NEWS

Madanolsavam OTT: ಒಂದೂವರೆ ವರ್ಷದ ನಂತರ ಒಟಿಟಿಗೆ ಬಂತು ಸೂಪರ್, ಡೂಪರ್​ ಕಾಮಿಡಿ ಸಿನಿಮಾ; ಸ್ಟ್ರೀಮಿಂಗ್ ಎಲ್ಲಿ?

ಮಲಯಾಳಂ ಚಿತ್ರ ಮದನೋಲ್ಸವಂ OTT ಗೆ (madanolsavam) ಬಂದಿದೆ. ಈ ಚಿತ್ರ ಕಳೆದ ವರ್ಷ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಹಿಟ್‌ (Super Hit) ಕಂಡಿತ್ತು. ಮಲಯಾಳಂನ ಖ್ಯಾತ ನಟ ಸೂರಜ್ ವೆಂಜರಮೂಡು (Suraj Venjaramoodu) ಈ ಚಿತ್ರದಲ್ಲಿ ನಟಿಸಿದ್ದು, ಐಎಂಡಿಬಿಯಲ್ಲಿ 7.1 (IMDB) ರೇಟಿಂಗ್ ಇದೆ. ಇದೀಗ ಒಟಿಟಿಗೆ ಲಗ್ಗೆ ಇಟ್ಟಿದೆ ಸಿನಿಮಾ. ಮಲಯಾಳಂ ಚಲನಚಿತ್ರ ಮದನೋಲ್ಸವಂ ಏಪ್ರಿಲ್ 14, 2023 ರಂದು ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಸುಧೀಶ್ ಗೋಪಿನಾಥ್ ನಿರ್ದೇಶಿಸಿದ್ದಾರೆ ಮತ್ತು ಸೂರಜ್ ವೆಂಜರಮೂಡು, ಬಾಬು ಆಂಟೋನಿ ಮತ್ತು ರಾಜೇಶ್ ಮಾಧವನ್ ಸಿನಿಮಾದಲ್ಲಿ ಇದ್ದಾರೆ. ಇಂದೇ ಶುಕ್ರವಾರದಿಂದ (ಡಿಸೆಂಬರ್ 20) ಪ್ರೈಮ್ ವಿಡಿಯೋದಲ್ಲಿ ಸ್ಟ್ರೀಮ್ ಆಗಲಿದೆ ಸಿನಿಮಾ. ಇದೊಂದು ಇಂಟ್ರೆಸ್ಟಿಂಗ್ ಸಬ್ಜೆಕ್ಟ್ ಇರುವ ಸಿನಿಮಾ. ಎರಡು ರಾಜಕೀಯ ಪಕ್ಷಗಳ ನಡುವಿನ ಜಗಳದಲ್ಲಿ ಒಬ್ಬ ಸಾಮಾನ್ಯ ವ್ಯಕ್ತಿಗೆ ಆಗುವ ತೊಂದರೆಗಳೇ ಚಿತ್ರದ ಕಥೆ ಯಾರೆಲ್ಲ ಇದ್ದಾರೆ? ಇದರಲ್ಲಿ ಮದನನ್ ಮಲ್ಲಕ್ಕರ್ ಪಾತ್ರದಲ್ಲಿ ಸೂರಜ್ ಮತ್ತು ಮದನನ್ ಮಂಜಕ್ಕರನಾಗಿ ಬಾಬು ಆಂಟೋನಿ ನಟಿಸಿದ್ದಾರೆ. ಮದನನ ಮಲ್ಲಕ್ಕರ ಒಬ್ಬ ಸಾಮಾನ್ಯ ವ್ಯಕ್ತಿ. ಮತ್ತೊಬ್ಬ ಮದನನ್ ದೊಡ್ಡ ರಾಜಕೀಯ ನಾಯಕ. Malayalam Film #Madanolsavam (മധനോത്സവം) Now Streaming On #AmazonPrimeVideo pic.twitter.com/bJzCqzInhX ಚುನಾವಣೆಯಲ್ಲಿ ಪಕ್ಷದ ಪರವಾಗಿ ಸ್ಪರ್ಧಿಸುತ್ತಾರೆ. ಆದರೆ ಮತದಾರರಲ್ಲಿ ಗೊಂದಲ ಮೂಡಿಸುವ ಉದ್ದೇಶದಿಂದ ವಿರೋಧ ಪಕ್ಷವೂ ಈ ಮದನನನ್ನೇ ಕಣಕ್ಕಿಳಿಸುತ್ತೆ ಅಲ್ಲಿಯವರೆಗೂ ಸುಸೂತ್ರವಾಗಿ ಸಾಗುತ್ತಿದ್ದ ಅವರ ಬದುಕು ಈ ರಾಜಕೀಯದಿಂದ ಎಂತಹ ಬದಲಾವಣೆಗಳಾಯಿತು? ಕೊನೆಗೆ ಅವರ ಜೀವನ ಏನಾಯಿತು ಎಂಬುದನ್ನು ಈ ಮದನೋತ್ಸವಂ ಸಿನಿಮಾದಲ್ಲಿ ನೋಡಬಹುದು. ವೀಕ್ಷಣೆ ಎಲ್ಲಿ? 20 ತಿಂಗಳ ನಂತರ ಇದೀಗ ಪ್ರೈಮ್ ವಿಡಿಯೋ ಬಂದಿದೆ. ಯಾವುದೇ ಪೂರ್ವ ಮಾಹಿತಿ ಇಲ್ಲದೇ ಈ ಸಿನಿಮಾ ಸ್ಟ್ರೀಮ್ ಆಗುತ್ತಿದೆ. ಆದರೆ ಮಲಯಾಳಂ ಆಡಿಯೋದಲ್ಲಿ ಮಾತ್ರ ಸಿನಿಮಾ ಲಭ್ಯವಿದೆ. ಇಂಗ್ಲಿಷ್ ಸಬ್ ಟೈಟಲ್ ಕೂಡ ಇದೆ. ಇದಕ್ಕೂ ಮುಂಚೆ ಭರತನಾಟ್ಯಂ ಮತ್ತೊಂದು ಕಾಮಿಡಿ ಸಿನಿಮಾ ಒಟಿಟಿ ಬಿಡುಗಡೆ ಆಗಿತ್ತು. ಭರತನಾಟ್ಯಂ ಮನೋರಮಾ ಮ್ಯಾಕ್ಸ್‌ ನಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈ ಸಿನಿಮಾಕ್ಕೆ ಕೃಷ್ಣದಾಸ್ ಮುರಳಿ ನಿರ್ದೇಶನ ಮಾಡಿದ್ದಾರೆ. ಸೈಜು ಕುರುಪ, ಸಾಯಿ ಕುಮಾರ್‌, ಕಲಾರಂಜಿನಿ, ಅಭಿರಾಮ್‌ ರಾಧಕೃಷ್ಣನ್‌, ಶ್ರುತಿ ಸುರೇಶ್‌, ಗಂಗಾ ಮೀರಾ, ಮನಿಕಂಠನ್‌, ನಂದು ಪೊಡುವಲ್‌, ಸೋಹನ್‌ ಸೀನುಲಲ್‌, ಸಲೀಮ್‌ ಹಾಸನ್‌, ಕೃಷ್ಣದಾಸ್‌ ಮುರಳಿ, ದಿವ್ಯ ಎಂ ನಾಯರ್‌, ಸ್ವಾತಿದಾಸ್‌ ಪ್ರಭು, ಶ್ರೀಜಾ ರವಿ ಮುಂತಾದವರು ಭರತನಾಟ್ಯಂ ಸಿನಿಮಾದಲ್ಲಿ ನಟಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.