NEWS

Fitness Tips: ವರ್ಕೌಟ್‌ ಮಾಡದೇ ಸ್ಲಿಮ್‌ ಆಗಬೇಕಾ? ಚಿಂತೆ ಬೇಡ, ಹೀಗೆ ಮಾಡೋದರಿಂದಲೂ ಸಣ್ಣ ಆಗಬಹುದು ನೋಡಿ

ಸಾಂದರ್ಭಿಕ ಚಿತ್ರ ಸಿಗೋ 24 ಗಂಟೆಯಲ್ಲಿ (Time) ಎಂಟು ತಾಸು (Hour) ನಿದ್ರೆ, ಒಂಬತ್ತು ತಾಸು ಕೆಲಸ (Work) ಅಂತಾನೇ ಹೋಗುತ್ತದೆ. ಇನ್ನು ಉಳಿದ ಟೈಮ್‌ನಲ್ಲಿ ಓಡಾಟ, ಮನೆ, ಮಕ್ಕಳು, ಸಂಸಾರ (Family), ಇನ್ನಿತರೆ ಕೆಲಸ, ಊಟ- ತಿಂಡಿ ಅಂತಾ ಕಳೆದು ಹೋಗುತ್ತದೆ. ಹೌದು, ಇವಕ್ಕೆಲ್ಲಾ ಸಮಯ ಕೊಡ್ಲೇಬೇಕು. ಅದರ ಜೊತೆಗೆ ನಮ್ಮ ಕಾಳಜಿಗೂ ಒಂದಿಷ್ಟು ಸಮಯ ನೀಡಾಬೇಕಾಗುತ್ತದೆ. ಕೆಲವರಿಗೆ ಫೀಟ್‌ ಆಗಿರಬೇಕು, ಸ್ಕಿನ್‌ ಕೇರ್‌ ಮಾಡಬೇಕು ಹೀಗೆ ಬೇರೆ ಬೇರೆ ಆಸೆ. ಆದ್ರೆ ಸಮಯದ್ದೇ ಕೊರತೆ. ಆಗಬೇಕು ಅನ್ನೋ ಆಸೆ ಇದ್ರೂ ಸಮಯದ ಅಭಾವದಿಂದ ಅದನ್ನು ಮಾಡಲು ಆಗೋದೇ ಇಲ್ಲ. ಅಷ್ಟರ ಮಟ್ಟಿಗೆ ಅವರ ರೂಟಿನ್‌ ಬ್ಯುಸಿಯಾಗಿರುತ್ತದೆ. ನಿಮಗೂ ಹೀಗನಿಸುತ್ತಿದ್ದರೆ ಡೋಂಟ್‌ವರಿ, ಸಣ್ಣಪುಟ್ಟ ಚಲನೆಯಿಂದಲೇ ಹೇಗೆ ಸ್ಲಿಮ್‌ ಆಗಬಹುದು ಎಂಬ ಟಿಪ್ಸ್‌ ಅನ್ನು ನಾವಿಲ್ಲಿ ನಿಮಗೆ ನೀಡ್ತಿದ್ದೇವೆ ನೋಡಿ. ಸಿಂಪಲ್‌ ಅಭ್ಯಾಸಗಳಿಂದ ಸ್ಲಿಮ್‌ ಆಗಲು ಇಲ್ಲಿವೆ ಸಲಹೆ ಮನೆ ಕೆಲಸವನ್ನು ನೀವೇ ಮಾಡಿ ಸ್ವಚ್ಛವಾದ ಮನೆಯು ನಿಮ್ಮ ಮನಸ್ಸನ್ನು ಖುಷಿಯಾಗಿಡುವುದಲ್ಲದೇ, ಅದು ನಿಮ್ಮನ್ನು ಫಿಟ್ ಆಗಿ ಕೂಡ ಇರಿಸಬಹುದು. ಅಡುಗೆ, ಊಟ ಆದಮೇಲೆ ಪಾತ್ರೆಗಳನ್ನು ವಾಶ್‌ ಮಾಡೋದಾಗಿರಬಹುದು, ಮನೆಯನ್ನು ಗುಡಿಸಿ, ಒರೆಸೋದು, ಬಟ್ಟೆ ತೊಳೆಯುವಂತಹ ಕೆಲಸಗಳನ್ನು ನೀವೇ ಮಾಡಲು ಮುಂದಾಗಿ. ಈ ಅಭ್ಯಾಸವು