NEWS

Paris Olympics: ಅನರ್ಹಗೊಂಡ ವಿನೇಶ್ ಫೋಗಟ್ ತೂಕ ಏರಿದ್ದು ಏಕೆ?; ಅವರು ಸೇವಿಸಿದ್ದು ಏನು ಗೊತ್ತಾ?

ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್‌ನಿಂದ (Paris Olympics) ಕುಸ್ತಿಪಟು (Wrestle) ವಿನೇಶ್ ಫೋಗಟ್ (Vinesh Phogat) ಅನರ್ಹಗೊಂಡ ಸಂಗತಿ ಸದ್ದು ಮಾಡುತ್ತಿದೆ. ವಿನೇಶ್ ಫೋಗಟ್ ಅಧಿಕ ತೂಕ ಹೊಂದಿದ್ದ ಕಾರಣಕ್ಕೆ ಅನರ್ಹಗೊಂಡರು (Disqualified). ಪ್ಯಾರಿಸ್ ಒಲಿಂಪಿಕ್ಸ್ ನ ಮಹಿಳೆಯರ 50 ಕೆಜಿ ವಿಭಾಗದ ಫ್ರೀ ಸ್ಟೈಲ್ ಕುಸ್ತಿಯ ಫೈನಲ್ ಪಂದ್ಯದಿಂದ ಅನರ್ಹಗೊಂಡ ಭಾರತದ ಭರವಸೆಯ ಕುಸ್ತಿಪಟು ವಿನೇಶ್ ಫೋಗಟ್ ಇದ್ದಕ್ಕಿದ್ದಂತೆ ತೂಕ ಹೆಚ್ಚಾಗೋದಕ್ಕೆ ಕಾರಣ ಏನು ಅನ್ನೋದನ್ನ ಈ ಸುದ್ದಿಯಲ್ಲಿ ನೋಡೋಣ. ಅಧಿಕ ತೂಕದ ಕಾರಣಕ್ಕೆ ಅನರ್ಹ ಸೆಮಿಫೈನಲ್ ಬೆಳಗ್ಗೆ ವಿನೇಶ್ ಫೋಗಟ್ 49 ಕೆಜಿ 900 ಗ್ರಾಂ ತೂಕ ಹೊಂದಿದ್ದರು. ವರದಿಗಳ ಪ್ರಕಾರ, ಸೆಮಿಫೈನಲ್ ಪಂದ್ಯದ ನಂತರ ವಿನೇಶ್ ಫೋಗಟ್ ಅವರ ತೂಕ 52.7 ಕೆಜಿ ತಲುಪಿತ್ತು ಎಂದು ಹೇಳಲಾಗಿದೆ. ತನ್ನ ತೂಕ ಇಳಿಸಿಕೊಳ್ಳಲು ಆಕೆ, ರಾತ್ರಿಯಿಡೀ ನಿದ್ರೆ ಮಾಡದೆ ಸ್ಕಿಪ್ಪಿಂಗ್ ಹಾಗೂ ಇನ್ನಿತರ ವ್ಯಾಯಾಮ ಮಾಡಿ ಬೆವರು ಹರಿಸಿದ್ದಾಳೆ. ಕಡೇ ಗಳಿಗೆಯಲ್ಲಿ ತನ್ನ ತಲೆಗೂದಲನ್ನು ತೀರಾ ಶಾರ್ಟ್ ಆಗಿ ಕತ್ತರಿಸಿಕೊಂಡಿದ್ದಾಳೆ. ಅಷ್ಟೇ ಅಲ್ಲ, ತನ್ನ ದೇಹದಿಂದ ಒಂದಿಷ್ಟು ರಕ್ತವನ್ನೂ ಹೊರತಗೆದು ಹಾಕಿದ್ದಾಳೆ. ಆದರೂ, ಆಕೆಯ ತೂಕ 50 ಕೆಜಿಯೊಳಗೆ ಬರಲೇ ಇಲ್ಲ. ಅಮೇರಿಕನ್ ಸಾರಾ ಹಿಲ್ಡೆಬ್ರಾಂಡ್ ವಿರುದ್ಧದ ಚಿನ್ನದ ಪದಕದ ಪಂದ್ಯದ ಬೆಳಿಗ್ಗೆ, 100-ಗ್ರಾಂ ತೂಕ ಹೆಚ್ಚಿದ್ದ ಕಾರಣಕ್ಕೆ ವಿನೇಶ್​ ಫೋಗಟ್ ಅವರನ್ನು ಅನರ್ಹಗೊಳಿಸಲಾಯಿತು. ಇದನ್ನೂ ಓದಿ: ಧೋನಿ ಅಭಿಮಾನಿಗಳಿಗೆ ಗುಡ್​ ನ್ಯೂಸ್! ಮಹಿಗಾಗಿ ಐಪಿಎಲ್ ನಿಯಮ​ಗಳನ್ನೇ ಬದಲಾಯಿಸುತ್ತಿದೆ ಬಿಸಿಸಿಐ ಪದಕ ಸಿಗದೆ ನಿರಾಸೆ ವಿನೇಶ್​ ಫೋಗಟ್ ಅನರ್ಹಗೊಂಡ ಹಿನ್ನೆಲೆ ಸೆಮಿಫೈನಲ್‌ನಲ್ಲಿ ವಿನೇಶ್ 5-0 ಅಂತರದಲ್ಲಿ ಸೋಲಿಸಿದ ಕ್ಯೂಬಾದ ಯುಸ್ನಿಲಿಸ್ ಗುಜ್‌ಮನ್​ ಬೆಳ್ಳಿ ಪದಕ ಪಡೆದ್ರು. ಹಿಲ್ಡೆಬ್ರಾಂಡ್ ಚಿನ್ನ ಗೆದ್ದರೆ, ವಿನೇಶ್ ಪ್ಯಾರಿಸ್‌ನಿಂದ ಬರಿಗೈಯಲ್ಲಿ ಮರಳಬೇಕಾಯಿತು. ವಿನೇಶ್ ಫೋಗಟ್ ಮನವಿ ತಿರಸ್ಕಾರ ತಮ್ಮ ಮೇಲ್ಮನವಿಯಲ್ಲಿ ವಿನೇಶ್, ಕ್ಯೂಬಾದ ಕುಸ್ತಿಪಟು ಯುಸ್ನೆಲಿಸ್ ಗುಜ್ಮಾನ್ ಲೋಪೆಜ್ ಅವರೊಂದಿಗೆ ಜಂಟಿಯಾಗಿ ಬೆಳ್ಳಿ ಪದಕವನ್ನು ನೀಡಬೇಕೆಂದು ಒತ್ತಾಯಿಸಿದ್ದರು. ವಿನೇಶ್ ಅವರು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯದ(ಸಿಎಎಸ್) ಮೇಲ್ಮನವಿ ಸಲ್ಲಿಸಿದ್ದರು ಆದರೆ ಅರ್ಜಿಯನ್ನು ಆಡ್ ಹಾಕ್ ವಿಭಾಗವು ಕಳೆದ ಬುಧವಾರ ವಜಾಗೊಳಿಸಿದೆ. ಸಾಮಾನ್ಯವಾಗಿ 53 ಕೆಜಿ ವಿಭಾಗದಲ್ಲಿ ಸ್ಪರ್ಧಿಸುವ ವಿನೇಶ್, ಅದಾಗಲೇ ಆ ವಿಭಾಗದಲ್ಲಿಆಂಟಿಮ್ ಪಂಗಲ್ ಭಾರತವನ್ನು ಪ್ರತಿನಿಧಿಸಿದ್ದರಿಂದ 50 ಕೆಜಿ ವಿಭಾಗದಲ್ಲಿ ಭಾಗವಹಿಸಲು ನಿರ್ಧಾರ ಮಾಡಿದರು. ಆಂಟಿಮ್ ಅವರು ಟರ್ಕಿಯ ಝೆನೆಪ್ ಯೆಟ್ಗಿಲ್ ವಿರುದ್ಧ 0-10ರಿಂದ ಸೋಲು ಅನುಭವಿಸಿದರು ಎಂದು ವರದಿಗಳ ಮೂಲಕ ತಿಳಿದುಬಂದಿದೆ. ಉತ್ತಮ ಪ್ರದರ್ಶನ ನೀಡಿದ್ದ ವಿನೇಶ್ ವಿನೇಶ್ ಫೋಗಟ್ ಜಪಾನ್‌ನ ಹಾಲಿ ಚಾಂಪಿಯನ್ ಯುಯಿ ಸುಜಾಕಿಯನ್ನು ಸೋಲಿಸುವ ಮೂಲಕ ತಮ್ಮ ಶುಭಾರಂಭ ಪಡೆದ್ರು. ನಂತರ ಫೈನಲ್ ತಲುಪಲು ಎರಡು ಪಂದ್ಯಗಳನ್ನು ಗೆದ್ದು, ಈ ಸಾಧನೆ ಮಾಡಿದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಸ್ಪರ್ಧೆಯ ನಂತರ ವಿನೇಶ್ ಅವರು ಸ್ಪರ್ಧೆಯ ಮಾನದಂಡಕ್ಕಿಂತ 2.7 ಕೆ.