NEWS

KL Rahul: ಆ ಘಟನೆ ನನ್ನ ಜೀವನದ ಕಪ್ಪು ಚುಕ್ಕೆಯಾಗಿದೆ, ಅದರಿಂದ ನನ್ನ ಜೀವನವೇ ಬದಲಾಯ್ತು! ವಿವಾದದ ಬಗ್ಗೆ ರಾಹುಲ್ ಮಾತು

ಕೆಎಲ್ ರಾಹುಲ್ ಭಾರತ ತಂಡದ (Team India) ಸ್ಟಾರ್​ ಆಟಗಾರರು ಕ್ರಿಕೆಟ್ (Cricket)​ ಹೊರತಾಗಿ ಬೇರೆ ವಿಚಾರದಲ್ಲೂ ಸದ್ದು ಮಾಡಿದ್ದಾರೆ. ಕೆಲವೊಂದು ಘಟನೆಯಲ್ಲಿ ಕ್ರಿಕೆಟಿಗರು ವಿವಾದಕ್ಕೀಡಾಗಿ ಸಸ್ಪೆಂಡ್ ಆದ ಘಟನೆ ಕೂಡ ಇದೆ. ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ, ಕನ್ನಡಿಗ ಕೆಎಲ್ ರಾಹುಲ್ (KL Rahul) ಕಾಫಿ ವಿತ್ ಕರಣ್ (Coffee With Karan) ಕಾರ್ಯಕ್ರಮದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಕಾಮೆಂಟ್ ಮಾಡಿ ವಿವಾದಕ್ಕೀಡಾಗಿದ್ದರು. ಆ ಘಟನೆ ಕಳೆದ ಏಳೆಂಟು ವರ್ಷಗಳಾಗಿದ್ದರು, ಇನ್ನೂ ಆ ಸಂದರ್ಶನ ತಮ್ಮನ್ನು ಇನ್ನೂ ಕಾಡುತ್ತಿದೆ ಎಂದು ರಾಹುಲ್ ಹೇಳಿಕೊಂಡಿದ್ದಾರೆ. ನಿಷೇಧಕ್ಕೆ ಒಳಗಾಗಿದ್ದ ರಾಹುಲ್ ಆ ಘಟನೆ ನನ್ನನ್ನು ತುಂಬಾ ಹೆದರಿಸಿತ್ತು. ಆ ಸಂದರ್ಶನ ನನ್ನ ಜೀವನದಲ್ಲಿ ಅಚ್ಚಳಿಯದ ಕಪ್ಪು ಚುಕ್ಕಿಯಾಗಿ ಉಳಿದುಕೊಂಡಿದೆ ಎಂದಿದ್ದಾರೆ. ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಅವರ ‘ಕಾಫಿ ವಿತ್ ಕರಣ್’ ಶೋನಲ್ಲಿ ಸ್ಟಾರ್ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಕೆಎಲ್ ರಾಹುಲ್ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಕರಣ್ ಜೋಹರ್ ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರವಾಗಿ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ವಿವಾದಾತ್ಮಕ ಕಾಮೆಂಟ್ ಮಾಡಿದ್ದರು. ಮಹಿಳೆಯರ ಬಗ್ಗೆ ತಮಗರಿವಿಲ್ಲದೆ ಆಕ್ಷೇಪಾರ್ಹ ಕಾಮೆಂಟ್ ಮಾಡಿದ ನಂತರ ಸಾರ್ವಜನಿಕರಿಂದ ತೀವ್ರ ಆಕ್ರೋಶಕ್ಕೆ ಗುರಿಯಾದರು. ನಂತರ ಬಿಸಿಸಿಐ ಈ ಇಬ್ಬರನ್ನು ತಂಡದಿಂದ ಅಮಾನತು ಮಾಡುವ ಮೂಲಕ ಕಠಿಣ ಕ್ರಮಗಳನ್ನು ಕೈಗೊಂಡಿತ್ತು. ಕ್ಷಮೆಯಾಚಿಸಿದ ನಂತರ, ನಿಷೇಧವನ್ನು ತೆಗೆದುಹಾಕಿತ್ತು. ಇದನ್ನೂ ಓದಿ: England vs Sri Lanka: ಟೆಸ್ಟ್​ ಕ್ರಿಕೆಟ್​ನಲ್ಲಿ ಚರಿತ್ರೆ ಸೃಷ್ಟಿಸಿದ ಜೇಮಿ ಸ್ಮಿತ್! 