NEWS

Weight Loss: 50ರ ಹರೆಯದಲ್ಲೂ ತೂಕ ಇಳಿಸಿ, ಶುಗರ್ ಕಂಟ್ರೋಲ್ ಮಾಡಿದ ಮಹಿಳೆ! ಹೇಗೆ ಗೊತ್ತಾ?

ಸಾಂದರ್ಭಿಕ ಚಿತ್ರ ದೇಹಕ್ಕೆ ವಯಸ್ಸಾದಂತೆ ಅನೇಕ ಬದಲಾವಣೆಗಳು ಉಂಟಾಗುತ್ತದೆ ಇದರೊಂದಿಗೆ ಅನೇಕ ಕಾಯಿಲೆಗಳು (Disease) ನಮ್ಮನ್ನು ಕಾಡುತ್ತದೆ. ಗೇಲ್ ಪಗಾನೊ 53 ವರ್ಷಕ್ಕೆ ಕಾಲಿಟ್ಟಾಗ ಕೂಡ ತಮ್ಮ ದೇಹದಲ್ಲಿ ಅನೇಕ ಬದಲಾವಣೆಗಳುಂಟಾಗುವುದು ಅವರ ಗಮನಕ್ಕೆ ಬಂದಿತು. ಎಂದಿನ ತಮ್ಮ ಆಹಾರ ಕ್ರಮ ಹಾಗೂ ವ್ಯಾಯಾಮದ (Exercise) ದಿನಚರಿಯನ್ನು ಬದಲಾಯಿಸದೆ ತೂಕ ಏರುವಿಕೆ, ಕೀಲುಗಳ ನೋವು ಹೀಗೆ ಒಂದೊಂದಾಗಿ ಕಾಯಿಲೆಗಳು ಬರಲಾರಂಭಿಸಿದವು. ಇದಕ್ಕೆ ಕಾರಣವೇನು ಎಂಬುದನ್ನು ಕಂಡುಕೊಂಡಾಗ ಅವರಿಗೆ ಪ್ರಿಡಯಾಬಿಟೀಸ್ ಇರುವುದು ಪತ್ತೆಯಾಯಿತು. ವಯಸ್ಸಾಗುವಿಕೆ ಹಾಗೂ ಋತುಬಂಧಕ್ಕೆ ಒಳಗಾಗುವ ಕಾರಣದಿಂದ ವೈದ್ಯರು ರೋಗಲಕ್ಷಣಗಳನ್ನು ಪತ್ತೆಹಚ್ಚಿದರು ಕೊನೆಗೆ ಅವರ ರಕ್ತದಲ್ಲಿ ಸಕ್ಕರೆಯ ಅಂಶಗಳು ಹೆಚ್ಚಿನ ವ್ಯಾಪ್ತಿಯಲ್ಲಿವೆ ಎಂಬುದನ್ನು ಗಮನಿಸಿದರು. ಗೇಲ್ ಪಗಾನೊ ಹತಾಶ ಮನಸ್ಥಿತಿಗೆ ಒಳಗಾದರು ಇದು ನನಗೆ ಸಾಮಾನ್ಯವಾಗಿರಲಿಲ್ಲ ಇದರಿಂದ ಹೊರಬರಲೇಬೇಕು ಎಂದು ನಾನು ನಿರ್ಧರಿಸಿದೆ ಎಂದು ಗೇಲ್ ನಿಶ್ಚಯಿಸಿಕೊಂಡಿದ್ದರು. ಇದನ್ನೂ ಓದಿ: ಆತ್ಮವಿಶ್ವಾಸವನ್ನು ಹೆಚ್ಚು ಮಾಡುತ್ತವೆ ಈ ಟಿಪ್ಸ್! ಇಂದೇ ಫಾಲೋ ಮಾಡಿ ಸಹಾಯಕ್ಕೆ ಬಂದ ಗ್ಲುಕೋಸ್ ಮಾನಿಟರ್ ಗ್ಲುಕೋಸ್ ಮಾನಿಟರ್ ಅನ್ನು ಬಳಸಲು ಆರಂಭಿಸಿದ ಗೇಲ್, ರಕ್ತದಲ್ಲಿನ ಸಕ್ಕರೆಯ ಮಟ್ಟಗಳಲ್ಲಿನ ಬದಲಾವಣೆಗಳ ಕುರಿತು ನಿರಂತರ ಅಪ್‌ಡೇಟ್‌ಗಳ ಬಗ್ಗೆ ತಿಳಿದುಕೊಂಡರು. ಇದರೊಂದಿಗೆ ಆರೋಗ್ಯ ತಂತ್ರಜ್ಞಾನ ಕಂಪನಿ ನ್ಯೂಟ್ರಿಸೆನ್ಸ್ ಮೂಲಕ ಸಾಧನಕ್ಕೆ ಸಂಪರ್ಕ ಹೊಂದಿದ್ದರು ಈ ಕಂಪನಿ ಪೌಷ್ಟಿಕತಜ್ಞರ ಮೂಲಕ ಬೆಂಬಲವನ್ನೊದಗಿಸುತ್ತದೆ ಹಾಗೂ ಸರಿಯಾದ ಔಷಧ ಸೂಚನೆ ಆಹಾರ ಕ್ರಮಗಳ ಸಹಕಾರವನ್ನು ನೀಡುತ್ತದೆ. ಗೇಲ್ ಈ ಡಿವೈಸ್‌ಗಳನ್ನು ಬಳಸಿದ ಆರಂಭದಲ್ಲಿ ಅವು ಇನ್ನೂ ಪ್ರವರ್ಧಮಾನಕ್ಕೆ ಬರುತ್ತಿದ್ದ ಸಮಯವಾಗಿತ್ತು ಆದರೂ ಇದು ನನಗೆ ಹೆಚ್ಚಿನ ಪ್ರಯೋಜನವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ. 56 ರ ಹರೆಯದ ಗೇಲ್ 56 ಕೆಜಿಗಳನ್ನು ಕಳೆದುಕೊಂಡು ಇನ್ನಷ್ಟು ಸಕ್ರಿಯರಾಗಿದ್ದಾರೆ. ರಕ್ತದಲ್ಲಿನ ಸಕ್ಕರೆಯನ್ನು ಪತ್ತೆಹಚ್ಚುವುದು ಆರೋಗ್ಯಕರ ಅಭ್ಯಾಸಗಳನ್ನು ಅನುಸರಿಸಲು ಹಾಗೂ ಶಕ್ತಿಯುತ ಆಹಾರ ಆಯ್ಕೆಗಳನ್ನು ತಮ್ಮದಾಗಿಸಿಕೊಳ್ಳಲು ನೆರವಾಗಿದೆ ಎಂದು ತಿಳಿಸಿದ್ದಾರೆ. ಸಂಸ್ಕರಿಸಿದ ಕಾರ್ಬ್‌ಗಳ ಮಿತ ಬಳಕೆ ಇಟಾಲಿಯನ್ ಕುಟುಂಬದವರಾದ ಗೇಲ್ ಪಗಾನೊಗೆ ಪಾಸ್ತಾ ಎಂದರೆ ತುಂಬಾ ಪ್ರಿಯವಾಗಿತ್ತು. ರಕ್ತದಲ್ಲಿನ ಸಕ್ಕರೆಯನ್ನು ಮಾನಿಟರ್ ಮಾಡುತ್ತಿದ್ದ ಗೇಲ್‌ಗೆ ಪಾಸ್ತಾವನ್ನು ಸಂಪೂರ್ಣವಾಗಿ ತ್ಯಜಿಸಬೇಕಾಗಿಲ್ಲ ಎಂಬುದನ್ನು ಅರ್ಥಮಾಡಿಸಿತು. ವಿಭಿನ್ನ ಆಹಾರಗಳು ತನ್ನ ದೇಹದ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪ್ರಯೋಗಿಸಿದ ಗೇಲ್, ಮನೆಯಲ್ಲೇ ಪಾಸ್ತಾ ಹಾಗೂ ಬ್ರೆಡ್ ಅನ್ನು ತಯಾರಿಸುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯಕವಾಯಿತು ಎಂದು ಹೇಳಿದ್ದಾರೆ. ಪ್ರೊಸೆಸ್ಡ್ ಆಹಾರಗಳು ಸಲಾಡ್‌ಗಳನ್ನು ಅವರು ಹಿತಮಿತವಾಗಿ ಸೇವಿಸಲಾರಂಭಿಸಿದರು. ಕೆಲವೊಮ್ಮೆ ನಾವು ಆರೋಗ್ಯಕರ ಎಂದು ಭಾವಿಸುವ ಆಹಾರಗಳಲ್ಲಿ ಕೂಡ ಸಕ್ಕರೆ ಅಂಶಗಳಿರುತ್ತವೆ ಎಂದು ಗೇಲ್ ಹೇಳುತ್ತಾರೆ. ಪ್ಯಾಕ್ ಮಾಡಿದ ಆಹಾರಗಳು, ಸಿದ್ಧ ಆಹಾರಗಳು ಹಾಗೂ ಹೋಟೆಲ್‌ನ ತಿಂಡಿತಿನಿಸುಗಳನ್ನು ಸೇವಿಸುವಾಗ ಕೊಂಚ ಎಚ್ಚರಿಕೆ ವಹಿಸಿ ಎಂದು ತಿಳಿಸುತ್ತಾರೆ. ಪ್ರತಿ ಊಟದಲ್ಲಿ ಹೆಚ್ಚು ಪ್ರೊಟೀನ್, ಫೈಬರ್ ಸೇರ್ಪಡೆ ಕಾರ್ಬ್ ಅನ್ನು ಸಂಪೂರ್ಣವಾಗಿ ತ್ಯಜಿಸದೆ ಗೇಲ್ ಮಾಡಿದ ಇನ್ನೊಂದು ಬದಲಾವಣೆ ಎಂದರೆ ಮೊದಲಿಗೆ ಪ್ರೊಟೀನ್ ನಂತರ ಫೈಬರ್ ಹಾಗೂ ಕೊನೆಗೆ ಅನ್ನ, ಚಪಾತಿ ಮೊದಲಾದ ಕಾರ್ಬ್‌ಯುಕ್ತ ಅಹಾರಗಳನ್ನು ಸೇವಿಸಿದರು. ತಮ್ಮ ಪ್ರತಿ ಆಹಾರದಲ್ಲಿ ಹೆಚ್ಚು ಪ್ರೊಟೀನ್, ಫೈಬರ್ ಹಾಗೂ ಕಡಿಮೆ ಕಾರ್ಬ್ಸ್ ಇರುವಂತೆ ನೋಡಿಕೊಂಡರು. ಪ್ರೊಟೀನ್ ಹಾಗೂ ಫೈಬರ್‌ಯುಕ್ತ ಆಹಾರಗಳು ರಕ್ತದ ಸಕ್ಕರೆ ಮಟ್ಟವನ್ನು ಕಾರ್ಬ್‌ ಆಹಾರಗಳಂತೆ ಒಮ್ಮೆಗೆ ಏರಿಸುವುದಿಲ್ಲವೆಂದು ಗೇಲ್ ಹೇಳುತ್ತಾರೆ. ಮಧ್ಯಂತರ ಉಪವಾಸ ಗೇಲ್ ಅವರು 14 ಗಂಟೆಗಳ ಮಧ್ಯಂತರ ಉಪವಾಸವನ್ನು ಅನುಸರಿಸಿದರು. ಸಂಜೆ 5 ಕ್ಕೆಲ್ಲಾ ಕೊನೆಯೂಟ ಮುಗಿಸುತ್ತಿದ್ದ ಗೇಲ್ ಇದರಿಂದ ಈ ಹಿಂದೆ ತಡವಾಗಿ ಊಟ ಮಾಡುತ್ತಿದ್ದ ತಮ್ಮ ಅಭ್ಯಾಸಕ್ಕೆ ಪೂರ್ಣ ವಿರಾಮ ಹಾಕಿದರು ಎಂದು ತಿಳಿಸಿದ್ದಾರೆ. ಉಪವಾಸವು ಅವರ ರಕ್ತದ ಸಕ್ಕರೆ ಮಟ್ಟವನ್ನು ಸಾಮಾನ್ಯ ಶ್ರೇಣಿಯಲ್ಲಿರಿಸಲು ಸಹಾಯ ಮಾಡಿತು ಹಾಗೂ ಪ್ರಿಡಯಾಬಿಟೀಸ್ ಇರುವವರಿಗೆ ಕೂಡ ಮಧ್ಯಂತ ಉಪವಾಸ ಉಪಯುಕ್ತವಾದುದು ಎಂದು ತಿಳಿಸಿದ್ದಾರೆ. ಸಪ್ಲಿಮೆಂಟ್‌ನ ಬಳಕೆ ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನಗೊಳಿಸಲು ಗೇಲ್ ಹರ್ಬಲ್ ಸಪ್ಲಿಮೆಂಟ್ ಆದ ನೇಚರ್ಸ್ ಒಜಿಪಿಕ್ ಅನ್ನು ತೆಗೆದುಕೊಳ್ಳಲಾರಂಭಿಸಿದರು. ಇದು ತೂಕ ಇಳಿಕೆಗೆ ಸಹಾಯ ಮಾಡುತ್ತದೆ ಎಂಬುದು ಖಾತ್ರಿಪಡಿಸದೇ ಇದ್ದರೂ ಇದು ರಕ್ತದ ಸಕ್ಕರೆ ಮಟ್ಟ ಹಾಗೂ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ ಎಂದು ತಿಳಿಸಿದ್ದಾರೆ. ಸ್ಟ್ರೆಂಥ್ ಟ್ರೈನಿಂಗ್ ವಾಕಿಂಗ್‌ಗೆ ಆದ್ಯತೆ ನೀಡಿದ್ದ ಗೇಲ್ ದಿನಕ್ಕೆ 10,000 ಹೆಜ್ಜೆಗಳ ಗುರಿಯನ್ನಿರಿಸಿಕೊಂಡಿದ್ದರು. ಇದರೊಂದಿಗೆ ರೆಸಿಸ್ಟೆನ್ಸ್ ಬ್ಯಾಂಡ್‌ಗಳೊಂದಿಗೆ 15 ನಿಮಿಷಗಳ ಸ್ಟ್ರೆಂಥ್ ಟ್ರೈನಿಂಗ್ ಅನ್ನು ಸೇರಿಸಿಕೊಂಡರು. ತೂಕ ಇಲ್ಲವೇ ಬ್ಯಾಂಡ್‌ಗಳೊಂದಿಗೆ ಮಾಡುವ ಸ್ಟ್ರೆಂಥ್ ಟ್ರೈನಿಂಗ್ ಆಯುಷ್ಯವನ್ನು ವರ್ಧಿಸುತ್ತದೆ ಹಾಗೂ ಕಾಯಿಲೆಯನ್ನು ದೂರ ಮಾಡುತ್ತದೆ ಎಂದು ಅಧ್ಯಯನಗಳು ಹೇಳಿವೆ ಎಂದು ಗೇಲ್ ತಿಳಿಸಿದ್ದಾರೆ. ಊಟ ತಿಂಡಿಯ ನಂತರ ಕೂಡ ಗೇಲ್ ನಡೆಯುತ್ತಾರೆ ಎಂದು ಹೇಳುತ್ತಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.