NEWS

Vinesh Phogat: ಕೋಟ್ಯಾಂತರ ಭಾರತೀಯರ ಕನಸು ಭಗ್ನ! ಕೊನೆಗೂ ವಿನೇಶ್‌ಗೆ ದಕ್ಕದ ಪದಕ

ವಿನೇಶ್ ಫೋಗಟ್‌ಗೆ ನಿರಾಸೆ ಭಾರತೀಯ ಕ್ರೀಡಾಪಟು ವಿನೇಶ್ ಫೋಗಟ್ (Vinesh Phogat) ಒಲಿಂಪಿಕ್ಸ್‌ನ ಮಹಿಳೆಯರ 50ಕಜಿ ಫ್ರೀ ಸ್ಟೈಲ್ (Free Style) ಕುಸ್ತಿ (Wrestling) ವಿಭಾಗದಲ್ಲಿ ಫೈನಲ್ (Final) ಪ್ರವೇಶಿಸುವ ಮೂಲಕ ಜಗತ್ತು ತನ್ನತ್ತ ತಿರುಗಿ ನೋಡುವಂತಾ ಸಾಧನೆ ಮಾಡಿದ್ದರು. ಇನ್ನೇನು ಭಾರತಕ್ಕೆ ಬೆಳ್ಳಿ ಅಥವಾ ಚಿನ್ನದ ಪದಕ ಖಚಿತ ಎನ್ನುತ್ತಿರುವಾಗಲೇ ಅವರನ್ನು ಫೈನಲ್ ಪಂದ್ಯದಿಂದ ಅವರನ್ನು ಅನರ್ಹಗೊಳಿಸಿ ಆದೇಶ ಹೊರಡಿಸಲಾಯಿತು. ಅವರು 50 ಕೆಜಿಗಿಂತಲೂ 100 ಗ್ರಾಮ್ ತೂಕ ಹೆಚ್ಚಿದ್ದಾರೆ ಎಂದು ಅವರನ್ನು ಫೈನಲ್‌ ಪಂದ್ಯದಲ್ಲಿಅನರ್ಹಗೊಳಿಸಲಾಯಿತು. ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಮೇಲ್ಮನವಿ ಭಾರತೀಯ ಕುಸ್ತಿ ತಾರೆ ವಿನೇಶ್ ಫೋಗಟ್ ಈ ಅನರ್ಹತೆಯನ್ನು ಪ್ರಶ್ನಿಸಿ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ(ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದರು. ಅಂತಿಮವಾಗಿ ತಮಗೆ ಬೆಳ್ಳಿ ಪದಕವನ್ನಾದರೂ ನೀಡಬೇಕೆಂದು ಕೋರಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಫೋಗಟ್ ಅನರ್ಹತೆಯನ್ನು ಎತ್ತಿಹಿಡಿದಿದ್ದಾರೆ. ಆ ಮೂಲಕ ನ್ಯಾಯಾಲದಲ್ಲಿ ಆದರೂ ಭಾರತಕ್ಕೆ ಇನ್ನೊಂದು ಪದಕ ಸಿಗಲಿದೆ ಎಂದು ನಂಬಿಕೊಂಡಿದ್ದ ಕೋಟ್ಯಾಂತರ ಭಾರತೀಯರ ಪದಕದ ಕನಸು ನುಚ್ಚು ನೂರಾಗಿದೆ. ಅನರ್ಹತೆ ಕ್ರಮ ಎತ್ತಿ ಹಿಡಿದ ಸಿಎಎಸ್ ಒಲಿಂಪಿಕ್ಸ್ ಇತಿಹಾಸದಲ್ಲೇ ಫ್ರೀ ಸ್ಟೈಲ್ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ ಮೊದಲ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಫೋಗಟ್ ಅವರು ನೂರು ಗ್ರಾಮ್ ತೂಕ ಹೆಚ್ಚಿದ್ದಾರೆ ಎಂದು ಫೈನಲ್‌ ಪಂದ್ಯಕ್ಕೆ ಮುನ್ನ ಅನರ್ಹಗೊಳಿಸಿ ಆದೇಶ ಹೊರಡಿಸಲಾಗಿತ್ತು. ಈ ಕುರಿತು ಇಂದು (ಆಗಸ್ಟ್ 14ರಂದು) ತೀರ್ಪು ಪ್ರಕಟಿಸಿರುವ ಅಂತಾರಾಷ್ಟ್ರೀಯ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ ಅನರ್ಹತೆ ಕ್ರಮವನ್ನು ಎತ್ತಿ ಹಿಡಿದಿದೆ. ಸಾರ್ಹಾ ಅನ್ ಹಿಲ್ಡರ್‌ಬ್ರಾಂಟ್ ವಿರುದ್ಧ ಸೆಣಸಬೇಕಿದ್ದ ಫೋಗಟ್ ಅಮೆರಿಕದ ಸಾರ್ಹಾ ಅನ್ ಹಿಲ್ಡರ್‌ಬ್ರಾಂಟ್ ವಿರುದ್ಧ ತನ್ನ ಫೈನಲ್ ಪಂದ್ಯಕ್ಕಿಂತ ಮೊದಲು ಬುಧವಾರ ಬೆಳಗ್ಗೆ 100 ಗ್ರಾಂ ತೂಕ ಹೆಚ್ಚಳವಾಗಿದ್ದಕ್ಕೆ ಅನರ್ಹಗೊಳಿಸಿರುವುದನ್ನು ಪ್ರಶ್ನಿಸಿ ವಿನೇಶ್ ಸಲ್ಲಿಸಿರುವ ಮೇಲ್ಮನವಿಯನ್ನು ನ್ಯಾಯಾಲಯ ಸ್ವೀಕರಿಸಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದೆ. ಈ ಮೂಲಕ ಭಾರತ ಈ ಸಾಲಿನ ಒಲಿಂಪಿಕ್ಸ್‌ನಲ್ಲಿ 5 ಕಂಚು 1 ಬೆಳ್ಳಿ ಸೇರಿ 6 ಪದಕಗಳನ್ನು ಪಡೆಯುವ ಮೂಲಕ ಒಲಿಂಪಿಕ್ಸ್‌ನಲ್ಲಿ 71ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.