NEWS

CT Ravi: ಸಿ.ಟಿ. ರವಿಗೆ ಹೈಕೋರ್ಟ್‌ನಿಂದ ಬಿಗ್ ರಿಲೀಫ್, ಎಲ್ಲಿದ್ದಾರೋ ಅಲ್ಲಿಂದಲೇ ತಕ್ಷಣ ಬಿಡುಗಡೆಗೆೆ ಆದೇಶ!

ಸಿಟಿ ರವಿಗೆ ಹೈಕೋರ್ಟ್ ರಿಲೀಫ್ ಬೆಂಗಳೂರು: ಬಿಜೆಪಿ ಎಂಎಲ್‌ಸಿ (BJP MLC) ಸಿ.ಟಿ. ರವಿಗೆ (CT Ravi) ಬಿಗ್ ರಿಲೀಫ್ ಸಿಕ್ಕಿದೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ವಿಧಾನ ಪರಿಷತ್‌ನಲ್ಲೇ ಅಶ್ಲೀಲ ಶಬ್ದ ಬಳಸಿದ್ದಾರೆ ಎನ್ನಲಾದ ಕೇಸ್‌ನಲ್ಲಿ ಬಂಧನಕ್ಕೆ ಒಳಗಾಗಿದ್ದ ಸಿಟಿ ರವಿಗೆ ಹೈಕೆೋರ್ಟ್ (High Court) ರಿಲೀಫ್ ನೀಡಿದೆ. ಇಂದು ಹೈಕೋರ್ಟ್‌ನಲ್ಲಿ ಇಂದು ಸಿಟಿ ರವಿ ಕೇಸ್‌ನಲ್ಲಿ ತೀವ್ರ ವಾದ ಪ್ರತಿವಾದ ನಡೆಯಿತು. ಸಿಟಿ ರವಿ ಮೇಲಿನ ಎಫ್‌ಐಆರ್ (FIR) ತಡೆಗೆ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿ ಎಂ.ಜಿ. ಉಮಾ ಅವರ ಪೀಠದ ಮುಂದೆ ಅರ್ಜಿ ವಿಚಾರಣೆ ನಡೆಯಿತು. ಸುದೀರ್ಘ ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ ಸಿಟಿ ರವಿ ಬಿಡುಗಡೆಗೆ ಆದೇಶ ನೀಡಿದೆ. ಎಲ್ಲಿದ್ದಾರೋ ಅಲ್ಲೇ ರಿಲೀಸ್ ಮಾಡಿ ಅಂತ ಹೈಕೋರ್ಟ್ ಆದೇಶಿಸಿದೆ. ಎಲ್ಲಿದ್ದಾರೋ ಅಲ್ಲಿಂದಲೇ ಬಿಡುಗಡೆ ಮಾಡಿ! ಹೈಕೋರ್ಟ್‌ನಲ್ಲಿ ಸಿಟಿ ರವಿಗೆ ಬಿಗ್ ರಿಲೀಫ್ ಸಿಕ್ಕಿದೆ. ಸಿಟಿ ರವಿ ಅವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ. ಸಿಟಿ ರವಿ ಎಲ್ಲಿದ್ದಾರೋ ಅಲ್ಲಿಂದಲೇ ಬಿಡುಗಡೆ ಮಾಡುವಂತೆ ಹೈಕೋರ್ಟ್ ನ್ಯಾಯಪೀಠ ಆದೇಶಿಸಿದೆ. ಸಿಟಿ ರವಿಗೆ ಷರತ್ತು ವಿಧಿಸಿದ ಕೋರ್ಟ್ ಸಿಟಿ ರವಿ ಬಿಡುಗಡೆಗೆ ಆದೇಶ ನೀಡಿರುವ ಹೈಕೋರ್ಟ್, ಕೆಲವೊಂದು ಷರತ್ತು ವಿಧಿಸಿದೆ. ತನಿಖೆಗೆ ಸಹಕರಿಸಬೇಕು ಅಂತ ಸೂಚನೆ ನೀಡಿ, ಮಧ್ಯಂತರ ಆದೇಶ ನೀಡಿದೆ. ಇದನ್ನೂ ಓದಿ: CT Ravi: ಸಿಟಿ ರವಿಗೆ ಮುಂದುವರೆದ ಸಂಕಷ್ಟ! ಬೇಲ್ ಅರ್ಜಿ ವಿಚಾರಣೆ ಮುಂದೂಡಿದ ಕೋರ್ಟ್ ಅತ್ತ ಜನಪ್ರತಿನಿಧಿಗಳ ಕೋರ್ಟ್‌ನಲ್ಲಿ ವಿಚಾರಣೆ ಮುಂದೂಡಿಕೆ ಮತ್ತೊಂದೆಡೆ ಸಿಟಿ ರವಿ ಅರ್ಜಿ ವಿಚಾರಣೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲೂ ಕೂಡ ನಡೆಯಿತು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ದೂರಿನ ಅನ್ವಯ ಸಿಟಿ ರವಿ ಅವರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದರು. ಪ್ರಕರಣದಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಬೇಲ್ ಅರ್ಜಿ ವಿಚಾರಣೆಯನ್ನು ನಾಳೆಗೆ (ಡಿಸೆಂಬರ್ 21) ಮುಂದೂಡಿತ್ತು. ಸರ್ಕಾರದ ವಿರುದ್ಧ ವಿಜಯೇಂದ್ರ ಆಕ್ರೋಶ ಸಿ.ಟಿ. ರವಿ ಬಂಧನಕ್ಕೆ (CT Ravi Arrest) ಬಿಜೆಪಿ ರಾಜ್ಯಾಧ್ಯಕ್ಷ (BJP State President) ಬಿ.ವೈ. ವಿಜಯೇಂದ್ರ (BY Vijayendra) ಕಿಡಿ ಕಾರಿದ್ದಾರೆ. ಕಾಂಗ್ರೆಸ್ ಸರ್ಕಾರ (Congress Government) ದೌರ್ಜನ್ಯ ಮಾಡಿದೆ, ಸಿ.ಟಿ. ರವಿ ಮೇಲೆ ದೌರ್ಜನ್ಯವಾಗಿದೆ. ಕಾಂಗ್ರೆಸ್ ಪಕ್ಷ ಅಧಿಕಾರ ಹೇಗೆ ದುರುಪಯೋಗ ಮಾಡಿದೆ ಅನ್ನೋದನ್ನ ನೋಡ್ತಿದ್ದೇವೆ ಅಂತ ಕಿಡಿಕಾರಿದ್ರು. ರೈತರ ಮೇಲೆ ಲಾಠಿ ಚಾರ್ಜ್, ಪಂಚಮಸಾಲಿ (Panchamasali) ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಮಾಡ್ತಾರೆ. ಇದೀಗ ವಿಧಾನಸೌಧದ ಒಳಗೆ ಬಂದು ಸಿಟಿ ರವಿ ಮೇಲೆ ಹಲ್ಲೆ ಮಾಡ್ತಾರೆ. ಅದಕ್ಕೆ ಅವಕಾಶವನ್ನ ಕೊಡ್ತಾರೆ ಅಂತ ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿ.ಟಿ. ರವಿಗೆ ರಕ್ತ ಬಂದರೂ ಆಸ್ಪತ್ರೆಗೆ ಸೇರಿಸಿಲ್ಲ ಸಿ.ಟಿ. ರವಿಯನ್ನು 500 ಕಿಮಿ ಸುತ್ತಿಸಿದ್ದಾರೆ. ಇದು ಹಿಟ್ಲರ್ ಸರ್ಕಾರವೋ? ಕಾಂಗ್ರೆಸ್ ಸರ್ಕಾರವೋ? ಅಂತ ವಿಜಯೇಂದ್ರ ಪ್ರಶ್ನಿಸಿದ್ರು. ತುರ್ತು ಪರಿಸ್ಥಿತಿ ಹೇರಿರುವ ಕುಖ್ಯಾತಿ ಕಾಂಗ್ರೆಸ್ ಪಕ್ಷದ್ದು. ನೆತ್ತಿಯ ಮೇಲೆ ರಕ್ತ ಬಂದ್ರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಅಂತ ಆರೋಪಿಸಿದ್ರು. ಸಿ.ಟಿ. ರವಿ ಉಗ್ರಗಾಮಿಯಾ? ಸಿದ್ದರಾಮಯ್ಯನವರೇ, ಅಧಿಕಾರ ಶಾಶ್ವತವಲ್ಲ. ಅಧಿಕಾರದ ಮದದಿಂದ ಹಲ್ಲೆ ಮಾಡುವ ಕೆಲಸ ಮಾಡ್ತಿದ್ದಾರೆ. ಪ್ರತಿ ಅರ್ಧಗಂಟೆಗೆ ಕರೆ ಮಾಡಿ ಯಾರೋ ಸೂಚನೆ ಕೊಡ್ತಿದ್ರು ಎಂದು ಸಿಟಿ ರವಿ ಹೇಳಿದ್ದಾರೆ. ಸಿಟಿ ರವಿ ಉಗ್ರಗಾಮಿಯಾ? ಟೆರರಿಸ್ಟಾ? ಅಂತ ವಿಜಯೇಂದ್ರ ಖಾರವಾಗಿ ಪ್ರಶ್ನಿಸಿದ್ರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.