ಮನೆಯನ್ನು ಶುಚಿಯಾಗಿಡುವುದರ ಜೊತೆಗೆ ನಿಮ್ಮನ್ನು ಸಕ್ರಿಯವಾಗಿಡುತ್ತದೆ. ಇದನ್ನೂ ಓದಿ: Zodiac Sign: 2025ರಲ್ಲಿ ಈ ಮೂರು ರಾಶಿಯವರಿಗೆ ಆರ್ಥಿಕ ನಷ್ಟವಾಗುತ್ತೆ ಎಚ್ಚರ! ನಿಮ್ಮ ವ್ಯವಹಾರದಲ್ಲಿ ಹೆಚ್ಚು ಜಾಗರೂಕರಾಗಿರಿ ವಾಕ್‌ ಮಾಡ್ತಾನೆ ಫೋನ್‌ನಲ್ಲಿ ಮಾತಾಡಿ ಕೆಲಸದ ವಿಷಯವಾಗಿ, ಇಲ್ಲಾ ಪರ್ಸನಲ್‌ ಕಾಲ್‌ನಲ್ಲಿದ್ದಾಗ ಎಲ್ಲೋ ಒಂದು ಕಡೆ ಕೂತು ಮಾತಾಡೋದಕ್ಕಿಂತ ವಾಕ್‌ ಮಾಡುತ್ತಾ ಮಾತನಾಡುವ ಅಭ್ಯಾಸ ರೂಢಿಸಿಕೊಳ್ಳಿ. ಪರಿಣಾಮವಾಗಿ ನೀವು ಹತ್ತು ಹೆಜ್ಜೆ ನಡೆದು ಸಕ್ರಿಯವಾದಂತೆ ಆಗುತ್ತದೆ, ಜೊತೆಗೆ ನಿಮ್ಮ ಮಾತು ಕೂಡ ಮುಗಿಯುತ್ತೆ. ಇಂತಹ ಸಣ್ಣಪುಟ್ಟ ಅಭ್ಯಾಸಗಳು ನಮ್ಮನ್ನು ಹೆಚ್ಚುವರಿ ಬೊಜ್ಜಿನ ಅಪಾಯದಿಂದ ದೂರ ಮಾಡುತ್ತದೆ. 10 ನಿಮಿಷಗಳ ದಿನಚರಿಯನ್ನು ಪ್ರಯತ್ನಿಸಿ ಮನೆಯಲ್ಲಿ ಕೆಲಸ ಜಾಸ್ತಿ, ವರ್ಕೌಟ್‌ಗೆಲ್ಲಾ ಟೈಮ್‌ ಇಲ್ಲಾ ಅನ್ನೋರು ದಿನದಲ್ಲಿ 10 ನಿಮಿಷನಾದ್ರೂ ನಿಮಗಾಗಿ ಫ್ರೀ ಮಾಡ್ಕೊಳ್ಳಿ. ಈ ಹತ್ತು ನಿಮಿಷದಲ್ಲಿ ದೇಹಕ್ಕೊಂದಿಷ್ಟು ವ್ಯಾಯಾಮ ಕೊಡಿ. ಕನಿಷ್ಠಪಕ್ಷ ಬಾಡಿ ಸ್ಟ್ರೆಚ್‌ ಮಾಡೋದು, ವಾಕಿಂಗ್‌ ಮಾಡೋದು, ದೇಹವನ್ನು ಬೆಂಡಾಗಿಸುವುದು, ಡ್ಯಾನ್ಸ್‌ ಹೀಗೆ ಇಂತಹ ಚಟುವಟಿಕೆಗಳಿಗೆ ಹತ್ತು ನಿಮಿಷವಾದರೂ ಸಮಯ ಕೊಡಿ. ಇದು ವಾಸ್ತವವಾಗಿ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ನೀವು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಇದನ್ನೂ ಓದಿ: Numerology: ಶನಿಯ ಪ್ರಭಾವಕ್ಕೆ ಒಳಗಾಗುತ್ತೆ ಈ 3 ಜನ್ಮ ದಿನಾಂಕಗಳು! 