NEWS

IND vs BAN: ಭಾರತೀಯರ ಆರ್ಭಟಕ್ಕೆ ಧೂಳೀಪಟವಾದ ಬಾಂಗ್ಲಾದೇಶ! 11.5 ಓವರ್​ಗೆ ಪಂದ್ಯ ಮುಗಿಸಿದ ಟೀಮ್ ಇಂಡಿಯಾ

ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ಜಯ ಗ್ವಾಲಿಯರ್: ಮೊದಲ ಟಿ20 ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿದ ಭಾರತ ತಂಡ ಬ್ಯಾಟಿಂಗ್​ ಬೌಲಿಂಗ್​ ಎರಡರಲ್ಲೂ ಭರ್ಜರಿ ಪ್ರದರ್ಶನ ತೋರಿ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಮೊದಲು ಬೌಲಿಂಗ್​ನಲ್ಲಿ ಬಾಂಗ್ಲಾದೇಶವನ್ನ 127ಕ್ಕೆ ಆಲೌಟ್ ಮಾಡಿದ ಸೂರ್ಯಕುಮಾರ್ ಪಡೆ, ಅಲ್ಪ ಮೊತ್ತದ ಗುರಿಯನ್ನ ಕೇವಲ 11.5 ಓವರ್​ಗಳಲ್ಲಿ 3 ವಿಕೆಟ್ ತಲುಪಿ ಜಯ ಸಾಧಿಸಿತು. ಈ ಮೂಲಕ 3 ಪಂದ್ಯಗಳ ಟಿ20 ಸರಣಿಯನ್ನ 1-0ಯಲ್ಲಿ ಮುನ್ನಡೆ ಸಾಧಿಸಿದೆ. ಬೆಂಕಿ ಬಿರುಗಾಳಿಯಾದ ಬೌಲರ್ಸ್ ಭಾರತದ ಪರ ಅರ್ಷದೀಪ್ ಸಿಂಗ್ 14ಕ್ಕೆ 3 ವಿಕೆಟ್ ಪಡೆದರು, ವರುಣ್ ಚಕ್ರವರ್ತಿ 31ಕ್ಕೆ 3 ವಿಕೆಟ್ ಪಡೆದರೆ, ಪದಾರ್ಪಣೆ ಬೌಲರ್ ಮಯಾಂಕ್ ಒಂದು ಮೇಡನ್ ಓವರ್ ಸಹಿತ 21 ರನ್​ ನೀಡಿ 1 ವಿಕೆಟ್ ಪಡೆದರು. ಸುಂದರ್​ 12ಕ್ಕೆ1, ಪಾಂಡ್ಯ 26ಕ್ಕೆ 1 ವಿಕೆಟ್ ಪಡೆದು ಮಿಂಚಿದರು. ಬಾಂಗ್ಲಾದೇಶ ನೀಡಿದ್ದ 128ರನ್​ಗಳ ಸಾಧಾರಣ ಗುರಿಯನ್ನ ಬೆನ್ನಟ್ಟಿದ ಟೀಮ್ ಇಂಡಿಯಾ ಆರಂಭದಿಂದಲೇ ಆರ್ಭಟಿಸಿತು. ಮೊದಲ ಓವರ್​ನಲ್ಲೇ ಸಾಮ್ಸನ್​ 2 ಬೌಂಡರಿ ಸಿಡಿಸಿದರೆ, 2ನೇ ಓವರ್​ನಲ್ಲಿ ಅಭಿಷೇಕ್ ಶರ್ಮಾ 2 ಬೌಂಡರಿ ಒಂದು ಸಿಕ್ಸರ್ ಸಿಡಿಸಿ 10 ಓವರ್​ಗಳೊಳಗೆ ಪಂದ್ಯ ಮುಗಿಸುವ ಮುನ್ಸೂಚನೆ ಕೊಟ್ಟರು. ಆದರೆ ದುರಾದೃಷ್ಟವಶಾತ್​ ರೀತಿಯಲ್ಲಿ ರನ್​ಔಟ್​ ಆದರು. ಔಟಾಗುವ ಮುನ್ನ 7 ಎಸೆತಗಳಲ್ಲಿ 16ರನ್​ಗಳಿಸಿದ್ದರು. ಇದನ್ನೂ ಓದಿದೆ: ಪದಾರ್ಪಣೆ ಪಂದ್ಯದಲ್ಲಿ ಮೊದಲ ಓವರ್ ಮೇಡನ್, 2ನೇ ಓವರ್ ವಿಕೆಟ್! ಟಿ20ಯಲ್ಲಿ ಚರಿತ್ರೆ ಸೃಷ್ಟಿಸಿದ ಮಯಾಂಕ್ ಅಬ್ಬರಿಸಿ ಬೊಬ್ಬಿರಿದ ಟೀಮ್ ಇಂಡಿಯಾ ಬ್ಯಾಟರ್ಸ್​ ಅಭಿಷೇಕ್ ನಂತರ ನಂತರ ಬಂದ ನಾಯಕ ಸೂರ್ಕುಮಾರ್ ಯಾದವ್ ಕೂಡ ಆರ್ಭಟಿಸಿದರು. ಕೇವಲ 14 ಎಸೆತಗಳಲ್ಲಿ 2 ಬೌಂಡರಿ 3 ಸಿಕ್ಸರ್​ ಸಹಿತ 29 ರನ್​ಗಳಿಸಿದರು. ಇವರ ಆರ್ಭಟದಿಂದ ಬಾಂಗ್ಲಾದೇಶದ ವಿರುದ್ಧ ಗರಿಷ್ಠ ಪವರ್​ ಪ್ಲೇ ರನ್ (71)​ ದಾಖಲಿಸಿದರು. ಆರಂಭಿಕರಾಗಿ ಬಡ್ತಿ ಪಡೆದು ಬಂದ ಸಂಜು ಸಾಮ್ಸನ್ 19 ಎಸೆತಗಳಲ್ಲಿ 6 ಬೌಂಡರಿ ಸಹಿತ 29ರನ್​ ಗಳಿಸಿದರು. ನಂತರ ಬಂದ ಹಾರ್ದಿಕ್ ಪಾಂಡ್ಯ ತಮ್ಮದೇ ಸ್ಟೈಲ್​ನಲ್ಲಿ ಬ್ಯಾಟಿಂಗ್ ಬೀಸಿ ಪಂದ್ಯವನ್ನ ಇನ್ನೂ 49 ಎಸೆತಗಳಿರುವಂತೆಯೇ ಮುಗಿಸಿದರು. ಪಾಂಡ್ಯ 16 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್​ಗಳ ಸಹಿತ ಅಜೇಯ 39ರನ್​ಗಳಿಸಿದರು. ಇಂದೇ ಪದಾರ್ಪಣೆ ಮಾಡಿದ ನಿತೀಶ್ ಕುಮಾರ್ ರೆಡ್ಡಿ ಅಜೇಯ 16 ರನ್​ಗಳಿಸಿದರು. ಗರಿಷ್ಠ ಎಸೆತಗಳಿರುವಂತೆ ಜಯ ಭಾರತ ತಂಡ 100ಕ್ಕಿಂತ ಹೆಚ್ಚು ಟಾರ್ಗೆಟ್​ ಅನ್ನ 11.5 ಓವರ್​ಗಳಲ್ಲಿ ಮುಗಿಸುವ ಮೂಲಕ ಅತಿ ಹೆಚ್ಚು ಎಸೆತಗಳಿರುವಂತೆಯೇ ಗೆಲುವು ಸಾಧಿಸಿದ ದಾಖಲೆ ಬರೆಯಿತು. ಈ ಪಂದ್ಯಕ್ಕೂ ಮುನ್ನ ಜಿಂಬಾಬ್ವೆ ವಿರುದ್ಧ 2016ರಲ್ಲಿ 41 ಎಸೆತಗಳಿರುವಂತೆ ಗೆಲುವು ಸಾಧಿಸಿದ್ದು, ಉತ್ತಮ ಸಾಧನೆಯಾಗಿತ್ತು. ನಂತರ ಅಫ್ಘಾನ್ ವಿರುದ್ಧ 31 ಎಸೆತಗಳಿರುವಂತೆ, ಜಿಂಬಾಬ್ವೆ ವಿರುದ್ಧ 2010ರಲ್ಲಿ 30 ಎಸೆತಗಳಿರುವಂತೆ ಗೆಲುವು ಸಾಧಿಸಿದೆ. ಸತತ 8 ಗೆಲುವು ಈ ಪಂದ್ಯ ಗೆಲ್ಲುವ ಮೂಲಕ ಭಾರತ ತಂಡ ಸೋಲಿಲ್ಲದೆ ಸತತ 8 ಪಂದ್ಯ ಗೆದ್ದಂತಾಗಿದೆ. ಹಿಂದೆ ನವೆಂಬರ್​ನಿಂದ 2021 ಫೆಬ್ರವರಿ 2022ರವರೆಗೆ 12 ಪಂದ್ಯಗಳನ್ನ ಗೆದ್ದಿತ್ತು. ನಂತರ 2023 ಡಿಸೆಂಬರ್ -2024ರ ಜೂನ್​ವರೆಗೆ 6 ತಿಂಗಳ ಅಂತರದಲ್ಲಿ 12 ಪಂದ್ಯಗಳನ್ನ ಗೆದ್ದ ದಾಖಲೆ ಹೊಂದಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.