NEWS

Siddaramaiah: ದಸರಾ ಬಳಿಕ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಇಳಿಯೋದು ಪಕ್ಕಾ! ಬಿಜೆಪಿ ಶಾಸಕನಿಂದ ಭವಿಷ್ಯ

ಶಾಸಕ ಮಹೇಶ್ ತೆಂಗಿನಕಾಯಿ ಮತ್ತು ಸಿಎಂ ಸಿದ್ದರಾಮಯ್ಯ ಹುಬ್ಬಳ್ಳಿ: ದಸರಾ ನಂತರ ಮುಖ್ಯಮಂತ್ರಿ (Chief Minister) ಸ್ಥಾನದಿಂದ ಸಿದ್ದರಾಮಯ್ಯ (Siddaramaiah) ಕೆಳಗೆ ಇಳಿಯೋದು ಖಚಿತ ಎಂದು ಹುಬ್ಬಳಿಯಲ್ಲಿ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿಕೆ ನೀಡಿದ್ದಾರೆ. ಸರ್ಕಾರ ಇರಲಿ ಬಿಡಲಿ ಜಾತಿ ಗಣತಿ (Caste census) ಬಿಡುಗಡೆ ಮಾಡಬೇಕು ಎಂದು ಹಿರಿಯ ನಾಯಕ (Senior Congress Leader) ಬಿ.ಕೆ. ಹರಿಪ್ರಸಾದ್ (MLC BK Hariprasad) ಆಗ್ರಹಿಸಿದ್ದಾರೆ. ಇದೆಲ್ಲವೂ ಅದರ ಮುನ್ಸೂಚನೆ ಅನ್ಸುತ್ತೆ ಎಂದರು. ಜಾತಿಗಣತಿಯಲ್ಲಿ ಹಿಂದೂ ಕ್ರಿಶ್ಚಿಯನ್ ಜಾತಿ ಗಣತಿಯಲ್ಲಿ ಗೊಂದಲ ಆಗಿದೆ ಅನ್ನೋ ಆರೋಪವಿದ್ದು, ಸಾರ್ವಜನಿಕವಾಗಿ ಕೆಲವೆಡೆ ಹಿಂದೂ ಕ್ರಿಶ್ಚಿಯನ್ ಅಂತ ಬರೆಸಿದ್ದಾರೆ. ಇನ್ನು ಜಾತಿ ಗಣತಿ ಬೇಡ ಅನ್ನೋದಾದರೆ ಯಾಕೆ ಮಾಡಿಸಬೇಕಿತ್ತು, ಅದು ಸರಿಯಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದ್ದು, ಅದರೊಂದಿಗೆ ಕಾಂಗ್ರೆಸ್ ಆಂತರಿಕ ಬೇಗುದಿ ಹರಿಪ್ರಸಾದ್ ಅವರಿಗೂ ಗೊತ್ತಿದೆ. ಅದಕ್ಕಾಗಿಯೇ ಅವರು ಜಾತಿಗಣತಿಯನ್ನು ಬಿಡುಗಡೆ ಮಾಡಲು ಹೇಳಿದ್ದಾರೆ ಎಂದರು. ಸಿದ್ದರಾಮಯ್ಯ ಆಪ್ತರಿಂದಲೇ ಕೆಳಗಿಳಿಸುವ ತಂತ್ರ ಮುಡಾ ಹಗರಣದಲ್ಲಿ, ಲೋಕಾಯುಕ್ತ ತನಿಖೆ ಸರಿಯಾಗದು. ಅವರೇ ಮುಖ್ಯಮಂತ್ರಿ ಸ್ಥಾನದಲ್ಲಿ ಇರುವಾಗ, ಸರಿಯಾದ ತನಿಖೆಯಾಗಲು ಸಾಧ್ಯವೇ ಇಲ್ಲ. ಸಿಬಿಐ ತನಿಖೆಯಾಗಲಿ, ಇದರಿಂದ ಸತ್ಯಾಂಶ ಹೊರಗೆ ಬರಲಿದೆ. ಆದರೆ ಬಂಡೆ ತಾನೇ ಮುಂದಿನ ಮುಖ್ಯಮಂತ್ರಿ ಅಂತಾ ಬಿಂಬಿಸುತ್ತಿದ್ದಾರೆ. ಇನ್ನೊಂದೆಡೆ ಸಿಎಂ ಸ್ಥಾನಕ್ಕೆ ಎಂ.ಬಿ. ಪಾಟೀಲ್‌, ಆರ್.ವಿ. ದೇಶಪಾಂಡೆ, ಜಾರಕಿಹೊಳಿ ಅವರು ಸಹ ಟವೆಲ್ ಹಾಕಿದ್ದಾರೆ. ಇದರೊಂದಿಗೆ ಐದು ವರ್ಷ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಎನ್ನುವವರೇ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸೋ ಪ್ರಯತ್ನ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ: ನಿಖಿಲ್​ ಜೊತೆಗೆ ಅಖಾಡಕ್ಕೆ ಇಳಿದ ಕೇಂದ್ರ ಸಚಿವ ಎಚ್​​​​ಡಿ ಕುಮಾರಸ್ವಾಮಿ; ಚನ್ನಪಟ್ಟಣ ಉಪಕದನದಲ್ಲಿ ಬಿಗ್​ಟ್ವಿಸ್ಟ್​​! ಸರ್ಕಾರದ ಹದ್ದು ಮೀರಿ ವರ್ತನೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹದ್ದು ಮೀರಿ ವರ್ತನೆ ಮಾಡುತಿದ್ದು, ಹಿಂದೂಗಳ ಹಬ್ಬದ ದಿನಗಳಲ್ಲಿಯೇ ರಜೆ ಕಡಿತ ಮಾಡಲಾಗಿದೆ. ಆದರೆ ಮುಸ್ಲಿಂರ ಹಬ್ಬದ ದಿನಗಳಲ್ಲಿ ನಮಾಜ್ ಇರುತ್ತದೆ. ಕ್ಯಾಲೆಂಡರ್ ಇವೆಂಟ್ ಅನೌನ್ಸ್ ಆದ ಹಾಗೆ ಮಾಡಬೇಕು, ಆದರೆ ಇವರು ದಿನಾಂಕ ಅದಲು ಬದಲು ಮಾಡುತ್ತಾರೆ. ಚಂದ್ರ ಕಾಣಿಸಿದಾಗ ದಿನಾಂಕ ಚೇಂಜ್ ಮಾಡ್ತೀರಿ, ಧರ್ಮದ ಹಬ್ಬದಲ್ಲಿ ಹೀಗೆ ಯಾಕೆ ಮಾಡ್ತೀರಿ ಎಂದು ಹುಬ್ಬಳ್ಳಿಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಹೇಳಿಕೆ ನೀಡಿದ್ಧಾರೆ. ಸರ್ಕಾರ ಬಿದ್ದರೆ ಬೀಳಲಿ, ಜಾತಿಗಣತಿ ಜಾರಿ ಮಾಡಲೇಬೇಕು: ಕಾಂಗ್ರೆಸ್‌ನ ಹಿರಿಯ ನಾಯಕನಿಂದ ಸ್ಪೋಟಕ ಹೇಳಿಕೆ! ಬೆಂಗಳೂರು: ರಾಜ್ಯದಲ್ಲಿ ಜಾತಿಗಣತಿ ವಿಚಾರ ಮತ್ತೆ ಮುನ್ನಲೆಗೆ ಬಂದಿದ್ದು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿದೆ. ಒಂದು ಕಡೆ ಪ್ರತಿಪಕ್ಷಗಳ ವಾಕ್ ಪ್ರಹಾರ ನಡೆಯುತ್ತಿದ್ದರೆ, ಮತ್ತೊಂದೆಡೆ ಸ್ವಪಕ್ಷದ ಹಿರಿಯ ನಾಯಕರೇ ಸಿಡಿದೆದ್ದಿದ್ದಾರೆ. ಜಾತಿಗಣತಿ ಜಾರಿ ವಿಚಾರ ಕಾಂಗ್ರೆಸ್ ಪ್ರಣಾಳಿಕೆಯಲ್ಲಿಯೇ ಇದೆ. ಆದರೆ ಜಾತಿಗಣತಿ ಜಾರಿಗೆ ಸರ್ಕಾರ ಯಾಕೆ ಯೋಚನೆ ಮಾಡುತ್ತಿದೆ? ಮೀನಾಮೇಷ ಎಣಿಸದೆ ಮೊದಲು ಜಾತಿಗಣತಿ ಜಾರಿ ಮಾಡಲಿ, ಸರ್ಕಾರ ಬಿದ್ದರೆ ಬೀಳಲಿ. ಕರ್ನಾಟಕದಲ್ಲಿ ಜಾತಿಗಣತಿ ಜಾರಿ ಮಾಡಲೇಬೇಕು ಎಂದು ಕಾಂಗ್ರೆಸ್ ಎಂಎಲ್ಸಿ ಬಿಕೆ ಹರಿಪ್ರಸಾದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. (ವರದಿ: ಶಿವರಾಮ್ ಅಸುಂಡಿ, ನ್ಯೂಸ್ 18 ಕನ್ನಡ, ಹುಬ್ಬಳ್ಳಿ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.