NEWS

CA Success Story: 10 ವರ್ಷ ಕಷ್ಟಪಟ್ಟು ಸಿಎ ಪಾಸ್​ ಮಾಡಿದ ಚಾಯ್​ವಾಲಾನ ಮಗಳು! ತಂದೆ-ಮಗಳ ಭಾವುಕ ವಿಡಿಯೋ ವೈರಲ್

ತಂದೆ-ಮಗಳ ವೈರಲ್​ ದೃಶ್ಯ ಮಧ್ಯಮ ವರ್ಗದ ಕುಟುಂಬದಲ್ಲಿ ಹುಟ್ಟಿ ಉನ್ನತ ಶಿಕ್ಷಣ ಪಡೆಯುವುದು ಅಂದ್ರೆ ಸಾಮಾನ್ಯ ಸಂಗತಿಯಲ್ಲ. ಆದರೆ ಅದೇ ರೀತಿ ಬಡ ಕುಟುಂಬದ ಮಕ್ಕಳಿಗೆ ಶಿಕ್ಷಣ ನೀಡುವುದಂದ್ರೆ ಅದು ಸಾಮಾನ್ಯದ ಮಾತಲ್ಲ. ಒಬ್ಬನ ವಿದ್ಯಾಭ್ಯಾಸಕ್ಕಾಗಿ ಇಡೀ ಕುಟುಂಬವೇ ಆರ್ಥಿಕ ಸಮಸ್ಯೆಯಿಂದ ಹೆಣಗಾಡುತ್ತಿರುತ್ತದೆ. ಆದರೆ ಈ ಎಲ್ಲಾ ಕಷ್ಟಗಳಿದ್ದರೂ ಮಕ್ಕಳಿಗೆ ಉತ್ತಮ ಶಿಕ್ಷಣ (Education) ನೀಡ್ಬೇಕು ಅನ್ನೋದು ಪ್ರತಿಯೊಂದು ತಂದೆ-ತಾಯಿಯ ಕನಸು. ಹೀಗೆ ಮಕ್ಕಳು ಎತ್ತರಕ್ಕೆ ಏರಿದಾಗ ಅವರ ಸಂತೋಷವನ್ನು ಪದಗಳಲ್ಲಿ ಹೇಳಲಾಗುವುದಿಲ್ಲ. ಇತ್ತೀಚಿಗೆ ಇಂತಹದ್ದೇ ವಿಡಿಯೋ ಒಂದು ವೈರಲ್ ಆಗುತ್ತಿದೆ. ಮಗಳ ಯಶಸ್ಸನ್ನು (Daughter Success) ಕಂಡು ತಂದೆಯೊಬ್ಬರು ಕಣ್ಣೀರು ಹಾಕುತ್ತಿರುವ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಸಖತ್​​ ವೈರಲ್ ಆಗಿದೆ. ಮನೆಯವರೆಲ್ಲ ಸೇರಿ ಕಷ್ಟಪಟ್ಟು ದುಡಿದರೆ ಮಾತ್ರ ಮೂರು ಹೊತ್ತು ಊಟ ಮಾಡುವ ಪರಿಸ್ಥಿತಿ ಕೆಲ ಕುಟುಂಬಗಳಲ್ಲಿ ಇಂದಿಗೂ ಇದೆ. ಆದರೆ ಇಂತಹ ಕುಟುಂಬದಲ್ಲಿ ಹುಟ್ಟಿದ ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಲು ಮುಂದೆ ಬರುವವರು ಬಹಳ ಕಡಿಮೆ. ಇದನ್ನೂ ಓದಿ: ರಾಷ್ಟ್ರಮಟ್ಟದ ಆಟಗಾರನಾಗಿದ್ದರೂ UPSC ಪಾಸ್ ಮಾಡಿದ ನವನೀತ್ ಆನಂದ್ ಇದರಿಂದ ಏನೂ ಲಾಭ ಇಲ್ಲ, ನಮಗೇ ನಷ್ಟ ಎನ್ನುವವರು ಕೆಲವರು ಇದ್ದಾರೆ. ಆದರೆ, ಇಲ್ಲೊಂದು ದೆಹಲಿಯ ಅಮಿತಾ ಪ್ರಜಾಪತಿ ಎಂಬ ಹುಡುಗಿಯ ಪೋಷಕರು ಹಾಗೆ ಯೋಚಿಸದೆ, ಉತ್ತಮ ಶಿಕ್ಷಣ ನೀಡಿ ಇಂದು ಸಿಎ ಪಾಸ್​ ಮಾಡಿಸಿದ್ದಾರೆ. ಚಹಾ ಮಾರುವವರ ಮಗಳು ಸಿಎ ಪಾಸ್​! ಸರಿಯಾದ ವಿದ್ಯಾಭ್ಯಾಸವಿಲ್ಲದೆ ಚಹಾ ಮಾರಿ ಜೀವನ ಸಾಗಿಸುತ್ತಿರುವ ಇಲ್ಲೊಬ್ಬರು, ತನ್ನ ಮಗಳು ನನ್ನಂತೆ ಆಗಬಾರದೆಂಬ ಕಾರಣಕ್ಕೆ, ಕಷ್ಟಪಟ್ಟು ದುಡಿದ ಪ್ರತಿ ರೂಪಾಯಿಯಲ್ಲಿ ಅಮಿತಾ ಪ್ರಜಾಪತಿಗೆ ಶಿಕ್ಷಣ ನೀಡುವ ಮೂಲಕ ಇದೀಗ ಎಲ್ಲರಿಗೂ ಮಾದರಿಯಾಗಿದ್ದಾರೆ. 10 ವರ್ಷಗಳ ಕಠಿಣ ಪರಿಶ್ರಮ ಅಮಿತಾ ಪ್ರಜಾಪತಿ ಸಿಎ ಆಗಲು 10 ವರ್ಷಗಳನ್ನು ತೆಗೆದುಕೊಂಡರಂತೆ. ಇದೇ ವೇಳೆ ಅಮಿತಾ ಜೀವನದಲ್ಲಿ ಹಲವು ಸಮಸ್ಯೆಗಳನ್ನು ಸಹ ಎದುರಿಸಿದ್ದರಂತೆ. ಆದರೆ ಈ ಎಲ್ಲಾ ಸವಾಲುಗಳನ್ನು ಎದುರಿಸಿಮ ಛಲ ಬಿಡದ ಅಮಿತಾ 10 ವರ್ಷಗಳ ಕಠಿಣ ಪರಿಶ್ರಮದ ನಂತರ ತನ್ನ ಗುರಿಯನ್ನು ಸಾಧಿಸಿದಳು. ತಂದೆ -ಮಗಳ ಭಾವುಕ ವಿಡಿಯೋ ವೈರಲ್ ಇನ್ನು ಸೋಶಿಯಲ್ ಮೀಡಿಯಾದಲ್ಲಿ ತಂದೆ-ಮಗಳ ಭಾವುಕ ವಿಡಿಯೋ ವೈರಲ್ ಆಗಿದೆ. ಇಲ್ಲಿ 10 ವರ್ಷಗಳ ನಂತರ ಚಾರ್ಟೆಡ್​ ಅಕೌಂಟ್​(ಸಿಎ) ಪರೀಕ್ಷೆಯಲ್ಲಿ ಪಾಸ್​ ಮಾಡಿ ತಂದೆ ಬಳಿ ಬಂದು ಮಗಳು ಕೃತಜ್ಞತೆ ಸಲ್ಲಿಸುವುದನ್ನು ನೋಡಬಹುದು. ಇನ್ನು ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದ್ದು, ಹಲವರು ಅಮಿತಾ ಅವರಿ ಧನ್ಯವಾದ ತಿಳಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.