ಸಿಟಿ ರವಿ ಬೆಂಗಳೂರು; ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ನಿನ್ನೆ ಪರಿಷತ್‌ನಲ್ಲಿ ಅಂಬೇಡ್ಕರ್ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ನೀಡಿದ್ದ ಹೇಳಿಕೆಯ ಚರ್ಚೆಯ ಸಂದರ್ಭದಲ್ಲಿ ಗದ್ದಲ ಉಂಟಾಗಿದೆ. ಬೆಜೆಪಿ ಪರಿಷತ್ ಸದಸ್ಯ ಸಿ ಟಿ ರವಿ (CT Ravi) ತಮ್ಮ ವಿರುದ್ಧ ಅವಾಚ್ಯ ಶಬ್ಧಗಳಿಂದ (Unparliamentary) ನಿಂದಿಸಿದ್ದಾರೆ ಎಂದು ಆರೋಪಿಸಿ ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಸಚಿವೆ ಹೆಬ್ಬಾಳಕರ್ ಅವರು ದೂರು ದಾಖಲಿಸಿದ್ದರು. ಲಕ್ಷ್ಮಿ ಹೆಬ್ಬಾಳ್ಕರ್ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಪ್ರಕರಣದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ಅರ್ಜಿ ವಿಚಾರಣೆಯನ್ನು ನಾಳೆಗೆ (ಡಿಸೆಂಬರ್ 21) ಮುಂದೂಡಿದೆ. ರವಿ ಪರ ಅಶೋಕ್ ಹಾರನಹಳ್ಳಿ ವಾದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಲ್ಲಿ ಸಿಟಿ ರವಿ ಅವರ ಬೇಲ್ ಅರ್ಜಿ ವಿಚಾರಣೆ ಆರಂಭವಾಗಿದ್ದು, ಸಿಟಿ ರವಿ ಪರ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು. ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪರವಾಗಿ ಶ್ಯಾಮ್ ಸುಂದರ್ ವಾದ ಮಂಡಿಸಿದರು. ಜಾಮೀನು ನೀಡುವಂತೆ ವಾದ ಮಂಡಸಿದ ವಕೀಲರು ಸಿಟಿ ರವಿ ಪರ ವಾದ ಮಂಡಿಸಿದ ಅಶೋಕ್ ಹಾರನಹಳ್ಳಿಯವರು ಬಂಧನದ ನಂತರ ನಡೆದ ಹಡ್ರಾಮದ ಕುರಿತು ವಿವರಣೆ ನೀಡಿದರು. ಸಿಟಿ ರವಿ ತಲೆಗೆ ಪೊಲೀಸರು ಹೊಡೆದಿದ್ದಾರೆ, ನಿನ್ನೆ ರಾತ್ರಿಯೆಲ್ಲಾ ಎಲ್ಲೆಲ್ಲೋ ಓಡಾಡಿಸಿದ್ದಾರೆ, ಎಫ್‌ಐಆರ್‌ನಲ್ಲಿ ಫಿರ್ಯಾದುದಾರರ ಸಹಿ ಇಲ್ಲ, ತಮ್ಮ ಆಪ್ತ ಸಹಾಯಕರ ಮೂಲಕ ಎಫ್‌ಐಆರ್ ದಾಖಲಿಸಿದ್ದಾರೆ. ಸಿಟಿ ರವಿ ಏನು ಓಡಿ ಹೋಗುವ ವ್ಯಕ್ತಿಯಲ್ಲ ಆರೋಪಿಯನ್ನು ಬಂಧಿಸಿದ ಬಳಿಕ ಮಧ್ಯಂತರ ಜಾಮೀನು ಕೊಡಬಹುದು ಎಂದು ವಾದ ಮಂಡಿಸಿದರು. ಇದನ್ನೂ ಓದಿ: CT Ravi: ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ, ನಮಗೂ ಒಂದು ಕಾಲ ಬರುತ್ತೆ! ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಿಟಿ ರವಿ ಫಿಸಿಕಲಿ ಮಾತ್ರವಲ್ಲ ಮೆಂಟಲಿ ಕೂಡ ಅಸಾಲ್ಟ್ ಕೂಡ ಮಾಡಿದ್ದಾರೆ ಸೀತಾ ಸೂರೆನ್ ಪ್ರಕರಣ ಉಲ್ಲೇಕಿಸಿ ವಾದ ಮಂಡಿಸಿದ ಅಶೋಕ್ ಹಾರನಹಳ್ಳಿ, ಫಿಸಿಕಲಿ ಮಾತ್ರವಲ್ಲ ಮೆಂಟಲಿ ಕೂಡ ಅಸಾಲ್ಟ್ ಕೂಡ ಮಾಡಿದ್ದಾರೆ. ರವಿ ಅವರ ತಲೆಗೆ ಗಾಯವಾಗಿದೆ, ಚಿಕಿತ್ಸೆ ಕೊಡಿಸಿದ್ದಾರೆ. ಸಾಯಿಸೋ ಉದ್ದೇಶ ಅಂತಾ ಸಿಟಿ ರವಿ ಹೇಳಿದ್ದಾರೆ. ಸದನದಲ್ಲಿ ಬಳಸಿದ ಪದಗಳು ಸದನದ ವಿಚಾರ, ಅನ್‌ಪಾರ್ಲಿಮೆಂಟರಿ ಪದ ಬಳಸಿದ್ರೂ ಅಷ್ಟೇ ಎಂದು ಸಿಟಿ ರವಿ ಪರ ಅಶೋಕ್ ಹಾರನಹಳ್ಳಿ ವಾದ ಮಂಡಿಸಿದರು. ಲಕ್ಷ್ಮಿ ಹೆಬ್ಬಾಳಕರ್ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಲಕ್ಷ್ಮಿ ಹೆಬ್ಬಾಳಕರ್ ಪರ ಹಿರಿಯ ವಕೀಲ ಶ್ಯಾಮ್ ಸುಂದರ್ ವಾದ ಮಂಡಿಸಿದ್ದು, ಸಿಟಿ ರವಿಗೆ ಯಾಕೆ ಮಧ್ಯಂತರ ಜಾಮೀನು ನೀಡಬೇಕು ಎಂದು ಪ್ರಶ್ನಿಸಿದರು, ಸದನದಲ್ಲಿ ಸಚಿವೆ ಹೆಬ್ಬಾಳ್ಕರ್‌ಗೆ 10 ಬಾರಿ ಪ್ರಾಸ್ಟಿಟ್ಯೂಟ್ ಎಂದು ಕರೆದಿದ್ದಾರೆ. ಅಶ್ಲೀಲ ಪದವನ್ನು ಹಲವು ಬಾರಿ ಕರೆದಿದ್ದಾರೆ ಎಂದರು. ಅಂತಿಮವಾಗಿ ವಾದ ವಿವಾದ ಆಲಿಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ನಾಳೆಗೆ ವಿಚಾರಣೆ ಮುಂದೂಡಿದ್ದಾರೆ. None
Popular Tags:
Share This Post:
What’s New
Spotlight
Today’s Hot
-
- December 20, 2024
-
- December 20, 2024
-
- December 20, 2024
CT Ravi Release: ಈಗ ಎಲ್ಲಿದ್ದಾರೆ ಸಿಟಿ ರವಿ? ಅಲ್ಲಿಂದಲೇ ರಿಲೀಸ್ ಆಗ್ತಾರಾ?
- By Sarkai Info
- December 20, 2024
Featured News
CT Ravi: ಬಂಧನವಾದ 24 ಗಂಟೆಯೊಳಗೆ ಸಿಟಿ ರವಿ ಬಿಡುಗಡೆ! ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ!
- By Sarkai Info
- December 20, 2024
Latest From This Week
Max Movie: ಕಿಚ್ಚನ ಮ್ಯಾಕ್ಸ್ ಚಿತ್ರದಲ್ಲಿ ಲೇಡಿ ವಿಲನ್! ಯಾರು ಆ ಖಳ ನಾಯಕಿ?
NEWS
- by Sarkai Info
- December 20, 2024
Subscribe To Our Newsletter
No spam, notifications only about new products, updates.
Popular News
Top Picks
CT Ravi: ಸಿಟಿ ರವಿಗೆ ಮುಂದುವರೆದ ಸಂಕಷ್ಟ! ಬೇಲ್ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
- December 20, 2024