NEWS

Rice: ದೇಶದಲ್ಲಿ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ಟಾಪ್‌ 7 ರಾಜ್ಯಗಳಿವು! ಕರ್ನಾಟಕ ಲಿಸ್ಟ್‌ನಲ್ಲೇ ಇಲ್ಲ!

ಸಾಂದರ್ಭಿಕ ಚಿತ್ರ ನಮ್ಮಲ್ಲಿ ಅಕ್ಕಿ ಅಥವಾ ಅನ್ನವು ಅನೇಕ ಪಾಕಪದ್ಧತಿಗಳಲ್ಲಿ ಪ್ರಧಾನ ಆಹಾರವಾಗಿದೆ. ವಿಶ್ವದ ಅತಿಹೆಚ್ಚು ಅಕ್ಕಿ ಉತ್ಪಾದಕ ದೇಶಗಳಲ್ಲಿ ಭಾರತವೂ ಒಂದು. ಇಲ್ಲಿನ ಹಲವು ರಾಜ್ಯಗಳು ಇದಕ್ಕೆ ಕೊಡುಗೆ ನೀಡುತ್ತವೆ. ಅಂಥ ಪ್ರತಿಯೊಂದು ರಾಜ್ಯವು ವಿಶಿಷ್ಟವಾದ ಹವಾಮಾನ ಪರಿಸ್ಥಿತಿಗಳು, ಅಧಿಕೃತ ಕೃಷಿ ಪದ್ಧತಿಗಳು ಮತ್ತು ಮಣ್ಣಿನ ಗುಣಮಟ್ಟವನ್ನು ಒಳಗೊಂಡಿದೆ ಅನ್ನೋದು ವಿಶೇಷ. ಅತಿಹೆಚ್ಚು ಅಕ್ಕಿ ಉತ್ಪಾದಿಸುವ ಭಾರತದ ಪ್ರಮುಖ 7 ರಾಜ್ಯಗಳ ವಿವರಗಳನ್ನು, ಅಲ್ಲಿನ ಹವಾಮಾನ ಹಾಗೂ ಅಕ್ಕಿ ಉತ್ಪಾದನೆಯ ವಿವರಗಳನ್ನು ಇಲ್ಲಿ ನೀಡಲಾಗಿದೆ. 1. ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳವು ಭಾರತದ ಅತಿದೊಡ್ಡ ಅಕ್ಕಿ-ಉತ್ಪಾದಿಸುವ ರಾಜ್ಯವಾಗಿ ಅಗ್ರ ಸ್ಥಾನ ಪಡೆದಿದೆ. ಇದು ವಾರ್ಷಿಕವಾಗಿ ಸುಮಾರು 15 ಮಿಲಿಯನ್ ಮೆಟ್ರಿಕ್ ಟನ್‌ಗಳಷ್ಟು ಅಕ್ಕಿಯನ್ನು ಉತ್ಪಾದಿಸುತ್ತದೆ. ಉಷ್ಣ, ಆರ್ದ್ರ ಬೇಸಿಗೆ ಮತ್ತು ಜೂನ್‌ನಿಂದ ಸೆಪ್ಟೆಂಬರ್‌ವರೆಗಿನ ಮಳೆಗಾಲದೊಂದಿಗೆ ಈ ರಾಜ್ಯವು ದೊಡ್ಡ ಪ್ರಮಾಣದ ಅಕ್ಕಿ ಬೆಳೆಯುತ್ತದೆ. ಅದರಲ್ಲೂ ಪಶ್ಚಿಮ ಬಂಗಾಳವು ಅಮನ್, ಬೋರೋ ಮತ್ತು ಔಸ್‌ನಂತಹ ವಿವಿಧ ರೀತಿಯ ಭತ್ತವನ್ನು ಬೆಳೆಯಲು ಹೆಸರುವಾಸಿಯಾಗಿದೆ. 