NEWS

Beauty Tips: ಸೊಂಪಾದ ಕೂದಲು ನಿಮ್ಮದಾಗಬೇಕಾ? ಹಾಗಾದ್ರೆ ಬಾಳೆಹಣ್ಣನ್ನು ಕೂದಲಿಗೆ ಹೀಗೆ ಹಚ್ಚಿ!

ಸಾಂದರ್ಭಿಕ ಚಿತ್ರ ಕೂದಲ ಆರೈಕೆಗೆ (Hair Care) ಬಾಳೆಹಣ್ಣು ಹೆಚ್ಚು ಉಪಯುಕ್ತವಾಗಿದೆ **.** ಏಕೆಂದರೆ ಬಾಳೆಹಣ್ಣಿನ ಹೇರ್ ಮಾಸ್ಕ್ ‌ ಗಳು (Banana Hair Mask) ನಿಮ್ಮ ಕೂದಲನ್ನು ಪೋಷಿಸಲು **,** ಬಲಪಡಿಸಲು ಮತ್ತು ಪುನರುಜ್ಜೀವನಗೊಳಿಸಲು ಸರಳವಾದ ಪರಿಣಾಮಕಾರಿ ಮನೆಮದ್ದುಗಳಾಗಿವೆ **.** ರಾಸಾಯನಿಕಯುಕ್ತ ಕೂದಲಿನ ಉತ್ಪನ್ನಗಳಿಂದ ದೂರವಿರಲು ಬಯಸುವ ಜನರಿಗೆ ಈ DIY ಪರಿಹಾರಗಳು ಸೂಕ್ತವಾಗಿವೆ **.** ಬಾಳೆಹಣ್ಣು (Banana) ಪೊಟ್ಯಾಸಿಯಮ್ ಅನ್ನು ಹೊಂದಿರುತ್ತದೆ **,** ಇದು ಕೂದಲು ಕಿರುಚೀಲಗಳನ್ನು ಬಲಪಡಿಸುತ್ತದೆ **,** ಆಗೆಯೇ ನೈಸರ್ಗಿಕ ತೈಲಗಳನ್ನು ತೇವಗೊಳಿಸುತ್ತದೆ ಮತ್ತು ಹೊಳಪನ್ನು ನೀಡುತ್ತದೆ **.** ಬಾಳೆಹಣ್ಣು ಉತ್ಕರ್ಷಣ ನಿರೋಧಕಗಳನ್ನು ಒಳಗೊಂಡಿರುತ್ತವೆ, ಇದು ನಿಮ್ಮ ಕೂದಲನ್ನು ಪರಿಸರ ಹಾನಿಯಿಂದ ರಕ್ಷಿಸಲು ಸಹಾಯ ಮಾಡುತ್ತದೆ. ನಿಮ್ಮ ಕೂದಲು ಬಲವಾಗಿ ಮತ್ತು ರೇಷ್ಮೆಯಂತೆ ಕಾಣುವಂತೆ ಮಾಡಲು ಈ ಸರಳವಾದ ಬಾಳೆಹಣ್ಣಿನ ಹೇರ್ ಮಾಸ್ಕ್‌ಗಳನ್ನು ಒಮ್ಮೆ ಮನೆಯಲ್ಲಿಯೇ ಟ್ರೈ ಮಾಡಿ. ನಿಮಗಾಗಿ ಇಲ್ಲಿವೆ 6 ​​DIY ಬಾಳೆಹಣ್ಣಿನ ಹೇರ್****‌ ಮಾಸ್ಕ್****‌ ಚರ್ಮರೋಗ ವೈದ್ಯ ಡಾ. ಡಿಎಂ ಮಹಾಜನ್ ಅವರು ಸೂಚಿಸಿದಂತೆ ನಿಮ್ಮ ಕೂದಲ ರಕ್ಷಣೆಯ ದಿನಚರಿಯಲ್ಲಿ ಅಳವಡಿಸಿಕೊಳ್ಳಲು ಕೆಲವು ಸುಲಭವಾದ ಬಾಳೆಹಣ್ಣಿನ ಹೇರ್ ಮಾಸ್ಕ್‌ಗಳು ಇಲ್ಲಿವೆ. ಕ್ಲಾಸಿಕ್ ಬಾಳೆಹಣ್ಣಿನ ಹೇರ್ ಮಾಸ್ಕ್ ಮಾಗಿದ ಬಾಳೆಹಣ್ಣನ್ನು ನಯವಾದ ಪೇಸ್ಟ್ ಆಗುವವರೆಗೂ ಮ್ಯಾಶ್ ಮಾಡಿ. ಆ ಪೇಸ್ಟ್ ಅನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಸಮವಾಗಿ ಅಪ್ಲೈ ಮಾಡಿ. ನಿಮ್ಮ ಕೂದಲನ್ನು ಶವರ್ ಕ್ಯಾಪ್‌ನಿಂದ ಕವರ್‌ ಮಾಡಿಕೊಳ್ಳಿ ಮತ್ತು 30 ನಿಮಿಷಗಳ ಕಾಲ ಬಿಡಿ. ನಿಮ್ಮ ಕೂದಲನ್ನು ಉಗುರುಬೆಚ್ಚನೆಯ ನೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. ಜೇನುತುಪ್ಪ ಮತ್ತು ಬಾಳೆಹಣ್ಣಿನ ಹೇರ್****‌ ಮಾಸ್ಕ್****‌ ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮತ್ತು 2 ಚಮಚ ಜೇನುತುಪ್ಪದೊಂದಿಗೆ ಮಿಶ್ರಣ ಮಾಡಿ. ಆ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಅಪ್ಲೈ ಮಾಡಿ. ನಿಮ್ಮ ಕೂದಲನ್ನು ಶವರ್ ಕ್ಯಾಪ್‌ನಿಂದ ಕವರ್‌ ಮಾಡಿ ಮತ್ತು 30 ನಿಮಿಷಗಳ ಕಾಲ ಬಿಡಿ. ಎಂದಿನಂತೆ ಉಗುರುಬೆಚ್ಚನೆಯ ನೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. ಮೊಸರು ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್ ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮತ್ತು ಅದಕ್ಕೆ 2 ಚಮಚ ಮೊಸರು ಬೆರೆಸಿ. ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಅಪ್ಲೈ ಮಾಡಿ. ನಿಮ್ಮ ಕೂದಲನ್ನು ಶವರ್ ಕ್ಯಾಪ್‌ನಿಂದ ಕವರ್‌ ಮಾಡಿ ಮತ್ತು 30 ನಿಮಿಷಗಳ ಕಾಲ ಬಿಡಿ. ಎಂದಿನಂತೆ ಉಗುರುಬೆಚ್ಚನೆಯ ನೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. ಆವಕಾಡೊ ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್ ಮಾಗಿದ ಬಾಳೆಹಣ್ಣು ಮತ್ತು ಆವಕಾಡೊವನ್ನು ಒಟ್ಟಿಗೆ ಮ್ಯಾಶ್ ಮಾಡಿ. ಆ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಅಪ್ಲೈ ಮಾಡಿ. ನಿಮ್ಮ ಕೂದಲನ್ನು ಶವರ್ ಕ್ಯಾಪ್‌ನಿಂದ ಕವರ್‌ ಮಾಡಿ ಮತ್ತು 30 ನಿಮಿಷಗಳ ಕಾಲ ಬಿಡಿ. ಎಂದಿನಂತೆ ಉಗುರುಬೆಚ್ಚನೆಯ ನೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. ಇದನ್ನೂ ಓದಿ: ಶುಗರ್​ ಜಾಸ್ತಿ ಆಗಿದ್ಯಾ? ಈ ಎಲೆಗಳನ್ನು ತಿನ್ನಿ ಕಂಟ್ರೋಲ್​ಗೆ ಬರುತ್ತೆ! ಆಲಿವ್ ಎಣ್ಣೆ ಮತ್ತು ಬಾಳೆಹಣ್ಣಿನ ಹೇರ್****‌ ಮಾಸ್ಕ್****‌ ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮತ್ತು ಅದಕ್ಕೆ 2 ಚಮಚ ಆಲಿವ್ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಅಪ್ಲೈ ಮಾಡಿ. ನಿಮ್ಮ ಕೂದಲನ್ನು ಶವರ್ ಕ್ಯಾಪ್‌ನಿಂದ ಕವರ್‌ ಮಾಡಿ ಮತ್ತು 30 ನಿಮಿಷಗಳ ಕಾಲ ಬಿಡಿ. ಎಂದಿನಂತೆ ಉಗುರುಬೆಚ್ಚನೆಯ ನೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. ಇದನ್ನೂ ಓದಿ: ಈ ಎಲ್ಲಾ ಸಮಸ್ಯೆಗಳಿಗೂ ಪೇರಲ ಎಲೆಯೇ ರಾಮಬಾಣ; ಆರೋಗ್ಯ ಭಾಗ್ಯ ನಿಮ್ಮದಾಗಬೇಕೆಂದರೆ ಜಗಿದು ನೋಡಿ! ಮೊಟ್ಟೆ ಮತ್ತು ಬಾಳೆಹಣ್ಣಿನ ಹೇರ್ ಮಾಸ್ಕ್ ಮಾಗಿದ ಬಾಳೆಹಣ್ಣನ್ನು ಮ್ಯಾಶ್ ಮಾಡಿ ಮತ್ತು 1 ಮೊಟ್ಟೆಯೊಂದಿಗೆ ಮಿಶ್ರಣ ಮಾಡಿ. ಆ ಮಿಶ್ರಣವನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಅಪ್ಲೈ ಮಾಡಿ. ನಿಮ್ಮ ಕೂದಲನ್ನು ಶವರ್ ಕ್ಯಾಪ್‌ನಿಂದ ಕವರ್‌ ಮಾಡಿ ಮತ್ತು 30 ನಿಮಿಷಗಳ ಕಾಲ ಬಿಡಿ. ಎಂದಿನಂತೆ ಉಗುರುಬೆಚ್ಚನೆಯ ನೀರು ಮತ್ತು ಶಾಂಪೂ ಬಳಸಿ ಚೆನ್ನಾಗಿ ತೊಳೆಯಿರಿ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.