NEWS

PAK vs BAN: ತವರಿನಲ್ಲೇ ಪಾಕಿಸ್ತಾನಕ್ಕೆ ಭಾರೀ ಮುಖಭಂಗ! ಟೆಸ್ಟ್​ ಕ್ರಿಕೆಟ್​ನಲ್ಲಿ ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ

ಬಾಂಗ್ಲಾದೇಶದಲ್ಲಿ ಐತಿಹಾಸಿಕ ಜಯ ಬಾಂಗ್ಲಾದೇಶ ವಿರುದ್ಧ (Bangladesh vs Pakistan) ತವರಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​ನಲ್ಲಿ ಪಾಕಿಸ್ತಾನ ತಂಡವು ಸೋಲಿನ ಮುಖಭಂಗ ಎದುರಿಸಿದೆ. ರಾವಲ್ಪಿಂಡಿಯಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಾಂಗ್ಲಾದೇಶದ ಮಾರಕ ಬೌಲಿಂಗ್​ ದಾಳಿಗೆ ತತ್ತರಿಸಿ ಕೇವಲ 146 ರನ್​ಗಳಿಗೆ ಆಲೌಟ್​ ಆಗಿದೆ. ಈ ಮೂಲಕ ಪ್ರವಾಸಿ ತಂಡಕ್ಕೆ ಕೇವಲ 30ರನ್​ಗಳಿಗೆ ಸಾಧಾರಣ ಗುರಿ ನೀಡಿತ್ತು. ಈ ಮೊತ್ತವನ್ನು ಬಾಂಗ್ಲಾದೇಶ ತಂಡ ಕೇವಲ 10 ಓವರ್​ಗಳಲ್ಲಿ ಗೆಲುವು ಸಾಧಿಸಿ ಇತಿಹಾಸ ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ ಒಟ್ಟು 448ರನ್​ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತ್ತು. ಕೈಯಲ್ಲಿ ಇನ್ನೂ 6 ವಿಕೆಟ್​ ಇದ್ದರೂ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡು ಎಲ್ಲರ ಹುಬ್ಬೇರುವಂತೆ ಮಾಡಿತ್ತು. ಆದರೆ ಬಾಂಗ್ಲಾದೇಶ ಗಮನಾರ್ಹ. ನಂತರ ಉತ್ತರವಾಗಿ ಬಾಂಗ್ಲಾದೇಶ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ಮುಶ್ಫೀಕರ್ ರಹೀಮ್ 191 ರನ್​ ಹಾಗೂ ಶದ್ಮಾನ್ ಇಸ್ಲಾಮ್​ 93, ಮೆಹೆದಿ ಹಸನ್ ಮಿರಾಜ್ 77 ರನ್​ಗಳ ನೆರವಿನಿಂದ 565 ರನ್‌ಗಳ ಬೃಹತ್​ ಮೊತ್ತ ಕಲೆ ಹಾಕಿತ್ತು. ಈ ಬೃಹತ್ ಮೊತ್ತದೊಂದಿಗೆ ಬಾಂಗ್ಲಾದೇಶ 117 ರನ್‌ಗಳ ಮುನ್ನಡೆ ಗಳಿಸಿತ್ತು. ಮೊದಲ ಇನ್ನಿಂಗ್ಸ್ ಹಿನ್ನಡೆಯೊಂದಿಗೆ ಇದೀಗ ಪಾಕಿಸ್ತಾನ ಎರಡನೇ ಇನ್ನಿಂಗ್ಸ್‌ಗೆ ಮೈದಾನಕ್ಕಿಳಿದ ಪಾಕಿಸ್ತಾನ ನಾಟಕೀಯ ಕುಸಿತ ಕಂಡಿತು. 4ನೇ ದಿನ 10 ಓವರ್​ಗಳಲ್ಲಿ 23ಕ್ಕೆ 1 ವಿಕೆಟ್ ಕಳೆದುಕೊಂಡಿದ್ದ ಪಾಕಿಸ್ತಾನ ಕೊನೆ ದಿನ ಮೊದಕ ಸೆಸನ್​ನಲ್ಲೇ 55.5 ಓವರ್​ಗಳಲ್ಲೇ 146ಕ್ಕೆ ಆಲೌಟ್ ಆಯಿತು. ವಿಕೆಟ್ ಕೀಪರ್ ಮೊಹಮ್ಮದ್ ರಿಜ್ವಾನ್ 80 ಎಸೆತಗಳಲ್ಲಿ 51 ರನ್​ಗಳಿಸಿದರು. ಅದ್ಭುಲ್ಲಾ ಶಫೀಕ್​ 37 ಹಾಗೂ ಬಾಬರ್​ ಅಜಮ್ 50 ಎಸೆತಗಳಲ್ಲಿ 22 ರನ್​ಗಳಿಸಿದ್ದರು. ಇದನ್ನೂ ಓದಿ: Saud Shakeel: ಟೆಸ್ಟ್​ ಕ್ರಿಕೆಟ್​​ನಲ್ಲಿ 65 ವರ್ಷಗಳ ಹಿಂದಿನ ದಾಖಲೆ ಮುರಿದ ಪಾಕ್​ ಬ್ಯಾಟರ್​! ಬಾಂಗ್ಲಾದೇಶದ ಪರ ಮೊಹಮ್ಮದ್ ಹಸನ್​ ಮಿರಾಜ್ 21ಕ್ಕೆ 4, ಶಕಿಬ್ ಅಲ್ ಹಸನ್​ 44ಕ್ಕೆ 3, ಹಸನ್​ ಮೊಹ್ಮುದ್ 20ಕ್ಕೆ 1 ಹಾಗೂ ಶೋರಿಫುಲ್ ಇಸ್ಲಾಮ್ 20ಕ್ಕೆ 1 ವಿಕೆಟ್ ಪಡೆದರು. 30ರನ್​ಗಳ ಸಾಧಾರಣ ಮೊತ್ತವನ್ನು ಬಾಂಗ್ಲಾದೇಶ 6.3 ಓವರ್​ಗಳಲ್ಲಿ ವಿಕೆಟ್​ ನಷ್ಟವಿಲ್ಲದೆ 30 ರನ್​ಗಳಿಸಿ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿ ಇತಿಹಾಸ ನಿರ್ಮಿಸಿತು. ಇದು ಪಾಕ್ ವಿರುದ್ಧ ಟೆಸ್ಟ್​ ಕ್ರಿಕೆಟ್​ನಲ್ಲಿ ಬಾಂಗ್ಲಾದೇಶಕ್ಕೆ ಸಿಕ್ಕಂತಹ ಮೊದಲ ಗೆಲುವಾಗಿದೆ. ಇತಿಹಾಸ ನಿರ್ಮಿಸಿದ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯವನ್ನ ಗೆಲ್ಲುವ ಮೂಲಕ ಬಾಂಗ್ಲಾದೇಶ ಟೆಸ್ಟ್​ ಮಾನ್ಯತೆ ಪಡೆದ 23 ವರ್ಷಗಳ ನಂತರ ಪಾಕಿಸ್ತಾನದ ವಿರುದ್ಧ ಮೊದಲು ಗೆಲುವು ಪಡೆದಿದೆ. ಇದರ ಜೊತೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ತಂಡವನ್ನು ಅವರ ನೆಲದಲ್ಲೇ 10 ವಿಕೆಟ್​ಗಳಿಂದ ಮಣಿಸಿದ ಮೊದಲ ತಂಡ ಎಂಬ ವಿಶ್ವದಾಖಲೆಗೆ ಪಾತ್ರವಾಗಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.