ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ (Renukaswamy Case) ಆರೋಪಿಯಾಗಿ ಜೈಲು ಸೇರಿದ್ದ ನಟ ದರ್ಶನ್ (Actor Darshan) ಜಾಮೀನು ಪಡೆದ ಖುಷಿಯಲ್ಲಿದ್ದಾರೆ. ಬೆನ್ನು ನೋವು ಅಂತ ಆಸ್ಪತ್ರೆಯಲ್ಲ ಒಂದೂವರೆ ತಿಂಗಳು ಚಿಕಿತ್ಸೆ ಪಡೆದ ದರ್ಶನ್, ರೆಗ್ಯುಲರ್ ಬೇಲ್ (Bail) ಸಿಕ್ತಿದ್ದಂತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದ್ರು. ಮನೆಗೆ ಹೋದ ದರ್ಶನ್ಗೆ ಮೈಸೂರಿನ ತುಡಿತ ಹೆಚ್ಚುತ್ತಿತ್ತು. ಮೈಸೂರಿಗೆ (Mysuru) ತೆರಳಲು ನಟ ದರ್ಶನ್ಗೆ ನಿನ್ನೆ ರಾತ್ರಿ (ಡಿ.19) ಕೋರ್ಟ್ ಅನುಮತಿ ನೀಡ್ತಿದ್ದಂತೆ ನಟ ದರ್ಶನ್, ಬೆಳಗ್ಗೆಯೇ ಮೈಸೂರಿಗೆ ಹಾರಿದ್ದಾರೆ. ಕೋರ್ಟ್ ಜಂಜಾಟ ಮುಗಿದ ಬಳಿಕ ನಟ ದರ್ಶನ್, ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ಫಾರಂ ಹೌಸ್ ನಲ್ಲಿ ರಿಲ್ಯಾಕ್ಸ್ ಮಾಡ್ತಿದ್ದಾರೆ. ದರ್ಶನ್ ನೋಡಲು ಫ್ಯಾಮಿಲಿ ಮಂದಿ ಫಾರಂ ಹೌಸ್ಗೆ ಬಂದಿದ್ದಾರೆ. ಫಾರಂ ಹೌಸ್ ನಲ್ಲಿ ದರ್ಶನ್ ವಿಶ್ರಾಂತಿ ಮೈಸೂರಿನ ಟಿ. ನರಸೀಪುರ ರಸ್ತೆಯಲ್ಲಿರುವ ದರ್ಶನ್, ವಿನೀಶ್ ಕ್ಯಾಟವೇರಿ ಫಾರಂ ಹೌಸ್ನಲ್ಲಿ ನಟ ದರ್ಶನ್ ರೆಸ್ಟ್ ಮಾಡ್ತಿದ್ದಾರೆ. ಈ ಫಾರಂ ಹೌಸ್ನಲ್ಲಿ ನಟ ದರ್ಶನ್ ಕೆಲ ಪ್ರಾಣಿಗಳನ್ನು ಸಾಕಿದ್ದಾರೆ. ದರ್ಶನ್ ಇಲ್ಲಿಯೇ ಹೆಚ್ಚಾಗಿ ಇರಲು ಇಷ್ಟಪಡುತ್ತಿದ್ರು. ಆಗಾಗ ಫಾರಂ ಹೌಸ್ಗೆ ಭೇಟಿ ನೀಡ್ತಿದ್ರು. ಇದೀಗ ಹಲವು ತಿಂಗಳ ಬಳಿಕ ಫಾರಂ ಹೌಸ್ಗೆ ಬಂದು ರೆಸ್ಟ್ ಮಾಡ್ತಿದ್ದಾರೆ. ಮಗನನ್ನು ನೋಡಲು ಬಂದ ಮೀನಾ! ಮಗ ದರ್ಶನ್ ನೋಡಲು ತಾಯಿ ಮೀನಾ ತೂಗುದೀಪ್ ಫಾರಂಗೆ ಆಗಮಿಸಿದ್ದಾರೆ. ಮೀನಾ ಅವರ ಜೊತೆಯಲ್ಲಿ ಪತ್ನಿ ವಿಜಯಲಕ್ಷ್ಮಿ, ನಟ ದರ್ಶನ್ ಅಕ್ಕ ಹಾಗೂ ಅಳಿಯ ಚಂದನ್ ಕೂಡ ಆಗಮಿಸಿದ್ರು. ಬಹಳ ದಿನಗಳ ಬಳಿಕ ನಟ ದರ್ಶನ್ ಫಾರಂ ಹೌಸ್ ನಲ್ಲಿ ಕುಟುಂಬ ಸದಸ್ಯರ ಜೊತೆ ಕಾಲ ಕಳೆಯುತ್ತಿದ್ದಾರೆ. ಗೇಟ್ ಬಂದ್ ಮಾಡಿಸಿದ ದರ್ಶನ್! ಮಾಧ್ಯಮದ ಕ್ಯಾಮೆರಾ ಕಂಡು ಗೇಟ್ ಕಿಂಡಿಯನ್ನೇ ದರ್ಶನ್ ಮುಚ್ಚಿಸಿದ್ದಾರೆ. ಹೊರಗಡೆಯ ಗೇಟ್ ಬಳಿ ಯಾವುದೇ ವಿಶ್ಯೂವಲ್ ಸಿಗದಂತೆ ಬಂದ್ ಮಾಡಿಸಿದ್ರು. ಫಾರಂ ಹೌಸ್ ನ ಹೊರ ಭಾಗದಿಂದ ಯಾವುದೇ ಚಿತ್ರೀಕರಣ ಮಾಡದಂತೆ ದರ್ಶನ್ ತೋಟದ ಸಿಬ್ಬಂದಿಗಳು ಗೇಟ್ ಬಂದ್ ಮಾಡಿದ್ರು. ದಾಸನ ಜೊತೆ ಧನ್ವಿರ್! ಮೈಸೂರಿನ ಫಾರಂ ಹೌಸ್ಗೆ ನಟ ದರ್ಶನ್ ಜೊತೆಯೇ ನಟ ಧನ್ವಿರ್ ಕೂಡ ಇದ್ದಾರೆ. ದಾಸ ಜೈಲಿಗೆ ಹೋದಾಗಿನಿಂದಲೂ ಕಾನೂನು ಹೋರಾಟದಲ್ಲಿ ನಟ ಧನ್ವಿರ್ ಕೂಡ ಕೈ ಜೋಡಿಸಿದ್ರು. ದರ್ಶನ್ ಬೇಲ್ಗೆ ಶ್ಯೂರಿಟಿ ಕೊಟ್ಟಿದ್ದಾರೆ. ತಮ್ಮನಂತೆ ನಟ ದರ್ಶನ್ಗೆ ಬೆಂಬಲವಾಗಿ ನಿಂತಿದ್ದಾರೆ. ಅಮ್ಮನನ್ನು ನೋಡ್ಬೇಕು ಅಂತಿದ್ದಾರೆ ದರ್ಶನ್! ನನ್ನ ತಾಯಿಗೆ ಹುಷಾರಿಲ್ಲದ ಕಾರಣ ಮೈಸೂರಿಗೆ ತೆರಳಿ ಅವರನ್ನು ನೋಡ್ಬೇಕು. ಮೈಸೂರಿನ ಆಸ್ಪತ್ರೆಯಲ್ಲಿ ಸೆಕೆಂಡ್ ಒಪಿನೀಯನ್ ಪಡೆಯಬೇಕು ಅಂತ ದರ್ಶನ್ ಪರ ವಕೀಲರು ನಾಲ್ಕು ವಾರಗಳ ಕಾಲ ಅವಕಾಶ ಕೊಡುವಂತೆ ಮನವಿ ಮಾಡಿದ್ರು. ಎರಡು ವಾರಗಳ ಕಾಲ ಅನುಮತಿ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಇದಕ್ಕೆ ಎಸ್ ಪಿ ಪಿ ಕೂಡ ಆಕ್ಷೇಪಣೆ ಸಲ್ಲಿಕೆ ಮಾಡಿದ್ದರು. ಇದನ್ನೂ ಓದಿ: Actor Darshan: ಮೈಸೂರಿಗೆ ಹೋಗಲು ದರ್ಶನ್ಗೆ ಸಿಕ್ಕೇ ಬಿಡ್ತು ಪರ್ಮೀಷನ್! ಎಷ್ಟು ದಿನ ಅಲ್ಲೇ ಇರ್ತಾರೆ ದಾಸ? ನಟ ದರ್ಶನ್ ಅವರಿಗೆ ಜನವರಿ 10ರಂದು ಕೋರ್ಟ್ಗೆ ಹಾಜರಾಗಲು ಸೂಚನೆ ನೀಡಿದ್ದಾರೆ. ಪೊಲೀಸರು ವಶಕ್ಕೆ ಪಡೆದಿದ್ದ ಸ್ಕಾರ್ಫಿಯೋ ಕಾರನ್ನು ಕೂಡ ವಾಪಸ್ ನೀಡುವಂತೆ ಸೂಚನೆ ನೀಡಲಾಗಿದೆ. None
Popular Tags:
Share This Post:
What’s New
Spotlight
Today’s Hot
-
- December 20, 2024
-
- December 20, 2024
-
- December 20, 2024
CT Ravi Release: ಈಗ ಎಲ್ಲಿದ್ದಾರೆ ಸಿಟಿ ರವಿ? ಅಲ್ಲಿಂದಲೇ ರಿಲೀಸ್ ಆಗ್ತಾರಾ?
- By Sarkai Info
- December 20, 2024
Featured News
CT Ravi: ಬಂಧನವಾದ 24 ಗಂಟೆಯೊಳಗೆ ಸಿಟಿ ರವಿ ಬಿಡುಗಡೆ! ರಾಜ್ಯ ಸರ್ಕಾರಕ್ಕೆ ಭಾರೀ ಮುಖಭಂಗ!
- By Sarkai Info
- December 20, 2024
Latest From This Week
Max Movie: ಕಿಚ್ಚನ ಮ್ಯಾಕ್ಸ್ ಚಿತ್ರದಲ್ಲಿ ಲೇಡಿ ವಿಲನ್! ಯಾರು ಆ ಖಳ ನಾಯಕಿ?
NEWS
- by Sarkai Info
- December 20, 2024
Subscribe To Our Newsletter
No spam, notifications only about new products, updates.
Popular News
Top Picks
CT Ravi: ಸಿಟಿ ರವಿಗೆ ಮುಂದುವರೆದ ಸಂಕಷ್ಟ! ಬೇಲ್ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್
- December 20, 2024