NEWS

Holidays: 2025ರಲ್ಲಿ ಸಿಗಲಿದೆ ಸಾಲು ಸಾಲು ರಜೆ! ಸಂಪೂರ್ಣ ಮಾಹಿತಿ ಇಲ್ಲಿದೆ

ಸಂಗ್ರಹ ಚಿತ್ರ ಹೊಸ ವರ್ಷ (New Year) ಎಂಬುದು ಹೊಸ ಉಲ್ಲಾಸ, ಹುರುಪನ್ನು ತರುತ್ತದೆ. ಹೊಸ ವರ್ಷ ಎಂಬುದು ಹೊಸ ಆರಂಭವನ್ನು ಸೂಚಿಸುತ್ತದೆ. ಇದರೊಂದಿಗೆ ಹೊಸ ಹೊಸ ಯೋಜನೆಗಳನ್ನು ಸಿದ್ಧಪಡಿಸಲು 2025 ಅವಕಾಶವನ್ನೊದಗಿಸುತ್ತದೆ. 2025 ಸಾಕಷ್ಟು ಹಬ್ಬಗಳು, ದೀರ್ಘ ವಾರಾಂತ್ಯಗಳೊಂದಿಗೆ ಬಂದಿದ್ದು, ಪ್ರವಾಸಗಳನ್ನು ಆಯೋಜಿಸಿ ಮನೆ ಮಂದಿಯೊಂದಿಗೆ ಉತ್ತಮ ಸಮಯವನ್ನು ಕಳೆಯಬಹುದು. ಸ್ನೇಹಿತರೊಂದಿಗೆ ಮನೆಮಂದಿಯೊಂದಿಗೆ ಸಮಯ ಕಳೆಯಲು ಉತ್ತಮ ಅವಕಾಶ ರಜಾದಿನ, ಪ್ರವಾಸ ಎಂಬುದು ಸ್ನೇಹಿತರು ಹಾಗೂ ಕುಟುಂಬಸ್ಥರೊಂದಿಗೆ ಸಮಯ ಕಳೆಯುವುದು ಅವರೊಂದಿಗೆ ಸಂತೋಷಭರಿತವಾಗಿ ದಿನಗಳೆಯುವುದನ್ನು ಸೂಚಿಸುತ್ತದೆ. ಹೊಸ ವರ್ಷದ ಸಮಯದಲ್ಲಿ ಪ್ರತಿಯೊಬ್ಬರೂ ರಜಾದಿನಗಳನ್ನು ಹೊಂದಲು ಹೆಚ್ಚು ಉತ್ಸಾಹಭರಿತರಾಗಿರುತ್ತಾರೆ. ಇದನ್ನೂ ಓದಿ: ಈ ಒಂದು ಬೇರಿನಲ್ಲಿದೆ ಹಲವು ಪ್ರಯೋಜನ; ಹುಣ್ಣು, ಕೆಮ್ಮು, ಶೀತಗಳಿಗೆ ಇದೇ ನೋಡಿ ರಾಮಬಾಣ! ಹೇಗೂ ಹೊಸ ವರ್ಷಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಸಮಯದಲ್ಲಿ ಮುಂದಿನ ತಿಂಗಳುಗಳಲ್ಲಿ ದೊರೆಯಲಿರುವ ರಜಾ ದಿನಗಳ ಬಗ್ಗೆ ಅರಿತುಕೊಳ್ಳುವುದು ಒಳಿತಾಗಿದೆ. ಹಬ್ಬಗಳ ಆಚರಣೆಯೊಂದಿಗೆ ರಜೆಯ ಮಜಾವನ್ನು ಆನಂದಿಸಬಹುದು ಈದ್-ಉಲ್-ಫಿತರ್, ಡಾ. ಭೀಮರಾವ್ ಅಂಬೇಡ್ಕರ್ ಜಯಂತಿ, ಬುದ್ಧ ಪೂರ್ಣಿಮೆ ಮತ್ತು ದೀಪಾವಳಿ ಎಲ್ಲವೂ ಸೋಮವಾರದಂದು ಬರುತ್ತಿದೆ. ಹೋಲಿಕಾ ದಹನ್ ಮತ್ತು ಹೋಳಿ ಗುರುವಾರ ಶುಕ್ರವಾರ ಬರುತ್ತಿದೆ. ಸ್ವಾತಂತ್ರ್ಯ ದಿನಾಚರಣೆ ಶುಕ್ರವಾರ, ಜನ್ಮಾಷ್ಟಮಿ ಶನಿವಾರದಂದು ಬರುತ್ತಿದೆ. ಒಟ್ಟಿನಲ್ಲಿ ದೀರ್ಘ ವಿರಾಮ ಬಯಸುವವರಾಗಿರಬಹುದು, ಮನೆಯವರೊಂದಿಗೆ ಪ್ರವಾಸ ಗೈಯ್ಯಲು ಉತ್ಸಾಹ ತೋರುವವರಿರಬಹುದು ಎಲ್ಲರಿಗೂ ಈ ರಜಾದಿನಗಳು ಭರ್ಜರಿ ಅವಕಾಶವನ್ನೊದಗಿಸಲಿದೆ. ಇದರೊಂದಿಗೆ ವೈವಿಧ್ಯಮಯ ಹಬ್ಬಗಳನ್ನು ಆಚರಿಸಲು ಅವಕಾಶ ಮಾಡಿಕೊಡಲಿವೆ. ಪ್ರವಾಸ ಆಯೋಜಿಸಲು ಉತ್ತಮವಾಗಿದೆ ಹೊಸ ವರ್ಷದಲ್ಲಿ ಬರಲಿರುವ ರಜಾದಿನಗಳು ಹಾಗೂ ಸುದೀರ್ಘ ರಜೆಗಳ ಬಗ್ಗೆ ನಿಮಗೆ ಮೊದಲೇ ಗೊತ್ತಿದ್ದರೆ ಪ್ರವಾಸ ಮಾಡಲು ಇನ್ನೂ ಅನುಕೂಲಕರವಾಗುತ್ತದೆ. 2025 ರ ಹೊಸ ವರ್ಷ ಸಾಕಷ್ಟು ದೀರ್ಘ ವಾರಾಂತ್ಯಗಳನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಬ್ಯಾಂಕ್‌ಗಳಿಗೆ ಕೂಡ ರಜೆ ಇರುತ್ತದೆ. ಮನೆಯವರೊಂದಿಗೆ, ಸ್ನೇಹಿತರೊಂದಿಗೆ ಕಾಲ ಕಳೆಯಲು ಇದು ಉತ್ತಮ ಅವಕಾಶವಾಗಿದೆ. 2025 ರ 9 ದೀರ್ಘ ವಾರಾಂತ್ಯಗಳು ಜನವರಿ 2025 ಜನವರಿಯಲ್ಲಿ ಒಟ್ಟು 4 ದೀರ್ಘ ರಜೆಗಳನ್ನು ಹೀಗೆ ತೆಗೆದುಕೊಳ್ಳಬಹುದು 11 (ಶನಿವಾರ) 12 (ಭಾನುವಾರ) 13 (ರಜೆ ತೆಗೆದುಕೊಳ್ಳುವುದು) 14 (ಮಕರ ಸಂಕ್ರಾಂತಿ) ಫೆಬ್ರವರಿ 2025 ಫೆಬ್ರವರಿ ಮಾಸದಲ್ಲಿ ಕೂಡ ಪ್ರವಾಸ ಹೋಗಲು ಪ್ಲಾನ್ ಮಾಡಿದ್ದರೆ ರಜೆಯ ಮಾಹಿತಿ ಹೀಗಿದೆ 22 (ಶನಿವಾರ) 23 (ಭಾನುವಾರ) 24 (ರಜೆ ಹಾಕುವುದು) 25 (ರಜೆ ಹಾಕುವುದು) 26 (ಮಹಾಶಿವರಾತ್ರಿ) ಮಾರ್ಚ್ 2025 ಹೋಳಿಯನ್ನಾಚರಿಸುತ್ತಾ ರಜಾ ದಿನವನ್ನು ಆನಂದಿಸಬಹುದು 14 (ಹೋಳಿ) 15 (ಶನಿವಾರ) 16 (ಭಾನುವಾರ) ಏಪ್ರಿಲ್ 2025 ಲಾಂಗ್ ವೀಕೆಂಡ್‌ನಲ್ಲಿ ಆರಾಮಾಗಿ ದಿನಗಳೆಯಬಹುದು. 18 (ಗುಡ್ ಫ್ರೈಡೆ) 19 (ಶನಿವಾರ) 20 (ಭಾನುವಾರ) ಮೇ 2025 ಮೇ ತಿಂಗಳಲ್ಲಿ ಕೂಡ ರಜೆಯನ್ನು ಪ್ಲ್ಯಾನ್ ಮಾಡಿಕೊಂಡೇ ಕಳೆಯಬಹುದು 1 (ಕಾರ್ಮಿಕರ ದಿನ) 2 (ರಜೆ ಹಾಕುವುದು) 3 (ಶನಿವಾರ) 4 (ಭಾನುವಾರ) ಆಗಸ್ಟ್ 2025 ಆಗಸ್ಟ್‌ ತಿಂಗಳಲ್ಲಿಯೂ 3 ದಿನ ರಜೆ ದೊರೆಯಲಿದೆ. 15 (ಸ್ವಾತಂತ್ರ್ಯ ದಿನಾಚರಣೆ) 16 (ಶನಿವಾರ) 17 (ಭಾನುವಾರ) ಅಕ್ಟೋಬರ್ 2025 ಅಕ್ಟೋಬರ್‌ನಲ್ಲಿ ದಸರಾದೊಂದಿಗೆ 4 ದಿನಗಳ ರಜೆಯನ್ನು ಆನಂದಿಸಬಹುದು 2 (ಗಾಂಧಿ ಜಯಂತಿ, ದಸರಾ) 3 (ರಜೆ ಹಾಕಬೇಕು) 4 (ಶನಿವಾರ) 5 (ಭಾನುವಾರ) ನವೆಂಬರ್ 2025 ನವೆಂಬರ್ 2025 ರಂದು ದೀಪಾವಳಿಯನ್ನು ಸಂಭ್ರಮದಿಂದ ಆಚರಿಸಬಹುದು 18 (ಶನಿವಾರ) 19 (ಭಾನುವಾರ) 20 (ದೀಪಾವಳಿ) ಡಿಸೆಂಬರ್ 2025 ಡಿಸೆಂಬರ್ 2025 ರ ಕ್ರಿಸ್‌ಮಸ್‌ ಆಚರಿಸಲು ರಜಾದಿನಗಳು ಕೂಡಿ ಬರಲಿದೆ. 25 (ಕ್ರಿಸ್‌ಮಸ್) 26 (ರಜೆ ಹಾಕುವುದು) 27 (ಶನಿವಾರ) 28 (ಭಾನುವಾರ) 31 (ರಜಾದಿನ) ನೀವು ಸೋಲೋ ಟ್ರಿಪ್ ಹೋಗುತ್ತಿರಿ ಅಥವಾ ಕುಟುಂಬದವರೊಂದಿಗೆ ಪ್ರವಾಸಗೈಯ್ಯುತ್ತಿರಿ ಈ ದೀರ್ಘ ವೀಕೆಂಡ್ಸ್ ಮುಂಚಿತವಾಗಿ ತಯಾರಿ ಮಾಡಲು ಅನುಕೂಲವನ್ನೊದಗಿಸುತ್ತದೆ. ರಜಾದಿನಗಳನ್ನು ಮೊದಲೇ ಅರಿತುಕೊಂಡಿರುವುದು ಹಬ್ಬಗಳನ್ನಾಚರಿಸಲು, ಪ್ರವಾಸ ಮಾಡಲು ಅನುಕೂಲ ಮಾಡಿಕೊಡುತ್ತದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.