NEWS

WTC Point Table: ಬಾಂಗ್ಲಾದೇಶದ ವಿರುದ್ಧ ಹೀನಾಯ ಸೋಲು! 17 ಗಂಟೆಗಳಲ್ಲಿ 2 ಬಾರಿ WTC ಅಂಕಪಟ್ಟಿಯಲ್ಲಿ ಕುಸಿದ ಪಾಕ್!

ಪಾಕಿಸ್ತಾನ ತಂಡ ಭಾನುವಾರ ಅಂತ್ಯಗೊಂಡ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ತಂಡ ಪಾಕಿಸ್ತಾನವನ್ನು(Pakistan vs Bangladesh) 10 ವಿಕೆಟ್‌ಗಳಿಂದ ಸೋಲಿಸಿ ಇತಿಹಾಸ ನಿರ್ಮಿಸಿದೆ. ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ 14 ಟೆಸ್ಟ್ ಪಂದ್ಯಗಳಲ್ಲಿ ಮೊದಲ ಜಯ ಸಾಧಿಸಿದೆ. ವಿದೇಶಿ ನೆಲದಲ್ಲಿ ಇದು ಅವರ ಏಳನೇ ಗೆಲುವು. 2022ರಲ್ಲಿ ನ್ಯೂಜಿಲೆಂಡ್ (New Zealand) ತಂಡವನ್ನು ಅವರದ್ದೇ ನೆಲದಲ್ಲಿ ಸೋಲಿಸಿದ ನಂತರ ವಿದೇಶಿ ನೆಲದಲ್ಲಿ ಸಿಕ್ಕಂತಹ ಬಾಂಗ್ಲಾದೇಶದ ಮೊದಲ ಗೆಲುವು ಇದಾಗಿದೆ. ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಸೋತ ನಂತರ, ಪಾಕಿಸ್ತಾನ ತಂಡವು 2023-25ರ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಪಾಯಿಂಟ್‌ಗಳ ಪಟ್ಟಿಯಲ್ಲಿಯೂ (WTC Point Table) ಪಾಕಿಸ್ತಾನ ತಂಡ ಎಂಟನೇ ಸ್ಥಾನಕ್ಕೆ ಕುಸಿದಿದೆ. ಅದ್ಭುತ ಗೆಲುವಿನೊಂದಿಗೆ ಬಾಂಗ್ಲಾದೇಶವು ಡಬ್ಲ್ಯುಟಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಜಂಟಿ ಐದನೇ ಸ್ಥಾನವನ್ನು ತಲುಪಿದೆ. 17 ಗಂಟೆಗಳಲ್ಲಿ 2 ಬಾರೀ ಆಘಾತ ಪಾಕಿಸ್ತಾನ ಕ್ರಿಕೆಟ್ ತಂಡವು ಮೊದಲ ಟೆಸ್ಟ್ ಪಂದ್ಯದ ಆರಂಭದ ಮೊದಲು WTC ಪಾಯಿಂಟ್ಸ್ ಟೇಬಲ್​ನಲ್ಲಿ ಆರನೇ ಸ್ಥಾನದಲ್ಲಿತ್ತು. ಶನಿವಾರ ರಾತ್ರಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಶ್ರೀಲಂಕಾವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಇದು ಪಾಕಿಸ್ತಾನದ ಮೇಲೆ ನೇರ ಪರಿಣಾಮ ಬೀರಿದ್ದು, ಪಾಕಿಸ್ತಾನ ತಂಡ 6ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಕುಸಿದಿತ್ತು. ಇದೀಗ ಬಾಂಗ್ಲಾದೇಶ ವಿರುದ್ಧ ಸೋತ ನಂತರ ಶಾನ್ ಮಸೂದ್ ಸಾರಥ್ಯದ ತಂಡ 7ನೇ ಸ್ಥಾನದಿಂದ 8ನೇ ಸ್ಥಾನಕ್ಕೆ ಕುಸಿದಿದೆ. ಅಂದರೆ ಕಳೆದ ಹದಿನೇಳು ಗಂಟೆಗಳಲ್ಲಿ ಡಬಲ್​ ನಷ್ಟ ಅನುಭವಿಸಿದೆ. ಪಾಕಿಸ್ತಾನ ಈ ಆವೃತ್ತಿಯಲ್ಲಿ 6 ಪಂದ್ಯಗಳಲ್ಲಿ ಎರಡರಲ್ಲಿ ಮಾತ್ರ ಗೆದ್ದಿದೆ. 4 ಪಂದ್ಯಗಳಲ್ಲಿ ಸೋತಿದೆ. ಅಗ್ರಸ್ತಾನದಲ್ಲಿ ಭಾರತ ತಂಡ ಪಾಕಿಸ್ತಾನವು 30.56 ಪಿಸಿಟಿಯೊಂದಿಗೆ ಎಂಟನೇ ಸ್ಥಾನದಲ್ಲಿದೆ ಕೊನೆ ಸ್ಥಾನದಲ್ಲಿರುವ ವೆಸ್ಟ್ ಇಂಡೀಶ್​ 18.5 ಪಿಸಿಟಿ ಹೊಂಇದೆ. ಬಾಂಗ್ಲಾದೇಶ 5 ಪಂದ್ಯಗಳಲ್ಲಿ 2 ರಲ್ಲಿ ಗೆದ್ದಿದ್ದರೆ ಮೂರರಲ್ಲಿ ಸೋತಿದೆ. ನಜ್ಮುಲ್ ಹುಸೇನ್ ಶಾಂಟೊ ನಾಯಕತ್ವದ ಬಾಂಗ್ಲಾದೇಶ ತಂಡವು 40.00 PCT ಯೊಂದಿಗೆ ಶ್ರೀಲಂಕಾದ ಜೊತೆ ಜಂಟಿ 5 ನೇ ಸ್ಥಾನವನ್ನು ತಲುಪಿದೆ. ಭಾರತ ತಂಡ 9 ಟೆಸ್ಟ್‌ಗಳಲ್ಲಿ 6ರಲ್ಲಿ ಗೆದ್ದಿದ್ದರೆ, 2ರಲ್ಲಿ ಸೋಲು ಕಂಡಿದ್ದು, ಒಂದು ಟೆಸ್ಟ್‌ ಡ್ರಾ ಆಗಿದೆ. ಟೀಮ್ ಇಂಡಿಯಾ 68.52 PCT ಯೊಂದಿಗೆ ಮೊದಲ ಸ್ಥಾನದಲ್ಲಿದೆ. ತವರಲ್ಲೇ 5 ಟೆಸ್ಟ್‌ಗಳಲ್ಲಿ ಸೋಲು 2021ರಲ್ಲಿ ರಾವಲ್ಪಿಂಡಿಯಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ ನಂತರ ಪಾಕಿಸ್ತಾನ ತನ್ನ ನೆಲದಲ್ಲಿ 9 ಟೆಸ್ಟ್​ ಪಂದ್ಯಗಳನ್ನಾಡಿದ್ದು, ಒಂದೂ ಟೆಸ್ಟ್ ಪಂದ್ಯವನ್ನು ಗೆದ್ದಿಲ್ಲ. ಐದು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡರೆ, ನಾಲ್ಕು ಪಂದ್ಯಗಳು ಡ್ರಾದಲ್ಲಿ ಕೊನೆಗೊಂಡಿತು. ಪಾಕಿಸ್ತಾನ ಮತ್ತು ಬಾಂಗ್ಲಾದೇಶ ನಡುವಿನ ಎರಡನೇ ಟೆಸ್ಟ್ ಪಂದ್ಯ ಶುಕ್ರವಾರದಿಂದ ರಾವಲ್ಪಿಂಡಿಯಲ್ಲಿ ನಡೆಯಲಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.