NEWS

Bigg Boss 11: ಬಿಗ್ ಬಾಸ್ ಮನೆಯಲ್ಲಿ ಒಡಕು, ಬಿರುಕು, ಮಸಿ! ಮನೆ ಈಗ ರಣಾಂಗಣ

ಬಿಗ್ ಬಾಸ್ ಮನೆಯಲ್ಲಿ ಒಡಕು, ಬಿರುಕು. ಮಸಿ; ಮನೆ ಈಗ ರಣಾಂಗಣ! ದೊಡ್ಮನೆ ರಣಾಂಗಣ (Bigg Boss House) ಆಯಿತು ನೋಡಿ. ನಿನ್ನೆ ದಿನ ಕಿಚ್ಚ ಹೇಳಿದ್ರು.ಸಿಕ್ಕ ಸಮಯವನ್ನ ಯಾರೂ ಬಳಸಿಕೊಂಡಿಲ್ಲ ಅಂತ ಹೇಳಿದ್ದ ತಡ, ಎಲ್ಲರೂ ಆ್ಯಕ್ಟೀವ್ ಏನೋ ಆದ್ರು. ಆದರೆ, ಕೊಟ್ಟಿರೋ ಒಂದು ಟಾಸ್ಕ್‌ನಿಂದ ಇಡೀ ಮನೆಯಲ್ಲಿ ಬಿರುಕು ಮೂಡಿದೆ. ಇಡೀ ಮನೆಯ ಒಡೆದು ಹೋಗಿದೆ. ಆಟದ ರೂಲ್‌ನಂತೆ ಅನರ್ಹರಿಗೆ ಮಸಿ ಬಳೆಯಲಾಗಿದೆ. ಅಲ್ಲಿಗೆ ನಾವು ಸ್ವರ್ಗ (Heaven) ನಿವಾಸಿಗಳು, ನೀವು ನರಕ (Hell) ನಿವಾಸಿಗಳು ಅನ್ನೋ ಕಲ್ಪನೆ ಇಲ್ಲಿ ಎಲ್ಲವೂ ಹಾರಿ ಹೋದಂತೆ ಇದೆ. ಕಾರಣ ಎಲ್ಲರೂ ಎಲ್ಲರನ್ನೂ ದೂರಿದ್ದಾರೆ. ಭವ್ಯ ಗೌಡ (Bhavya Gowda) ಸಮಯದ ಗೊಂಬೆ ಆಗಿದ್ದಾರೆ. ಚೈತ್ರಾ ಕುಂದಾಪುರ್ ಮತ್ತೆ ಜಗಳಕ್ಕೆ ನಿಂತಿದ್ದಾರೆ. ಇಡೀ ಮನೆಯ ಇದೀಗ ರಣಾಂಗಣ ಆಗಿದೆ. ಇದರ ಝಲಕ್ ಪ್ರೋಮೋದಲ್ಲಿ ರಿವೀಲ್ ಆಗಿದೆ. ಇದರ ವಿವರ ಇಲ್ಲಿದೆ ಓದಿ. ಒಡಕು, ಬಿರುಕು. ಮಸಿ; ಮನೆ ಈಗ ರಣಾಂಗಣ ದೊಡ್ಮನೆಯಲ್ಲಿ ಅನರ್ಹರ ಟಾಸ್ಕ್ ಬಂದಿದೆ. ಮನೆಯಲ್ಲಿ ಇರಲು ಯಾರು ಅನರ್ಹರು ಅನ್ನೋದನ್ನ ಸದಸ್ಯರು ಹೇಳ್ಬೇಕಿದೆ. ಆದರೆ, ಈ ಒಂದು ಆಟದ ಸಮಯದಲ್ಲಿ ಜಗಳ ಆಗಿವೆ. ಚೈತ್ರಾ ಕುಂದಾಪುರ್ ಮತ್ತೆ ಫುಲ್ ಸೌಂಡ್‌ ಮಾಡುತ್ತಿದ್ದಾರೆ. ಜಗಳದ ಮಾತುಗಳನ್ನೆ ಆಡುತ್ತಿದ್ದಾರೆ. ಸಮಯದ ಗೊಂಬೆ ಆದ್ರೆ ಭವ್ಯ ಗೌಡ ಭವ್ಯ ಗೌಡ ತುಂಬಾನೆ ಚೆನ್ನಾಗಿ ಆಡುತ್ತಿದ್ದಾರೆ. ಆದರೆ, ಯಾರಿಗೂ ಈ ಸ್ಪರ್ಧಿ ಆಟ ಇಷ್ಟ ಆದಂತೆ ಇಲ್ಲ ಅನಿಸುತ್ತದೆ. ಹಾಗಾಗಿಯೆ ಉಗ್ರಂ ಮಂಜು ಒಂದಷ್ಟು ಪ್ರಶ್ನೆಗಳನ್ನ ಕೂಡ ಕೇಳಿದ್ದಾರೆ. ಐಶ್ವರ್ಯ ಅಂತಲೂ ಸಮಯದ ಗೊಂಬೆ ಅಂತಲೂ ಹೇಳಿದ್ದಾರೆ. ಇದನ್ನೂ ಓದಿ: Sara Annaiah: ಭಕ್ತಿಯಲ್ಲಿ ಮುಳುಗಿದ ಕನ್ನಡತಿ ವರುಧಿನಿ! ಹೆಣೆ ಮೇಲೆ ತಿರುಪತಿ ನಾಮ ಹಚ್ಚಿಕೊಂಡು ಪೋಸ್! ಕಣ್ಣೀರು ಹಾಕಿದ ಭವ್ಯ ಗೌಡ ಭವ್ಯ ಗೌಡ ಕಣ್ಣೀರು ಹಾಕಿದ್ದಾರೆ. ಐಶ್ವರ್ಯ ಮತ್ತು ಉಗ್ರಂ ಮಂಜು ಕೇಳೋ ಪ್ರಶ್ನೆಗೆ ಅತ್ತು ಬಿಟ್ಟಿದ್ದಾರೆ. ಉಗ್ರಂ ಮಂಜು ಕೇಳಿದ ಆ ಪ್ರಶ್ನೆ ಹೀಗಿದೆ. “ನೀವು ಎಮೋಷನ್ಸ್ ತೋರ್ತಿರೋದು ಆಟಕೋಸ್ಕರವೇ? ಇಲ್ಲಿ ನಿಜವಾಗಲೂ ನೀವು ಎಮೋಷನಲ್ ಆಗಿದ್ದೀರಾ” ಅಂತಲೇ ಹೇಳಿದ್ದಾರೆ. ಚೈತ್ರಾ ಕುಂದಾಪುರ್ ಫುಲ್ ಸೌಂಡ್ ಚೈತ್ರಾ ಕುಂದಾಪುರ್ ಸುಮ್ನೆ ಇದ್ದರು. ಮೊದಲ ದಿನ ಒಂಚೂರು ಆವಾಜ್ ಹಾಕಿದ್ದರು. ಕಿಚ್ಚನ ಬುದ್ಧಿಮಾತಿನ ಬಳಿಕ ಮತ್ತೆ ಎಂದಿನಂತೆ ಆಗಿದ್ದಾರೆ. ಎಲ್ಲ ಭಯ ಮತ್ತು ಆತಂಕಗಳನ್ನ ಬಿಟ್ಟು ರೊಚ್ಚಿಗೆದ್ದಿದ್ದಾರೆ. ಸ್ಪರ್ಧಿಗಳ ಮುಖಕ್ಕೆ ಮಸಿ ಮನೆಯಲ್ಲಿ ಇರಲು ಅನರ್ಹರಾಗಿರೋ ಸ್ಪರ್ಧಿಗಳಿಗೆ ಇಲ್ಲಿ ಮಸಿ ಬಳೆಯಲಾಗಿದೆ. ಆ ಲೆಕ್ಕದಲ್ಲಿ ಜಗದೀಶ್, ತ್ರಿವಿಕ್ರಮ್, ಅನುಷಾ ರೈ ಮುಖಕ್ಕೆ ಇಲ್ಲಿ ಮಸಿ ಬಳೆಯಲಾಗಿದೆ. ಆದರೆ, ಈಗೀನ ಈ ಒಂದು ಪ್ರೋಮೋದಲ್ಲಿ ಚೈತ್ರಾ ಕುಂದಾಪುರ್ ಧ್ವನಿ ಜಾಸ್ತಿ ಇದೆ. ನರಕ ನಿವಾಸಿ ಶಿಶಿರ್ ಶಾಸ್ತ್ರಿ ಕೂಡ ಫುಲ್ ಆವಾಜ್ ಹಾಕಿದ್ದಾರೆ. ಈ ಆವಾಜ್ ಯಾಕೆ ಗೊತ್ತಾ? ಹೌದು, ಚೈತ್ರಾ ಕುಂದಾಪುರ್ ಅವರನ್ನ ಸುಮ್ಮನಿರು ಅಂತ ಹೇಳೋಕೆ ಶಿಶಿರ್ ಶಾಸ್ತ್ರಿ ಫುಲ್ ಸೌಂಡ್ ಮಾಡಿದ್ದಾರೆ. ಈ ಮೂಲಕ ಇಡೀ ಮನೆ ರಣರಂಗವೇ ಆಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.