ಜಿ ಏರಿಕೆ ಇರುವುದನ್ನು ಕಂಡುಕೊಂಡರು. ವಿನೇಶ್ ಯಾವುದೇ ಸಮಯವನ್ನು ವ್ಯರ್ಥ ಮಾಡದೆ ಹೆಚ್ಚಿನ ತೂಕವನ್ನು ಕಠಿಣ ತಾಲೀಮಿನ ಮೂಲಕ ಕಳೆದುಕೊಳ್ಳಲು ಪ್ರಾರಂಭಿಸಿದರು ಎಂದು ವರದಿಯಾಗಿದೆ. ತಂಡ ಮತ್ತು ತರಬೇತುದಾರರು ತಮ್ಮ ಸಾಮಾನ್ಯ ಪ್ರಕ್ರಿಯೆಯನ್ನು ಪ್ರಾರಂಭಿಸಿದರು. ತೂಕ ಇಳಿಸಿಕೊಳ್ಳಲು ಕಡಿಮೆ ನೀರನ್ನು ಸೇವಿಸಬೇಕಾಗಿತ್ತು. ಆಹಾರವನ್ನೂ ಸೇವಿಸುವಂತಿರಲಿಲ್ಲ. ಎಂದು ಭಾರತದ ಮುಖ್ಯ ವೈದ್ಯಾಧಿಕಾರಿ ಡಾ. ದಿನ್ಶಾ ಪರ್ದಿವಾಲಾ ಹೇಳಿರುವುದಾಗಿ ಎಎನ್‌ಐ ವರದಿ ಮಾಡಿದೆ. ಜ್ಯೂಸು, ಫ್ಲೂಯಿಡ್, ಲೈಟ್ ಸ್ನ್ಯಾಕ್ಸ್ ಅಧಿಕ ತೂಕಕ್ಕೆ ಕಾರಣ ಸ್ಪೋರ್ಟ್‌ಸ್ಟಾರ್‌ನಲ್ಲಿನ ವರದಿಯ ಪ್ರಕಾರ ವಿನೇಶ್ ಮೊದಲ ದಿನ ಬೆಳಗ್ಗೆ ತೂಕದ ನಂತರ ಒಂದು ಲೋಟ ಜ್ಯೂಸ್ ಕುಡಿದರು, ಇದು 300 ಗ್ರಾಂ ಹೆಚ್ಚು ತೂಕಕ್ಕೆ ಕಾರಣವಾಯಿತು. ತಮ್ಮ ಶಕ್ತಿಯನ್ನು ಕಾಪಾಡಿಕೊಳ್ಳಲು ಅವರು ಆಟಕ್ಕೆ ಮೊದಲು ಹಲವಾರು ಲೀಟರ್ ನೀರು ಕುಡಿದರು, ಇದರಿಂದ ಆಕೆಯ ತೂಕ ಸುಮಾರು 2 ಕೆ.ಜಿ ಹೆಚ್ಚಾಯಿತು. ಅವರು ಹಗಲಿನಲ್ಲಿ ತಿಂಡಿಗಳನ್ನು ತಿನ್ನುತ್ತಿದ್ದರು, ಇದರಿಂದ ಅವರ ತೂಕದಲ್ಲಿ ಇನ್ನೂ 700 ಗ್ರಾಂ ಹೆಚ್ಚಾಯಿತು ಎಂದು ತಿಳಿದುಬಂದಿದೆ. ತೂಕ ಕಳೆದುಕೊಳ್ಳಲು ಹರಸಾಹಸ ವರದಿಗಳ ಪ್ರಕಾರ, ಹೆಚ್ಚುವರಿ ತೂಕವನ್ನು ಕಳೆದುಕೊಳ್ಳುವ ಸಲುವಾಗಿ, ವಿನೇಶ್ ಸಾಧ್ಯವಿರುವ ಎಲ್ಲಾ ವಿಧಾನಗಳನ್ನು ಪ್ರಯತ್ನಿಸಿದರು. ಆರು ಗಂಟೆಗಳ ಕಾಲ ಟ್ರೆಡ್‌ಮಿಲ್‌ನಲ್ಲಿ ಓಡಿದ್ದಾರೆ ಎಂದು ವರದಿಯಾಗಿದೆ. ಅವರು ರಾತ್ರಿಯಿಡೀ ನೀರು ಕುಡಿಯದೆ ಅಥವಾ ತಿನ್ನದೆ ಸೋನಾದಲ್ಲಿ ಮೂರು ಗಂಟೆಗಳ ಕಾಲ ಕಳೆದಿದ್ದಾರೆ. ಜೊತೆಗೆ, ಅವರು ಹೆಚ್ಚಿನ ತೀವ್ರತೆಯ ಸ್ಕಿಪ್ಪಿಂಗ್ ತರಬೇತಿಯನ್ನು ಸಹ ನಡೆಸಿದರು. ಈ ಎಲ್ಲಾ ಪ್ರಯತ್ನಗಳ ಹೊರತಾಗಿಯೂ ಅವರು ಅಂದುಕೊಂಡಿದ್ದಷ್ಟು ತೂಕ ಕಳೆದುಕೊಳ್ಳುವಲ್ಲಿ ವಿಫಲರಾದರು ಎಂದು ತಿಳಿದುಬಂದಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.