NEWS

Moral Policing: ಕೋಲಾರದಲ್ಲಿ ಮುಸ್ಲಿಂ ಯುವಕರ ನೈತಿಕ ಪೊಲೀಸ್‌ಗಿರಿ! ವಿಡಿಯೋ ವೈರಲ್

ಕೋಲಾರದಲ್ಲಿ ನೈತಿಕ ಪೊಲೀಸ್​ಗಿರಿ ಕೋಲಾರ: ಕೋಲಾರದಲ್ಲಿ ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್‌ಗಿರಿ (Moral Policing) ನಡೆದಿದೆ. ಅಂತರಗಂಗೆ ರಸ್ತೆಯಲ್ಲಿ (Antharagange) ಮುಸ್ಲಿಂ ಮಹಿಳೆಯನ್ನು (Muslim Woman) ಬೈಕ್ ನಲ್ಲಿ ಕೆರದುಕೊಂಡು ಹೋಗುತ್ತಿದ್ದ ಹಿಂದೂ ಯುವಕನನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ್ದಾರೆ. ಮಾಲೂರು (Malur) ತಾಲೂಕಿನ ಶಿವಾರಪಟ್ಟಣದ ಯುವಕ, ಅದೇ ಗ್ರಾಮದ ಮಹಿಳೆ, ಆಕೆ ಮಗುವನ್ನ ಬೈಕ್‌ನಲ್ಲಿ ಕರೆದೊಯ್ಯುತ್ತಿದ್ದ. ಈ ವೇಳೆ ಬೈಕ್‌ ಅಡ್ಡಗಟ್ಟಿದ (Bike Rider) ಯುವಕರು ಬೆದರಿಕೆ ಹಾಕಿ ವಿಡಿಯೋ ಮಾಡಿದ್ದಾರೆ. ಕೋಲಾರ ನಗರ ಠಾಣೆ ಪೊಲೀಸರು (Kolar Town Police Station) ಪ್ರಕರಣ ದಾಖಲಿಸಿಕೊಂಡಿದ್ದು, ಯುವಕರಿಗಾಗಿ ಹುಡುಕಾಟ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಏನಿದೆ? ಬೈಕ್​ನಲ್ಲಿ ಹೋಗುತ್ತಿದ್ದ ಮಹಿಳೆ ಹಾಗೂ ಯುವಕನನ್ನು ತಡೆದ ಮುಸ್ಲಿಂ ಯುವಕರು, ಮಹಿಳೆಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ನೀನು ಹೋಗಲೇ ಬೇಕು ಎಂದುಕೊಂಡಿದ್ದರೆ ಬುರ್ಕಾ ತೆಗೆದುಹೋಗು, ಇಲ್ಲ ಎಂದರೇ ಚಪ್ಪಲಿಯಲ್ಲಿ ಹೊಡೆಯುತ್ತೀವಿ ಅಂತ ಬೆದರಿಕೆ ಹಾಕಿದ್ದಾರೆ. ಈ ವೇಳೆ ಆಕೆ ನಾವು ಸ್ನೇಹಿತರು ಅನಿವಾರ್ಯವಾಗಿ ಬೇಗ ಗ್ರಾಮಕ್ಕೆ ಹೋಗಬೇಕಾಗಿತ್ತು ಅದಕ್ಕೆ ಬಂದೇ, ಜೊತೆಯಲ್ಲಿ ಮಗು ಬೇರೆ ಇದೇ ಎಂದು ಸ್ಪಷ್ಟನೆ ನೀಡಿದ್ದಾಳೆ. ಇದನ್ನೂ ಓದಿ: Karnataka: ಸರ್ಕಾರದ ಗುಡ್‌ ನ್ಯೂಸ್‌, ದುಬಾರಿ ಮದ್ಯ ಇಂದಿನಿಂದ ಅಗ್ಗ! ಕೋಲಾರ ನಗರದ ಅಂತರಗಂಗೆ ರಸ್ತೆಯಲ್ಲಿ ಘಟನೆ ನಡೆದಿದ್ದು, ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಶಿವಾರಪಟ್ಟಣದ ಯುವಕ ಬೈಕ್ ಚಾಲನೆ ಮಾಡ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯನ್ನು ವಿಡಿಯೋ ಮಾಡಿಕೊಂಡಿದ್ದು, ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಘಟನೆ ಸಂಬಂಧ ಕೋಲಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 25 ವರ್ಷಗಳ ನಂತರ ಅಧಿಕಾರಕ್ಕೇರಿದ ಕಾಂಗ್ರೆಸ್ ಕೋಲಾರದ ಮುಳಬಾಗಿಲು ನಗರಸಭೆ ಕಾಂಗ್ರೆಸ್ ವಶಕ್ಕೆವಾಗಿದೆ. ಇದರೊಂದಿಗೆ ಬರೋಬ್ಬರಿ 25 ವರ್ಷಗಳ ನಂತರ ಮುಳಬಾಗಿಲು ನಗರಸಭೆ ಚುಕ್ಕಾಣಿ ಜೆಡಿಎಸ್ ಪಕ್ಷದ ಕೈ ತಪ್ಪಿದೆ. ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಕಾಂಗ್ರೆಸ್ ಅಧಿಕಾರವನ್ನು ಹಿಡಿದಿದ್ದು, ಜೆಡಿಎಸ್ ತೊರೆದು ಕಾಂಗ್ರೆಸ್ ಗೆ ಹಾರಿದ್ದ ಸದಸ್ಯೆ ಎಂ.ಸರಳಾರಿಗೆ ಉಪಾಧ್ಯಕ್ಷ ಸ್ಥಾನ ಹಾಗೂ ಅಧ್ಯಕ್ಷ್ಯರಾಗಿ ಶಬಾನಾ ಬೇಗಂ ಆಯ್ಕೆಯಾಗಿದ್ದಾರೆ. ನಿನ್ನೆ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಆಯ್ಕೆ ಚುನಾವಣೆಯಲ್ಲಿ ಅಧ್ಯಕ್ಷ್ಯೆ ಶಬಾನ ಬೇಗಂ ಹಾಗೂ ಉಪಾಧ್ಯಕ್ಷ್ಯೆ ಸರಳಾ ಪರವಾಗಿ ತಲಾ 18 ಮತಗಳು ಬಂದಿದೆ. ಜೆಡಿಎಸ್ ನಿಂದ ಅಧ್ಯಕ್ಷ್ಯ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಅಭ್ಯರ್ಥಿಗೆ ತಲಾ 15 ಮತಗಳು ಬಂದಿದೆ. ಜೆಡಿಎಸ್, ಎಸ್​ಡಿಪಿಐ ಹಾಗೂ ಪಕ್ಷೇತರ ಸದಸ್ಯರ ಸಹಕಾರದಿಂದ ಕಾಂಗ್ರೆಸ್ ಅಧಿಕಾರ ಪಡೆದುಕೊಂಡಿದೆ. (ವರದಿ: ರಘುರಾಜ್, ನ್ಯೂಸ್​18 ಕನ್ನಡ, ಕೋಲಾರ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.