NEWS

Sandalwood Actor: ಅಮಿತಾಭ್, ರಜನಿ, ವಿಷ್ಣು ದಾದಾಗೆ ಧ್ವನಿಯಾದ ಹೀರೋಗೆ ಇಂದು ಬರ್ತ್​ಡೇ ಸಂಭ್ರಮ! ಈಗ ಅವರ ವಯಸ್ಸೆಷ್ಟು ಗೊತ್ತಾ?

ವಿಷ್ಣುವರ್ಧನ್, ಅಮಿತಾಭ್, ರಜನಿ ಡೈಲಾಗ್ ಕಿಂಗ್ ಸಾಯಿ ಕುಮಾರ್ (Sai Kumar) ಫುಲ್ ಆ್ಯಕ್ಟೀವ್ ಆಗಿದ್ದಾರೆ. 64 ರಲ್ಲೂ ಇನ್ನೂ ಯಂಗ್ ಆಗಿಯೇ ಕಾಣಿಸುತ್ತಾರೆ. ಇವರ ಮಗ ಕೂಡ ಸಿನಿಮಾರಂಗಕ್ಕೆ ಬಂದಿದ್ದಾರೆ. ಆದರೆ, ಕನ್ನಡದಲ್ಲಿ ಅಲ್ಲ, ತೆಲುಗು ಭಾಷೆಯಲ್ಲಿಯೇ ಸಿನಿಮಾ ಮಾಡುತ್ತಿದ್ದಾರೆ. ಸಾಯಿ ಕುಮಾರ್ ತಮ್ಮ ಪೊಲೀಸ್ ಪಾತ್ರಗಳಿಂದಲೂ (Police Role) ಇಡೀ ಕರ್ನಾಟಕದ ಜನತೆಯನ್ನ ರಂಜಿಸಿದ್ದಾರೆ. ಆದರೆ, ಈಗೀನ ದಿನಗಳಲ್ಲಿ ಹೊಸಬರ ಸಿನಿಮಾಗಳಲ್ಲೂ ಅಭಿನಯಿಸಿ ಗಮನ ಸೆಳೆಯುತ್ತಿದ್ದಾರೆ. ರಂಗಿತರಂಗದಲ್ಲಿ (Rangitaranga ) ಇವರ ಅಭಿನಯ ಹೆಚ್ಚು ಪ್ರಶಂಸಿಸಲ್ಪಟ್ಟಿದೆ. ಇತ್ತೀಚಿನ ಹೊಸಬರ ಚಿತ್ರಗಳಲ್ಲೂ ಸಾಯಿ ಕುಮಾರ್ ಅಭಿನಯಿಸುತ್ತಿದ್ದಾರೆ. ಎಲ್ಲೂ ವಯಸ್ಸಾದವರ ರೀತಿ ಕಾಣಿಸದ ಸಾಯಿ ಕುಮಾರ್ ಆರೋಗ್ಯವಾಗಿಯೇ ಇದ್ದಾರೆ. ಯಂಗ್ ಆ್ಯಂಡ್ ಹ್ಯಾಂಡ್ಸಮ್ ಆಗಿಯೇ ಕಾಣಿಸುತ್ತಿದ್ದಾರೆ. ಇವರ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ. ಸಾಯಿ ಕುಮಾರ್ ಸಿನಿ ಜರ್ನಿ ಹೇಗಿದೆ..? ಸಾಯಿ ಕುಮಾರ್ ಸಿನಿ ಜರ್ನಿಯಲ್ಲಿ ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಪಾತ್ರ ಇದೆ. ತೆಲುಗು ಭಾಷೆಯಲ್ಲಿ ಡಬ್ಬಿಂಗ್ ಕಲಾವಿದರಾಗಿಯೇ ಗುರುತಿಸಿಕೊಂಡಿದ್ದರು. ಆದರೆ, ಕನ್ನಡದಲ್ಲಿ ಇವರು ಹೀರೋ ಆದ್ರು. ಪೊಲೀಸ್ ಪಾತ್ರಗಳಿಗೇನೆ ಹೆಚ್ಚು ಫೇಮಸ್ ಆಗಿದ್ದರು. ಕನ್ನಡದ ಓಂ ಪ್ರಕಾಶ್ ರಾವ್ ಸಿನಿಮಾಗಳಲ್ಲೂ ಸಾಯಿ ಕುಮಾರ್ ನಟಿಸಿದ್ದಾರೆ. ಇದಕ್ಕೆ ದಿ ಬೆಸ್ಟ್ ಎಕ್ಸಾಂಪಲ್ ಅಂದ್ರೆ ಅದು ತೆಲುಗು ಭಾಷೆಯಲ್ಲೂ ಬಂದ AK-47 ಸಿನಿಮಾನೇ ಆಗಿದೆ. ಹಾಗೆ ಇತ್ತೀಚಿಗೆ ತಮ್ಮ ಅಭಿನಯದ ಕನ್ನಡ ಸಿನಿಮಾವೊಂದರ ಮುಹೂರ್ತಕ್ಕೂ ಸಾಯಿ ಕುಮಾರ್ ಆಗಮಿಸಿದ್ದರು. ಆಗಲೇ, ತಮ್ಮ ಮತ್ತು ಶಿವರಾಜ್ ಕುಮಾರ ನಂಟು ಹೇಗಿತ್ತು ಅನ್ನೋದನ್ನ ತಿಳಿಸಿದ್ದಾರೆ. ಇದನ್ನೂ ಓದಿ: Malaika Arora: ಅರ್ಜುನ್ ಕಪೂರ್ ಜೊತೆ ಬ್ರೇಕಪ್! ಫಸ್ಟ್ ಟೈಮ್ ರಿಯಾಕ್ಟ್ ಮಾಡಿದ ಮಲೈಕಾ ಅರೋರಾ ಏನಂದ್ರು? ಪೊಲೀಸ್ ಪಾತ್ರಕ್ಕೂ ಹೆಚ್ಚು ಫೇಮಸ್.! ಸಾಯಿ ಕುಮಾರ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡ ಸಿನಿಮಾಗಳು ಯಾವವು ಗೊತ್ತೇ..? ಅಗ್ನಿ ಐಪಿಎಸ್, ಪೊಲೀಸ್ ಸ್ಟೋರಿ, ಪೊಲೀಸ್ ಬೆಲ್ಟ್ ಹಿಂಗೆ ಇನ್ನು ಹಲವು ಸಿನಿಮಾಗಳಿವೆ. ಇದಲ್ಲದೇ ಪ್ರೇಮ ಸಂಗಮ, ಕುಂಕುಮ ಭಾಗ್ಯ, ಲಾಕಪ್ ಡೆತ್, ಹೆತ್ತ ಕರುಳು ಹೀಗೆ ಇನ್ನೂ ಹಲವಾರು ಸಿನಿಮಾಗಳಲ್ಲೂ ಸಾಯಿ ಕುಮಾರ್ ಅಭಿನಯಿಸಿದ್ದಾರೆ. ಸಾಯಿಕುಮಾರ್ ಕೇವಲ ತೆಲುಗು ಮತ್ತು ಕನ್ನಡದಲ್ಲಿ ಅಷ್ಟೇ ಅಲ್ಲ, ತಮಿಳು ಭಾಷೆಯ ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಾಗೆ ಸಾಯಿ ಕುಮಾರ್ ಬಹು ಭಾಷೆಯ ಸಿನಿಮಾಗಳಲ್ಲಿ ನಟಿಸಿ ತಮ್ಮದೇ ಶೈಲಿಯಲ್ಲಿ ಎಲ್ಲೆಡೆ ಛಾಪು ಮೂಡಿಸಿದ್ದಾರೆ ಅಂತಲೇ ಹೇಳಬಹುದು. ಅಮಿತಾಭ್ ಬಚ್ಚನ್ ಪಾತ್ರಕ್ಕೂ ಡಬ್ ಮಾಡಿದ ಸಾಯಿ.! ಸಾಯಿ ಕುಮಾರ್ ಅವರು ಈ ಮೊದಲೇ ಹೇಳಿದಂತೆ, ಡಬ್ಬಿಂಗ್ ಕಲಾವಿದರಾಗಿಯೂ ಕೆಲಸ ಮಾಡಿದ್ದಾರೆ. ಹಾಗೆ ದಕ್ಷಿಣದ ಹಲವು ಭಾಷೆಯ ಸ್ಟಾರ್‌ ನಟರಿಗೆ ಆಯಾ ಚಿತ್ರಗಳಿಗೆ ಡಬ್ ಮಾಡಿದ್ದಾರೆ. ಹಾಗೆ ನಟ ಸುಮನ್, ಸೂಪರ್ ಸ್ಟಾರ್ ರಜನಿಕಾಂತ್, ರಾಜಶೇಖರ್, ಮನೋಜ್ ಕೆ.ಜಯನ್ ಮಾಡಿದ್ದಾರೆ. ಬಾಲಿವುಡ್‌ನ ಅಮಿತಾಭ್ ಬಚ್ಚನ್ ಅವರಿಗೂ ಸಾಯಿ ಕುಮಾರ್ ಡಬ್ ಮಾಡಿದ್ದಾರೆ. ಬಾಲಿವುಡ್‌ನ ಖುದಾ ಗವಾಹ್ ಚಿತ್ರ ತೆಲುಗು ಭಾಷೆಗೂ ಡಬ್ ಆಗಿದೆ. ಇದರಲ್ಲಿ ಅಮಿತಾಭ್ ಬಚ್ಚನ್ ಪಾತ್ರಕ್ಕೆ ಸಾಯಿ ಕುಮಾರ್ ಡಬ್ ಮಾಡಿದ್ದಾರೆ. ಸಾಹಸ ಸಿಂಹ ವಿಷ್ಣುವರ್ಧನ್ ಪಾತ್ರಕ್ಕೂ ಡಬ್.! ಸಾಹಸ ಸಿಂಹ ವಿಷ್ಣುರ್ಧನ್ ಅಭಿನಯದ ನಿಷ್ಕರ್ಷ ಚಿತ್ರ ತೆಲುಗು ಭಾಷೆಯಲ್ಲೂ ಡಬ್ ಆಗಿತ್ತು. ಆ ಚಿತ್ರದ ವಿಷ್ಣುವರ್ಧನ್ ಪಾತ್ರಕ್ಕೆ ಇದೇ ಸಾಯಿ ಕುಮಾರ್ ಡಬ್ ಮಾಡಿದ್ದರು. ಇದರಂತೆ ಮಲೆಯಾಳಂ ಚಿತ್ರಗಳು ತೆಲುಗು ಭಾಷೆಗೆ ಡಬ್ ಆಗಿವೆ. ಹಾಗೆ ಬಂದ ಮೋಹನ್‌ಲಾಲ್, ಮುಮ್ಮುಟ್ಟಿ ಪಾತ್ರಗಳಿಗೂ ಸಾಯಿ ಕುಮಾರ್ ಡಬ್ ಮಾಡಿದ್ದಾರೆ. ಈ ರೀತಿ ದೊಡ್ಡ ದೊಡ್ಡ ಕಲಾವಿದರ ಪಾತ್ರಗಳಿಗೆ ಇದೇ ಸಾಯಿ ಕುಮಾರ್ ಡಬ್ ಮಾಡಿದ್ದಾರೆ. ಈ ಮೂಲಕ ಆಯಾ ನಟರ ಪಾತ್ರಗಳನ್ನ ಜೀವಿಸಿದ್ದಾರೆ. ಜೊತೆಗೆ ತಮ್ಮ ವಿಶೇಷ ಧ್ವನಿ ಮೂಲಕವೇ ಈಗಲೂ ಜನಪ್ರಿಯತೆಯನ್ನ ಉಳಿಸಿಕೊಂಡು ಬಂದಿದ್ದಾರೆ ಅಂತಲೇ ಹೇಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.