NEWS

Dakshina Kannada: ಗಡಾಯಿ ಕಲ್ಲು ಏರುವವರಿಗೆ ಅವಕಾಶ ನೀಡಿದ ಅರಣ್ಯ ಇಲಾಖೆ- ನಿರ್ಬಂಧ ತೆರವು

ವಿಡಿಯೋ ಇಲ್ಲಿ ನೋಡಿ ಚಾರಣಿಗರ ಸ್ವರ್ಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು ಏರಲು ಹೇರಿದ್ದ ನಿರ್ಬಂಧವನ್ನು ಅರಣ್ಯ ಇಲಾಖೆ ಹಿಂಪಡೆದಿದೆ. ಸಮುದ್ರ ಮಟ್ಟದಿಂದ 1788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ ತುದಿ ತಲುಪಬೇಕಾದರೆ ಸುಮಾರು 2800 ಕ್ಕೂ ಅಧಿಕ ಮೆಟ್ಟಿಲುಗಳನ್ನು ಹತ್ತಬೇಕು. ಕಳೆದ ಬೇಸಿಗೆಯಿಂದ ಗಡಾಯಿಕಲ್ಲು ಏರಲು ಚಾರಣಿಗರಿಗೆ ನಿರ್ಬಂಧ ಹೇರಲಾಗಿತ್ತು. ಗಡಾಯಿಕಲ್ಲು ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶವಿದ್ದು,ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚಿನ ಭಯದಿಂದ ಅವಕಾಶ ನಿರಾಕರಿಸಲಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ಜಾರುವ ಬಂಡೆ, ಮೆಟ್ಟಿಲು, ಕಲ್ಲುಗಳಿರುವ ಕಾರಣ ಜಾರುವ ಅಪಾಯವಿರೋದರಿಂದ ಪ್ರವೇಶ ನಿಷೇಧ ಹೇರಿತ್ತು. ಆದರೆ ಇದೀಗ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಬಂಡೆ ಒಣಗಿರುವ ಕಾರಣ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿದೆ. ಈ ಅವಕಾಶ ಮುಂದಿನ ಡಿಸೆಂಬರ್‌ವರೆಗೂ ಮುಂದುವರಿಯುವ ಸಾಧ್ಯತೆಗಳಿವೆ. ಇದನ್ನೂ ಓದಿ: E-Bus: ಬೆಂಗಳೂರು ಮಹಾನಗರಕ್ಕೆ ವರದಾನವಾದ ಬಿಎಂಟಿಸಿಯ ಈ ಕೊಡುಗೆ! ಸದ್ಯ ಗಡಾಯಿಕಲ್ಲನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸಂರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡಿದೆ. ಉಜಿರೆಯ ನಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುಪರ್ದಿಯಲ್ಲಿದೆ. ಗಡಾಯಿಕಲ್ಲನ್ನು ಜಮಾಲಾಬಾದ್ ಕೋಟೆ, ನರಸಿಂಹಗಢ ಎಂದೂ ಕರೆಯಲಾಗುತ್ತದೆ. ಗಡಾಯಿಕಲ್‌ನಲ್ಲಿ ಫಿರಂಗಿ, ಬಂಡೆಗಳ ನಡುವಿನಿಂದ ಹರಿಯುವ ನೀರು, ಭಾಗಶಃ ಧ್ವಂಸವಾಗಿರುವ ಶಸ್ತ್ರಾಸ್ತ್ರ ಕೊಠಡಿ, ಕೆರೆಗಳನ್ನು ನೋಡಬಹುದಾಗಿದೆ. ಗಡಾಯಿಕಲ್ಲು ಇತ್ತೀಚೆಗೆ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಒಂದು ಕೀಮೀ ದೂರದಲ್ಲಿರುವ ಲಾಯಿಲ ಎಂಬಲ್ಲಿಂದ ಕಿಲ್ಲೂರು ಮಾರ್ಗದಲ್ಲಿ ಐದು ಕೀಮಿ ಸಾಗಿದರೆ ಮಂಜೊಟ್ಟಿ ಎನ್ನುವ ಊರು ಸಿಗುತ್ತದೆ..