NEWS

Breakfast Recipe: ಮೆದುಳನ್ನು ಚುರುಕಾಗಿಸುವ ಟೇಸ್ಟಿ ಬ್ರೇಕ್‌ಫಾಸ್ಟ್ ರೆಸಿಪಿಗಳಿವು! ಒಮ್ಮೆ ಟ್ರೈ ಮಾಡಿ

ಸಂಗ್ರಹ ಚಿತ್ರ ಬೆಳಗ್ಗಿನ ಉಪಹಾರವೆಂಬುದು (Morning Breakfast) ನಮ್ಮನ್ನು ಚಟುವಟಿಕೆಯಿಂದಿರಿಸಲು ಆರೋಗ್ಯಕರವಾಗರಿಸಲು ಮುಖ್ಯವಾಗಿದ್ದು ನಮಗೆ ಹೆಚ್ಚು ತೀಕ್ಷ್ಣತೆ ಹಾಗೂ ಶಕ್ತಿಯನ್ನೊದಗಿಸುತ್ತದೆ. ರಾತ್ರಿಯೆಲ್ಲಾ ಉಪವಾಸದಿಂದಿರುವ ದೇಹಕ್ಕೆ ದೊರೆಯುವ ಬೆಳಗ್ಗಿನ ಆಹಾರ ಚೇತೋಹಾರಿಯಾಗಿರಬೇಕು. ಸರಿಯಾದ ಪ್ರಮಾಣದ ಕ್ಯಾಲೊರಿಗಳನ್ನು ಪಡೆಯುವುದು ನಮ್ಮ ಗುರಿಯಾಗಿರಬೇಕು ಇದರೊಂದಿಗೆ ಪ್ರೋಟೀನ್‌ಗಳು (Protein), ಕೊಬ್ಬುಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಸಮತೋಲನವನ್ನು ಪಡೆಯಬೇಕು ಎಂದು ಇನ್-ಹೌಸ್ ಡಯೆಟಿಷಿಯನ್ ಡೇನಿಯಲ್ ಲೆವಿ-ವೊಲಿನ್ಸ್ ತಿಳಿಸುತ್ತಾರೆ. ಮೆದುಳಿನ ಚುರುಕುತನ ಹೆಚ್ಚಿಸುವ ನಮಗೆ ಹೆಚ್ಚಿನ ಶಕ್ತಿಯನ್ನು ನೀಡುವ ಟಾಪ್ ರೆಸಿಪಿಗಳು ಹೀಗಿದ್ದು ಅದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ. ಇದನ್ನೂ ಓದಿ: ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತವೆ ಈ ಟಿಪ್ಸ್! ಇಂದೇ ಫಾಲೋ ಮಾಡಿ ಸಾಲ್ಮನ್ ಹ್ಯಾಶ್ ವಿದ್ ಎಗ್ಸ್ ಆಲೂಗಡ್ಡೆ ಪೆಪ್ಪರ್ ಆಲೀವ್ ಆಯಿಲ್ ಸಣ್ಣ ಬೆಲ್ ಪೆಪ್ಪರ್ ಈರುಳ್ಳಿ ಸ್ಕಿನ್‌ಲೆಸ್ ಸಾಲ್ಮನ್ 4 ಮೊಟ್ಟೆ ಆಲೂಗಡ್ಡೆಯನ್ನು ಬೇಯಿಸಿ ನಂತರ ಪ್ಯಾನ್‌ಗೆ ಸ್ವಲ್ಪ ಎಣ್ಣೆ ಹಾಕಿಕೊಂಡು ಅದಕ್ಕೆ ಈರುಳ್ಳಿ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಈರುಳ್ಳಿ ಬೆಂದ ನಂತರ ಉಪ್ಪು, ಪೆಪ್ಪರ್ ಹಾಕಿ ನಂತರ ಮೊಟ್ಟೆ ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ ಇದೇ ಮಿಶ್ರಣಕ್ಕೆ ಸಾಲ್ಮನ್ ಹಾಕಿ ಸ್ವಲ್ಪ ನೀರು ಸೇರಿಸಿ ಚೆನ್ನಾಗಿ ಬೇಯಿಸಿ. ಬೆರ್ರಿ, ಚಿಯಾ, ಮಿಂಟ್ ಸ್ಮೂಥಿ ಸ್ಟ್ರಾಬೆರ್ರಿ ರಸ್‌ಬೆರ್ರಿ ಬೀಟ್ರೂಟ್ ಮಿಂಟ್ ಎಲೆಗಳು ಚಿಯಾ ಸೀಡ್ಸ್ ಆಲ್ಮಂಡ್ ಮಿಲ್ಕ್ ಬೆರ್ರಿ, ಬೀಟ್‌ರೂಟ್, ಮಿಂಟ್, ಚಿಯಾ ಸೀಡ್ಸ್ ಅನ್ನು ರಾತ್ರಿಪೂರ್ತಿ ಫ್ರಿಡ್ಜ್‌ನಲ್ಲಿರಿಸಿ ಬ್ಲೆಂಡರ್‌ಗೆ ಆಲ್ಮಂಡ್ ಮಿಲ್ಕ್ ಹಾಕಿ ಇದಕ್ಕೆ ಫ್ರೋಜನ್ ಮಾಡಿದ ಸಾಮಾಗ್ರಿಗಳನ್ನು ಸೇರಿಸಿ ನಂತರ ಇನ್ನೊಮ್ಮೆ ಬ್ಲೆಂಡ್ ಮಾಡಿ ಸರ್ವ್ ಮಾಡಿ. ಸಾಟೆಡ್ ಡೇಂಡಿಲಿಯನ್ ಟೋಸ್ಟ್ ಆಲೀವ್ ಆಯಿಲ್ ಈರುಳ್ಳಿ ಲಿಂಬೆ ರಸ, ರೆಡ್ ಪೆಪ್ಪರ್ ಫ್ಲೇಕ್ಸ್ ಡೇಂಡಿಲಿಯನ್ ಗ್ರೀನ್ಸ್ ಉಪ್ಪು, ಕಾಳುಮೆಣಸು ಫೆಟಾ ಚೀಸ್ ಪ್ಲೇನ್ ಯೋಗರ್ಟ್ 1 ಚಮಚ ಲೆಮನ್ ಜೆಸ್ಟ್ 2 ಚಮಚ ಮಿಂಟ್ ಲೀವ್ಸ್ ಒಂದು ದೊಡ್ಡ ಪ್ಯಾನ್‌ಗೆ ಎಣ್ಣೆ ಹಾಕಿ ಇದಕ್ಕೆ ಈರುಳ್ಳಿ, ರೆಡ್ ಪೆಪ್ಪರ್ ಫ್ಲೇಕ್ಸ್ ಹಾಕಿ ಬೇಯಿಸಿ.ಇದಕ್ಕೆ ಲಿಂಬೆ ರಸ ಸೇರಿಸಿ ನಂತರ ಡ್ಯಾಂಡಲೀನ್ ಗ್ರೀನ್ ಸೇರಿಸಿ ಫುಡ್ ಪ್ರೊಸೆಸರ್ ಮೂಲಕ ಫೆಟಾ ಚೀಸ್ ಸೇರಿಸಿ ಇದಕ್ಕೆ ಯೋಗರ್ಟ್ ಹಾಕಿ ನಂತರ ಲೆಮೆನ್ ಜೆಸ್ಟ್ ಸೇರಿಸಿ. ಕೊನೆಯದಾಗಿ ಸಿಯಾಬೆಟ್ಟ ಸೇರಿಸಿ. ಆಪಲ್ ಓಟ್‌ಮೀಲ್ ಮಫಿನ್ಸ್ ಓಟ್ಸ್ ದಾಲ್ಚಿನ್ನಿ ಉಪ್ಪು ಬೇಕಿಂಗ್ ಪೌಡರ್ ಆಲೀವ್ ಆಯಿಲ್, ಜೇನು, ಮೊಟ್ಟೆ ವೆನಿಲ್ಲಾ ಸಾರ ಆಲ್ಮಂಡ್ ಮಿಲ್ಕ್ 12 ಕಪ್ ಮಫಿನ್ ಪ್ಯಾನ್‌ಗೆ ಅನ್ನು ಬಿಸಿ ಮಾಡಿ ಇ ಕಪ್ ಓಟ್ಸ್‌ಗೆ ದಾಲ್ಚಿನ್ನಿ, ಉಪ್ಪು ಬೇಕಿಂಗ್ ಪೌಡರ್ ಹಾಕಿ ಸ್ಟಿರ್ ಮಾಡಿ ಬೌಲ್‌ಗೆ ಎಣ್ಣೆ ಹಾಗೂ ಜೇನು ಹಾಕಿಕೊಂಡು ಮೊಟ್ಟೆ ವಿಸ್ಕ್ ಮಾಡಿ. ನಂತರ ಆಲ್ಮಂಡ್ ವೆನಿಲ್ಲಾ ಸೇರಿಸಿ. ಸನ್ನಿ ಸೈಡ್ ಅಪ್ ಪಿಜ್ಜಾ ಫ್ಲೋರ್, ಬೇಕಿಂಗ್ ಶೀಟ್ ಪಿಜ್ಜಾ ಹಿಟ್ಟು ಡೈಜನ್ ಮಸ್ಟರ್ಡ್ ಗ್ರೇಯರಿ ಚೀಸ್, ಥೈನ್ಲಿ ಸ್ಲೈಸ್ಡ್ ಡೆಲ್ಲಿ ಹ್ಯಾಮ್ 1 ಕಟ್ಟು ಕೊತ್ತಂಬರಿ 4 ಮೊಟ್ಟೆ ಗ್ರೀನ್ ಸಲಾಡ್ ಓವನ್ ಬಿಸಿ ಮಾಡಿ ಶೀಟ್ ಬಿಸಿ ಮಾಡಿ ಇದಕ್ಕೆ ಪಿಜ್ಜಾ ಹಿಟ್ಟು ಹಾಕಿ 16 ವರ್ತುಲಾಕಾರದಲ್ಲಿ ಬಿಸಿ ಮಾಡಿ. ಹಿಟ್ಟಿನ ಮೇಲೆ ಮಸ್ಟರ್ಡ್ ಹಾಕಿ ನಂತರ ಹ್ಯಾಮ್, ಕೊತ್ತಂಬರಿ, ಗ್ರೇಯರಿ ಸ್ಪ್ರೆಡ್ ಮಾಡಿ ಬೌಲ್‌ಗೆ ಮೊಟ್ಟೆ ಒಡೆದು ಹಾಕಿಕೊಳ್ಳಿ ಪಿಜ್ಜಾದ ಮೇಲೆ ಮೊಟ್ಟೆ ಹಾಕಿ. ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ ಡಾಲ್ಗನ್ ಮಚ್ಚಾ ಲ್ಯಾಟೆ 1 ಚಮಚ ಮಚ್ಚಾ ಪೌಡರ್ 1 ಚಮಚ ಸಕ್ಕರೆ 2 ಚಮಚ ಬಿಸಿ ನೀರು 1 ಮೊಟ್ಟೆ ಬಿಳಿ ಭಾಗ 1 ಕಪ್ ಹಾಲು ಮೊಟ್ಟೆಯ ಬಿಳಿ ಭಾಗವನ್ನು ವಿಸ್ಕ್ ಮಾಡಿ ಇದಕ್ಕೆ ನಂತರ ಮಚ್ಚಾ ಪೌಡರ್ ಸೇರಿಸಿ ಬೇರೆಯದೇ ಬೌಲ್ ತೆಗೆದುಕೊಂಡು ಮಚ್ಚಾ, ಸಕ್ಕರೆ, ಕುದಿಯು ನೀರು ಹಾಕಿ ಚೆನ್ನಾಗಿ ಮಿಶ್ರ ಮಾಡಿ ಇದಕ್ಕೆ ವಿಪ್ ಹಾಕಿ ಚೆನ್ನಾಗಿ ವಿಸ್ಕ್ ಮಾಡಿ. ಗ್ಲಾಸ್‌ಗೆ ¾ ಐಸ್ ಹಾಗೂ ಹಾಲು ಸೇರಿಸಿ. ಆರೆಂಜ್ ಕೋಕೊನಟ್ ಚಿಯಾ ಪುಡ್ಡಿಂಗ್ ಕೋಕನಟ್ ಮಿಲ್ಕ್ ಆರೆಂಜ್ ಜ್ಯೂಸ್ ಮೇಪಲ್ ಸಿರಪ್ ಉಪ್ಪು ಚಿಯಾ ಸೀಡ್ಸ್ ಸಾಸ್‌ಪ್ಯಾನ್‌ನಲ್ಲಿ ಕೋಕನಟ್ ಮಿಲ್ಕ್ ಬಿಸಿ ಮಾಡಿ. ನಂತರ ಇದನ್ನು ತಣ್ಣಗಾಗಿಸಿ ಆರೆಂಜ್ ಜ್ಯೂಸ್‌ಗೆ ಸೇರಿಸಿ ನಂತರ ಮೇಪಲ್ ಸಿರಪ್ ಹಾಗೂ ಉಪ್ಪು ಹಾಕಿ. ಚಿಯಾ ಸೀಡ್ಸ್ ಬೆರೆಸಿ ಇದನ್ನು ಹಾಗೆಯೇ ಬಿಟ್ಟು 15 ನಿಮಿಷ ವಿಸ್ಕ್ ಮಾಡಿ. ಇದನ್ನು ಜಾರ್ಸ್ ಅಥವಾ ಪಾತ್ರೆಗೆ ಹಾಕಿಕೊಳ್ಳಿ ನಂತರ ರೆಫ್ರಿಜರೇಟ್ ಮಾಡಿ ಗ್ರೇನ್ ಬೌಲ್ ಹಾಗೂ ಸಾಟೆಡ್ ಸ್ಪಿನಾಚ್ ಬೇಯಿಸಿದ ಧಾನ್ಯಗಳು