವಲ್ಲಿ ಬಹಳ ಗಮನಹರಿಸುತ್ತಾರೆ. ಯಾವುದೇ ಪರಿಸ್ಥಿತಿಗೆ ಆದರೂ ಬೇಗ ಒಗ್ಗಿಕೊಳ್ಳುತ್ತಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.