NEWS

Healthy Vegetable: ಕಪ್ಪು ಕ್ಯಾರೆಟ್​ ತಿಂದಿದ್ದೀರಾ? ಒಮ್ಮೆ ತಿಂದು ನೋಡಿ, ಈ ಅದ್ಭುತ ಪ್ರಯೋಜನಗಳು ನಿಮ್ಮದಾಗುತ್ತೆ!

ಸಾಂದರ್ಭಿಕ ಚಿತ್ರ ಸಾಮಾನ್ಯವಾಗಿ ಕ್ಯಾರೆಟ್​ (Carrot) ಎಂದಾಕ್ಷಣ ಎಲ್ಲರಿಗೂ ಮೊದಲು ನೆನಪಾಗುವುದು ಕೆಂಪು ಬಣ್ಣದ ಕ್ಯಾರೆಟ್ (Red Carrot)​. ಆದರೆ ಅನೇಕ ಮಂದಿಗೆ ಕಪ್ಪು ಬಣ್ಣದ ಕ್ಯಾರೆಟ್​ (Black Carrot) ಬಗ್ಗೆ ಅರಿವಿಲ್ಲ. ಸಾಕಷ್ಟು ಪೋಷಕಾಂಶಗಳಿಂದ ಒಳಗೊಂಡಿರುವ ಕಪ್ಪು ಕ್ಯಾರೆಟ್‌ಗಳು ಆಂಥೋಸಯಾನಿನ್‌ಗಳಲ್ಲಿ ಸಮೃದ್ಧವಾಗಿವೆ. ಕೆಂಪು ಕ್ಯಾರೆಟ್‌ಗಳಂತೆ ಕಪ್ಪು ಬಣ್ಣದ ಕ್ಯಾರೆಟ್‌ಗಳು ಸಹ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಕಪ್ಪು ಬಣ್ಣದ ಕ್ಯಾರೆಟ್‌ನಲ್ಲಿ ಫೈಬರ್, ವಿಟಮಿನ್ ಎ, ವಿಟಮಿನ್ ಸಿ, ಪೊಟ್ಯಾಸಿಯಮ್, ಕಬ್ಬಿಣ ಮತ್ತು ಆಂಥೋಸಯಾನಿನ್‌ನಂತಹ ಅನೇಕ ಪೋಷಕಾಂಶಗಳಿವೆ. ಕಪ್ಪು ಬಣ್ಣದ ಕ್ಯಾರೆಟ್​ ಆರೊಗ್ಯ ಪ್ರಯೋಜನಗಳು ರಕ್ತದೊತ್ತಡ: ಟಿವಿ9 ವರದಿ ಪ್ರಕಾರ, ಕಪ್ಪು ಕ್ಯಾರೆಟ್ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಅಲ್ಲದೇ ಕೊಲೆಸ್ಟ್ರಾಲ್ ಕರಗಿಸುತ್ತದೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳು ಬರುವ ಸಾಧ್ಯತೆಯನ್ನು ತಪ್ಪಿಸುತ್ತದೆ. ಚರ್ಮದ ಆರೈಕೆ: ಕಪ್ಪು ಕ್ಯಾರೆಟ್‌ನಲ್ಲಿರುವ ವಿಟಮಿನ್ ಎ ಮತ್ತು ಸಿ ಚರ್ಮವನ್ನು ಕಾಂತಿಯುತಗೊಳಿಸುತ್ತದೆ. ಇದು ಸುಕ್ಕುಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಜೊತೆಗೆ ಇದರಲ್ಲಿರುವ ಉರಿಯೂತದ ಗುಣಲಕ್ಷಣಗಳು ಮೊಡವೆ ಮತ್ತು ಕಲೆಗಳಂತಹ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಹೃದಯ ಆರೋಗ್ಯ: ಕಪ್ಪು ಕ್ಯಾರೆಟ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇವು ಪ್ಲೇಟ್‌ಲೆಟ್‌ಗಳ ಕಾರ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಕಪ್ಪು ಕ್ಯಾರೆಟ್‌ನಲ್ಲಿರುವ ಪೋಷಕಾಂಶಗಳು ರಕ್ತನಾಳಗಳನ್ನು ವಿಶ್ರಾಂತಿ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಅಲ್ಲದೇ, ಇದು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ: ಕಪ್ಪು ಕ್ಯಾರೆಟ್​ ಸೇವನೆಯು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಬ್ಯಾಕ್ಟೀರಿಯಾ ಮತ್ತು ವೈರಸ್​ಗಳಿಂದ ಎದುರಾಗುವ ಸೋಂಕುಗಳ ಮೇಲೆ ಆಕ್ರಮಣ ಮಾಡುವ ಪ್ರಬಲ ಗುಣಗಳನ್ನು ಹೊಂದಿದೆ. ಅಲ್ಲದೇ ಶೀತ ಮತ್ತು ಜ್ವರದಿಂದ ನಮ್ಮನ್ನು ರಕ್ಷಿಸುತ್ತದೆ. ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು: ಕಪ್ಪು ಕ್ಯಾರೆಟ್‌ನಲ್ಲಿ ಆಂಥೋಸಯಾನಿನ್‌ಗಳು ಅಧಿಕವಾಗಿರುತ್ತವೆ. ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ವಯಸ್ಸಾಗುವಿಕೆ ಮತ್ತು ಕ್ಯಾನ್ಸರ್​ಗೆ ಕಾರಣವಾಗುವ ಫ್ರೀ ರಾಡಿಕಲ್​ಗಳ ವಿರುದ್ಧ ಹೋರಾಡುತ್ತದೆ. ಈ ಫೈಟೊನ್ಯೂಟ್ರಿಯೆಂಟ್ಸ್ ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ. ಅಲ್ಲದೇ, ಇದು ದೇಹದಲ್ಲಿನ ಅಲರ್ಜಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ಇಳಿಕೆ: ಕಪ್ಪು ಕ್ಯಾರೆಟ್‌ನಲ್ಲಿರುವ ಆಂಟಿ-ಆಕ್ಸಿಡೆಂಟ್‌ಗಳು ಬೊಜ್ಜು ವಿರೋಧಿ ಗುಣಗಳನ್ನು ಹೊಂದಿದ್ದು, ಇದು ತೂಕ ಹೆಚ್ಚಾಗುವುದನ್ನು ತಡೆಯುತ್ತದೆ. ಅಲ್ಲದೇ, ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ದೃಷ್ಟಿ ವರ್ಧನೆ: ಕೆಂಪು ಕ್ಯಾರೆಟ್‌ನಂತೆಯೇ, ಕಪ್ಪು ಕ್ಯಾರೆಟ್ ಕೂಡ ದೃಷ್ಟಿ ಆರೋಗ್ಯ ಸುಧಾರಣೆಗೆ ಸಹಾಯ ಮಾಡುತ್ತದೆ. ಕಪ್ಪು ಕ್ಯಾರೆಟ್ ಗ್ಲುಕೋಮಾ ಮತ್ತು ರೆಟಿನಾದ ಅಲರ್ಜಿ ಹೊಂದಿರುವವರಿಗೆ ಪ್ರಯೋಜನಕಾರಿಯಾಗಿದೆ. ಅಲ್ಲದೇ, ಕಪ್ಪು ಕ್ಯಾರೆಟ್ ಸೇವನೆಯು ಕಣ್ಣುಗಳಿಗೆ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಜೀರ್ಣಾಂಗ ಆರೋಗ್ಯ: ಕಪ್ಪು ಕ್ಯಾರೆಟ್ ಫೈಬರ್​ನಲ್ಲಿ ಸಮೃದ್ಧವಾಗಿದೆ. ಇದು ಮಲಬದ್ಧತೆ, ಹೊಟ್ಟೆ ಉಬ್ಬರ ಮತ್ತು ಗ್ಯಾಸ್ಟ್ರಿಕ್​ ಮುಂತಾದ ಜೀರ್ಣಕಾರಿ ಸಮಸ್ಯೆಗಳಿಗೆ ಉತ್ತಮ ಪರಿಹಾರವಾಗಿದೆ. ಉರಿಯೂತ ಸಮಸ್ಯೆ: ಕಪ್ಪು ಕ್ಯಾರೆಟ್ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಪ್ಪು ಕ್ಯಾರೆಟ್‌ನಲ್ಲಿರುವ ಆಂಥೋಸಯಾನಿನ್‌ಗಳು ಎಂಬ ಸಂಯುಕ್ತಗಳು ಅಲರ್ಜಿ-ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ. ಇದು ದೇಹದಲ್ಲಿ ಉರಿಯೂತವನ್ನು ಕಡಿಮೆ ಮಾಡುವುದು ಮಾತ್ರವಲ್ಲದೇ ಅಲರ್ಜಿ ಸಮಸ್ಯೆಗೆ ಪರಿಹಾರವನ್ನು ನೀಡುತ್ತದೆ. ಇದನ್ನೂ ಓದಿ: ಲೋ ಬಿಪಿ ಲಕ್ಷಣಗಳು ಇವೇ ನೋಡಿ; ಎಂದಿಗೂ ನೆಗ್ಲೆಕ್ಟ್​ ಮಾಡ್ಬೇಡಿ, ಪ್ರಾಣನೇ ಹೋಗಬಹುದು! ನರಗಳ ಆರೋಗ್ಯ: ಆಲ್ ಝೈಮರ್ಸ್ ಕಾಯಿಲೆಯಂತಹ ನರ ಸಂಬಂಧಿಸಿದ ರೋಗಗಳ ಅಪಾಯದ ಸಾಧ್ಯತೆಯನ್ನು ಕಡಿಮೆ ಮಾಡುವಲ್ಲಿ ಕಪ್ಪು ಕ್ಯಾರೆಟ್​ ಪ್ರಮುಖ ಪಾತ್ರವಹಿಸುತ್ತದೆ. ರಕ್ತದ ಸಕ್ಕರೆ: ಕಪ್ಪು ಕ್ಯಾರೆಟ್ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಬಹಳ ಸಹಾಯಕವಾಗಿದೆ. ಅಲ್ಲದೇ ಮಧುಮೇಹಿಗಳು ಕಪ್ಪು ಕ್ಯಾರೆಟ್ ಹೆಚ್ಚಾಗಿ ಸೇವಿಸುವುದು ಅವರ ಆರೋಗ್ಯಕ್ಕೆ ಉತ್ತಮ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.