ಆಲೀವ್ ಆಯಿಲ್ ಬೆಳ್ಳುಳ್ಳಿ ಕೊತ್ತಂಬರಿ ಸೊಪ್ಪು ಉಪ್ಪು ಕಾಳುಮೆಣಸು ಟೊಮೇಟೊ ಅವೊಕಾಡೊ ಮೊಟ್ಟೆ ದೊಡ್ಡ ನಾನ್‌ಸ್ಟಿಕ್ ಬಾಣಲೆಯಲ್ಲಿ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಬಿಸಿ ಮಾಡಿ. ಪಾಲಕ್, ಉಪ್ಪು ಮತ್ತು ಮೆಣಸು ಸೇರಿಸಿ ಬಾಡುವವರೆಗೆ ಹುರಿದುಕೊಳ್ಳಿ. ಮೊಟ್ಟೆಯನ್ನು ಒಡೆದು ಇದಕ್ಕೆ ಹಾಕಿ ಚೆನ್ನಾಗಿ ಬೇಯಿಸಿಕೊಳ್ಳಿ. ಬ್ಲ್ಯೂಬೆರ್ರಿ ಮಿಕ್ಸ್ಡ್ ನಟ್ ಪ್ಯಾರಾಫಿಟ್ ಡ್ರೈ ಬ್ಲ್ಯೂಬೆರ್ರಿ ಉಪ್ಪು ವಾಲ್‌ನಟ್ಸ್, ದ್ರಾಕ್ಷಿ, ಪಿಸ್ತಾ, ಬಾದಾಮಿ, ಪೆಪಿಟಾಸ್, ಆಲೀವ್ ಆಯಿಲ್, ಏಲಕ್ಕಿ, ದಾಲ್ಚಿನ್ನಿ, ಗ್ರೀಕ್ ಯೋಗರ್ಟ್ ಎಲ್ಲಾ ಡ್ರೈಫ್ರುಟ್ಸ್‌ಗಳನ್ನು ಜಾರ್‌ಗೆ ಹಾಕಿ ಹಾಲು ಹಾಕಿ ಬ್ಲೆಂಡ್ ಮಾಡಿ. ಇದರ ಮೇಲೆ ಯೋಗರ್ಟ್ ಹಾಕಿ ಬ್ಲ್ಯೂ ಬೆರ್ರಿ ಅಲಂಕಾರ ಮಾಡಿ ನಂತರ ನಟ್ ಮಿಕ್ಸರ್ ಸೇರಿಸಿ ಸ್ಕ್ರಂಬಲ್ಡ್ ಎಗ್ ಟಾಕೋಸ್ ಆಲೀವ್ ಅಯಿಲ್ ಬ್ಲ್ಯಾಕ್ ಬೀನ್ಸ್ ಜೀರಿಗೆ ಬೆಳ್ಳುಳ್ಳಿ, ಉಪ್ಪು, ಕಾಳುಮೆಣಸು, ಬೇಬಿ ಸ್ಪಿನಾಚ್, 1 ಚಮಚ ಲಿಂಬೆ ರಸ, 8 ಮೊಟ್ಟೆ, ಟೋರ್ಟಿಲ್ಲಾಸ್, ಕ್ರೀಮ್ ಒಂದು ಪ್ಯಾನ್‌ಗೆ ಎಣ್ಣೆ ಹಾಕಿ ಇದಕ್ಕೆ ಜೀರಿಗೆ, ಬೆಳ್ಳುಳ್ಳಿ ಒಗ್ಗರಣೆ ಮಾಡಿಕೊಳ್ಳಿ. ನಂತರ ಕೊತ್ತಂಬರಿ ಸೊಪ್ಪು ಬೀನ್ಸ್ ಹಾಕಿಕೊಳ್ಳಿ. ಇನ್ನೊಂದು ಪಾತ್ರೆಯಲ್ಲಿ ಮೊಟ್ಟೆ ವಿಸ್ಕ್ ಮಾಡಿ ಇದಕ್ಕೆ ಉಪ್ಪು ಹಾಗೂ ಕಾಳುಮೆಣಸು ಸೇರಿಸಿ ಎಣ್ಣೆ ಬಿಸಿ ಮಾಡಿ ಇದಕ್ಕೆ ಮೊಟ್ಟೆ ಹಾಕಿ ಬೇಯಿಸಿ. ಟೋರ್ಟಿಲ್ಲಾವನ್ನು ಬಿಸಿ ಮಾಡಿ. ಇದಕ್ಕೆ ಬೀನ್ಸ್, ಮೊಟ್ಟೆ, ಸೋರ್ ಕ್ರೀಮ್, ಫ್ರೆಸ್ಕೊ, ಕೊತ್ತಂಬರಿ ಸೊಪ್ಪು ಹಾಕಿ ಫಿಲ್ ಮಾಡಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.