NEWS

CT Ravi: ಸಿಟಿ ರವಿ ನೆತ್ತಿ ಮೇಲೆ ರಕ್ತ ಸುರಿದ್ರೂ ಆಸ್ಪತ್ರೆಗೆ ಸೇರಿಸಿಲ್ಲ! ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಕ್ರೋಶ

ಸಿಟಿ ರವಿ ಬಂಧನ-ವಿಜಯೇಂದ್ರ ಆಕ್ರೋಶ ಬೆಂಗಳೂರು: ಸಿ.ಟಿ. ರವಿ ಬಂಧನಕ್ಕೆ (CT Ravi Arrest) ಬಿಜೆಪಿ ರಾಜ್ಯಾಧ್ಯಕ್ಷ (BJP State President) ಬಿ.ವೈ. ವಿಜಯೇಂದ್ರ (BY Vijayendra) ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ (Congress Government) ದೌರ್ಜನ್ಯ ಮಾಡಿದೆ, ಸಿ.ಟಿ. ರವಿ ಮೇಲೆ ದೌರ್ಜನ್ಯವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಹೇಗೆ ದುರುಪಯೋಗ ಮಾಡಿದೆ ಅನ್ನೋದನ್ನ ನೋಡ್ತಿದ್ದೇವೆ ಅಂತ ಕಿಡಿಕಾರಿದ್ರು. ರೈತರ ಮೇಲೆ ಲಾಠಿ ಚಾರ್ಜ್, ಪಂಚಮಸಾಲಿ (Panchamasali) ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡ್ತಾರೆ. ಇದೀಗ ವಿಧಾನಸೌಧದ ಒಳಗೆ ಬಂದು ಸಿಟಿ ರವಿ ಮೇಲೆ ಹಲ್ಲೆ ಮಾಡ್ತಾರೆ. ಅದಕ್ಕೆ ಅವಕಾಶವನ್ನ ಕೊಡ್ತಾರೆ ಅಂತ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿ.ಟಿ. ರವಿಗೆ ರಕ್ತ ಬಂದರೂ ಆಸ್ಪತ್ರೆಗೆ ಸೇರಿಸಿಲ್ಲ ಸಿ.ಟಿ. ರವಿಯನ್ನು 500 ಕಿಮಿ ಸುತ್ತಿಸಿದ್ದಾರೆ. ಇದು ಹಿಟ್ಲರ್ ಸರ್ಕಾರವೋ? ಕಾಂಗ್ರೆಸ್ ಸರ್ಕಾರವೋ? ಅಂತ ವಿಜಯೇಂದ್ರ ಪ್ರಶ್ನಿಸಿದ್ರು. ತುರ್ತು ಪರಿಸ್ಥಿತಿ ಹೇರಿರುವ ಕುಖ್ಯಾತಿ ಕಾಂಗ್ರೆಸ್ ಪಕ್ಷದ್ದು. ನೆತ್ತಿಯ ಮೇಲೆ ರಕ್ತ ಬಂದ್ರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಅಂತ ಆರೋಪಿಸಿದ್ರು. ಸಿ.ಟಿ. ರವಿ ಉಗ್ರಗಾಮಿಯಾ? ಸಿದ್ದರಾಮಯ್ಯನವರೇ, ಅಧಿಕಾರ ಶಾಶ್ವತವಲ್ಲ. ಅಧಿಕಾರದ ಮದದಿಂದ ಹಲ್ಲೆ ಮಾಡುವ ಕೆಲಸ ಮಾಡ್ತಿದ್ದಾರೆ. ಪ್ರತಿ ಅರ್ಧಗಂಟೆಗೆ ಕರೆ ಮಾಡಿ ಯಾರೋ ಸೂಚನೆ ಕೊಡ್ತಿದ್ರು ಎಂದು ಸಿಟಿ ರವಿ ಹೇಳಿದ್ದಾರೆ. ಸಿಟಿ ರವಿ ಉಗ್ರಗಾಮಿಯಾ? ಟೆರರಿಸ್ಟಾ? ಅಂತ ವಿಜಯೇಂದ್ರ ಖಾರವಾಗಿ ಪ್ರಶ್ನಿಸಿದ್ರು. ಇದನ್ನೂ ಓದಿ: CT Ravi: ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ, ನಮಗೂ ಒಂದು ಕಾಲ ಬರುತ್ತೆ! ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಸಿಟಿ ರವಿ ಪ್ರಕರಣದಲ್ಲಿ ಸಿಬಿಐ ತನಿಖೆಯಾಗಲಿ ಪಾಕಿಸ್ತಾನ ಜಿಂದಾಬಾದ್ ಎಂದವರನ್ನು ಅರೆಸ್ಟ್ ಮಾಡಲು ಹಿಂದೇಟು ಹಾಕ್ತಾರೆ. ನಿನ್ನೆ ಮಾಧ್ಯಮದವರ ಮೇಲೆಯೂ ಹಲ್ಲೆ ಮಾಡಿದ್ದಾರೆ. ಅಧಿಕಾರ ಶಾಶ್ವತವಲ್ಲ ಡಿಕೆ ಶಿವಕುಮಾರ್ ಅವರೇ. ಇದರ ಮೇಲೆ ಸಿಬಿಐ ತನಿಖೆಯಾಗಬೇಕು ಅಂತ ವಿಜಯೇಂದ್ರ ಆಗ್ರಹಿಸಿದ್ರು. ಚಿಕ್ಕಮಗಳೂರು ಅಲ್ಲ, ಬೇಕಿದ್ರೆ ಇಂಡಿಯಾನೇ ಬಂದ್ ಮಾಡಲಿ ಮಂಡ್ಯದಲ್ಲಿ ಸಿಟಿ ರವಿ ಹೇಳಿಕೆ ಬಗ್ಗೆ, ಬಿಜೆಪಿ ವರ್ತನೆ ಬಗ್ಗೆ ಮಾತನಾಡಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದು, ರವಿ ನಡತೆ ಸರಿನಾ ತಪ್ಪಾ, ಅವ್ರ ಪಕ್ಷದವರೇ ಹೇಳಲಿ. ಚಿಕ್ಕಮಗಳೂರು ಅಲ್ಲ ಇಂಡಿಯಾನೇ ಬಂದ್ ಮಾಡಲಿ‌ ಎಂದು ಹೇಳಿದ್ದಾರೆ. ಯಾವ ಘನ ಕಾರ್ಯ ಮಾಡಿದ್ದಾರೆ ಅಂತ ಬಂದ್ ಮಾಡಿದ್ದಾರೆ? ಸದನದ ಜೊತೆಗೆ, ಹೆಣ್ಣುಕುಲಕ್ಕೆ ದೊಡ್ಡ ಅವಮಾನ. ಈ ರೀತಿ ಮಾತಾಡೋದು ಇದೇ ಮೊದಲಲ್ಲ, ಹಿಂದೆನೂ ಕೀಳಾಗಿ, ಚಿತ್ರನಟರು, ಶಾಸಕರು, ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲ ಖಾನ್ ಅಂತಾನೂ ಕರೆದಿದ್ದಾರೆ. ಇವರ ನಡತೆ ಬಗ್ಗೆ ಇವರ ಪಕ್ಷದವರೇ ಸರಿನಾ? ತಪ್ಪಾ? ಅಂತ ಹೇಳಲಿ ಎಂದು ಹೇಳಿದ್ದಾರೆ. ಇನ್ನು ಚಿಕ್ಕಮಗಳೂರು ಬಂದ್ ಬಗ್ಗೆ ಮಾತನಾಡಿದ ಡಿಕೆಶಿ ಏನ್ ದೊಡ್ಡ ಘನ ಕಾರ್ಯ ಮಾಡಿದ್ದಾರೆ ಅಂತಾ ಬಂದ್ ಗೆ ಕರೆ ಕೊಟ್ಟಿದ್ದಾರೆ, ಎಷ್ಟು ಬೇಕಾದ್ರು ಬಂದ್‌ ಮಾಡ್ಕೊಳ್ಳಿ, ಯಾರು ಬೇಕಾದರು ಮಾಡಿಕೊಳ್ಳಲಿ ಎಂದು ಹೇಳಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.