2025 ರಲ್ಲಿ ಇವರು ವಿಶೇಷ ಕಾಳಜಿ ವಹಿಸಲೇಬೇಕು! ಸಾಕಷ್ಟು ನೀರು ಕುಡಿಯಿರಿ ಉತ್ತಮ ದೈಹಿಕ ಆಕಾರದಲ್ಲಿರಲು ಮಾಡಬೇಕಾದ ಮೊದಲ ಕೆಲಸವಿದು. ಆದರೆ ಹಲವರು ನೀರನ್ನು ನಿರ್ಲಕ್ಷ್ಯಿಸುತ್ತಾರೆ. ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಕೇಂದ್ರಗಳ ಅಂಕಿಅಂಶಗಳ ಪ್ರಕಾರ, 2013 ರಲ್ಲಿ 43% ವಯಸ್ಕರು ಪ್ರತಿದಿನ ನಾಲ್ಕು ಲೋಟಗಳಿಗಿಂತ ಕಡಿಮೆ ನೀರನ್ನು ಸೇವಿಸಿದ್ದಾರೆ ಎಂದು ಹೇಳುತ್ತದೆ. ಆದರೆ ಹೀಗೆ ಮಾಡೋದು ಬೇರೆ ಬೇರೆ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಒಂದೊಮ್ಮೆ ನೀವು ಸ್ಲಿಮ್‌ ಆಗಬೇಕು ಎಂದರೆ ದಿನಕ್ಕೆ ಕನಿಷ್ಠ ಮೂರರಿಂದ ನಾಲ್ಕು ಲೀಟರ್‌ ನೀರು ಕುಡಿಯಲೇಬೇಕು. ಅಭ್ಯಾಸವನ್ನು ಬೆಳೆಸಿಕೊಳ್ಳಿ ಪ್ರತಿದಿನ ಜಿಮ್‌ಗೆ ಹೋಗಿ ಬೆವರು ಹರಿಸಲು ಸಮಯ ಇಲ್ಲ ಎನ್ನುವವರು ಪ್ರತಿದಿನ ಸ್ವಲ್ಪ ಹೊತ್ತಾದರೂ ಮನೆಯಲ್ಲಿ ಓಡುವ ಅಥವಾ ಮೂಲಭೂತ ಜಾಗಿಂಗ್ ಮಾಡಲು ಪ್ರಯತ್ನಿಸಿ. ರನ್ನಿಂಗ್‌ ಇನ್‌ ಪ್ಲೇಸ್‌ನಂತಹ ವರ್ಕೌಟ್‌ ಮಾಡಿದರೂ ಸಾಕು. ಇದು ನಿಮ್ಮ ಕ್ಯಾಲೋರಿಯನ್ನು ಬರ್ನ್‌ ಮಾಡುತ್ತದೆ. ಆದರೆ ಇಂತಹ ಅಭ್ಯಾಸಗಳನ್ನು ನೀವು ಅಭ್ಯಾಸ ಮಾಡಬೇಕು ಮತ್ತು ಪ್ರತಿನಿತ್ಯ ಮಾಡಲು ಆದ್ಯತೆ ಕೊಡಬೇಕು. ಇಂತಹ ಸಣ್ಣಪುಟ್ಟ ಆ್ಯಕ್ಟೀವ್‌ ಅಭ್ಯಾಸಗಳು ನಿಮ್ಮನ್ನು ಜಡವಾಗಿಡಲು ಬಿಡುವುದಿಲ್ಲ ಮತ್ತು ಕ್ಯಾಲೋರಿ ಕೂಡ ಬರ್ನ್‌ ಆಗುತ್ತದೆ. ಇದರಿಂದ ನೀವೂ ಫಿಟ್‌ ಆಗಿ ಉಳಿಯಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.