ಅಲ್ಲಿಂದ ಮೂರು ಕಿ.ಮೀ ಹಾದಿ ಕ್ರಮಿಸಿದರೆ ಗಡಾಯಿಕಲ್ಲು ಬುಡಕ್ಕೆ ತಲುಪಬಹುದಾಗಿದೆ. ಬಸ್ ನಲ್ಲಿ ಹೋಗುವವರಿಗೆ ಮಂಜೊಟ್ಟಿ ತನಕ ಬಸ್ ವ್ಯವಸ್ಥೆ ಇದೆ. ಸ್ವಂತ ವಾಹನಗಳಲ್ಲಿ ತೆರಳುವವರಿಗೆ ಕೋಟೆಯ ಸಮೀಪವೇ ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಗಡಾಯಿಕಲ್ಲು ಏರುವವರಿಗೆ ದೊಡ್ಡವರಿಗೆ 50 ರೂಪಾಯಿ ಮತ್ತು ಮಕ್ಕಳಿಗೆ 25 ರೂಪಾಯಿ ಟಿಕೆಟ್ ದರವಿದೆ. ಈ ಗಡಾಯಿಕಲ್ಲು ಸಂಪೂರ್ಣ ಪ್ಲಾಸ್ಟಿಕ್ ‌ನಿಷೇಧಿತ ಪ್ರದೇಶವಾಗಿದೆ. ಕನ್ನಡ ಸುದ್ದಿ / ನ್ಯೂಸ್ / ದಕ್ಷಿಣ ಕನ್ನಡ / Dakshina Kannada: ಗಡಾಯಿ ಕಲ್ಲು ಏರುವವರಿಗೆ ಅವಕಾಶ ನೀಡಿದ ಅರಣ್ಯ ಇಲಾಖೆ- ನಿರ್ಬಂಧ ತೆರವು Dakshina Kannada: ಗಡಾಯಿ ಕಲ್ಲು ಏರುವವರಿಗೆ ಅವಕಾಶ ನೀಡಿದ ಅರಣ್ಯ ಇಲಾಖೆ- ನಿರ್ಬಂಧ ತೆರವು ವಿಡಿಯೋ ಇಲ್ಲಿ ನೋಡಿ ಗಡಾಯಿಕಲ್ಲನ್ನು ಜಮಾಲಾಬಾದ್ ಕೋಟೆ, ನರಸಿಂಹಗಢ ಎಂದೂ ಕರೆಯಲಾಗುತ್ತದೆ. ಗಡಾಯಿಕಲ್‌ನಲ್ಲಿ ಫಿರಂಗಿ, ಬಂಡೆಗಳ ನಡುವಿನಿಂದ ಹರಿಯುವ ನೀರು, ಭಾಗಶಃ ಧ್ವಂಸವಾಗಿರುವ ಶಸ್ತ್ರಾಸ್ತ್ರ ಕೊಠಡಿ, ಕೆರೆಗಳನ್ನು ನೋಡಬಹುದಾಗಿದೆ. ಮುಂದೆ ಓದಿ … 2-MIN READ Kannada Dakshina Kannada,Karnataka Last Updated : October 6, 2024, 6:14 pm IST Whatsapp Facebook Telegram Twitter Follow us on Follow us on google news Published By : Latha CG Reported By : Shreyas K ಸಂಬಂಧಿತ ಸುದ್ದಿ ಚಾರಣಿಗರ ಸ್ವರ್ಗ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗಡಾಯಿಕಲ್ಲು ಏರಲು ಹೇರಿದ್ದ ನಿರ್ಬಂಧವನ್ನು ಅರಣ್ಯ ಇಲಾಖೆ ಹಿಂಪಡೆದಿದೆ. ಸಮುದ್ರ ಮಟ್ಟದಿಂದ 1788 ಅಡಿ ಎತ್ತರದಲ್ಲಿರುವ ಗಡಾಯಿಕಲ್ಲಿನ ತುದಿ ತಲುಪಬೇಕಾದರೆ ಸುಮಾರು 2800 ಕ್ಕೂ ಅಧಿಕ ಮೆಟ್ಟಿಲುಗಳನ್ನು ಹತ್ತಬೇಕು. ಕಳೆದ ಬೇಸಿಗೆಯಿಂದ ಗಡಾಯಿಕಲ್ಲು ಏರಲು ಚಾರಣಿಗರಿಗೆ ನಿರ್ಬಂಧ ಹೇರಲಾಗಿತ್ತು. ಗಡಾಯಿಕಲ್ಲು ಸುತ್ತಮುತ್ತ ಸಾಕಷ್ಟು ಅರಣ್ಯ ಪ್ರದೇಶವಿದ್ದು,ಬೇಸಿಗೆ ಕಾಲದಲ್ಲಿ ಕಾಡ್ಗಿಚ್ಚಿನ ಭಯದಿಂದ ಅವಕಾಶ ನಿರಾಕರಿಸಲಾಗಿತ್ತು. ಮಳೆಗಾಲದ ಸಂದರ್ಭದಲ್ಲಿ ಜಾರುವ ಬಂಡೆ, ಮೆಟ್ಟಿಲು, ಕಲ್ಲುಗಳಿರುವ ಕಾರಣ ಜಾರುವ ಅಪಾಯವಿರೋದರಿಂದ ಪ್ರವೇಶ ನಿಷೇಧ ಹೇರಿತ್ತು. ಆದರೆ ಇದೀಗ ಮಳೆ ಕಡಿಮೆಯಾದ ಹಿನ್ನಲೆಯಲ್ಲಿ ಬಂಡೆ ಒಣಗಿರುವ ಕಾರಣ ಅರಣ್ಯ ಇಲಾಖೆ ಅವಕಾಶ ಕಲ್ಪಿಸಿದೆ. ಈ ಅವಕಾಶ ಮುಂದಿನ ಡಿಸೆಂಬರ್‌ವರೆಗೂ ಮುಂದುವರಿಯುವ ಸಾಧ್ಯತೆಗಳಿವೆ. ಜಾಹೀರಾತು ಇದನ್ನೂ ಓದಿ: E-Bus: ಬೆಂಗಳೂರು ಮಹಾನಗರಕ್ಕೆ ವರದಾನವಾದ ಬಿಎಂಟಿಸಿಯ ಈ ಕೊಡುಗೆ! ಸದ್ಯ ಗಡಾಯಿಕಲ್ಲನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ಸಂರಕ್ಷಿತ ಸ್ಮಾರಕ ಎಂದು ಘೋಷಣೆ ಮಾಡಿದೆ. ಉಜಿರೆಯ ನಡ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಸುಪರ್ದಿಯಲ್ಲಿದೆ. ಗಡಾಯಿಕಲ್ಲನ್ನು ಜಮಾಲಾಬಾದ್ ಕೋಟೆ, ನರಸಿಂಹಗಢ ಎಂದೂ ಕರೆಯಲಾಗುತ್ತದೆ. ಗಡಾಯಿಕಲ್‌ನಲ್ಲಿ ಫಿರಂಗಿ, ಬಂಡೆಗಳ ನಡುವಿನಿಂದ ಹರಿಯುವ ನೀರು, ಭಾಗಶಃ ಧ್ವಂಸವಾಗಿರುವ ಶಸ್ತ್ರಾಸ್ತ್ರ ಕೊಠಡಿ, ಕೆರೆಗಳನ್ನು ನೋಡಬಹುದಾಗಿದೆ. ಗಡಾಯಿಕಲ್ಲು ಇತ್ತೀಚೆಗೆ ಬಹಳ ಪ್ರಸಿದ್ಧಿಯನ್ನು ಪಡೆದಿದೆ. ಬೆಳ್ತಂಗಡಿ ತಾಲೂಕು ಕೇಂದ್ರದಿಂದ ಒಂದು ಕೀಮೀ ದೂರದಲ್ಲಿರುವ ಲಾಯಿಲ ಎಂಬಲ್ಲಿಂದ ಕಿಲ್ಲೂರು ಮಾರ್ಗದಲ್ಲಿ ಐದು ಕೀಮಿ ಸಾಗಿದರೆ ಮಂಜೊಟ್ಟಿ ಎನ್ನುವ ಊರು ಸಿಗುತ್ತದೆ..ಅಲ್ಲಿಂದ ಮೂರು ಕಿ.ಮೀ ಹಾದಿ ಕ್ರಮಿಸಿದರೆ ಗಡಾಯಿಕಲ್ಲು ಬುಡಕ್ಕೆ ತಲುಪಬಹುದಾಗಿದೆ. ಜಾಹೀರಾತು ಮನೆಯೊಳಗೆ ಸಡನ್ನಾಗಿ ಕಾಗೆ ಹೊಕ್ಕರೆ ಶುಭವೋ ಅಶುಭವೋ!? ಇನ್ನಷ್ಟು ಸುದ್ದಿ… ಬಸ್ ನಲ್ಲಿ ಹೋಗುವವರಿಗೆ ಮಂಜೊಟ್ಟಿ ತನಕ ಬಸ್ ವ್ಯವಸ್ಥೆ ಇದೆ. ಸ್ವಂತ ವಾಹನಗಳಲ್ಲಿ ತೆರಳುವವರಿಗೆ ಕೋಟೆಯ ಸಮೀಪವೇ ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಗಡಾಯಿಕಲ್ಲು ಏರುವವರಿಗೆ ದೊಡ್ಡವರಿಗೆ 50 ರೂಪಾಯಿ ಮತ್ತು ಮಕ್ಕಳಿಗೆ 25 ರೂಪಾಯಿ ಟಿಕೆಟ್ ದರವಿದೆ. ಈ ಗಡಾಯಿಕಲ್ಲು ಸಂಪೂರ್ಣ ಪ್ಲಾಸ್ಟಿಕ್ ‌ನಿಷೇಧಿತ ಪ್ರದೇಶವಾಗಿದೆ. Whatsapp Facebook Telegram Twitter Follow us on Follow us on google news ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ Tags: Dakshina Kannada , Local 18 First Published : October 6, 2024, 6:14 pm IST ಮುಂದೆ ಓದಿ None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.