NEWS

PM Modi Speech: 2047ರ ಕನಸನ್ನು ನನಸಾಗಿಸಲು ಬಲಿಷ್ಠ ಅಡಿಪಾಯದೊಂದಿಗೆ ನಾಳೆ ದೇಶದ ಮುಂದೆ ಬರುತ್ತೇವೆ: ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಇಂದಿನಿಂದ ಸಂಸತ್ತಿನ ಮುಂಗಾರು ಅಧಿವೇಶನ (Parliament Budget Session 2024) ಆರಂಭವಾಗಲಿದೆ. ಆಗಸ್ಟ್ 12ರವರೆಗೆ ನಡೆಯಲಿರುವ ಈ ಅಧಿವೇಶನದಲ್ಲಿ ಇಂದು ಲೋಕಸಭೆಯಲ್ಲಿ ಮಧ್ಯಾಹ್ನ 1 ಗಂಟೆಗೆ ಹಾಗೂ ರಾಜ್ಯಸಭೆಯಲ್ಲಿ ಮಧ್ಯಾಹ್ನ 2 ಗಂಟೆಗೆ ದೇಶದ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಸದನದ ಕಲಾಪ ಆರಂಭಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ (PM Narendra Modi) ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದರು. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ಅದೇ ರೀತಿ ನಿರ್ಮಲಾ ಸೀತಾರಾಮನ್ ಜುಲೈ 23 ರಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಅಧಿವೇಶನಕ್ಕೂ ಮುನ್ನ ಮೋದಿ ಭಾಷಣ ಮುಂಗಾರು ಅಧಿವೇಶನಕ್ಕೂ ಮುನ್ನ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಹಲೋ ಸ್ನೇಹಿತರೇ, ಇಂದು ಮೊದಲ ಸೋಮವಾರ, ಈ ಪವಿತ್ರ ದಿನದಂದು ಮಹತ್ವದ ಅಧಿವೇಶನ ಪ್ರಾರಂಭವಾಗುತ್ತಿದೆ. ಈ ಬಾರಿಯ ಬಜೆಟ್​ ದೇಶದ ಜನರ ಕನಸುಗಳನ್ನು ನನಸಾಗಿಸಲಿದೆ ಎಂದು ಹೇಳಿದ್ದಾರೆ. ಇನ್ನು ಈ ವೇಳೆ ನಾನು ದೇಶದ ಜನರಿಗೆ ಭರವಸೆಗಳನ್ನು ನೀಡುತ್ತಿದ್ದೇನೆ ಮತ್ತು ಇದನ್ನು ಜಾರಿಗೆ ತರುವುದೇ ನಮ್ಮ ಧ್ಯೇಯವಾಗಿದೆ. ಈ ಬಜೆಟ್ ಅಮೃತ ಕಾಲಕ್ಕೆ ಮಹತ್ವದ ಬಜೆಟ್ ಆಗಿದೆ. ಇಂದಿನ ಬಜೆಟ್ ನಮ್ಮ ಅಧಿಕಾರದ ಮುಂದಿನ 5 ವರ್ಷಗಳ ದಿಕ್ಕನ್ನು ನಿರ್ಧರಿಸುತ್ತದೆ. ಈ ಬಜೆಟ್ ನಮ್ಮ ವಿಕಸಿತ ಭಾರತ ಕನಸಿಗೆ ಬಲವಾದ ಬುನಾದಿಯಾಗಲಿದೆ ಮತ್ತು ಮತ್ತು 2047 ರ ಕನಸನ್ನು ನನಸಾಗಿಸಲು ಬಲವಾದ ಅಡಿಪಾಯದೊಂದಿಗೆ ನಾವು ನಾಳೆ ದೇಶದ ಮುಂದೆ ಬರುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರಿ ನೌಕರರಿಗೆ ಇನ್ನು RSSಗೆ ಸೇರುವ ಅವಕಾಶ, ನಿಷೇಧವನ್ನು