NEWS

Beauty Tips: ಕಪ್ಪಾದ ಮೊಣಕೈಯಿಂದಿ ನಿಮ್ಮ ಅಂದ ಹಾಳಾಗಿದ್ಯಾ? ಈ ಸಮಸ್ಯೆಗೆ ಇಲ್ಲಿದೆ ನೋಡಿ ಮದ್ದು!

ಸಾಂದರ್ಭಿಕ ಚಿತ್ರ ಮುಖದ ಸೌಂದರ್ಯ (Face Beauty) ಹೆಚ್ಚಿಸಿಕೊಳ್ಳಲು ಜನ ನಾನಾ ಪ್ರಯತ್ನಗಳನ್ನು ಮಾಡುತ್ತಾರೆ. ಕೆಲವರು ಬ್ಯೂಟಿ ಪಾರ್ಲರ್​ಗೆ ಹೋದರೆ, ಮತ್ತೆ ಕೆಲವರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಉತ್ಪನ್ನಗಳನ್ನು ತ್ವಚೆಗೆ ಬಳಸುತ್ತಾರೆ. ಆದರೆ ಮುಖದ ಅಂದ ಹೆಚ್ಚಿಸಿಕೊಳ್ಳುವ ಭರದಲ್ಲಿ ಕೆಲವೊಮ್ಮೆ ದೇಹದ ಸೌಂದರ್ಯದ ಬಗ್ಗೆ ಕಾಳಜಿ ವಹಿಸುವುದನ್ನು ಮರೆತು ಬಿಡುತ್ತಾರೆ. ಇದರಿಂದಾಗಿ ಮೊಣಕೈಗಳು ಕಪ್ಪಾಗಿ (Dark Elbow) ಮತ್ತು ಕೊಳಕಾಗಿ ಕಾಣಲು ಪ್ರಾರಂಭಿಸುತ್ತದೆ. ಅದರಲ್ಲೂ ಕೆಲವರಿಗೆ ಸ್ಲೀವ್ ಲೆಸ್ ಅಥವಾ ಹಾಫ್ ಸ್ಲೀವ್ ಬಟ್ಟೆ ತೊಡಲು ಇಷ್ಟವಾಗುವುದಿಲ್ಲ. ಸದ್ಯ ಚಳಿಗಾಲ (Winter) ನಿಮ್ಮ ಮೊಣಕೈಯನ್ನು ಬಿಳಿಯಾಗಿಸಲು ಇದೇ ಉತ್ತಮ ಸಮಯ. ಕೆಲವು ಟಿಪ್ಸ್​ ಅನುಸರಿಸಿದರೆ ಬೇಸಿಗೆ ಬಂದರೂ ನಿಮ್ಮ ಮೊಣಕೈಗಳು ಸುಂದರವಾಗಿ ಕಾಣಿಸುತ್ತದೆ. ಹಾಗಾದ್ರೆ ಮೊಣಕೈಗಳನ್ನು ಸ್ವಚ್ಛಗೊಳಿಸಲು 3 ಅತ್ಯುತ್ತಮ ಮನೆಮದ್ದುಗಳು ಯಾವುವು ಎಂದು ತಿಳಿಯೋಣ ಬನ್ನಿ. ಅರಿಶಿನ ಮತ್ತು ನಿಂಬೆ: ಅರಿಶಿನ ಮತ್ತು ನಿಂಬೆ ಪೇಸ್ಟ್ ಅನ್ನು ಹಚ್ಚುವ ಮೂಲಕ ಮೊಣಕೈಗಳ ಮೇಲಿನ ಕಪ್ಪು ಕಲೆಯನ್ನು ನಿವಾರಿಸಬಹುದು. ಇದಕ್ಕಾಗಿ ಅರಿಶಿನ ಪುಡಿಗೆ ಸ್ವಲ್ಪ ನಿಂಬೆ ರಸ ಸೇರಿಸಿ, ಗಟ್ಟಿಯಾಗಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಅದನ್ನು ಮೊಣಕೈ ಮೇಲೆ ಹಚ್ಚಿ. 15 ರಿಂದ 20 ನಿಮಿಷಗಳ ಕಾಲ ಒಣಗಲು ಬಿಡಿ. ಇದು ಒಣಗಿದ ನಂತರ ಸ್ಕ್ರಬ್ ಮಾಡಿ, ಸ್ವಚ್ಛಗೊಳಿಸಿ. ಅರಿಶಿನದಲ್ಲಿರುವ ಕರ್ಕ್ಯುಮಿನ್ ದೇಹದಲ್ಲಿ ಮೆಲನಿನ್ ಚಟುವಟಿಕೆಯನ್ನು ತಡೆಯುತ್ತದೆ. ಇದರಿಂದಾಗಿ ಕಪಪ್ಉ ಕಲೆಯನ್ನು ತೆರವುಗೊಳಿಸುತ್ತದೆ. ನಿಂಬೆ, ಸಕ್ಕರೆ ಮತ್ತು ಜೇನುತುಪ್ಪ ಒಂದು