94 ವರ್ಷಗಳ ದಾಖಲೆಗೆ ಬಿತ್ತು ಬ್ರೇಕ್ ನನ್ನ ಬದುಕು ಬದಲಾಗೋಯ್ತು! ಹಲವು ವರ್ಷಗಳಿಂದ ಈ ಘಟನೆ ಬಗ್ಗೆ ಮೌನವಾಗಿದ್ದ ರಾಹುಲ್ ಈ ವಿವಾದದ ಬಗ್ಗೆ ಮೊದಲ ಬಾರಿಗೆ ನಿಖಿಲ್ ಕಾಮತ್​ಗೆ ನೀಡಿದ ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ. ಆ ಸಂದರ್ಶನ ತನ್ನನ್ನು ತುಂಬಾ ಹೆದರಿಸಿತ್ತು, ಅದು ನನ್ನ ಜೀವನವನ್ನ ಸಂಪೂರ್ಣ ಬದಲಾಯಿಸಿತು. ಸಾಮಾನ್ಯವಾಗಿ ಟ್ರೋಲ್ ಮಾಡಿದರೆ ನನಗೆ ಯಾವುದೇ ಭಯವಿರಲ್ಲ, ಹೆದರುವುದಿಲ್ಲ ಎಂಬ ಭಾವಿಸಿದ್ದೆ. ಆದರೆ, ಕೆಲವು ವರ್ಷಗಳ ಹಿಂದೆ ನಾನು ತುಂಬಾ ಚಿಕ್ಕವನಿದ್ದೆ, ಒಂದೆರಡು ವರ್ಷಗಳಿಂದ ನಾನು ಕುಳಿತಾಗಲೂ.. ನಿಂತಾಗಲೂ ನನ್ನನ್ನು ಟ್ರೋಲ್ ಮಾಡಿದ್ದರು. ಅದೊಂದು ಕಪ್ಪು ಚುಕ್ಕಿ ಆದರೆ ಕಾಫಿ ವಿತ್ ಕರಣ್ ಕಾರ್ಯಕ್ರಮವು ವೈಯಕ್ತಿಕವಾಗಿ ನನ್ನ ಜೀವನವನ್ನು ಬದಲಾಯಿಸಿತು. ಸಾಮಾನ್ಯವಾಗಿ ನಾನು ಮೃದು ಸ್ವಭಾವದ ವ್ಯಕ್ತಿ. ಟೀಂ ಇಂಡಿಯಾವನ್ನು ಪ್ರತಿನಿಧಿಸಿದ ನಂತರ ನನ್ನ ಆತ್ಮವಿಶ್ವಾಸ ಇಮ್ಮಡಿಗೊಳಿಸಿತ್ತು. 100 ಜನರ ಮಧ್ಯೆ ಮಾತನಾಡಬಲ್ಲೆ ಎಂಬ ಭಾವನೆ ಇತ್ತು. ಆದರೆ, ಈಗ ಹಾಗೆ ಮಾಡಲು ಸಾಧ್ಯವಿಲ್ಲ. ಆ ಸಂದರ್ಶನದ ವಿವಾದದಿಂದ ಸಾರ್ವಜನಿಕವಾಗಿ ಮಾತನಾಡಲು ಭಯವಾಗುತ್ತಿದೆ. ನಾನು ಶಾಲೆಯಲ್ಲಿ ಎಂದಿಗೂ ಸಸ್ಪೆಂಡ್ ಆಗಿದವನಲ್ಲ, ದಂಡನೆಗೂ ಒಳಗಾಗಿರಲಿಲ್ಲ, ಆದರೆ ಈ ಕಾಮೆಂಟ್‌ಗಳ ನಂತರ ತಮ್ಮನ್ನು ತಂಡದಿಂದ ಅಮಾನತುಗೊಳಿಸಲಾಯಿತು. ಮೊದಲ ಬಾರಿಗೆ ಅಂತಹ ಅನುಭವವನ್ನು ಹೇಗೆ ಎದುರಿಸಬೇಕೆಂದು ನನಗೆ ತಿಳಿದಿರಲಿಲ್ಲ. ಅದು ಇಂದಿಗೂ ನನ್ನ ಜೀವನದಲ್ಲಿ ಅಳಿಸಲಾಗದ ಗುರುತಾಗಿ ಉಳಿದಿದೆ ಎಂದು ಕೆಎಲ್ ರಾಹುಲ್ ಹೇಳಿದ್ದಾರೆ. ಪ್ರಸ್ತುತ ಕೆಎಲ್ ರಾಹುಲ್​ ದುಲೀಪ್​ ಟ್ರೋಫಿಗಾಗಿ ಸಿದ್ಧರಾಗುತ್ತಿದ್ದಾರೆ. ಸೆಪ್ಟೆಂಬರ್​ನಲ್ಲಿ ಬಾಂಗ್ಲಾದೇಶದ ವಿರುದ್ಧ ಟೆಸ್ಟ್ ಸರಣಿ ನಡೆಯಲಿದ್ದು, ಈ ಟೂರ್ನಿಯ ಮೂಲಕ ಟೀಮ್ ಇಂಡಿಯಾಗೆ ಕಮ್​ಬ್ಯಾಕ್​ ಮಾಡುವ ಆಲೋಚನೆಯಲ್ಲಿದ್ದಾರೆ. ಇನ್ನು ರಾಹುಲ್​ರನ್ನ ಲಕ್ನೀ ಸೂಪರ್ ಜೈಂಟ್ಸ್ ರಿಟೇನ್ ಮಾಡಿಕೊಳ್ಳುವುದಿಲ್ಲ ಎಂಬ ಮಾತು ಕೇಳಿಬರುತ್ತಿದೆ. 17 ಕೋಟಿ ಕೊಟ್ಟು 2022ರಲ್ಲಿ ಲಕ್ನೋ ತಂಡ ರಾಹುಲ್​ರನ್ನ ಡೈರೆಕ್ಟ್​ ಡ್ರಾಫ್ಟ್ ಮಾಡಿಕೊಂಡಿತ್ತು None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.