ಕೊನೆಗೊಳಿಸಿದ ಮೋದಿ ಸರ್ಕಾರ! ಸತತ ಮೂರನೇ ಬಾರಿ ಬಜೆಟ್​ ಮಂಡನೆ ಸುಮಾರು 60 ವರ್ಷಗಳ ನಂತರ, ಮೂರನೇ ಬಾರಿಗೆ ಸರ್ಕಾರವೊಂದು ಮತ್ತೆ ಅಧಿಕಾರಕ್ಕೆ ಬಂದು ಬಜೆಟ್ ಮಂಡನೆ ಮಾಡುತ್ತಿರುವುದು ನನಗೆ ಮತ್ತು ನಮ್ಮ ಎಲ್ಲಾ ಕಾರ್ಯಕರ್ತರಿಗೆ ತುಂಬಾನೇ ಹೆಮ್ಮೆಯಾಗುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಇನ್ನು ಈ ಬಜೆಟ್​ ನಮ್ಮ ಮುಂದಿನ 5 ವರ್ಷಗಳ ಭವಿಷ್ಯವನ್ನು ನಿರ್ಧರಿಸಲಿದೆ ಎಂದು ಹೆಳಿದರು. ಪ್ರತಿಪಕ್ಷಗಳಿಗೆ ಮನವಿ ಸಂಸತ್ತಿನ ಬಜೆಟ್ ಅಧಿವೇಶನ ಮಹತ್ವದ್ದಾಗಿದೆ ಎಂದಿರುವ ಪ್ರಧಾನಿ ಮೋದಿ, ಸದನದಲ್ಲಿ ಬಜೆಟ್ ಕುರಿತು ಚರ್ಚಿಸಿ ಸದನದ ಕಲಾಪ ಸುಗಮವಾಗಿ ನಡೆಯಲು ಅವಕಾಶ ನೀಡುವಂತೆ ಎಲ್ಲ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿದರು. ಕಳೆದ ಅಧಿವೇಶನದಲ್ಲಿ ನಡೆದ ಚರ್ಚೆಯಿಂದ ಅಸಾಮಧಾನಗೊಂಡಿದ್ದ ಪ್ರಧಾನಿ ಮೋದಿ, ಇಂದು ಸಂಸತ್ ಅಧಿವೇಶನದ ಸಮಯ ಯಾರೂ ವ್ಯರ್ಥ ಮಾಡಬೇಡಿ ಎಂದು ಮನವಿ ಮಾಡಿದರು. ಕೇಂದ್ರ ಬಜೆಟ್‌ನಲ್ಲಿ ರೈತರಿಗೆ ಭರ್ಜರಿ ಗಿಫ್ಟ್, ಆದಾಯ ತೆರಿಗೆಯಲ್ಲಿ ಸಿಗುತ್ತಾ ವಿನಾಯಿತಿ? ಈ ಬಾರಿಯ ಬಜೆಟ್ ಗಾತ್ರ ಹೆಚ್ಚಾಗುವ ನಿರೀಕ್ಷೆಯಿದ್ದು, ಎಲ್ಲ ಕ್ಷೇತ್ರಗಳನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವರು ಬಜೆಟ್ ಮಂಡಿಸುವ ನಿರೀಕ್ಷೆ ಇದೆ. ಸತತ ಗರಿಷ್ಠ ಬಾರಿ ಬಜೆಟ್ ಮಂಡಿಸಿದ ಮೊರಾರ್ಜಿ ದೇಸಾಯಿ ಅವರ ದಾಖಲೆಯನ್ನು ನಿರ್ಮಲಾ ಸೀತಾರಾಮನ್ ಅವರು ಹಿಂದೆ ಸರಿಯಲಿದ್ದಾರೆ. ಹಣದುಬ್ಬರ, ನಿರುದ್ಯೋಗ, ಕಡಿಮೆ ಆದಾಯದ ಸಂಕಷ್ಟ ಎದುರಿಸುತ್ತಿರುವ ಮಧ್ಯಮವರ್ಗದವರನ್ನು ಖುಷಿ ಪಡಿಸಲು ನಿರ್ಮಲಾ ಸೀತಾರಾಮನ್ ತನ್ನ ಖಜಾನೆಯನ್ನು ತೆರೆಯುತ್ತಾರೆಯೇ ಎಂದು ದೇಶದ ಜನತೆ ನಿರೀಕ್ಷೆಯಲ್ಲಿರುವಾಗ ಇಂತಹ ನಿರೀಕ್ಷೆಗಳ ನಡುವೆಯೇ ಮೋದಿ ಸರಕಾರದ ಮೂರನೇ ಬಜೆಟ್ ಬರುತ್ತಿದೆ. ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್‌ನಲ್ಲಿ ಏನೇನು ಇರಬಹುದು ಅನ್ನುವುದರ ಕುರಿತು ಇಲ್ಲಿದೆ ವಿವರ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.