NEWS

Bengaluru: ಬಾಡಿ ಮಸಾಜ್‌ಗೆ ಆನ್ಲೈನ್‌ನಲ್ಲಿ ಯುವತಿಯ ಬುಕ್ಕಿಂಗ್, ಆಕೆ ಬರ್ತಿದ್ದಂತೆ ಮಾಡಿದ್ದು ಮಣ್ಣು ತಿನ್ನೋ ಕೆಲಸ!

ಆರೋಪಿ ಜೊತೆ ಸಾಂದರ್ಭಿಕ ಚಿತ್ರ ವರದಿ: ಮಂಜುನಾಥ್, ಕ್ರೈಂ ವರದಿಗಾರ ಬೆಂಗಳೂರು: ಮಸಾಜ್ (Body Massage) ಮಾಡುತ್ತೇವೆ ಎಂದು ಅನ್ಲೈನ್‌ನಲ್ಲಿ ಬುಕ್ ಮಾಡಿ ಯುವತಿಯಿಂದ ಲಕ್ಷಾಂತರ ರೂಪಾಯಿ ಸುಲಿಗೆ ಮಾಡಿರುವ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ‌ಯನ್ನು ಮಹೇಂದ್ರ ಕುಮಾರ್(33) ಎಂದು ಗುರುತಿಸಲಾಗಿದ್ದು, ಈತ ಪೊಲೀಸ್ ಎಂದು ಹೇಳಿ ಯುವತಿಯಿಂದ ಸುಲಿಗೆ ಮಾಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಆರೋಪಿ ಮಹೇಂದ್ರ ಕುಮಾರ್ ಮಸಾಜ್‌ಗಾಗಿ ಮಹಿಳಾ ಥೆರಪಿಸ್ಟ್ ಅನ್ನು ಅನ್ಲೈನ್‌ನಲ್ಲಿ ಬುಕ್ ಮಾಡಿದ್ದ. ಬಳಿಕ ಯುವತಿಯಿಂದ ಪೊಲೀಸ್ ಎಂದು ಹೇಳಿ 1.5 ಲಕ್ಷ ಸುಲಿಗೆ ಮಾಡಿದ್ದಾನೆ ಎಂದು ಹೇಳಲಾಗಿದೆ. ಇದನ್ನೂ ಓದಿ: Trending News: ಪಾಠ ಮಾಡೋ ಶಾಲೆಯಲ್ಲೇ ಹೆಡ್‌ ಮಾಸ್ಟರ್‌-ಶಿಕ್ಷಕಿಯ ಕಾಮದಾಟ! ರಾಸಲೀಲೆಯ ವಿಡಿಯೋ ವೈರಲ್! ಆನ್‌ಲೈನ್‌ನಲ್ಲಿ ಬುಕ್ ಮಾಡುವಾಗ ತನ್ನ ಹೆಸರನ್ನ ಸುರೇಶ್ ಎಂದು ನೀಡಿದ್ದ ಆರೋಪಿ ಯುವತಿಯನ್ನು ರಾಮಮೂರ್ತಿ ನಗರದ ಅಪಾರ್ಟ್ಮೆಂಟ್ ಬಳಿ ಕರೆಸಿಕೊಂಡು ಪಿಕ್ ಅಪ್ ಮಾಡಿದ್ದಾನೆ. ನಂತರ ತನ್ನ ಕಾರಿನಲ್ಲಿ ಯುವತಿಯನ್ನ ಕರೆದು ಕೊಂಡು ಹೋಗಿ ಪೊಲೀಸ್ ಅಂತೇಳಿ ಬೆದರಿಕೆ ಹಾಕಿದ್ದಾನೆ. ಅಷ್ಟೇ ಅಲ್ಲದೇ, ನೀವು ಅನೈತಿಕ ಚಟುವಟಿಕೆ ನಡೆಸುತ್ತಿದ್ದು, ಕೇಸ್ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಆರೋಪಿ ಮಹೇಂದ್ರ ಕುಮಾರ್‌ನ ಬೆದರಿಕೆಗೆ ಹೆದರಿದ ಯುವತಿ ತನ್ನ ಸ್ನೇಹಿತನಿಂದ ಹಣ ಪಡೆದು 1.5 ಲಕ್ಷ ಹಣ ಹಾಕಿದ್ದಾಳೆ. ಬಳಿಕ ರಾತ್ರಿಯಿಡೀ ಕಾರಿನಲ್ಲಿ ಯುವತಿಯನ್ನ ಸುತ್ತಾಡಿಸಿದ್ದ ಆರೋಪಿ ನಂತರ ಆಕೆಯನ್ನು ಏರ್ಪೋರ್ಟ್ ಬಳಿ ಇಳಿಸಿ ಕೂಡಲೇ ಸ್ವಂತ ಊರಿಗೆ ಹೋಗುವಂತೆ ಬೆದರಿಕೆ ಹಾಕಿ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂಬಂಧ ಯುವತಿ ರಾಮಮೂರ್ತಿ ನಗರ ಠಾಣೆಗೆ ಆಗಮಿಸಿ ದೂರು ನೀಡಿದ್ದಾಳೆ. ಯುವತಿ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಮಹೇಂದ್ರ ಕುಮಾರ್‌ನನ್ನ ಬಂಧಿಸಿದ್ದಾರೆ. ಆತನ ವಿರುದ್ಧ ಈ ಹಿಂದೆಯೂ ಮಾರತಹಳ್ಳಿ, ಪುಲಕೇಶಿನಗರ ಸೇರಿ ಕೆಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದು ಈ ವೇಳೆ ತಿಳಿದು ಬಂದಿದೆ. ಬೆಂಗಳೂರಿನಲ್ಲಿ ನಿಲ್ಲದ ಆಟೋ ಚಾಲಕರ ಪುಂಡಾಟ! ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚುತ್ತಿದ್ದು, ಕೊಲೆ, ಕಳ್ಳತನ, ದರೋಡೆ, ಹೊಡೆದಾಟದಿಂದ ಸಾಮಾನ್ಯ ಜನರಿಗೆ ರಕ್ಷಣೆಯೇ ಇಲ್ವಾ ಎಂಬಂತೆ ಮಾತನಾಡಿಕೊಳ್ಳುವಂತಾಗಿದೆ. ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ನಗರದ ಪುಂಡು ಪೋಕರಿಗಳಿಂದ ಹೈರಾಣಾಗಿದ್ದಾರೆ. ಇದೀಗ ಇಂತಹದೇ ಘಟನೆಯೊಂದು ಜಾಲಹಳ್ಳಿಯ ಶೆಟ್ಟಿಹಳ್ಳಿ ಸಮೀಪ ಮಲ್ಲಸಂದ್ರ ಮುಖ್ಯರಸ್ತೆಯಲ್ಲಿ ನಡೆದಿದ್ದು, ರಸ್ತೆಯಲ್ಲಿದ್ದ ನೀರು ಹಾರಿತು ಎಂಬ ಕಾರಣಕ್ಕೆ ಕಿಡಿಗೇಡಿಗಳು ಕಾರಿನ‌ ಮೇಲೆ ಕಲ್ಲು ಎತ್ತು ಹಾಕಿದ ಘಟನೆ ನಡೆದಿದೆ. ಹೊಟ್ಟೆಪಾಡಿಗಾಗಿ ದುಡಿದು ನಿನ್ನೆ ಸಂಜೆ ಡ್ಯೂಟಿ ಮುಗಿಸಿ ಹೋಗುತ್ತಿದ್ದ ಕ್ಯಾಬ್ ಡ್ರೈವರ್‌ ಅನ್ನು ತಡೆದ ಆಟೋದಲ್ಲಿದ್ದ ಪುಂಡರು ಆತನ ಕಾರ್‌ಗೆ ಕಲ್ಲು ಎತ್ತಿ ಹಾಕಿ ಗೂಂಡಾಗಿರಿ ನಡೆಸಿದ ಘಟನೆ ನಡೆದಿದೆ. ಕ್ಯಾಬ್ ಚಾಲಕ ಮಲ್ಲಿಕಾರ್ಜುನ್ ಎಂಬುವರು ಸಂಜೆ ಡ್ಯೂಟಿ ಮುಗಿಸಿ ಮನೆಗೆ ಹೋಗ್ತಿದ್ದರು. ಈ ವೇಳೆ ಜಾಲಹಳ್ಳಿಯ ಅಯ್ಯಪ್ಪ ಸ್ವಾಮಿ ದೇಗುಲದ ಬಳಿ ರಸ್ತೆಯಲ್ಲಿದ್ದ ನೀರು ಆಟೋ ಮೇಲೆ ಸಿಡಿದಿದೆ. ಇದೇ ವಿಚಾರಕ್ಕೆ ಕಿರಿಕ್ ಮಾಡಿದ್ದ ಆಟೋ ಚಾಲಕ ಮತ್ತು ಆತನ ಸ್ನೇಹಿತ ಮಲ್ಲಿಕಾರ್ಜುನ್ ಜೊತೆ ಕ್ಯಾತೆ ತೆಗೆದಿದ್ದಾರೆ. ಇದನ್ನೂ ಓದಿ: Optical Illusion: ಈ ಫೋಟೋದಲ್ಲಿ S ಗುಂಪಿನ ಮಧ್ಯೆ ಬೆಸ ಸಂಖ್ಯೆ ಅಡಗಿದೆ, ಜಸ್ಟ್ 15 ಸೆಕೆಂಡ್‌ಗಳಲ್ಲಿ ಕಂಡು ಹಿಡಿದ್ರೆ ನೀವು ಗ್ರೇಟ್! ಕ್ಯಾಬ್ ಚಾಲಕ ಆಟೋ ತೊಳೆದು ಕೊಡ್ತೀನಿ ಅಂದರೂ ಸಹ ಆಟೋ ಚಾಲಕ ಮತ್ತು ಆತನ ಜೊತೆಗಿದ್ದವನು ಪುಂಡಾಟ ನಡೆಸಿದ್ದು, ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಗ್ಲಾಸ್ ಒಡೆದು ಹಾಕಿದ್ದಾರೆ. ನಿನ್ನೆ ಸಂಜೆ ಈ ಘಟನೆ ನಡೆದಿದ್ದು, ಕಾರಿನ ಮೇಲೆ ಕಲ್ಲು ಎತ್ತಿ ಹಾಕಿ ಗ್ಲಾಸ್ ಒಡೆದು ಹಾಕಿದ್ದಾರೆ. ಬೆಂಗಳೂರಿನಲ್ಲಿ ಹೊಟ್ಟೆಪಾಡಿಗಾಗಿ ಓಲಾ-ಊಬರ್ ಓಡಿಸಿಕೊಂಡಿದ್ದ ಮಲ್ಲಿಕಾರ್ಜುನ್ ಅವರ ಕಾರ್ ಗ್ಲಾಸ್ ಒಡೆದು ಇದೀಗ ದುಡಿಯದಂತಾಗಿದೆ. ಸದ್ಯ ಜಾಲಹಳ್ಳಿ ಪೊಲೀಸರಿಂದ ಆಟೋ ಚಾಲಕನಿಗಾಗಿ ಹುಡುಕಾಟ ನಡೆಸಲಾಗ್ತಿದೆ. ಪೊಲೀಸರು ಈ ಪ್ರಕರಣವನ್ನು ಎಷ್ಟರ ಮಟ್ಟಿಗೆ ಗಂಭೀರವಾಗಿ ಪರಿಗಣಿಸಿದ್ದಾರೆ ಅನ್ನೋದು ಇನ್ನಷ್ಟೇ ತಿಳಿದು ಬರಬೇಕಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.