2. ಉತ್ತರ ಪ್ರದೇಶ : ಉತ್ತರ ಪ್ರದೇಶವು ಬೇಸಿಗೆ ಮತ್ತು ಮಳೆಗಾಲವನ್ನು ಹೆಚ್ಚಾಗಿ ಅನುಭವಿಸುತ್ತದೆ. ಇಲ್ಲಿನ ರೈತರು ದೀರ್ಘ ಧಾನ್ಯ ಮತ್ತು ಕಿರು ಧಾನ್ಯದ ಭತ್ತದ ತಳಿಗಳನ್ನು ಬೆಳೆಯುತ್ತಾರೆ. ಉತ್ತರ ಪ್ರದೇಶವು ವಾರ್ಷಿಕವಾಗಿ ಸುಮಾರು 14 ಮಿಲಿಯನ್ ಮೆಟ್ರಿಕ್ ಟನ್ ಅಕ್ಕಿಯನ್ನು ನೀಡುತ್ತದೆ. ಇದು ದೇಶದ ಅಕ್ಕಿ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. 3. ಪಂಜಾಬ್ : ಪಂಜಾಬ್‌ನ ಹವಾಮಾನವು ಅರೆ-ಶುಷ್ಕದಿಂದ ಉಪ-ಉಷ್ಣವಲಯದವರೆಗೆ ಬದಲಾಗುತ್ತದೆ. ಬಿರು ಬೇಸಿಗೆ ಮತ್ತು ಶೀತ ಚಳಿಗಾಲ ಇಲ್ಲಿರುತ್ತದೆ. ಪಂಜಾಬ್‌ ಮುಖ್ಯವಾಗಿ ಉತ್ತಮ ಗುಣಮಟ್ಟದ ಬಾಸ್ಮತಿ ಅಕ್ಕಿಯನ್ನು ಬೆಳೆಯಲು ಹೆಸರುವಾಸಿಯಾಗಿದೆ. ಬಾಸ್ಮತಿ ಅಕ್ಕಿಯು ವಿಶಿಷ್ಟವಾದ ಸುವಾಸನೆ ಮತ್ತು ಉದ್ದ ಧಾನ್ಯಗಳಿಗೆ ಹೆಸರುವಾಸಿಯಾಗಿದೆ. ಅಂದಹಾಗೆ ಪಂಜಾಬ್ ಪ್ರತಿ ವರ್ಷ ಸರಿಸುಮಾರು 12 ಮಿಲಿಯನ್ ಮೆಟ್ರಿಕ್ ಟನ್ ಅಕ್ಕಿಯನ್ನು ಉತ್ಪಾದಿಸುತ್ತದೆ. 4. ಆಂಧ್ರಪ್ರದೇಶ : ಬೇಸಿಗೆಯ ಉಷ್ಣವಲಯದ ಹವಾಮಾನ ಮತ್ತು ಮಾನ್ಸೂನ್ ಋತುವಿನೊಂದಿಗೆ ಆಂಧ್ರಪ್ರದೇಶವು ಭಾರತದಲ್ಲಿ ದೊಡ್ಡ ಅಕ್ಕಿ ಉತ್ಪಾದಕ ರಾಜ್ಯಗಳಲ್ಲಿ ಒಂದಾಗಿದೆ. ಇಲ್ಲಿ ವಿವಿಧ ರೀತಿಯ ಅಕ್ಕಿಯನ್ನು ಬೆಳೆಯಲಾಗುತ್ತದೆ. ಆಂಧ್ರವು ದೇಶದ ಅಕ್ಕಿ ಉತ್ಪಾದನೆಗೆ ವಾರ್ಷಿಕವಾಗಿ ಸುಮಾರು 11 ಮಿಲಿಯನ್ ಮೆಟ್ರಿಕ್ ಟನ್ ಕೊಡುಗೆ ನೀಡುತ್ತದೆ. ಇದನ್ನೂ ಓದಿ: 10 ವರ್ಷ ಕಷ್ಟಪಟ್ಟು ಸಿಎ ಪಾಸ್​ ಮಾಡಿದ ಚಾಯ್​ವಾಲಾನ ಮಗಳು! ತಂದೆ-ಮಗಳ ಭಾವುಕ ವಿಡಿಯೋ ವೈರಲ್ 5. ತೆಲಂಗಾಣ : ತೆಲಂಗಾಣವು ಬಿರು ಬೇಸಿಗೆ ಮತ್ತು ಮಾನ್ಸೂನ್ ಋತುವಿನೊಂದಿಗೆ ಅರೆ-ಶುಷ್ಕ ಉಷ್ಣವಲಯದ ಹವಾಮಾನವನ್ನು ಹೊಂದಿದೆ. ಇದು ಪ್ರತಿ ವರ್ಷ ಸುಮಾರು 7.5 ಮಿಲಿಯನ್ ಮೆಟ್ರಿಕ್ ಟನ್ ಅಕ್ಕಿಯನ್ನು ಉತ್ಪಾದಿಸುತ್ತದೆ. ಈ ರಾಜ್ಯವು ಉತ್ತಮ ನೀರು ನಿರ್ವಹಣಾ ತಂತ್ರಗಳ ಮೂಲಕ ಅಕ್ಕಿ ಉತ್ಪಾದಕತೆಯನ್ನು ಹೆಚ್ಚಿಸುವುದರ ಮೇಲೆ ಕೇಂದ್ರೀಕರಿಸುತ್ತದೆ. 6. ಬಿಹಾರ : ಬಿಹಾರದ ಹವಾಮಾನವು ಸಾಮಾನ್ಯವಾಗಿ ತೀವ್ರ ಬೇಸಿಗೆ ಮತ್ತು ಮಾನ್ಸೂನ್ ಋತುವನ್ನು ಒಳಗೊಂಡಿರುತ್ತದೆ. ಇದು ಸುಗಂಧಭರಿತ ಭತ್ತದ ತಳಿಗಳನ್ನು ಬೆಳೆಯಲು ಸೂಕ್ತವಾಗಿದೆ. ಬಿಹಾರವು ವಾರ್ಷಿಕವಾಗಿ ಸುಮಾರು 7 ಮಿಲಿಯನ್ ಮೆಟ್ರಿಕ್ ಟನ್ ಅಕ್ಕಿಯನ್ನು ಉತ್ಪಾದಿಸುತ್ತದೆ. ಕೃಷಿ ವಿಧಾನಗಳನ್ನು ಸುಧಾರಿಸಲು ಸತತ ಪ್ರಯತ್ನಗಳನ್ನು ಮಾಡುವುದರೊಂದಿಗೆ ದೇಶದ ಅಕ್ಕಿ ಉತ್ಪಾದನೆಯಲ್ಲಿ ಈ ರಾಜ್ಯ ಪ್ರಮುಖ ಪಾತ್ರ ವಹಿಸುತ್ತದೆ. 7. ತಮಿಳುನಾಡು : ತಮಿಳುನಾಡು ವೈವಿಧ್ಯಮಯ ಹವಾಮಾನವನ್ನು ಹೊಂದಿದೆ. ಇದು ಬಿಸಿ ಬೇಸಿಗೆ ಮತ್ತು ಜೂನ್‌ನಿಂದ ಸೆಪ್ಟೆಂಬರ್‌ ವರೆಗೆ ಮಾನ್ಸೂನ್ ಋತುವನ್ನು ಒಳಗೊಂಡಿರುತ್ತದೆ. ಈ ರಾಜ್ಯವು ವಾರ್ಷಿಕವಾಗಿ ಸುಮಾರು 5 ಮಿಲಿಯನ್ ಮೆಟ್ರಿಕ್ ಟನ್ ಅಕ್ಕಿಯನ್ನು ಉತ್ಪಾದಿಸುತ್ತದೆ. ಅದರಲ್ಲೂ ಮುಖ್ಯವಾಗಿ ಸಾಂಬಾ, ಪೊನ್ನಿ ಮತ್ತು ಬಾಸ್ಮತಿಯಂತಹ ಪ್ರಭೇದಗಳನ್ನು ಇಲ್ಲಿ ಬೆಳೆಯಲಾಗುತ್ತದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.