NEWS

Hotel ಮತ್ತು Motel ಎರಡೂ ಸೇಮ್ ಟು ಸೇಮಾ? 90% ಜನ ಇದೆರಡೂ ಒಂದೇ ಎಂದೇ ತಿಳಿದುಕೊಂಡಿರುತ್ತಾರಂತೆ!

ಹೋಟೆಲ್ ಮತ್ತು ಮೋಟೆಲ್ ನಾವು ಪ್ರವಾಸಕ್ಕೆ (Tour) ಸಿದ್ಧರಾದಾಗ ಮೊದಲು ನಾವು ಪ್ರಯಾಣಿಸುತ್ತಿರುವ ಸ್ಥಳದಲ್ಲಿರುವ ಹೋಟೆಲ್ ಸೌಕರ್ಯಗಳ (Hotel Fecilities) ಬಗ್ಗೆ ಅನ್ವೇಷಿಸುತ್ತೇವೆ. ಇನ್ನು ಕುಟುಂಬ ಸಮೇತರಾಗಿ ಪ್ರಯಾಣಿಸುತ್ತೇವೆ ಎಂದಾದಾಗ ಎಲ್ಲಾ ಸೌಕರ್ಯ, ಸೌಲಭ್ಯಗಳಿರುವ ಹೋಟೆಲ್‌ಗಳನ್ನೇ ಜಾಲಾಡುತ್ತೇವೆ. ಹೀಗೆ ಹೋಟೆಲ್‌ಗಳನ್ನು ಅನ್ವೇಷಿಸುತ್ತಿರುವ ಸಂದರ್ಭದಲ್ಲಿ ಮೋಟೆಲ್ ಎಂಬ ಪದಗಳು ನಡು ನಡುವೆ ಬಂದಿರುವುದನ್ನು ನೀವು ಗಮನಿಸಿರುತ್ತೀರಿ. ಏನಾದರೂ ಕಾಗುಣಿತ ದೋಷಗಳಿರಬಹುದು ಎಂದೋ ಅಥವಾ ಸಾಮಾನ್ಯವಾಗಿ ಇದು ಕೂಡ ಹೋಟೆಲ್ ಆಗಿರಬಹುದು ಎಂದು ಜನರು ಭಾವಿಸುತ್ತಾರೆ. ಆದರೆ ಹೋಟೆಲ್, ಮೋಟೆಲ್‌ಗೆ ಅಜಗಜಾಂತರ ವ್ಯತ್ಯಾಸವಿದೆ ಎಂಬುದನ್ನು ನಾವು ಇಂದಿನ ಲೇಖನದಲ್ಲಿ ತಿಳಿಸುತ್ತಿದ್ದೇವೆ. ಹೋಟೆಲ್‌ಗಳಲ್ಲಿದೆ ವೈಭವೋಪೇತ ಸೌಕರ್ಯಗಳು ಸಾಮಾನ್ಯವಾಗಿ ಹೋಟೆಲ್‌ಗಳು ನಗರಗಳು, ಪಟ್ಟಣಗಳು, ಪ್ರವಾಸಿ ತಾಣಗಳು, ವ್ಯವಹಾರ ಸ್ಥಳಗಳಲ್ಲಿ ನೆಲೆಗೊಂಡಿರುತ್ತವೆ ಹಾಗೂ ಊಟೋಪಚಾರ, ಪೂಲ್, ಸ್ಪಾ, ಜಿಮ್, ಐಷಾರಾಮಿ ಕೊಠಡಿಗಳಂತ ವ್ಯವಸ್ಥೆಗಳನ್ನೊಳಗೊಂಡಿರುತ್ತವೆ. ಇದನ್ನೂ ಓದಿ: ಇದರ ಮುಂದೆ ಚಿನ್ನಕ್ಕೂ ಇಲ್ಲ ಬೆಲೆ! ಈ ದುಬಾರಿ ಲೋಹಕ್ಕೆ 1 ಗ್ರಾಂಗೆ 8 ಕೋಟಿ ರೂಪಾಯಿ! ಹೋಟೆಲ್‌ಗಳನ್ನು ಸಾಮಾನ್ಯವಾಗಿ ಅಲ್ಪಾವಧಿ ಹಾಗೂ ದೀರ್ಘಾವಧಿಯ ತಂಗುವಿಕೆಗಾಗಿ ವ್ಯವಸ್ಥೆಗೊಳಿಸಲಾಗಿರುತ್ತದೆ ಹಾಗಾಗಿ ಇದು ಉನ್ನತ ಮಟ್ಟದ ಸೌಲಭ್ಯಗಳನ್ನು ಹೊಂದಿರುತ್ತವೆ. ಹೋಟೆಲ್‌ಗಳಲ್ಲಿ ಅನೇಕ ಬಗೆಯ ವಿಧಗಳಿರುತ್ತವೆ ತ್ರಿಸ್ಟಾರ್, ಫೋರ್ ಸ್ಟಾರ್, ಫೈವ್ ಸ್ಟಾರ್ ಹೀಗೆ ಹಣದ ಮೌಲ್ಯ, ಐಷಾರಾಮಿ ಸೌಲಭ್ಯಗಳನ್ನಾಧರಿಸಿ ಹೋಟೆಲ್‌ಗಳು ಗ್ರಾಹಕರಿಗೆ ಸೇವೆಯನ್ನೊದಗಿಸುತ್ತವೆ. ಹೋಟೆಲ್‌ಗಳಲ್ಲಿ ತಂಗುವವರ ಬೇಡಿಕೆಗಳ ಅನುಗುಣವಾಗಿ ಅಲ್ಲಿ ನೀಡುವ ಸೌಲಭ್ಯಗಳೂ ಇರುತ್ತವೆ. ಮೋಟೆಲ್ ಪದ ಹೇಗೆ ಅಸ್ತಿತ್ವಕ್ಕೆ ಬಂದಿತು? ಮೋಟೆಲ್ ಎಂಬ ಪದ ಮೋಟರ್ ಲಾಡ್ಜ್ ಎಂಬ ಪದವನ್ನು ಸೂಚಿಸುತ್ತದೆ ಅಂದರೆ ಸರಳವಾದ ಬಜೆಟ್ ಸ್ನೇಹಿ ವಾಸ್ತವ್ಯವನ್ನು ಇದು ಖಾತ್ರಿಪಡಿಸುತ್ತದೆ. ಇದು ಅತ್ಯಂತ ಕಡಿಮೆ ಹಾಗೂ ಮೂಲ ಸೌಕರ್ಯಗಳನ್ನೊಳಗೊಂಡಿರುತ್ತವೆ ಅಂದರೆ ನೀವಿಲ್ಲಿ ಪಾರ್ಕಿಂಗ್, ಕಾಂಟಿನೆಂಟಲ್ ಬ್ರೇಕ್‌ಫಾಸ್ಟ್‌ಗಳನ್ನು ಸವಿಯಬಹುದು. ಪ್ರವಾಸದಲ್ಲಿರುವ ಅತಿಥಿಗಳಿಗೆ ಕೊಂಚ ಸಮಯ ವಿರಮಿಸುವ, ವಿಶ್ರಾಂತಿ ತೆಗೆದುಕೊಳ್ಳುವ ಸೌಲಭ್ಯವನ್ನು ಮೋಟೆಲ್ ಒದಗಿಸುತ್ತದೆ. ಹೆಚ್ಚಾಗಿ ಮೋಟೆಲ್‌ಗಳಲ್ಲಿ ರಸ್ತೆ ಪ್ರಯಾಣಿಕರು, ಪ್ರವಾಸಿಗರು, ರಾತ್ರಿ ತಂಗುತ್ತಾರೆ ಹಾಗೂ ಪಾವತಿ ಮಾಡಿ ವಿಶ್ರಮಿಸುತ್ತಾರೆ. ಬಜೆಟ್ ಸ್ನೇಹಿಯಾಗಿವೆ ಹೋಟೆಲ್‌ಗಳಿಗೆ ಹೋಲಿಸಿದಾಗ ಮೋಟೆಲ್‌ಗಳು ರಾತ್ರಿ ವೇಳೆಯಲ್ಲಿ ತಂಗಲು ಇಷ್ಟಪಡುವವರಿಗೆ ಸೂಕ್ತವಾಗಿದೆ. ಹೋಟೆಲ್‌ಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿರುವುದರಿಂದ ಅವುಗಳು ದುಬಾರಿಯಾಗಿವೆ. ಆದರೆ ಮೋಟೆಲ್‌ಗಳು ತಂಗುವ ಅತಿಥಿಗಳಿಗೆ ಮೂಲಭೂತವಾಗಿ ಬೇಕಾದ ವ್ಯವಸ್ಥೆಯನ್ನು ಮಾತ್ರ ಕಲ್ಪಿಸುವುದರಿಂದ ಬಜೆಟ್ ಸ್ನೇಹಿಯಾಗಿರುತ್ತವೆ. ಮೂಲ ಸರಳ ಸೌಲಭ್ಯಗಳು ಮೋಟೆಲ್‌ಗಳಲ್ಲಿದೆ ಮೋಟೆಲ್‌ಗಳು ಸರಳವಾದ ಮುಖ್ಯ ಸೌಲಭ್ಯಗಳನ್ನೊಳಗೊಂಡಿರುತ್ತವೆ. ಇಲ್ಲಿ ಸಿಂಗಲ್ ಅಥವಾ ಡಬಲ್ ಸ್ಟೋರೇಜ್ ಬಿಲ್ಡಿಂಗ್ ಮಾತ್ರ ಇರುತ್ತದೆ. ಇಲ್ಲಿ ಮುಕ್ತ ಕಾಲುದಾರಿಗಳಿರುತ್ತವೆ ಹಾಗೂ ವಿಶಾಲ ಪ್ರವೇಶ ದ್ವಾರವಿರುತ್ತದೆ. ಮೋಟೆಲ್ ಎಲ್ಲೆಲ್ಲಿ ಕಂಡುಬರುತ್ತದೆ? ಹೋಟೆಲ್‌ಗೆ ಹೋಲಿಸಿದಾಗ ಮೋಟೆಲ್ ಕಡಿಮೆ ವೆಚ್ಚದಾಯಕವಾಗಿದೆ. ಹೆಚ್ಚಾಗಿ ಮೋಟೆಲ್‌ಗಳನ್ನು ಹೆದ್ದಾರಿ, ರಾಷ್ಟ್ರೀಯ ರಸ್ತೆ ಸಂಪರ್ಕಗಳು, ನಗರದ ಹೊರವಲಯದಲ್ಲಿ ಕಾಣಬಹುದು. ಇನ್ನು ಹೋಟೆಲ್‌ಗಳು ಹೆಚ್ಚಾಗಿ ನಗರದ ಮಧ್ಯಭಾಗದಲ್ಲಿ, ವಿಮಾನ ನಿಲ್ದಾಣಗಳ ಸಮೀಪ, ಪ್ರವಾಸಿ ತಾಣ, ಕ್ರೀಡಾ ವಲಯಗಳ ಬಳಿ, ಕ್ಯಾಸಿನೋಗಳ ಬಳಿ ಕಾಣುತ್ತೇವೆ. ಮೋಟೆಲ್‌ಗಳು ಬೇಸಿಕ್ ಟಾಯ್ಲೆಟ್, ಬೆಡ್, ಟವೆಲ್‌ಗಳನ್ನೊಳಗೊಂಡಿರುತ್ತವೆ. ಮುಖ್ಯವಾಗಿ ಮೋಟೆಲ್‌ಗಳನ್ನು ಕಡಿಮೆ ಅವಧಿಯ ತಂಗುವಿಕೆಗಾಗಿ ವಿನ್ಯಾಸಗೊಳಿಸಲಾಗಿರುತ್ತದೆ. ಇದು ತ್ವರಿತ ಸರಳ ಉಪಹಾರವನ್ನೊದಗಿಸುತ್ತದೆ. ಬಜೆಟ್ ಸ್ನೇಹಿ ಸ್ಥಳವಾಗಿದೆ ಹಾಗೂ ಇಲ್ಲಿ ಒಂದು ಅಥವಾ ಎರಡು ಫ್ಲೋರ್‌ಗಳನ್ನು ಮಾತ್ರ ಕಾಣಬಹುದು. ಮೋಟೆಲ್‌ಗಳು ಆವಿಷ್ಕಾರ ಹೇಗಾಯಿತು? ಇಪ್ಪತ್ತನೇ ಶತಮಾನದಲ್ಲಿ ರಸ್ತೆ ಸಂಪರ್ಕಗಳು ಅಭಿವೃದ್ಧಿಗೊಂಡಾಗ ಪ್ರವಾಸಿಗರ ಸಂಖ್ಯೆಯಲ್ಲಿ ಕೂಡ ದುಪ್ಪಟ್ಟು ಹೆಚ್ಚಳವಾಯಿತು. ಅಮೇರಿಕಾ ಹಾಗೂ ಯುರೋಪ್ ವಲಯಗಳಲ್ಲಿ ಮೋಟೆಲ್‌ಗಳು ಸಾಮಾನ್ಯವಾಗಿವೆ. ರಸ್ತೆ ಪ್ರಯಾಣ ಮಾಡುವ ಪ್ರಯಾಣಿಕರಿಗೆ ವಿಶ್ರಾಂತಿ ತೆಗೆದುಕೊಳ್ಳಲು ಹಾಗೂ ರಾತ್ರಿ ವೇಳೆ ತಂಗಲು ಸೂಕ್ತವಾದ ತಾಣವಾಗಿ ಮೋಟೆಲ್‌ಗಳು ಅಸ್ತಿತ್ವಕ್ಕೆ ಬಂದಿತು. ಹೋಟೆಲ್ ಹಾಗೂ ಮೋಟೆಲ್‌ಗಳ ನಡುವಿನ ವ್ಯತ್ಯಾಸವನ್ನು ಪ್ರವಾಸಿಗರು ತಿಳಿದುಕೊಳ್ಳುವುದು ತಮ್ಮ ವಾಸ್ತವ್ಯದ ಆಯ್ಕೆಯನ್ನು ಮಾಡಲು ಸಾಧ್ಯವಾಗಿಸುತ್ತವೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.