NEWS

KPSC Recruitment 2024: ರಾಜ್ಯ ಸರ್ಕಾರಿ ಹುದ್ದೆಗಳ ನೇಮಕಾತಿ- ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಿಸಿದ ಕೆಪಿಎಸ್​ಸಿ

ಸಾಂದರ್ಭಿಕ ಚಿತ್ರ KPSC Recruitment 2024: ಕರ್ನಾಟಕ ಲೋಕಸೇವಾ ಆಯೋಗ(Karnataka Public Service Commission) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 486 ಜೂನಿಯರ್ ಎಂಜಿನಿಯರ್, ಇಂಡಸ್ಟ್ರಿಯಲ್ ಎಕ್ಸ್​ಟೆನ್ಶನ್ ಆಫೀಸರ್​ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಈ ಮೊದಲು ಮೇ 28, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿತ್ತು (Last Date). ಬಳಿಕ ಆ ದಿನಾಂಕವನ್ನು ಜೂನ್ 10, 2024ರವರೆಗೆ ವಿಸ್ತರಿಸಲಾಯಿತು. ಈಗ ಮತ್ತೆ ಆ ದಿನಾಂಕವನ್ನು ಆಗಸ್ಟ್ 1 ರವರೆಗೆ ವಿಸ್ತರಿಸಲಾಗಿದೆ. ಆ ಪ್ರಕಾರ ಅಭ್ಯರ್ಥಿಗಳು ನಾಳೆಯೊಳಗೆ ಆನ್​​ಲೈನ್​​ ಮೂಲಕ ಅಪ್ಲೈ ಮಾಡಬೇಕು. ಜುಲೈ 23ರಿಂದ ಅರ್ಜಿ ಪ್ರಕ್ರಿಯೆ ಆರಂಭವಾಗಿದೆ. ಕರ್ನಾಟಕ ಸರ್ಕಾರದ ಉದ್ಯೋಗ ಹುಡುಕುತ್ತಿದ್ರೆ ಈಗಲೇ ಅಪ್ಲೈ ಮಾಡಿ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಕರ್ನಾಟಕದಲ್ಲಿ ಪೋಸ್ಟಿಂಗ್ ನೀಡಲಾಗುತ್ತದೆ. ಅರ್ಜಿ ಸಲ್ಲಿಕೆಗೂ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ. ಹುದ್ದೆಯ ಮಾಹಿತಿ: ಯಾವ್ಯಾವ ಡಿಪಾರ್ಟ್​​ಮೆಂಟ್​​ಗಳಲ್ಲಿ ಎಷ್ಟೆಷ್ಟು ಹುದ್ದೆಗಳು ಖಾಲಿ ಇವೆ ಎಂಬ ಮಾಹಿತಿ ಇಲ್ಲಿದೆ. ಅಂತರ್ಜಲ ನಿರ್ದೇಶನಾಲಯ- 5 ಪೌರಾಡಳಿತ ನಿರ್ದೇಶನಾಲಯ- 84 ಸಾರ್ವಜನಿಕ ಗ್ರಂಥಾಲಯ ಇಲಾಖೆ- 34 ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆ- 63 ಜಲಸಂಪನ್ಮೂಲ ಇಲಾಖೆ- 300 ಹುದ್ದೆಗಳ ಹೆಸರು & ಅವುಗಳ ಸಂಖ್ಯೆ ಬಗ್ಗೆ ಇಲ್ಲಿದೆ ಮಾಹಿತಿ: ಜೂನಿಯರ್ ಎಂಜಿನಿಯರ್- 341 ವಾಟರ್ ಸಪ್ಲೈಯರ್- 4 ಸಬ್ಸಿಡಿಯರಿ ವಾಟರ್ ಸಪ್ಲೈಯರ್- 5 ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್- 39 ಅಸಿಸ್ಟೆಂಟ್ ಲೈಬ್ರರಿಯನ್- 21 ಇಂಡಸ್ಟ್ರಿಯಲ್ ಎಕ್ಸ್​​ಟೆನ್ಶನ್ ಆಫೀಸರ್- 63 ಲೈಬ್ರರಿಯನ್- 13 ವಿದ್ಯಾರ್ಹತೆ: ಜೂನಿಯರ್ ಎಂಜಿನಿಯರ್- ಡಿಪ್ಲೊಮಾ, ಎಂಜಿನಿಯರಿಂಗ್ ಪದವಿ ವಾಟರ್ ಸಪ್ಲೈಯರ್- 