NEWS

Dam Water Level Today: ಕಳೆದ ವರ್ಷವಿಡೀ ನೀರು ಬಿಡದ ಡ್ಯಾಂನಿಂದ ಈ ವರ್ಷ ನೀರು ಬಿಡುಗಡೆ!

ಸಾಂದರ್ಭಿಕ ಚಿತ್ರ ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ದಿನೇ ದಿನೇ ಹೆಚ್ಚಾಗುತ್ತಿದ್ದು, ರಾಜ್ಯದ ಪ್ರಮುಖ ಜಲಾಶಯಗಳ (Dam Water Level Today) ಇಂದಿನ ನೀರಿನ ಮಟ್ಟ ಇಲ್ಲಿದೆ. ಶಿವಮೊಗ್ಗದ ಲಿಂಗನಮಕ್ಕಿ ಡ್ಯಾಮ್ ಗರಿಷ್ಠ ಮಟ್ಟ 1819 ಅಡಿ ಇಂದಿನ ಮಟ್ಟ 1797.60 ಅಡಿ ಒಳ ಹರಿವು 44,387 ಕ್ಯೂಸೆಕ್ ಹೊರ ಹರಿವು 1891.91 ಕ್ಯೂಸೆಕ್ ಬೆಳಗಾವಿ ಮಲಪ್ರಭಾ ಜಲಾಶಯದ ನೀರಿನ ಮಟ್ಟ ಸಾಮರ್ಥ್ಯ- 37.731 ಟಿಎಂಸಿ ಇಂದಿನ ಸಂಗ್ರಹ - 19.445 ಗರಿಷ್ಟ ಮಟ್ಟ- 2079.50 ಅಡಿ ಇಂದಿನ ಮಟ್ಟ- 2063.40 ಅಡಿ ಒಳ ಹರಿವು- 11328 ಕ್ಯೂಸೆಕ್ ಹೊರ ಹರಿವು- 194 ಕ್ಯೂಸೆಕ್ ಯಾದಗಿರಿಯ ನಾರಾಯಣಪುರ ಡ್ಯಾಂ ಗರಿಷ್ಟ ಮಟ್ಟ : 492.25 ಮೀಟರ್ ಇಂದಿನ ನೀರಿನ ಮಟ್ಟ:491.02 ಮೀಟರ್ ಒಳಹರಿವು:145000 ಕ್ಯೂಸೆಕ್ ಹೊರಹರಿವು:144250 ಕ್ಯೂಸೆಕ್ ಇಂದಿನ ಸಾಮರ್ಥ್ಯ:27.927 ಟಿಎಂಸಿ ಒಟ್ಟು ಸಾಮರ್ಥ್ಯ: 33.33 ಟಿಎಂಸಿ ಕೊಪ್ಪಳದ ತುಂಗಭದ್ರಾ ಜಲಾಶಯದ ನೀರಿನ ಮಟ್ಟ ಗರಿಷ್ಟ ಮಟ್ಟ- 1633 ಅಡಿ ಇಂದಿನ ಮಟ್ಟ-1627.21 ಅಡಿ ಒಳಹರಿವು-113402 ಕ್ಯೂಸೆಕ್ ಹೊರಹರಿವು-4798 ಕ್ಯೂಸೆಕ್ ನದಿಗೆ -1501 ಕ್ಯೂಸೆಕ್ ಇಂದಿನ ಸಾಮರ್ಥ್ಯ 83.953 ಟಿಎಂಸಿ ಗರಿಷ್ಟ ಸಾಮರ್ಥ್ಯ-105.788 ಟಿಎಂಸಿ ಕೊಪ್ಪಳದ ತುಂಗಭದ್ರಾ ಜಲಾಶಯ ಮಲೆನಾಡಿನಲ್ಲಿ ವ್ಯಾಪಕ ಮಳೆಯಾದ ಕಾರಣ ತುಂಗಭದ್ರಾ ಜಲಾಶಯ ಭರ್ತಿಯಾಗಲು 6 ಅಡಿ ಮಾತ್ರ ಬಾಕಿಯಿದೆ. ತುಂಗಭದ್ರಾ ಡ್ಯಾಂಗೆ ಅಪಾರ ನೀರು ಹರಿದು ಬರುತ್ತಿದ್ದು, ಜಲಾಶಯದಿಂದ ನದಿಗೆ 1501 ಕ್ಯೂಸೆಕ್ ನೀರು ಬಿಡಲಾಗುತ್ತಿದೆ. ಕಳೆದ ವರ್ಷ ಒಮ್ಮೆಯೂ ನದಿಗೆ ನೀರು ಬಿಟ್ಟಿಲ್ಲ. ಆದರೆ ಈ ವರ್ಷ ಜುಲೈ ಮೂರನೆಯ ವಾರದಲ್ಲಿ ಜಲಾಶಯದಿಂದ ನದಿಗೆ ನೀರು ಬಿಡಲಾಗುತ್ತಿದೆ. ಒಂದೇ ದಿನದಲ್ಲಿ 10 ಟಿಎಂಸಿ ನೀರು ಸಂಗ್ರಹವಾಗುತ್ತಿದೆ. ಇಂದು ಜಲಾಶಯದಲ್ಲಿ 83.953 ಟಿಎಂಸಿ ನೀರು ಸಂಗ್ರಹವಾಗಿದೆ. ನಿನ್ನೆ 74.41 ಟಿಎಂಸಿ ನೀರು ಸಂಗ್ರಹವಾಗಿತ್ತು. ಜಲಾಶಯದ ಒಟ್ಟು ಸಾಮಾರ್ಥ್ಯ-105.788 ಟಿಎಂಸಿ ಆಗಿದ್ದು, ಜುಲೈ ತಿಂಗಳಲ್ಲಿ ಜಲಾಶಯ ಭರ್ತಿಯಾಗುತ್ತಿರುವುದು ರೈತರಲ್ಲಿ ಹರ್ಷ ಮೂಡಿಸಿದೆ. ಚಿಕ್ಕೋಡಿಯ ಹಿಡಕಲ್ ಜಲಾಶಯ (ರಾಜಾ ಲಖಮಗೌಡ ಜಲಾಶಯ ) ಗರಿಷ್ಟ ಮಟ್ಟ 2175 ಅಡಿ ( 51 TMC ) ಇಂದಿನ ಮಟ್ಟ 2158 ಅಡಿ ( 36.5 TMC ) ಒಳ ಹರಿವು 31201 ಕ್ಯೂಸೆಕ್ ಹೊರ ಹರಿವು 2405 ಕ್ಯೂಸೆಕ್ ಶಿವಮೊಗ್ಗದ ಭದ್ರಾ ಜಲಾಶಯ ಗರಿಷ್ಟ ಮಟ್ಟ 186 ಅಡಿ ಇಂದಿನ ಮಟ್ಟ 166.6 ಅಡಿ ಒಳ ಹರಿವು 25,367 ಕ್ಯೂಸೆಕ್ ಹೊರ ಹರಿವು 193 ಕ್ಯೂಸೆಕ್ ಇದನ್ನೂ ಓದಿ: Hubballi Unkal Lake: ಮೈದುಂಬಿದ ಉಣಕಲ್, ಹುಬ್ಬಳ್ಳಿ-ಧಾರವಾಡಕ್ಕೆ ನೀರು ಪೂರೈಸುವ ಈ ಕೆರೆಯ ಇತಿಹಾಸ ಗೊತ್ತಾ? ವಿಜಯಪುರ‌ ಜಿಲ್ಲೆಯ ಆಲಮಟ್ಟಿ ಜಲಾಶಯದ ನೀರಿನ ಮಟ್ಟ ಗರಿಷ್ಟ ಮಟ್ಟ : 519.60 ಮೀಟರ್‌ ಇಂದಿನ ಮಟ್ಟ:517.72 ಮೀಟರ್ ನೀರಿನ ಮಟ್ಟ: 123.081 tmc. ಒಳಹರಿವು : 1,15,406 ಕ್ಯೂಸೆಕ್ ಹೊರಹರಿವು : 1,44,295 ಕ್ಯೂಸೆಕ್ ಇಂದಿನ ಸಂಗ್ರಹ: 93.810 ಟಿಎಂಸಿ ಮೈಸೂರು ಕಬಿನಿ ಜಲಾನಯನ ಪ್ರದೇಶದಲ್ಲಿ ಮಳೆಯ ಅಬ್ಬರ ಕಡಿಮೆಯಾಗುತ್ತಿದೆ. ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಇಳಿಕೆಯಾಗಿದೆ. ಕಬಿನಿ ಜಲಾಶಯದ ಇಂದಿನ ಒಳ ಹರಿವು 25,885 ಕ್ಯೂಸೆಕ್ಸ್, ಹೊರ ಹರಿವು 17375 ಕ್ಯೂಸೆಕ್ಸ್, ಜಲಾಶಯದ ಇಂದಿನ ಮಟ್ಟ 2282.40 ಅಡಿ, ಗರಿಷ್ಟ ಮಟ್ಟ 2284 ಅಡಿಯಾಗಿದೆ. ಹೊರ ಹರಿವಿನಲ್ಲಿ ಇಳಿಕೆಯಾದ ಕಾರಣ ನದಿ ತೀರದಲ್ಲಿ ಜಲಾವೃತಗೊಂಡಿದ್ದ ಗ್ರಾಮಗಳಲ್ಲಿ ಪ್ರವಾಹ ಇಳಿಮುಖವಾಗುತ್ತಿದೆ. ವಿಜಯನಗರದ ತುಂಗಭದ್ರಾ ಜಲಾಶಯ ನೀರಿನ ಮಟ್ಟ ಒಟ್ಟು : 105 TMC ಇಂದು : 83.249 TMC ನಿನ್ನೆ : 73.681 TMC ಒಳ ಹರಿವು : 1,00,710 ಕ್ಯೂಸೆಕ್ಸ್ ಹೊರ ಹರಿವು : 3,415 ಕ್ಯೂಸೆಕ್ಸ್ ಗರಿಷ್ಟ ಮಟ್ಟ : 1633 ಅಡಿ ಇಂದಿನ ಮಟ್ಟ : 1627.01 ಅಡಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.