NEWS

Independence Day: 2036ರ ಒಲಿಂಪಿಕ್ಸ್ ಆತಿಥ್ಯ ಭಾರತದ ಕನಸು, ಸಿದ್ಧತೆ ನಡೆಯುತ್ತಿವೆ; ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಹೇಳಿಕೆ

ಪ್ರಧಾನಿ ನರೇಂದ್ರ ಮೋದಿ ಭಾರತವು 2036ರಲ್ಲಿ ಒಲಿಂಪಿಕ್ಸ್ (Olympics) ಆತಿಥ್ಯ ವಹಿಸುವ ಕನಸು ಕಾಣುತ್ತಿದೆ, ಈಗಾಗಲೇ ಅದಕ್ಕೆ ಸಿದ್ಧತೆಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಗುರುವಾರ ತಮ್ಮ ಸ್ವಾತಂತ್ರ್ಯ ದಿನದ (Independence Day) ಭಾಷಣದಲ್ಲಿ ಹೇಳಿದರು. 2024ರ ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ (Paris Olympics) ಭಾರತವನ್ನು (India) ಪ್ರತಿನಿಧಿಸಿದ ಎಲ್ಲಾ ಕ್ರೀಡಾಪಟುಗಳನ್ನು ಪ್ರಧಾನಿ ಮೋದಿ ಅಭಿನಂದಿಸಿದರು ಮತ್ತು ಮುಂಬರುವ ಪ್ಯಾರಾಲಿಂಪಿಕ್ಸ್‌ಗೆ ಪ್ರಯಾಣಿಸುವವರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು. ಜಿ20 ಮೂಲಕ ಸಾಮರ್ಥ್ಯ ಸಾಬೀತು ಜಿ20 ಶೃಂಗಸಭೆಯಂತಹ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಲು ಭಾರತವು ಮೂಲಸೌಕರ್ಯವನ್ನು ಹೊಂದಿದೆ ಎಂಬುದನ್ನು ಈಗಾಗಲೇ ಸಾಬೀತುಪಡಿಸಿದೆ. 2036ರಲ್ಲಿ ಒಲಿಂಪಿಕ್ಸ್ ಅನ್ನು ಆಯೋಜಿಸುವುದು ರಾಷ್ಟ್ರದ ಮುಂದಿನ ಕನಸು ಎಂದು ಭಾಷಣದಲ್ಲಿ ಪ್ರಧಾನಿ ಮೋದಿ ಹೇಳಿದರು. ಇದನ್ನೂ ಓದಿ: ಕೆಂಪು ಕೋಟೆ ಮೇಲೆ ರಾರಾಜಿಸಿದ ತ್ರಿವರ್ಣ ಧ್ವಜ; ವಿಕಸಿತ ಭಾರತ ಬದ್ಧತೆಯನ್ನು ಪುನರುಚ್ಚರಿಸಿದ ನಮೋ ಇದು ಭಾರತದ ಕನಸು ಎಂದ ಮೋದಿ ಒಲಿಂಪಿಕ್ಸ್‌ನಲ್ಲಿ ಭಾರತದ ಧ್ವಜವನ್ನು ಎತ್ತರಕ್ಕೆ ಹಾರುವಂತೆ ಮಾಡಿದ ಯುವಕರು ನಮ್ಮೊಂದಿಗಿದ್ದಾರೆ. ದೇಶದ 140 ಕೋಟಿ ಜನರ ಪರವಾಗಿ ನಾನು ನಮ್ಮ ಎಲ್ಲಾ ಕ್ರೀಡಾಪಟುಗಳು ಮತ್ತು ಆಟಗಾರರನ್ನು ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿ, ಭಾರತದ ಬೃಹತ್ ಪಡೆ ಹೊರಡಲಿದೆ. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸಲು ನಾನು ನಮ್ಮ ಎಲ್ಲಾ ಪ್ಯಾರಾಲಿಂಪಿಯನ್‌ಗಳಿಗೆ ಶುಭ ಹಾರೈಸುತ್ತೇನೆ. ಭಾರತವು G20 ಶೃಂಗಸಭೆಯನ್ನು ಆಯೋಜಿಸವ ಮೂಲಕ ದೊಡ್ಡ ಪ್ರಮಾಣದ ಕಾರ್ಯಕ್ರಮಗಳನ್ನು ಆಯೋಜಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಾಬೀತುಪಡಿಸಿದೆ. 