10ನೇ ತರಗತಿ, ಐಟಿಐ ಸಬ್ಸಿಡಿಯರಿ ವಾಟರ್ ಸಪ್ಲೈಯರ್- 10ನೇ ತರಗತಿ, ಐಟಿಐ ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್- 10ನೇ ತರಗತಿ, ಪಿಯುಸಿ, ಡಿಪ್ಲೊಮಾ ಅಸಿಸ್ಟೆಂಟ್ ಲೈಬ್ರರಿಯನ್- ಲೈಬ್ರರಿ ಸೈನ್ಸ್​​ನಲ್ಲಿ ಡಿಪ್ಲೊಮಾ ಇಂಡಸ್ಟ್ರಿಯಲ್ ಎಕ್ಸ್​​ಟೆನ್ಶನ್ ಆಫೀಸರ್- ಸೈನ್ಸ್​/ಕಾಮರ್ಸ್​/ಬ್ಯುಸಿನೆಸ್ ಅಡ್ಮಿನಿಸ್ಟ್ರೇಶನ್/ ಎಂಜಿನಿಯರಿಂಗ್​ನಲ್ಲಿ ಪದವಿ ಲೈಬ್ರರಿಯನ್- ಲೈಬ್ರರಿ ಸೈನ್ಸ್​​ನಲ್ಲಿ ಡಿಪ್ಲೊಮಾ ವಯೋಮಿತಿ: ಕರ್ನಾಟಕ ಲೋಕಸೇವಾ ಆಯೋಗ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಮೇ 28, 2024ಕ್ಕೆ ಕನಿಷ್ಠ 18 ವರ್ಷ ಮತ್ತು ಗರಿಷ್ಠ 35 ವರ್ಷ ಮೀರಿರಬಾರದು. ವಯೋಮಿತಿ ಸಡಿಲಿಕೆ: SC/ST/ಪ್ರವರ್ಗ-1 ಅಭ್ಯರ್ಥಿಗಳು: 05 ವರ್ಷಗಳು ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: 03 ವರ್ಷಗಳು PWD/ವಿಧವಾ ಅಭ್ಯರ್ಥಿಗಳು: 10 ವರ್ಷಗಳು ಅರ್ಜಿ ಶುಲ್ಕ: SC/ST/ಪ್ರವರ್ಗ-I/PWD ಅಭ್ಯರ್ಥಿಗಳು: ಇಲ್ಲ ಮಾಜಿ ಸೈನಿಕ ಅಭ್ಯರ್ಥಿಗಳು: ರೂ.50/- ಪ್ರವರ್ಗ-2ಎ/2ಬಿ/3ಎ/3ಬಿ ಅಭ್ಯರ್ಥಿಗಳು: ರೂ.300/- ಸಾಮಾನ್ಯ ಅಭ್ಯರ್ಥಿಗಳು: ರೂ.600/- ಪಾವತಿ ವಿಧಾನ: ಆನ್‌ಲೈನ್ ಉದ್ಯೋಗದ ಸ್ಥಳ: ಕರ್ನಾಟಕ ವೇತನ: ಜೂನಿಯರ್ ಎಂಜಿನಿಯರ್- ಮಾಸಿಕ ₹ 33,450-62,600 ವಾಟರ್ ಸಪ್ಲೈಯರ್- ಮಾಸಿಕ ₹ 27,650-52,650 ಸಬ್ಸಿಡಿಯರಿ ವಾಟರ್ ಸಪ್ಲೈಯರ್- ಮಾಸಿಕ ₹ 21,400-42,000 ಜೂನಿಯರ್ ಹೆಲ್ತ್ ಇನ್ಸ್​ಪೆಕ್ಟರ್- ಮಾಸಿಕ ₹ 23,500-47,650 ಅಸಿಸ್ಟೆಂಟ್ ಲೈಬ್ರರಿಯನ್- ಮಾಸಿಕ ₹ 30,350-58,250 ಇಂಡಸ್ಟ್ರಿಯಲ್ ಎಕ್ಸ್​​ಟೆನ್ಶನ್ ಆಫೀಸರ್- ಮಾಸಿಕ ₹ 33,450-62,600 ಲೈಬ್ರರಿಯನ್- ಮಾಸಿಕ ₹ 37,900-70,850 ಆಯ್ಕೆ ಪ್ರಕ್ರಿಯೆ: ಕನ್ನಡ ಭಾಷಾ ಪರೀಕ್ಷೆ ಸ್ಪರ್ಧಾತ್ಮಕ ಪರೀಕ್ಷೆ ಅರ್ಜಿ ಹಾಕೋದು ಹೇಗೆ? ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ. ಪ್ರಮುಖ ದಿನಾಂಕಗಳು: ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 23/07/2024 ಅರ್ಜಿ ಸಲ್ಲಿಸಲು ಕೊನೆಯ ದಿನ: ಆಗಸ್ಟ್ 1, 2024 None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.