ಕಾಲಿವುಡ್ ನಟ ಸೂರ್ಯ (suriya) ಅಭಿನಯದ ಕಂಗುವ ಸಿನಿಮಾ (Kanguva Cinema) ಸಂಪಾದಕ ನಿಶಾದ್ ಯೂಸುಫ್ (Nishad Yusuf) ನಿಧನರಾಗಿದ್ದಾರೆ. ವರದಿಗಳ ಪ್ರಕಾರ, ಅವರು ಬುಧವಾರ ಕೊಚ್ಚಿಯ ತಮ್ಮ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಯೂಸುಫ್ ಅವರಿಗೆ 43 ವರ್ಷ ವಯಸ್ಸಾಗಿತ್ತು. ಆದರೆ ಯೂಸುಫ್ ಸಾವಿಗೆ ಕಾರಣ (Found Dead At His Kochi Home) ಇನ್ನೂ ತಿಳಿದುಬಂದಿಲ್ಲ ಎಂದು ವರದಿಯಾಗಿದೆ. ಸದ್ಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೀಗ ಯುಸೂಫ್ ಅವರ ಸಾವಿನ ಸುದ್ದಿಯನ್ನು ಫಿಲ್ಮ್ ಎಂಪ್ಲಾಯಿಸ್ ಫೆಡರೇಶನ್ ಆಫ್ ಕೇರಳ (ಫೆಫ್ಕಾ) ನಿರ್ದೇಶಕರ ಒಕ್ಕೂಟ ಬುಧವಾರ ಬೆಳಿಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ಖಚಿತಪಡಿಸಿದೆ. ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಸೂರ್ಯ, ಬಾಬಿ ಡಿಯೋಲ್ ಮತ್ತು ದಿಶಾ ಪಟಾನಿ ಜೊತೆಗೂಡಿದ ಕೆಲವೇ ದಿನಗಳಲ್ಲಿ ನಿಶಾದ್ ಸಾವಿನ ಸುದ್ದಿ ಬಂದಿದೆ. ಹಲವು ಸಿನಿಮಾಗಳಲ್ಲಿ ಕೆಲಸ ನಿಶಾದ್ ಅವರು ಮಲಯಾಳಂ ಮತ್ತು ತಮಿಳು ಚಲನಚಿತ್ರೋದ್ಯಮದಲ್ಲಿ ಮೆಚ್ಚುಗೆ ಪಡೆದ ಸಂಕಲನಕಾರರಾಗಿದ್ದರು. ತಲ್ಲುಮಾಲ, ಉಂಡ, ಒನ್, ಸೌದಿ ವೆಲ್ಲಕ್ಕ, ಮತ್ತು ಅಡಿಯೋಸ್ ಅಮಿಗೋಸ್ ಸೇರಿವೆ. ಇವರು ಸಂಕಲನ ಮಾಡಿರುವ ಬಜೂಕ, ಆಲಪ್ಪುಳ ಜಿಮ್ಖಾನ ಮುಂತಾದ ಚಿತ್ರಗಳು ಬಿಡುಗಡೆಯಾಗಬೇಕಿವೆ. ಈಗ ಚಿತ್ರೀಕರಣ ನಡೆಯುತ್ತಿರುವ ತರುಣ್ ಮೂರ್ತಿ-ಮೋಹನ್‌ಲಾಲ್ ಚಿತ್ರಕ್ಕೂ ಇವರೇ ಎಡಿಟರ್ ಆಗಿದ್ದರು. ಹರಿಪ್ಪಾಡ್ ಮೂಲದ ನಿಷಾದ್ ಯೂಸಫ್ ಕೊಚ್ಚಿಯಲ್ಲಿ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಕೊಚ್ಚಿ ಪನಂಪಳ್ಳಿ ನಗರದ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದರು. ಎಂದು ವರದಿಯಾಗಿದೆ. ಮಲಯಾಳಂ ಚಲನಚಿತ್ರ ರಂಗದ ಪ್ರಮುಖರು ನಿಶಾದ್ ಯೂಸೂಫ್ ಅವರ ಅಕಾಲ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. Shocking news to wake up to. RIP #NishadYusuf - the editor of Thallumaala, Kanguva and Suriya45. He was found dead at his apartment in Kochi. Just few days back he was present here at the grand audio launch! pic.twitter.com/asxHDTTtmL ಅವರ ಬಹು ನಿರೀಕ್ಷಿತ ಚಿತ್ರ ಕಂಗುವ ಎರಡು ವಾರಗಳಲ್ಲಿ ಅಂದರೆ ನವೆಂಬರ್ 14 ರಂದು ಬಿಡುಗಡೆಯಾಗಲಿದೆ. ವಾರಾಂತ್ಯದಲ್ಲಿ ಚೆನ್ನೈನಲ್ಲಿ ಆಯೋಜಿಸಲಾದ ಚಿತ್ರದ ಸಂಗೀತ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ಯುಸೂಪಫ್ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ಇದನ್ನೂ ಓದಿ: Toxic Movie: ಟಾಕ್ಸಿಕ್ಗೆ ಕಂಟಕ: ಅಸಲಿಗೆ ಈ ಜಾಗ ಯಾರದ್ದು? ಚಿತ್ರೀಕರಣಕ್ಕೆ ಅವಕಾಶ ಕೊಟ್ಟಿದ್ದು ಯಾರು? ತಪ್ಪು ಯಾರದ್ದು? ಯುವಿ ಕ್ರಿಯೇಷನ್ಸ್ ಮತ್ತು ಸ್ಟುಡಿಯೋ ಗ್ರೀನ್ ಬ್ಯಾನರ್ ಅಡಿಯಲ್ಲಿ ಕೆ.ಇ.ಜ್ಞಾನವೇಲ್ ರಾಜಾ ಕಾಂಗುವ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಸ್ಟಾರ್ ನಟ ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವುದು ಗೊತ್ತೇ ಇದೆ. ಈ ಚಿತ್ರದಲ್ಲಿ ಸೂರ್ಯ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಮೊನ್ನೆಯಷ್ಟೇ ಈ ವಿಷಯವನ್ನು ಸ್ವತಃ ಸೂರ್ಯನೇ ಬಹಿರಂಗಪಡಿಸಿದ್ದರು. ಆದರೆ ಇದು ಬಾಬಿ ಡಿಯೋಲ್ ಅವರ ಮೊದಲ ತಮಿಳು ಚಿತ್ರವೂ ಹೌದು. ಕಂಗುವ ಚಿತ್ರದ ಮೂಲಕ ಬಾಬಿ ಡಿಯೋಲ್ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. None
Popular Tags:
Share This Post:
Darshan: ದರ್ಶನ್ ಆಚೆ ಬರೋಕೆ ಅದೊಂದೇ ದೊಡ್ಡ ಸಮಸ್ಯೆ? ಹೈಡ್ರಾಮಾ ನಡೆಯುತ್ತಾ?
- by Sarkai Info
- October 30, 2024
What’s New
Spotlight
Today’s Hot
-
- October 30, 2024
-
- October 30, 2024
-
- October 30, 2024
Featured News
Latest From This Week
Subscribe To Our Newsletter
No spam, notifications only about new products, updates.