2036ರ ಒಲಿಂಪಿಕ್ಸ್‌ಗೆ ಆತಿಥ್ಯ ವಹಿಸಲು ನಾವು ತಯಾರಿ ನಡೆಸುತ್ತಿದ್ದೇವೆ, ಇದು ಭಾರತದ ಕನಸು ಎಂದು ಕೆಂಪು ಕೋಟೆಯಿಂದ ದೇಶವನ್ನುದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ಮೋದಿ ಹೇಳಿದರು. ಪ್ಯಾರಾಲಿಂಪಿಕ್ಸ್​ಗೆ 84 ಅಥ್ಲೀಟ್​ಗಳು ಭಾರತವು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 19 ಪದಕ ಮತ್ತು ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲಿ ಐತಿಹಾಸಿಕ 111 ಪದಕಗಳನ್ನು ಗೆದ್ದ ಸಾಧನೆಯನ್ನು ಮುಂದುವರಿಸಲು ನೋಡುತ್ತಿದೆ. ಆಗಸ್ಟ್ 28 ರಿಂದ ಪ್ರಾರಂಭವಾಗುವ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಭಾರತವು 84 ಅಥ್ಲೀಟ್‌ಗಳನ್ನು ಕಣಕ್ಕಿಳಿಸಿದೆ. 84 ಅಥ್ಲೀಟ್‌ಗಳು ಆರ್ಚರಿ, ಅಥ್ಲೆಟಿಕ್ಸ್, ಬ್ಯಾಡ್ಮಿಂಟನ್, ಕ್ಯಾನೋಯಿಂಗ್, ಸೈಕ್ಲಿಂಗ್, ಬ್ಲೈಂಡ್ ಜೂಡೋ, ಪವರ್‌ಲಿಫ್ಟಿಂಗ್, ರೋಯಿಂಗ್, ಶೂಟಿಂಗ್, ಟೇಬಲ್ ಟೆನ್ನಿಸ್ ಮತ್ತು ಟೇಕ್ವಾಂಡೋ, ಈಜು ಸೇರಿದಂತೆ 12 ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. 11ನೇ ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೋದಿ ಇದಕ್ಕೂ ಮುನ್ನ ಪ್ರಧಾನಿ ಮೋದಿ ಅವರನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಗಣ್ಯರು ಕೆಂಪು ಕೋಟೆಯ ಕೋಟೆಯಲ್ಲಿ ಆತ್ಮೀಯವಾಗಿ ಸ್ವಾಗತಿಸಿದರು. ಸ್ವಾತಂತ್ರ್ಯ ದಿನದಂದು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿದರು. ಈ ಮೂಲಕ ಐತಿಹಾಸಿಕ ರೆಡ್‌ ಫೋರ್ಟ್‌ನಲ್ಲಿ 11 ಬಾರಿ ತ್ರಿವರ್ಣ ಧ್ವಜ ಹಾರಿಸಿದ ಮೊದಲ ಕಾಂಗ್ರೆಸ್ಸೇತರ ಪ್ರಧಾನ ಮಂತ್ರಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾದರು. ಮೋದಿ ಮತ್ತು ಮನಮೋಹನ್ ಸಿಂಗ್ ಅವರನ್ನು ಹೊರತುಪಡಿಸಿದರೆ, ಕೇವಲ ಜವಾಹರ್ ಲಾಲ್ ನೆಹರು ಮತ್ತು ಅವರ ಪುತ್ರಿ ಇಂದಿರಾ ಗಾಂಧಿ ಕೆಂಪುಕೋಟೆಯಲ್ಲಿ 10ಕ್ಕಿಂತಲೂ ಹೆಚ್ಚು ಬಾರಿ ಧ್ವಜಾರೋಹಣ ಮಾಡಿದ ದಾಖಲೆ ಹೊಂದಿದ್ದಾರೆ. ವಿಕಸಿತ ಭಾರತ 2047 ಈ ಬಾರಿಯ ಸ್ವಾತಂತ್ರ್ಯ ದಿನದ ಥೀಮ್ ವಿಕಸಿತ ಭಾರತದ ಕುರಿತು ಮಾತನಾಡಿದ ಅವರಿ, ಭಾರತದಿಂದ ವಸಾಹತುಶಾಹಿ ಆಡಳಿತವನ್ನು ಬೇರುಸಹಿತ ಕಿತ್ತೊಗೆದ 40 ಕೋಟಿ ಜನರ ರಕ್ತವನ್ನು ಕೊಂಡೊಯ್ಯುಲು ನಾವು ಹೆಮ್ಮೆಪಡುತ್ತೇವೆ. ಇಂದು ನಾವು 140 ಕೋಟಿ ಜನರಿದ್ದೇವೆ, ನಾವು ಸಂಕಲ್ಪ ಮಾಡಿ ಒಂದು ದಿಕ್ಕಿನಲ್ಲಿ ಒಟ್ಟಿಗೆ ಸಾಗಿದರೆ, ದಾರಿಯಲ್ಲಿರುವ ಎಲ್ಲಾ ಅಡೆತಡೆಗಳನ್ನು ನಿವಾರಿಸುವ ಮೂಲಕ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣವಾಗಹುದು. ವಿಕಸಿತ ಭಾರತ 2047 ಕೇವಲ ಹೇಳಿಕೆಯಲ್ಲ, ಅದನ್ನು ಸಾಧಿಸಲು ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.