NEWS

Amruthadhare Serial: ಕಳಚಿ ಬಿತ್ತು ಜೈದೇವ್ ಮುಖವಾಡ, ಮಲ್ಲಿಗೆ ಮೋಸ ಮಾಡಿದ ತಮ್ಮನಿಗೆ ಗೌತಮ್ ಕೊಟ್ಟ ಶಿಕ್ಷೆ ಏನು ಗೊತ್ತಾ?

ಜೀ ಕನ್ನಡ ವಾಹಿನಿಯಲ್ಲಿ (Zee Kannada) ಪ್ರಸಾರ ಕಾಣುತ್ತಿರುವ ಅಮೃತಧಾರೆ ಧಾರಾವಾಹಿ (Amruthadhare Serial) ಮಾಹಾ ತಿರುವು ಪಡೆದುಕೊಂಡಿದೆ. ಇಷ್ಟೂ ದಿನ ಭೂಮಿಕಾ ಹಾಗೂ ಆನಂದ್‌‌ ಸತ್ಯವನ್ನು ರಿವೀಲ್‌ ಮಾಡಬೇಕು ಎಂಬ ಅಷ್ಟೂ ಪ್ರಯತ್ನಗಳು ಈಗ ಸಫಲ ಕಂಡಿದೆ. ಇಷ್ಟಾದರೂ ಶಕುಂತಲಾ (Shakuntala) ನಾಟಕಕ್ಕೆ ಮಾತ್ರ ಫುಲ್‌ ಸ್ಟಾಪ್‌ ಬಿದ್ದಿಲ್ಲ. ಜೈದೇವ್‌ (Jaidev) ಮುಂದೆ ಏನು ಮಾಡ್ತಾನೆ ಎನ್ನೋದೆ ಇದೀಗ ವೀಕ್ಷಕರಲ್ಲಿ ಇರೋ ಕುತೂಹಲ. ಮಲ್ಲಿಯಿಂದ ಗೊತ್ತಾಯ್ತು ಸತ್ಯ! ಇನ್ನು ಟಿಆರ್‌ಪಿಯಲ್ಲಿಯೂ ಅಮೃತಧಾರೆ ಈ ವಾರ ನಂಬರ್‌ 1 ಸ್ಥಾನ ಪಡೆದುಕೊಂಡಿದೆ. ಮಲ್ಲಿಯ ಕಥೆ ವೀಕ್ಷಕರಿಗೆ ಇಷ್ಟವಾಗಿದೆ. ಮಲ್ಲಿಗೆ ಅಪಘಾದ ದಿನವೇ ಗಂಡ ಜೈದೇವ್‌ ಕಳ್ಳಾಟ ಗೊತ್ತಾಗುತ್ತೆ. ಹೀಗಾಗಿ ಮಗು ಕಳೆದುಕೊಂಡ ಬಳಿಕ ಕುಗ್ಗಿ ಹೋಗಿರುತ್ತಾಳೆ ಮಲ್ಲಿ. ಆದರೂ ಜೈದೇವ್‌ ಮಾತ್ರ ಬೆಣ್ಣ ಹಚ್ಚಲು ಬರುತ್ತಾನೆ. ಇದ್ಯವುದಕ್ಕೂ ತೆಲ ಕಡೆಸಿಕೊಳ್ಳದೇ ಇನ್ನು ಸುಮ್ಮನೇ ಇರಲ್ಲ ಎಂದು ಮಲ್ಲಿ ಜೈದೇವ್‌ಗೆ ಹೇಳುತ್ತಾಳೆ. ಕಪಟದ ಮುಖವಾಡಕ್ಕೆ ತೆರೆ ಬಿದ್ದಾಯ್ತು, ಗೌತಮ್ ಮನೆಯಲ್ಲಿ ಜೈದೇವ್ ಗೆ ಇನ್ನಿಲ್ಲ ಜಾಗ! ಇದೀಗ ಜೈದೇವ್‌ನ ಅಷ್ಟೂ ಕುತಂತ್ರಗಳು ಗೌತಮ್‌ ಮುಂದೆ ರಿವೀಲ್‌ ಆಗಿದೆ.ಗೌತಮ್‌ಗೆ ಆನಂದ್‌ ಹಾಗೂ ಭೂಮಿಕೆ ಅಷ್ಟೂ ಸತ್ಯವನ್ನೂ ರಿವೀಲ್‌ ಮಾಡಿದ್ದಾರೆ. ಇದೀಗ ವಾಹಿನಿ ಹೊಸ ಪ್ರೋಮೋ ಹಂಚಿಕೊಂಡಿದ್ದು ಗೌತಮ್‌ ಹೇಳಿದ್ದು ಹೀಗೆ. ಮನೆಯಲ್ಲಿ ಮುದ್ದಾದ ಹೆಂಡತಿಯನ್ನು ಇಟ್ಟಕೊಂಡು ಹೊರಗಡೆ ಅಫೇರ್‌ ಇಟ್ಟುಕೊಂಡಿದ್ದಾನೆ. ವಿಷಯ ಇಷ್ಟಕ್ಕೆ ಮುಗಿದಿಲ್ಲ. ಭೂಮಿಕಾಳನ್ನ ಕಿಡ್ನಾಪ್‌ ಮಾಡಿದ್ದಾನೆ. ತಮ್ಮ ಅಂತಲೂ ಲೆಕ್ಕಿಸದೇ ಪಾರ್ಥನನ್ನು ಕೊಲ್ಲೋಕೆ ನೋಡಿದ ಅಂತ ಹೇಳಿದ್ದಾನೆ ಗೌತಮ್‌. ಇದೀಗ ಶಕುಂತಲಾ ಮಗ ಜೈದೇವ್‌ಗೆ ಕೆನ್ನೆಗೆ ಬಾರಿಸಿ ಇನ್ನು ಈ ಮನೆಯಲ್ಲಿ ಅವನು ಇರಕೂಡದು ಎಂದು ಮನೆಯಿಂದ ಆಚೆ ಹಾಕಿದ್ದಾಳೆ. ಇದೀಗ ಗೌತಮ್‌ ತಮ್ಮ ಜೈದೇವ್‌ನನ್ನು ತಡೆಯುತ್ತಾನಾ? ಶಕುಂತಲಾ ಇನ್ನೇನೋ ಮಾಸ್ಟರ್‌ ಪ್ಲ್ಯಾನ್‌ ಮಾಡಬಹುದು ಎಂದು ವೀಕ್ಷಕರು ಕಮೆಂಟ್‌ ಮಾಡುತ್ತಿದ್ದಾರೆ. Kannada Thriller OTT: ಕ್ರೈಂ ಥ್ರಿಲ್ಲರ್ ವೀಕ್ಷಕರಿಗೆ ಗುಡ್‌ ನ್ಯೂಸ್‌; ಕನ್ನಡದ ಎರಡು ಸಿನಿಮಾಗಳು ಒಟಿಟಿಗೆ ಎಂಟ್ರಿ! ಇನ್ನು ಭೂಮಿಕಾ ಕೆಂಚನನ್ನಿ ಭೇಟಿ ಮಾಡಿ ಎಲ್ಲ ಸತ್ಯವನ್ನು ತಿಳಿಯುತ್ತಾಳೆ. ಆನಂದ ಜತೆಗೂಡಿ ಸಾಕ್ಷಿ ಸಮೇತ ಗೌತಮ್‌ ಮುಂದೆ ಇಟ್ಟಾಗ ಎಲ್ಲರಿಗೂ ಜೈದೇವ್‌ ಸತ್ಯ ರಿವೀಲ್‌ ಆಗುತ್ತದೆ. ಮಲ್ಲಿಗೆ ಹೇಗೆ ಗೊತ್ತಾಯ್ತು ಸತ್ಯ? ಮಲ್ಲಿ ತನ್ನ ಸೀಮಂತ ಎಂದು ಬಹಳ ಖುಷಿಯಾಗಿದ್ದಳು. ಅಲ್ಲದೇ, ಸೀಮಂತ ಮುಗಿದ ಬಳಿಕ ಪತಿ ಜತೆಗೆ ತವರಿಗೆ ಹೋಗುವ ಸಂಭ್ರಮದಲ್ಲಿ ಮಲ್ಲಿ ಇದ್ದಳು. ಆದರೆ ಭೂಮಿಕಾ ಮಲ್ಲಿಗೆ ಜೈದೇವ್ ಬಗ್ಗೆ ಗಮನ ಕೊಡು, ನಿನ್ನ ಜೊತೆಗೆ ಇರುವಂತೆ ನೋಡಿಕೋ ಎಂದು ಎಚ್ಚರಿಕೆ ಕೊಟ್ಟಿದ್ದು, ಮಲ್ಲಿ ಕೆಂಡಾವಾಗಿದ್ದಳು. ಮಲ್ಲಿ ಜೈದೇವ್ ನನ್ನು ಅತಿಯಾಗಿ ನಂಬಿ ಭೂಮಿಕಾ ಮುಂದೆ ಹಾರಾಡಿದ್ದಳು. ಸೀಮಂತ ಮಗಿಸಿಕೊಂಡು ಕಾರಿನಲ್ಲಿ ಕರೆದುಕೊಂಡು ಹೋಗುವಾಗ, ಸತ್ಯ ಗೊತ್ತಾಗಿತ್ತು. ಜೈ ದೇವ್‌ ಅರ್ಧಕ್ಕೆ ಕಾರು ನಿಲ್ಲಿಸಿ ದಿಯಾ ಜತೆ ಅತ್ಯಂತ ಸಲುಗೆಯಿಂದ ಇದ್ದದ್ದು ಮಲ್ಲಿ ಕಣ್ಣಿಗೆ ಬಿದ್ದಿತ್ತು. ಜೈದೇವ್‌ನ ದುಷ್ಟತನ ಮಲ್ಲಿ ಮುಂದೆ ಬಯಲಾಗಿತ್ತು. ಭೂಮಿ ಹೇಳಿರೋ ಮಾತು ಸತ್ಯ ಅಂತ ಅರಿವಾಗಿತ್ತು. ಪ್ರಸಾರ ಯಾವಾಗ? ಅಮೃತಧಾರೆ’ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಾಣುತ್ತಿದೆ. ಅಮೃತಧಾರೆ ಧಾರಾವಾಹಿ ʻಬಡೇ ಅಚ್ಚೇ ಲಗತೇ ಹೈʼ(Bade Acche Lagte Hain) ಹಿಂದಿ ಧಾರಾವಾಹಿಯ ರಿಮೇಕ್‌ ಆಗಿದೆ. ಛಾಯಾ ಸಿಂಗ್ ಭೂಮಿಕಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರ ಸಂಜೆ 7 ಗಂಟೆಗೆ ಪ್ರಸಾರ ಕಾಣುತ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.