NEWS

Cricket: ಭವಿಷ್ಯದಲ್ಲಿ ಟೀಂ ಇಂಡಿಯಾ ಪರ ಆಡ ಬೇಕಿದ್ದ ಹುಡುಗ ಅಚಾನಕ್ ಸಾವು! 15 ವಯಸ್ಸಿಗೆ ಜೀವನದಾಟ ನಿಲ್ಲಿಸಿದ ಬಾಲಕ

ಸಾಂದರ್ಭಿಕ ಚಿತ್ರ ಭೋಪಾಲ್: ಕ್ರೀಡೆಯ (Sports) ವಿಷಯಕ್ಕೆ ಬಂದರೆ ಕ್ರಿಕೇಟ್ (Cricket) ಎಂದರೆ ಎಲ್ಲರಿಗೂ ಇಷ್ಟ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ಎಲ್ಲಾ ವರ್ಗದ ವಯಸ್ಸಿನ ವ್ಯಕ್ತಿಗಳಿಗೂ ಈ ಕ್ರಿಕೇಟ್ ಆಟವೆಂದರೆ ಪಂಚಪ್ರಾಣ. ಇನ್ನು ಹಲವಾರು ಹುಡುಗರು ಶಾಲೆ-ಕಾಲೇಜಿಗೆ (School And College) ಬಂಕ್ ಮಾಡಿ ಕ್ರಿಕೆಟ್ ಆಡುತ್ತಾರೆ. ಅಷ್ಟರ ಮಟ್ಟಿಗೆ ಈ ಕ್ರಿಕೆಟ್ ಇಂದಿನ ಪೀಳಿಗೆ ಹುಡುಗರಿಗೆ ಹುಚ್ಚು ಹಿಡಿಸಿದೆ. ಇದೇ ರೀತಿ ಒಬ್ಬ 15 ವರ್ಷದ ಹುಡುಗ ಟೀಂ ಇಂಡಿಯಾ (India Cricket Team) ದಲ್ಲಿ ಕ್ರಿಕೆಟ್ ಆಟಗಾರನಾಗಿ ಆಡಬೇಕು ಎಂದು ಅಂದುಕೊಂಡಿದ್ದ. ಆದರೆ ದುರಾದೃಶ್ಟ ಆತನ ಆಸೆ ಈಡೇರಲಿಲ್ಲ. ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವು ಇನ್ನು ಟೀಂ ಇಂಡಿಯಾದಲ್ಲಿ ಆಡುವ ಕನಸು ಕಾಣುತ್ತಿದ್ದ ಯುವ ಕ್ರಿಕೆಟಿಗ ಆಟವಾಡುತ್ತಲೇ ಮೈದಾನದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಮಧ್ಯಪ್ರದೇಶದ ಸುಸ್ನರ್‌ ಮೈದಾನದಲ್ಲಿ ನಡೆದಿದೆ. ಕ್ರಿಕೆಟ್ ಆಟವಾಡುತ್ತಿದ್ದ ವೇಳೆ 15 ವರ್ಷದ ಯುವ ಕ್ರಿಕೆಟಿಗ ಮಖಾನ್ ಸಿಂಗ್ ಮೃತಪಟ್ಟ ದುರ್ದೈವಿ ಆಗಿದ್ದಾನೆ. ಮೈದಾನದಲ್ಲಿ ಕುಸಿದು ಬಿದ್ದ ಕೆಲ ಹೊತ್ತಲ್ಲೇ ಸಾವನ್ನಪ್ಪಿದ್ದಾನೆ. ಈತನನ್ನು ಆಸ್ಪತ್ರೆ ದಾಖಲಿಸಲಾದರೂ ಪ್ರಯೋಜನವಾಗಲಿಲ್ಲ. ಆಸ್ಪತ್ರೆಗೆ ಒಯ್ಯುವ ಮುನ್ನವೇ ಆತ ಮರಣ ಹೊಂದಿದ್ದಾನೆ. ಟೀ ಇಂಡಿಯಾದಲ್ಲಿ ಆಡುವ ಕನಸು ಭಗ್ನ ಮಖಾನ್ ಸಿಂಗ್ ಒಬ್ಬ ದೊಡ್ಡ ಕ್ರಿಕೆಟಿಗನಾಗಬೇಕು ಅನ್ನೋ ಕನಸು ಕಂಡಿದ್ದ. ಇದಕ್ಕಾಗಿ ಆತ ಕಠಿಣ ಅಭ್ಯಾಸದಲ್ಲಿ ತೊಡಗಿದ್ದ. 15ನೇ ವಯಸ್ಸಿನಲ್ಲಿ ಸುಸ್ನರ್ ಸ್ಥಳೀಯ ಕ್ಲಬ್ ತಂಡದಲ್ಲಿ ಸ್ಥಾನ ಪಡೆದಿದ್ದ. ಇನ್ನುಇ ಮಖಾನ್ ಸಿಂಗ್ ತಂಡದ ಪ್ರಮುಖ ಆಟಗಾರನಾಗಿ, ತಂಡದ ಹಲವು ಗೆಲುವಿನ ರೂವಾರಿಯಾಗಿ ಎಲ್ಲರ ಗಮನಸೆಳೆದಿದ್ದ. ಹಾಗೆಯೇ ಉತ್ತಮ ಹೆಸರೂ ಮಾಡಿದ್ದ. ಎಂದಿನಂತೆ ಸುಸ್ನರ್ ಮೈದಾನದಲ್ಲಿ ಗೆಳೆಯರೊಂದಿಗೆ ಕ್ರಿಕೆಟ್ ಆಡುತ್ತಿದ್ದ ವೇಳೆ ಮಖಾನ್ ಸಿಂಗ್ ಅಸ್ವಸ್ಥಗೊಂಡಿದ್ದಾನೆ. ಕ್ರಿಕೆಟ್ ಪಂದ್ಯದ ನಡುವೆಯೇ ಮಖಾನ್ ಕುಸಿದು ಬಿದ್ದಿದ್ದಾನೆ. ಅಲ್ಲಿದ್ದ ಇತರೆ ಆಟಗಾರರು ಮಖಾನ್ ಸಿಂಗ್ ಎಬ್ಬಿಸಲು ತುಂಬಾ ಪ್ರಯತ್ನ ಮಾಡಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ. ಇದನ್ನೂ ಓದಿ: IND vs BAN: ಭಾರತೀಯರ ಆರ್ಭಟಕ್ಕೆ ಧೂಳೀಪಟವಾದ ಬಾಂಗ್ಲಾದೇಶ! 11.5 ಓವರ್​ಗೆ ಪಂದ್ಯ ಮುಗಿಸಿದ ಟೀಮ್ ಇಂಡಿಯಾ ಮುಖಾನ್ ಸಿಂಗ್ ಉಳಿಸಿಕೊಳ್ಳಲು ಶತಪ್ರಯತ್ನ ಆಟವಾಡುತ್ತಿದ್ದ ವೇಳೆಯೇ ದಿಢೀರ್ ಕುಸಿದು ಬಿದ್ದ ಮುಖಾನ್ ಸಿಂಗ್‌ನ್ನು ನೋಡಿದ ಸಹ ಆಟಗಾರರು ತುಂಬಾ ಭಯಭೀತರಾದರು. ಸಿಂಗ್ ಬಿದ್ದ ತಕ್ಷಣ ಆತನ ಬಳಿ ಓಡಿ ಬಂದಿದ್ದಾರೆ. ಆ ಕ್ಷಣ ಆತನಿಗೆ ನೀರು ಕುಡಿಸುವ ಪ್ರಯತ್ನ ಮಾಡಿದ್ದಾರೆ. ಹಾಗೆಯೇ ಮಖಾನ್ ಸಿಂಗ್ ಮುಖಕ್ಕೆ ನೀರು ಚಿಮುಕಿಸಿದ್ದಾರೆ. ಆದರೆ ಸಹ ಆಟಗಾರರ ಪ್ರಯತ್ನ ವಿಫಲವಾಗಿದ್ದು, ಮಖಾನ್ ಸಿಂಗ್ ಯಾವುದಕ್ಕೂ ಸ್ಪಂದಿಸಿಲ್ಲ ಎಂದು ತಿಳಿದುಬಂದಿದೆ. ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ಪಾಲಕರು ಈ ದುರ್ಘಟನೆ ಸುಮಾರು ಬೆಳಗ್ಗೆ 9.30ರ ಸುಮಾರಿಗೆ ಮಖಾನ್ ಸಿಂಗ್ ಮೈದಾನದಲ್ಲಿ ನಡೆದಿದೆ. ಇಷ್ಟೆಲ್ಲ ಆದಮೇಲೆ ಸ್ಥಳೀಯರ ನೆರವಿನಿಂದ ಮಖಾನ್ ಸಿಂಗ್‌ನನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಿದ್ದಾರೆ. ತಪಾಸಣೆ ನಡೆಸಿದ ವೈದ್ಯರು ಮಖಾನ್ ಸಿಂಗ್ ಮೃತಪಟ್ಟಿರುವುದಾಗಿ ದೃಢಡಿಸಿದ್ದಾರೆ. ಈ ಮಾಹಿತಿ ತಿಳಿದ ಪೋಷಕರು ಕಂಗಾಲಾಗಿದ್ದಾರೆ. ತಕ್ಷಣವೇ ಆಸ್ಪತ್ರೆಗೆ ಧಾವಿಸಿದ್ದಾರೆ. ಸಾವಿಗೆ ನಿಖರ ಕಾರಣವೇನು? ಈ ಘಟನೆ ನಡೆದ ಬಳಿಕ ಸ್ಥಳೀಯ ಜಿಲ್ಲಾಡಳಿತಕ್ಕೆ ಮಾಹಿತಿ ಸಿಗುತ್ತಿದ್ದಂತೆ ಆಸ್ಪತ್ರೆ ಧಾವಿಸಿ ಘಟನೆ ಕುರಿತು ವಿವರಣೆ ಕೇಳಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇದೀಗ ಸಾವಿಗೆ ನಿಖರ ಕಾರಣ ತಿಳಿಯಲು ಪೊಲೀಸರು ಮುಂದಾಗಿದ್ದಾರೆ. ಹೃದಯಾಘಾತ ಅಥವಾ ಬೇರೆ ಯಾವ ಕಾರಣಗಳಿಂದ 15 ವರ್ಷದ ಬಾಲಕ ಮೃತಪಟ್ಟಿದ್ದಾನೆ ಅನ್ನೋದನ್ನು ಪತ್ತೆ ಹಚ್ಚಲು ಪೊಲೀಸರು ತನಿಖೆಯನ್ನು ಈಗಾಗಲೇ ಪ್ರಾರಂಭಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.