NEWS

Weight Loss: ಡಯೆಟ್-ಜಿಮ್ ಇಲ್ಲದೆಯೇ ತೂಕ ಇಳಿಸಿಕೊಳ್ಳಬೇಕೇ? ಪ್ರತಿ ಸಲ ಊಟದ ಜೊತೆ ಇದನ್ನು ಬೆರೆಸಿ ತಿನ್ನಿ

ಪ್ರಾತಿನಿಧಿಕ ಚಿತ್ರ ಪರಿಣಾಮಕಾರಿಯಾಗಿ ಹಾಗೂ ತ್ವರಿತವಾಗಿ ತೂಕ ಕಳೆದುಕೊಳ್ಳಬೇಕು ಎಂಬುದು ಹೆಚ್ಚಿನವರ ಗುರಿಯಾಗಿರುತ್ತದೆ. ಆದರೆ ಸರಿಯಾದ ವಿಧಾನಗಳ ಮೂಲಕ ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳುವುದರತ್ತ ಕೂಡ ಗಮನ ಹರಿಸುವುದು ಮುಖ್ಯವಾಗಿರುತ್ತದೆ. ಕ್ರ್ಯಾಶ್ ಡಯೆಟ್ ಇಲ್ಲವೇ ತೀಕ್ಷ್ಣ ವ್ಯಾಯಾಮ ವಿಧಾನಗಳು ಅತಿ ಕಡಿಮೆ ಅವಧಿಯ ಫಲಿತಾಂಶಗಳನ್ನೊದಗಿಸುತ್ತವೆ ಇದು ಸುಸ್ಥಿರವಾಗಿರುವುದಿಲ್ಲ. ಇದರಿಂದ ತೂಕ ಏರಿಕೆಯಾಗುವುದು ಇಲ್ಲವೇ ಇನ್ನಿತರ ಕಾಯಿಲೆಗಳ ಅಪಾಯ ಇದ್ದೇ ಇರುತ್ತದೆ. ಆರೋಗ್ಯಕರವಾದ ಹಾಗೂ ದೀರ್ಘ ಅವಧಿಯ ಫಲಿತಾಂಶಗಳನ್ನೊದಗಿಸುವ ಡಯೆಟ್ ಹಾಗೂ ವ್ಯಾಯಾಮವನ್ನು ಅನುಸರಿಸುವುದು ಹೆಚ್ಚುವರಿ ತೂಕವನ್ನು ಕಳೆದುಕೊಳ್ಳಲು ಸಹಕಾರಿಯಾಗಿರುತ್ತದೆ. ತೂಕ ಇಳಿಸುವ ಪ್ರಕ್ರಿಯೆಯಲ್ಲಿ 6 ಆರೋಗ್ಯಕರ ವಿಧಾನಗಳ ಬಗ್ಗೆ ಇಲ್ಲಿ ತಿಳಿಸುತ್ತಿದ್ದು ಇದು ಉತ್ತಮ ಫಲಿತಾಂಶವನ್ನು ನೀಡುತ್ತೆ. ಪ್ರತಿ ಆಹಾರದಲ್ಲೂ ಪ್ರೊಟೀನ್ ಸೇರ್ಪಡೆ ತೂಕ ಇಳಿಸುವಲ್ಲಿ ಪ್ರೊಟೀನ್ ಪಾತ್ರ ಮಹತ್ತರವಾಗಿದ್ದು, ನಿಮ್ಮ ಪ್ರತಿ ಆಹಾರದಲ್ಲೂ ಪ್ರೊಟೀನ್ ಅನ್ನು ಸೇರಿಸುವುದು ಪರಿಣಾಮಕಾರಿಯಾಗಿ ತೂಕ ಇಳಿಸಲು ಸಹಕಾರಿಯಾಗಿದೆ. ಪ್ರೊಟೀನ್ ಹೆಚ್ಚಿನ ಥರ್ಮಿಕ್ ಪರಿಣಾಮವನ್ನು ಹೊಂದಿದ್ದು ಕೊಬ್ಬು ಹಾಗೂ ಕಾರ್ಬೊಹೈಡ್ರೇಟ್ಸ್‌ಗೆ ಹೋಲಿಸಿದಾಗ ಇದನ್ನು ಜೀರ್ಣಿಸುವ ಮೂಲಕ ದೇಹವು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ. ಅಮೇರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಶನ್‌ನಲ್ಲಿ ಪ್ರಕಟವಾಗಿರುವಂತೆ ತಮ್ಮ ದೈನಂದಿನ ಕ್ಯಾಲೊರಿಗಳಲ್ಲಿ 30% ಪ್ರೊಟೀನ್ ಸೇವನೆಯನ್ನು ಹೆಚ್ಚಿಸಿರುವವರು 12 ವಾರಗಳಲ್ಲಿ ಸರಾಸರಿ 5 ಕೆಜಿ ತೂಕ ಇಳಿಸಿಕೊಂಡಿರುವುದು ಕಂಡು ಬಂದಿದೆ. ಯಾವುದೇ ಹೆಚ್ಚಿನ ತೀಕ್ಷ್ಣ ಡಯೆಟ್‌ಗೆ ಒಳಗೊಳ್ಳದೆ, ಎಲ್ಲಾ ಬಗೆಯ ಆಹಾರಗಳನ್ನು ಸೇವಿಸುತ್ತಲೇ ಪರಿಣಾಮಕಾರಿಯಾಗಿ ತೂಕ ಇಳಿಸಿಕೊಂಡಿದ್ದಾರೆ. ಮಧ್ಯಂತರ ಉಪವಾಸದ ಪ್ರಯೋಜನಗಳು ತೂಕ ಇಳಿಕೆಯಲ್ಲಿ ತನ್ನ ಸರಳತೆ ಹಾಗೂ ಖ್ಯಾತಿಗೆ ಹೆಸರುವಾಸಿಯಾಗಿರುವ ಇಂಟರ್ಮಿಟೆಂಟ್ ಫಾಸ್ಟಿಂಗ್ ಅಥವಾ ಮಧ್ಯಂತರ ಉಪವಾಸ ಕೂಡ ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಆಹಾರ ಸೇವನೆ ಹಾಗೂ ಉಪವಾಸದ ಮಧ್ಯೆ ಸಮವನ್ನು ಹೊಂದಿಸುತ್ತಾ ತೂಕ ಇಳಿಸುವಲ್ಲಿ ಈ ವಿಧಾನ ಪ್ರಯೋಜನಕಾರಿಯಾಗಿದೆ. ನಮ್ಮ ಆಹಾರ ಸೇವನೆಯ ಸಮಯವನ್ನು ನಿರ್ಬಂಧಗೊಳಿಸುವುದು ಕಡಿಮೆ ಕ್ಯಾಲೊರಿಗಳನ್ನು ಸೇವಿಸುವಂತೆ ಮಾಡುತ್ತದೆ ಹಾಗೂ ಈ ಸಮಯದಲ್ಲಿ ನಮ್ಮ ದೇಹದಲ್ಲಿ ಶೇಖರವಾದ ಕೊಬ್ಬನ್ನು ಶಕ್ತಿಗಾಗಿ ಬಳಸಿಕೊಳ್ಳುತ್ತದೆ. ಆರೋಗ್ಯಕರ ನಿದ್ರಾ ಸಮಯ ತೂಕ ಇಳಿಸುವಲ್ಲಿ ನಿದ್ರೆ ಕೂಡ ಮುಖ್ಯವಾಗಿದೆ. ಹಸಿವು ಹಾಗೂ ಚಯಾಪಚಯವ ನಿಯಂತ್ರಿಸುವ ಹಾರ್ಮೋನ್‌ಗಳನ್ನು ಮೇಲ್ವಿಚಾರಣೆ ಮಾಡಲು ಆರೋಗ್ಯರ ನಿದ್ರಾ ವಿಧಾನವನ್ನು ಅನುಸರಿಸುವುದು ಮುಖ್ಯವಾಗಿದೆ. ಗ್ರೆಲಿನ್ ಹಾಗೂ ಲಿಪ್ಟಿನ್ ಹೆಸರಿನ ಹಾರ್ಮೋನ್‌ಗಳು ಹಸಿವು ಹಾಗೂ ಅತಿಯಾದ ಆಹಾರ ಸೇವನೆಗೆ ಕಾರಣವಾಗಿರುವ ಹಾರ್ಮೋನ್‌ಗಳಾಗಿದ್ದು ಇವುಗಳು ಅಸಮತೋಲನವಾದರೆ ಕ್ರೇವಿಂಗ್ಸ್ ಹಾಗೂ ಅತಿಯಾದ ಹಸಿವು ಉಂಟಾಗುತ್ತದೆ. ಕಡಿಮೆ ನಿದ್ರೆಯಿಂದ ಕೂಡ ಈ ಹಾರ್ಮೋನ್‌ಗಳಲ್ಲಿ ಅಸಮತೋಲನ ಉಂಟಾಗುತ್ತದೆ ಹಾಗಾಗಿ 7 ರಿಂದ 8 ಗಂಟೆಗಳ ಕಾಲ ಸುಖ ನಿದ್ರೆಯನ್ನು ಪ್ರತಿಯೊಬ್ಬರೂ ಮಾಡಬೇಕು. ಸ್ಟ್ರೆಂಥ್ ಟ್ರೈನಿಂಗ್ ವ್ಯಾಯಾಮಗಳು ಕ್ಯಾಲೊರಿ ಬರ್ನ್ ಮಾಡುವಲ್ಲಿ ಕಾರ್ಡಿಯೊ ಉಪಯುಕ್ತವಾದುದು ಇದರೊಂದಿಗೆ ಸ್ಟ್ರೆಂಥ್ ಟ್ರೈನಿಂಗ್ ಮಸಲ್ ಬಿಲ್ಡಿಂಗ್‌ಗೆ ಸಹಕಾರಿಯಾಗಿದೆ. ನಾವು ಹೆಚ್ಚಿನ ಮಸಲ್ ಮಾಸ್ ಹೊಂದಿದಂತೆ ವಿಶ್ರಾಂತಿ ಸಮಯದಲ್ಲಿ ದೇಹವು ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುತ್ತದೆ ಇದರಿಂದ ಹೆಚ್ಚು ತ್ವರಿತವಾಗಿ ತೂಕ ಇಳಿಯುತ್ತದೆ. ಸಕ್ಕರೆ ಹಾಗೂ ರಿಫೈಂಡ್ ಕಾರ್ಬ್‌ಗಳನ್ನು ಕಡಿಮೆ ಮಾಡಿ ಸಕ್ಕರೆ ಹಾಗೂ ಕಾರ್ಬೋಹೈಡ್ರೇಟ್‌ಗಳ ಮಿತ ಸೇವನೆ ಕೂಡ ತೂಕ ಇಳಿಕೆಯಲ್ಲಿ ಪರಿಣಾಮಕಾರಿಯಾಗಿದೆ. ಇಂತಹ ಆಹಾರಗಳು ರಕ್ತದ ಸಕ್ಕರೆ ಮಟ್ಟವನ್ನು ಕ್ಷಿಪ್ರವಾಗಿ ಏರಿಸುತ್ತವೆ ಇದರಿಂದ ಕ್ರೇವಿಂಗ್ಸ್ ಹಾಗೂ ಹಸಿವು ಉಂಟಾಗುತ್ತದೆ. ತರಕಾರಿ, ಹಣ್ಣು, ಸಂಪೂರ್ಣ ಧಾನ್ಯಗಳು, ಬೇಳೆ ಕಾಳುಗಳು ಮುಂತಾದ ಅಹಾರಗಳು ನಮ್ಮ ರಕ್ತದ ಸಕ್ಕರೆ ಮಟ್ಟವನ್ನು ಸುಸ್ಥಿರವಾಗಿರಿಸುತ್ತವೆ ಹಾಗೂ ಸಂಪೂರ್ಣ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತದೆ. ದಿನಪೂರ್ತಿ ಚಟುವಟಿಕೆಯಿಂದಿರಿ ವ್ಯಾಯಾಮದೊಂದಿಗೆ ದಿನಪೂರ್ತಿ ಚಟುವಟಿಕೆಯಿಂದಿರುವುದು ಕೂಡ ಮುಖ್ಯವಾಗಿದೆ. ಹೊರಾಂಗಣ ನಡಿಗೆ, ಸೈಕಲ್ ಸವಾರಿಯಂತಹ ವ್ಯಾಯಾಮಗಳನ್ನು ಅನುಸರಿಸಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.