NEWS

Success Story: ಒಂದೇ ಜಿಲ್ಲೆಯಲ್ಲಿ IAS, IPS; ಜನ ಸೇವೆಯೇ ಮೂಲಕ ಖ್ಯಾತಿ ಪಡೆದ ದಂಪತಿಯ ಕ್ಯೂಟ್ ಲವ್ ಸ್ಟೋರಿ

ಐಪಿಎಸ್ ಕೊಮ್ಮಿ ಪ್ರತಾಪ್ ಶಿವ ಕಿಶೋರ್ ಮತ್ತು ಐಎಎಸ್ ಪೇದಿತಿ ಧಾತ್ರಿ ರೆಡ್ಡಿ ಅಧುನಿಕತೆ ಹೆಚ್ಚಾದಂತೆ ಪ್ರೇಮ ವಿವಾಹಗಳು (Love Marriages) ಸಾಮಾನ್ಯ ಸಂಗತಿಯಾಗಿದೆ. ಜಸ್ಟ್ 18 ವರ್ಷ ತುಂಬದವರು ಕೂಡ ಪ್ರೀತಿ ಹೆಸರಿನಲ್ಲಿ ಮನೆಯಿಂದ ಹೊರ ಬಂದು ಮದುವೆ ಮಾಡಿಕೊಳ್ಳುತ್ತಿದ್ದಾರೆ. ಆ ಬಳಿಕ ಕೆಲವೇ ತಿಂಗಳು-ವರ್ಷಗಳಲ್ಲಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಜೀವನದ (Life) ಬಗ್ಗೆ ಅವರಿಗೆ ತಿಳುವಳಿಗೆ ಇಲ್ಲದಿರುವುದು, ಜೀವನದಲ್ಲಿ ಸೆಟ್ಲ್ ಆಗದೇ ಇರೋದು ಇದಕ್ಕೆ ಕಾರಣ ಅಂತ ಹೇಳಬಹುದು. ಶಾಲಾ-ಕಾಲೇಜು (School and Colleges) ವಯಸ್ಸಿನಲ್ಲೇ ಪ್ರೀತಿಯ ಹೆಸರಲ್ಲಿ ಕಾಲ ಕಳೆದರೆ ಜೀವನ ಪರ್ಯಂತ ನರಳಬೇಕಾಗುತ್ತದೆ. ನೀವು ಕಾಲೇಜು ವಯಸ್ಸಿನಲ್ಲಿ ಪ್ರೀತಿಯಲ್ಲಿ ಬಿದ್ದರೆ, ನೀವು ಮೊದಲು ನಿಮ್ಮ ವೃತ್ತಿಜೀವನದತ್ತ ಗಮನ ಹರಿಸಬೇಕು. ಜೀವನದಲ್ಲಿ ಸೆಟ್ಲ್ ಆದ ನಂತರ ಮದುವೆಯ ಬಗ್ಗೆ ಯೋಚಿಸಬೇಕು. ಜವಾಬ್ದಾರಿ (Responsibilities) ಹೊತ್ತವರ ಬದುಕು ಹಸನಾಗುತ್ತೆ, ಅಂತವರು ಎಂದೆಂದಿಗೂ ಜೊತೆಯಾಗಿರುತ್ತಾರೆ. ಈಗ ನಾವು ಹೇಳಲು ಹೊರಟಿರುವ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ (IAS and IPS Officers) ಪ್ರೇಮಕಥೆ ಆ ವರ್ಗಕ್ಕೆ ಸೇರಿದ್ದು. ಅದಕ್ಕಾಗಿಯೇ ಅವರು ಅನೇಕರಿಗೆ ಮಾದರಿಯಾಗಿದ್ದಾರೆ. ಇವರಿಬ್ಬರು ಓದಿದ್ದು ಒಂದೇ ಕಾಲೇಜಿನಲ್ಲಿ, ಆದರೆ ಇಬ್ಬರಿಗೂ ಪರಸ್ಪರ ಪರಿಚಯವಿಲ್ಲ. ಆ ನಂತರ ಇಬ್ಬರೂ ಸಿವಿಲ್ಸ್ ಪರೀಕ್ಷೆ ಬರೆದಿದ್ದರು. ಒಬ್ಬರು ಐಪಿಎಸ್‌ಗೆ ಮತ್ತು ಇನ್ನೊಬ್ಬರು ಐಎಎಸ್‌ಗೆ ಆಯ್ಕೆಯಾಗಿದ್ದರು. ಅಲ್ಲದೇ ಕೆಲಸ ನಿಮಿತ್ತ ಒಂದೇ ಜಿಲ್ಲೆಗೆ ಬಂದಿದ್ದರು. ಅಲ್ಲಿಯೇ ಅವರಿಗೆ ಪರಿಚಯ ಆಗಿತ್ತು, ಇಬ್ಬರ ನಡುವಿನ ಪರಿಚಯ ಪ್ರೀತಿಗೆ ತಿರುಗಿ ಹಿರಿಯರನ್ನು ಒಪ್ಪಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇಬ್ಬರೂ ಜೊತೆಯಾಗಿ ತಮ್ಮ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಿದ್ದಾರೆ, ಹಲವರಿಗೆ ಮಾದರಿಯಾಗಿ ನಿಂತಿದ್ದಾರೆ. ಈ ಅಧಿಕಾರಿಗಳ ಕ್ಯೂಟ್ ಲವ್ ಸ್ಟೋರಿ ಇಲ್ಲಿದೆ. ನಾವು ಇಲ್ಲಿ ಹೇಳುತ್ತಿರುವುದು ಏಲೂರು ಜಿಲ್ಲಾ ಎಸ್​.ಪಿ ಕೊಮ್ಮಿ ಪ್ರತಾಪ್ ಶಿವ ಕಿಶೋರ್ ಮತ್ತು ಏಲೂರು ಜಾಯಿಂಟ್ ಕಲೆಕ್ಟರ್ ಪೇದಿತಿ ಧಾತ್ರಿ ರೆಡ್ಡಿ ದಂಪತಿ ಬಗ್ಗೆ ಹೇಳುತ್ತಿದ್ದೇವೆ. ಇಬ್ಬರದ್ದು ಲವ್ ಮ್ಯಾರೇಜ್ ಆಗಿರೋದು ವಿಶೇಷ. ಧಾತ್ರಿ ರೆಡ್ಡಿ ಮತ್ತು ಕಿಶೋರ್ ಇಬ್ಬರೂ ಖರಗ್‌ಪುರದ ಐಐಟಿಯಲ್ಲಿ ಎಂಜಿನಿಯರಿಂಗ್ ಓದಿದ್ದಾರೆ. ಅವರು ಕೆಲಸಕ್ಕೆ ಒಂದೇ ಜಿಲ್ಲೆಗೆ ಬಂದ ವೇಳೆ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದರು. ಇದನ್ನೂ ಓದಿ: Rahul Dravid: ಮತ್ತೆ ಶೈನ್ ಆಗಲಿದೆ ‘ದ್ರಾವಿಡ್’ ಸರ್‌ನೇಮ್; ಚೊಚ್ಚಲ ಟಿ20 ಕಂಟ್ರಾಕ್ಟ್​ಗೆ ಸಹಿ ಮಾಡಿದ ದ್ರಾವಿಡ್ ಪುತ್ರ! ಶಿವಕುಮಾರ್ ಯಾರು? ಅವರ ಹಿನ್ನೆಲೆ ಏನು? ಕೊಮ್ಮಿನ ಪ್ರತಾಪ್ ಶಿವ ಕಿಶೋರ್ ವಿಷಯಕ್ಕೆ ಬಂದರೆ, ಅವರು 2019 ರ ಬ್ಯಾಚ್ ಐಪಿಎಸ್ ಅಧಿಕಾರಿ. ಹುಟ್ಟೂರು ಚುಂಚಲೂರು ಗ್ರಾಮ, ವಾರಿಪಾಡು ಮಂಡಲ, ನೆಲ್ಲೂರು ಜಿಲ್ಲೆಯವರು. ತಂದೆ ಕೊಮ್ಮಿನ ನಾರಾಯಣ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ತಾಯಿ ನಿರ್ಮಲಾ ಗೃಹಿಣಿಯಾಗಿದ್ದರು. ಶಿವ ಕಿಶೋರ್ ಇಂಟರ್ ಮುಗಿಸಿದ ನಂತರ ಖರಗ್‌ಪುರದ ಐಐಟಿ ಸೇರಿದರು. ಬಯೋಟೆಕ್ನಾಲಜಿ ಮತ್ತು ಬಯೋಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡಿದ್ದರು. ಇಂಜಿನಿಯರಿಂಗ್ ಪೂರ್ಣಗೊಂಡ ಬಳಿಕ ಬೆಂಗಳೂರಿನಲ್ಲಿ ಒಂದು ಪ್ರಮುಖ ಸಂಸ್ಥೆಯಲ್ಲಿ ಉದ್ಯೋಗಕ್ಕೆ ಸೇರಿದ್ದರು. ಹಿರಿಯ ವಿಜ್ಞಾನಿಯಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ 4 ವರ್ಷ ಕೆಲಸ ಮಾಡಿದ್ದರು. ಸಂಶೋಧನಾ ಸಲಹೆಗಾರರಾಗಿ ಮತ್ತು ವಿದ್ಯಾರ್ಥಿ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಆ ಬಳಿಕ ಸಿವಿಲ್‌ ಪರೀಕ್ಷೆಗೆ ತಯಾರಿ ನಡೆಸಲು ನಿರ್ಧರಿಸಿ ಕೆಲಸ ಮಾಡುತ್ತಲೇ UPSCಗೆ ತಯಾರಿ ನಡೆಸಿದ್ದರು. ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾಗಿದ್ದರು. 3ನೇ ಬಾರಿಗೆ ಅವರು ಕಷ್ಟಪಟ್ಟು ಅಧ್ಯಯನ ಮಾಡಿ ಸಿವಿಲ್ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದರು. ಮೂರನೇ ಪ್ರಯತ್ನದಲ್ಲಿ 153ನೇ ರ್ಯಾಂಕ್ ಪಡೆದು ಐಪಿಎಸ್ ಗೆ ಆಯ್ಕೆಯಾಗಿದ್ದರು. 2018ರಲ್ಲಿ ಹೈದರಾಬಾದ್‌ನ ಸರ್ಧಾರ್ ವಲ್ಲಭಭಾಯಿ ಪಟೇಲ್ ಅಕಾಡೆಮಿಯಲ್ಲಿ ತರಬೇತಿಯನ್ನು ಪೂರ್ಣಗೊಳಿಸಿದ ಶಿವ ಕಿಶೋರ್ ಅವರಿಗೆ ಕರ್ನೂಲ್ ಜಿಲ್ಲೆಯಲ್ಲಿ ಟ್ರೈನಿ IPS ಆಗಿ ಮೊದಲ ಪೋಸ್ಟಿಂಗ್ ನೀಡಲಾಯಿತು. ಅವರ ವೃತ್ತಿಜೀವನವು ಎಮ್ಮಿಗನೂರಿನಿಂದ ಪ್ರಾರಂಭವಾಯಿತು. ಧಾತ್ರಿ ಯಾರು? ಅವರ ಹಿನ್ನೆಲೆ ಏನು? ಪೆದ್ದಿತಿ ಧಾತ್ರಿ ರೆಡ್ಡಿಯ ವಿಷಯಕ್ಕೆ ಬಂದರೆ ಅವರು ತೆಲಂಗಾಣದ ಯಾದಾದ್ರಿ ಜಿಲ್ಲೆಯ ಚೌಟುಪ್ಪಲ್ ಮಂಡಲದ ಗುಂಡ್ಲಬಾವಿ ಗ್ರಾಮದಲ್ಲಿ ಜನಿಸಿದರು. ಧಾತ್ರಿ ರೆಡ್ಡಿಯವರ ವಿದ್ಯಾಭ್ಯಾಸ ಹೈದರಾಬಾದ್‌ನಲ್ಲಿ ಸಾಗಿತು. ಇಂಟರ್ ನಂತರ ಖರಗ್‌ಪುರದ ಐಐಟಿಯಲ್ಲಿ ಇಂಜಿನಿಯರಿಂಗ್ ಕೂಡ ಮಾಡಿದ್ದಾಳೆ. ಬಳಿಕ ಸಿವಿಲ್ ಪರೀಕ್ಷೆಗೆ ಪ್ರಯತ್ನಿಸಿದ್ದರು. ಆರಂಭದಲ್ಲಿಯೇ ಯಶಸ್ಸು ಸಾಧಿಸಿ ಧಾತ್ರಿ ರೆಡ್ಡಿ ಕೂಡ ಐಪಿಎಸ್ ಗೆ ಆಯ್ಕೆಯಾಗಿದ್ದರು. ಟ್ರೈನಿಂಗ್ ಪೂರ್ತಿಯಾದ ಬಳಿಕ ಖಮ್ಮಂ ಜಿಲ್ಲೆಯಲ್ಲಿ ಕೆಲಸ ಮಾಡಿದ್ದರು. ಇದೇ ವೇಳೆ ಐಎಎಸ್ ಆಗಬೇಕು ಎಂಬ ಛಲದೊಂದಿಗೆ ಮತ್ತೆ ಪರೀಕ್ಷೆ ಬರೆದು ಸಿವಿಲ್ ನಲ್ಲಿ 46ನೇ ರ್ಯಾಂಕ್ ಪಡೆದುಕೊಂಡಿದ್ದರು. ಬಳಿಕ ಒಡಿಶಾ ಕೇಡರ್ ಅಧಿಕಾರಿಯಾಗಿ 2020ರ ಅಕ್ಟೋಬರ್ ಸಬ್ ಕಲೆಕ್ಟರ್ ಆಗಿ ವೃತ್ತಿ ಆರಂಭಿಸಿದ್ದರು. ಪರಿಚಯ, ಪ್ರೇಮ, ಮದುವೆ ಧಾತ್ರಿ ರೆಡ್ಡಿ ಅವರನ್ನು 2023 ರಲ್ಲಿ ಆಂಧ್ರ ಪ್ರದೇಶ ಕೇಡರ್‌ಗೆ ವರ್ಗಾವಣೆ ಮಾಡಲಾಗಿತ್ತು. ಪಾಡೇರು ಸಬ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅದೇ ಸಮಯದಲ್ಲಿ ಕಿಶೋರ್ ಎ ಎಸ್ ಪಿಯಾಗಿ ಅಧಿಕಾರ ಸ್ವೀಕರಿಸಿದರು. ಗ್ರಾಮೀಣ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿ ಎಲ್ಲರ ಮೆಚ್ಚುಗೆಗೆ ಪಡೆದುಕೊಂಡಿದ್ದರು. ಇದೇ ವೇಳೆ ಇಬ್ಬರು ಒಬ್ಬರನ್ನು ಒಬ್ಬರು ಅರ್ಥ ಮಾಡಿಕೊಂಡು ಹಿರಿಯ ಆರ್ಶೀವಾದ ಪಡೆದುಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಡವರಿಗೆ ಸೇವೆ ಮಾಡಬೇಕೆಂಬ ಯೋಚನೆಯೇ ಧಾತ್ರಿ, ಕಿಶೋರ್ ಅವರನ್ನು ಒಂದು ಮಾಡಿದೆ. ಇಬ್ಬರು ಗ್ರಾಮೀಣ ಪ್ರದೇಶದಿಂದಲೇ ಬಂದಿರುವವರು, ಇಬ್ಬರಿಗೂ ಜನರ ಸೇವೆಯೇ ಪ್ರಮುಖ ಉದ್ದೇಶವಾಗಿದೆ. ಸಿವಿಲ್ ಸರ್ವೆಂಟ್ ಆಗಿ ಕೆಲಸ ಮಾಡುತ್ತಾ ಉನ್ನತ ಸ್ಥಾನದಲ್ಲಿದ್ದರು ಇಬ್ಬರು ಜನರೊಂದಿಗೆ ಸುಲಭವಾಗಿ ಬೆರೆತು ಹೋಗುತ್ತಾರೆ. ಇಂಜಿನಿಯರಿಂಗ್ ಮಾಡಿರುವ ಕಾರಣ ಇಬ್ಬರಿಗೂ ಉತ್ತಮ ತಂತ್ರಜ್ಞಾನದ ಬಗ್ಗೆ ಹೆಚ್ಚು ತಿಳಿದಿದೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಸಖತ್ ಆ್ಯಕ್ಟೀವ್ ಇದ್ದು, ಜೀವನದಲ್ಲಿ ಉತ್ತಮ ಸ್ಥಾನದಲ್ಲಿದ್ದಾರೆ. ಸದ್ಯ ಈ ಐಪಿಎಸ್-ಐಎಎಸ್ ಲವ್ ಸ್ಟೋರಿ ಹಲವರಿಗೆ ಸ್ಫೂರ್ತಿಯಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.