ಬಟ್ಟಲಿನಲ್ಲಿ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ. ಅದರಲ್ಲಿ ತಲಾ ಒಂದು ಚಮಚ ಸಕ್ಕರೆ ಮತ್ತು ಜೇನುತುಪ್ಪ ಸೇರಿಸಿ. ಈಗ ಸಿದ್ಧಪಡಿಸಿದ ಪೇಸ್ಟ್ ಅನ್ನು ಮೊಣಕೈಗಳು ಮತ್ತು ಮೊಣಕಾಲುಗಳಿಗೆ ಹಚ್ಚಿ, ನಿಧಾನವಾಗಿ ಸ್ಕ್ರಬ್ ಮಾಡಿ, ಸುಮಾರು 20 ನಿಮಿಷಗಳ ಕಾಲ ನಿಮ್ಮ ಚರ್ಮದ ಮೇಲೆ ಹಾಗೆಯೇ ಬಿಡಿ. ನಿಂಬೆ, ಜೇನುತುಪ್ಪ ಮತ್ತು ಸಕ್ಕರೆಯ ಮಿಶ್ರಣವನ್ನು ಹಚ್ಚುವುದರಿಂದ ಚರ್ಮವು ಹೊಳೆಯುತ್ತದೆ ಮತ್ತು ಸ್ಪಷ್ಟವಾಗಿ ಕಾಣುತ್ತದೆ. ಅಲ್ಲದೇ, ಸಕ್ಕರೆ ಚರ್ಮವನ್ನು ಎಫ್ಫೋಲಿಯೇಟ್ ಮಾಡುತ್ತದೆ. ಇದನ್ನೂ ಓದಿ: ಶುಗರ್​ ಜಾಸ್ತಿ ಆಗಿದ್ಯಾ? ಈ ಎಲೆಗಳನ್ನು ತಿನ್ನಿ ಕಂಟ್ರೋಲ್​ಗೆ ಬರುತ್ತೆ! ಅಡುಗೆ ಸೋಡಾ ಮತ್ತು ನೀರು ಅಡುಗೆ ಸೋಡಾಕ್ಕೆ ನೀರನ್ನು ಸೇರಿಸಿ ಪೇಸ್ಟ್ ತಯಾರಿಸಿಟ್ಟುಕೊಳ್ಳಿ. ಈಗ ಈ ಪೇಸ್ಟ್ ಅನ್ನು ನಿಮ್ಮ ಮೊಣಕೈ ಮೇಲೆ ಹಚ್ಚಿ, ಸ್ವಲ್ಪ ಹೊತ್ತು ಮಸಾಜ್ ಮಾಡಿ. ಇದನ್ನು 15 ರಿಂದ 20 ನಿಮಿಷಗಳ ಕಾಲ ಬಿಟ್ಟು ನಂತರ ತಣ್ಣೀರಿನಿಂದ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಹೀಗೆ ಮಾಡಿ. ಬೇಕಿಂಗ್ ಸೋಡಾ ಎಕ್ಸ್‌ಫೋಲಿಯೇಟಿಂಗ್ ಮತ್ತು ತ್ವಚೆಯನ್ನು ಹಗುರಗೊಳಿಸುವ ಗುಣಗಳಿಂದ ಕೂಡಿದೆ. ಇದು ನಿಮ್ಮ ತ್ವಚೆಯಲ್ಲಿರುವ ಸತ್ತ ಚರ್ಮವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಇದನ್ನೂ ಓದಿ: ಈ ವಯಸ್ಸಿನವರು ಇಷ್ಟೇ ಉಪ್ಪನ್ನು ತಿನ್ನಬೇಕು; ನಿಮ್ಮ ವಯಸ್ಸೆಷ್ಟು? ಆಲೂಗೆಡ್ಡೆ ರಸ ಒಂದು ಆಲೂಗೆಡ್ಡೆ ಇದ್ರೆ ಸಾಕು ಈ ಸಮಸ್ಯೆಯನ್ನು ನೀವು ನಿವಾರಿಸಿಕೊಳ್ಳಬಹುದು. ಇದನ್ನು ಮಾಡಲು ಆಲೂಗಡ್ಡೆ ಕತ್ತರಿಸಿಕೊಂಡು ಅದನ್ನು ಕೈ, ಕಾಲು ಮೇಲೆ ಉಜ್ಜಿ ಇಲ್ಲಾ ರಸ ತೆಗೆದುಕೊಂಡು ಅದನ್ನು ಕಪ್ಪಾದ ಪ್ರದೇಶದಲ್ಲಿ ಅಪ್ಲೈ ಮಾಡಿ. ಇದಕ್ಕೆ ನೀವು ನಿಂಬೆರಸ ಕೂಡ ಮಿಕ್ಸ್‌ ಮಾಡಿಕೊಳ್ಳಬಹುದು. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.