NEWS

Coffee: ಕಾಫಿ ಕುಡಿಯಲು ಒಳ್ಳೆಯ ಸಮಯ ಯಾವುದು? ಯಾವ ಸಮಯದಲ್ಲಿ ಕಾಫಿ ಮುಟ್ಟಲೇಬಾರದು? ಇಲ್ಲಿದೆ ಮಾಹಿತಿ

ಕಾಫಿ ಕುಡಿಯಲು ಒಳ್ಳೆಯ ಸಮಯ ಹಲವರಿಗೆ ಬೆಳಗ್ಗೆ ಎದ್ದ ಕೂಡಲೇ ಕಾಫಿ (Coffee) ಬೇಕೇಬೇಕು. ಬೆಳಗ್ಗೆ ಒಂದೇ ಅನ್ಕೋಬೇಡಿ ದಿನದ ಯಾವುದೇ ಹೊತ್ತಲ್ಲಿ ಕಾಫಿ ಕೊಟ್ರು ಕುಡಿಯುವ ಕಾಫಿ ಲವರ್ಸ್‌ ಅನೇಕರಿದ್ದಾರೆ. ಕಾಫಿ ಸೇವನೆಯು ಟೈಪ್ 2 ಮಧುಮೇಹ ( Diabetes) ಮತ್ತು ಯಕೃತ್ತಿನ ಕ್ಯಾನ್ಸರ್‌ನಂತಹ (Liver cancer) ಪರಿಸ್ಥಿತಿಗಳ ಅಪಾಯವನ್ನು ಕಡಿಮೆ ಮಾಡುವುದರಿಂದ ಹಿಡಿದು ವ್ಯಾಯಾಮದ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಪ್ರಯೋಜನಗಳನ್ನು ಹೊಂದಿದೆ. ಅಲ್ಲದೇ ನಾವು ಯಾವಾಗ ಕಾಫಿ ಕುಡಿಯುತ್ತೇವೆ ಎಂಬ ಸಮಯವೂ ಸಹ ಹಲವು ಪ್ರಯೋಜನಗಳನ್ನು ನೀಡುತ್ತದೆ ಮತ್ತು ಪರಿಣಾಮವನ್ನು ಕೂಡ ಬೀರುತ್ತದೆ. ದಿನದ ವಿವಿಧ ಸಮಯಗಳಲ್ಲಿ ಕಾಫಿ ಕುಡಿಯುವುದು ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮತ್ತು ನಿದ್ರೆಯನ್ನು ಬೆಂಬಲಿಸಲು ಕಾಫಿ ಕುಡಿಯಲು ಉತ್ತಮ ಸಮಯ ಯಾವುದು ಅಂತಾ ಇಲ್ಲಿ ನೋಡೋಣ. ಕಾಫಿ ಕುಡಿಯುವ ಸಮಯ ಬೆಳಗ್ಗೆ: ಕಾಫಿ ಪ್ರತಿ ಕಪ್‌ಗೆ ಸುಮಾರು 92 ಮಿಲಿಗ್ರಾಂ (mg) ಕೆಫೀನ್ ಅನ್ನು ಪ್ಯಾಕ್ ಮಾಡುವುದರಿಂದ, ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಮತ್ತು ಬೆಳಿಗ್ಗೆ ದಿನವನ್ನು ರಿಫ್ರೆಶ್‌ ಮಾಡುತ್ತದೆ. ಅದಾಗ್ಯೂ, ಬೆಳಗ್ಗೆ ಕಾಫಿಯನ್ನು ಸೇವಿಸುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ಮತ್ತು ಕೆಲವು ಹಾರ್ಮೋನುಗಳ ಮೇಲೆ ಪರಿಣಾಮ ಬೀರಬಹುದು ಎಂದು ಕೆಲ ಅಧ್ಯಯನಗಳು ಹೇಳುತ್ತವೆ. ಇದನ್ನೂ ಓದಿ: ಹಾಲಿಗೆ ಇವುಗಳನ್ನು ಬೆರೆಸಿ ಕುಡಿಯಿರಿ; ದಷ್ಟಪುಷ್ಟವಾಗಿರ್ತೀರಿ! ಕಾರ್ಟಿಸೋಲ್: ಕೆಲವರು ಬೆಳಗ್ಗೆ ಕಾಫಿ ಕುಡಿಯುವುದು ಪ್ರತಿರಕ್ಷಣಾ ಕಾರ್ಯ, ಚಯಾಪಚಯ, ಉರಿಯೂತ ಮತ್ತು ಒತ್ತಡವನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎನ್ನಲಾಗಿದೆ. ಕಾರ್ಟಿಸೋಲ್ ಆರೋಗ್ಯಕ್ಕೆ ಅತ್ಯಗತ್ಯವಾದರೂ, ಕಾರ್ಟಿಸೋಲ್‌ನ ಹೆಚ್ಚಿನ ಮಟ್ಟವು ದೇಹಕ್ಕೆ ಹಾನಿಕಾರಕವಾಗಿದೆ ಮತ್ತು ಅಧಿಕ ಕೊಲೆಸ್ಟ್ರಾಲ್, ಅಧಿಕ ರಕ್ತದ ಸಕ್ಕರೆ, ಅಧಿಕ ರಕ್ತದೊತ್ತಡ ಮತ್ತು ಹೆಚ್ಚುವರಿ ಹೊಟ್ಟೆಯ ಕೊಬ್ಬಿನಂತಹ ಸಮಸ್ಯೆಗಳೊಂದಿಗೆ ಸಂಬಂಧ ಹೊಂದಿದೆ. ಬ್ಲಡ್​ ಶುಗರ್: ಕಾರ್ಟಿಸೋಲ್‌ನ ಮೇಲಿನ ಪರಿಣಾಮದ ಜೊತೆಗೆ ಉತ್ತಮ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕಾಗಿ ನೀವು ಬೆಳಗ್ಗೆ ಕಾಫಿ ಕುಡಿಯೋದನ್ನು ನಿಲ್ಲಿಸಲೇಬೇಕು. ನೀವು ಅಧಿಕ ರಕ್ತದ ಸಕ್ಕರೆ ಅಥವಾ ನಿದ್ರೆಯ ಸಮಸ್ಯೆಗಳನ್ನು ಹೊಂದಿದ್ದರೆ, ನಿಮ್ಮ ಬೆಳಗಿನ ಕಪ್ ಕಾಫಿ ಕುಡಿಯುವ ಮೊದಲು ಪ್ರೋಟೀನ್-ಭರಿತ ಊಟವನ್ನು ಸೇವಿಸುವುದು ಉತ್ತಮ ಎನ್ನುತ್ತವೆ ಸಂಶೋಧನೆ. ಮಧ್ಯಾಹ್ನ: ಕೆಲಸದ ಮಧ್ಯಾಹ್ನದ ಸಮಯದಲ್ಲಿ ಕಾಫಿ ಕುಡಿಯುವುದರಿಂದ ಮಾನಸಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಕೆಫೀನ್ ಜಾಗರೂಕತೆಯನ್ನು ಹೆಚ್ಚಿಸುತ್ತದೆ ಮತ್ತು ಮೆದುಳಿನ ಕಾರ್ಯವನ್ನು ವರ್ಧಿಸುತ್ತದೆ. ಅದಕ್ಕಾಗಿಯೇ ಅನೇಕ ಜನರು ತಮ್ಮ ಕೆಲಸದ ದಿನದಲ್ಲಿ ತಮ್ಮ ದಕ್ಷತೆ ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸಲು ಒಂದು ಕಪ್ ಕಾಫಿ ಕುಡಿಯುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಆದಾಗ್ಯೂ, ಮಧ್ಯಾಹ್ನ ಕಾಫಿ ಕುಡಿಯುವುದು, ದಿನದ ಮುಂಚೆಯೇ, ನಿಮ್ಮ ನಿದ್ರೆಯ ಮಾದರಿಯನ್ನು ಅಡ್ಡಿಪಡಿಸಬಹುದು, ಮಲಗುವ ಮುನ್ನ 6-8 ಗಂಟೆಗಳ ಒಳಗೆ ಕೆಫೀನ್ ಹೊಂದಿರುವ ಕಾಫಿಯನ್ನು ಸೇವಿಸುವುದರಿಂದ ನಿಮ್ಮ ನಿದ್ರೆಗೆ ಭಂಗ ತರಬಹುದು. ಸಂಜೆ: ಕಾಫಿಯಲ್ಲಿರುವ ಕೆಫೀನ್ ನಿಮ್ಮಲ್ಲಿನ ಜಾಗರೂಕತೆಯನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮನ್ನು ಸದಾ ಎಚ್ಚರವಾಗಿರಿಸುತ್ತದೆ, ಕೆಫೀನ್‌ಗೆ ಸೂಕ್ಷ್ಮವಾಗಿರುವ ಹೆಚ್ಚಿನ ಜನರು ಸಂಜೆ ಕಾಫಿ ಕುಡಿಯುವುದನ್ನು ತಪ್ಪಿಸಬೇಕು. ವಿಶೇಷವಾಗಿ ಮಲಗುವ ಮುನ್ನ ಇದನ್ನು ಇವರು ಕುಡಿಯಲೇಬಾರದು. ಮಲಗುವ ಸಮಯದಲ್ಲಿ ಕಾಫಿ ಕುಡಿಯುವುದರಿಂದ ಇವರಿಗೆ ಬೇಗ ನಿದ್ರೆ ಬರದಿರಬಹುದು. ಈ ನಿದ್ರಾ ಭಂಗವು ಮರುದಿನ ಶಕ್ತಿಯ ಮಟ್ಟವನ್ನು ಕುಗ್ಗಿಸಲು ಕೆಫೀನ್‌ನ ಅತಿಯಾದ ಸೇವನೆಗೆ ಕಾರಣವಾಗಬಹುದು, ಇದು ಮುಂದಿನ ರಾತ್ರಿಯೂ ನಿದ್ರೆಯನ್ನು ದುರ್ಬಲಗೊಳಿಸುತ್ತದೆ. ಹಾಗಿದ್ರೆ ಕಾಫಿ ಕುಡಿಯಲು ಉತ್ತಮ ಸಮಯ ಯಾವುದು? ಯಾವುದೇ ವೈಜ್ಞಾನಿಕ ಪುರಾವೆಗಳು ಕಾಫಿ ಕುಡಿಯಲು ಅತ್ಯುತ್ತಮ ಸಮಯ ಯಾವುದು ಎಂದು ಸೂಚಿಸಿಲ್ಲ. ಅದಾಗ್ಯೂ, ದಿನದಲ್ಲಿ ತುಂಬಾ ತಡವಾಗಿ ಕಾಫಿ ಕುಡಿಯುವುದರಿಂದ, ನಿದ್ರೆಗೆ ಅಡ್ಡಿಯಾಗಬಹುದು, ಹೀಗಾಗಿ ಕಾಫಿ ಸೇವನೆಯನ್ನು ಬೆಳಿಗ್ಗೆಯಿಂದ ಮುಂಜಾನೆ ಅಥವಾ ಮಧ್ಯಾಹ್ನದವರೆಗೆ ಮಿತಿಗೊಳಿಸುವುದು ಉತ್ತಮ. ಇದು ಕೆಲವೊಮ್ಮೆ ನಮ್ಮ ಆರೋಗ್ಯ ಸ್ಥಿತಿಗಳನ್ನು ಕೂಡ ಅವಂಬಿಸಿರುತ್ತದೆ. ಉದಾಹರಣೆಗೆ ಅಧಿಕ ರಕ್ತದ ಸಕ್ಕರೆ ಮಟ್ಟವನ್ನು ಹೊಂದಿರುವ ಜನರು ಮತ್ತು ಒತ್ತಡದಲ್ಲಿರುವವರು ಬೆಳಗಿನ ಕಾಫಿಗೆ ಬ್ರೇಕ್‌ ಹಾಕೋದು ಉತ್ತಮ. ಈ ರೂಢಿ ಬ್ಲಡ್​ ಶುಗರ್​ ಮತ್ತು ಕಾರ್ಟಿಸೋಲ್ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಕೆಫೀನ್ ಅನ್ನು ನೈಸರ್ಗಿಕ ವ್ಯಾಯಾಮ ವರ್ಧಕವಾಗಿ ಬಳಸಲು ಬಯಸುವ ಜನರು ಉತ್ತಮ ಫಲಿತಾಂಶಗಳಿಗಾಗಿ ತಮ್ಮ ವರ್ಕೌಟ್‌ನ ಸುಮಾರು 60 ನಿಮಿಷಗಳ ಮೊದಲು ಕಾಫಿಯನ್ನು ಸೇವಿಸುವುದು ಒಳ್ಳೆಯದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.