NEWS

Green tea: ಗ್ರೀನ್ ಟೀ ಕುಡಿಯೋರಿಗೆ ಶಾಕಿಂಗ್ ನ್ಯೂಸ್! ಇವು ಆರೋಗ್ಯಕ್ಕೆ ಡೇಂಜರ್ ಅಂತೆ, ಹುಷಾರ್!

ಸಾಂದರ್ಭಿಕ ಚಿತ್ರ ಇಂದು ಆರೋಗ್ಯ (Health) ಸುಧಾರಣೆಗಾಗಿ ಸಾಕಷ್ಟು ಜನರು ಹಲವಾರು ಬಗೆಯ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ (Social Media) ಬರುವ ಅನೇಕ ಔಷಧಗಳನ್ನು (Medicines) ವೈದ್ಯರ (Doctor) ಇಲ್ಲವೇ ಪರಿಣಿತರ ಸಲಹೆ ಇಲ್ಲದೆ ಸ್ವಯಂ ಆಗಿ ತೆಗೆದುಕೊಂಡು ಅಪಾಯ ತಂದುಕೊಳ್ಳುತ್ತಿದ್ದಾರೆ. ಇದೀಗ ಹೊಸ ಅಧ್ಯಯನವೊಂದು ಅರಿಶಿನ, (Garlic) ಗ್ರೀನ್ ಟೀ (Ginger Tea), ಒತ್ತಡ-ನಿವಾರಕ ಅಶ್ವಗಂಧ ಮತ್ತು ತೂಕ ನಷ್ಟದ ಗಾರ್ಸಿನಿಯಾ ಕಾಂಬೋಜಿಯಾ ಸೇರಿದಂತೆ ಜನಪ್ರಿಯ ಸಸ್ಯಶಾಸ್ತ್ರೀಯ ಪೂರಕಗಳನ್ನು (ಸಪ್ಲಿಮೆಂಟ್‌) ಸೇವಿಸುವುದು ಅನಾರೋಗ್ಯಕ್ಕೆ ತುತ್ತಾಗುವಂತೆ ಮಾಡುತ್ತದೆ ಎಂಬ ಎಚ್ಚರಿಕೆ ಮಾಹಿತಿ ಹೊರ ಬಿದ್ದಿದೆ. ಅಮೇರಿಕನ್ನರಿಗೆ ಕಾಡ್ತಿದೆ ಅನಾರೋಗ್ಯ 15 ಮಿಲಿಯನ್‌ಗಿಂತಲೂ ಹೆಚ್ಚಿನ ಅಮೇರಿಕನ್ನರು ಇಂತಹ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವ ಮೂಲಕ ತಮ್ಮ ಆರೋಗ್ಯವನ್ನು ಅಪಾಯಕ್ಕೊಳಪಡಿಸಿದ್ದಾರೆ ಎಂಬುದಾಗಿಯೂ ಈ ಅಧ್ಯಯನ ಸೂಚಿಸಿದೆ. ಗಿಡಮೂಲಿಕೆಗಳಿಂದ ಆರೋಗ್ಯಕ್ಕೆ ಅಪಾಯವಿದೆ ಮಿಶಿಗನ್ ವಿಶ್ವವಿದ್ಯಾನಿಲಯದ ಆನ್ ಆರ್ಬರ್‌ನ ಆರೋಗ್ಯ ಸಂಶೋಧಕರು 2017 ರಿಂದ 2021 ರವರೆಗಿನ ಡೇಟಾವನ್ನು ವಿಶ್ಲೇಷಿಸಿದ್ದು, ಸುಮಾರು 9,685 ಜನರನ್ನು ಒಳಗೊಂಡಂತೆ 4.7% ರಷ್ಟು ಯುಎಸ್ ವಯಸ್ಕರು ಹಿಂದಿನ 30 ದಿನಗಳಲ್ಲಿ ಆರು ವಿಷಕಾರಿ ಪೂರಕಗಳಲ್ಲಿ ಒಂದನ್ನು ಬಳಸಿದ್ದಾರೆ ಎಂದು ಕಂಡುಹಿಡಿದಿದ್ದಾರೆ. ಆ ಪೂರಕಗಳೆಂದರೆ ಅರಿಶಿನ, ಗ್ರೀನ್ ಟೀ, ಅಶ್ವಗಂಧ, ಜಿ. ಕಾಂಬೋಜಿಯಾ, ಕಪ್ಪು ಕೋಹೊಶ್ ಮತ್ತು ಕೆಂಪು ಈಸ್ಟ್ ಅಕ್ಕಿ ಎಂದು ಗುರುತಿಸಿದ್ದಾರೆ. ವೈದ್ಯರ ನಿರ್ದೇಶನವಿಲ್ಲದೆ ಸ್ವಯಂ ಸೇವನೆ ಈ ಪೂರಕಗಳನ್ನು ಸೇವಿಸುತ್ತಿದ್ದವರು ತಮ್ಮ ಸ್ವಂತ ಇಚ್ಛೆಯಿಂದ ಇದನ್ನು ತೆಗೆದುಕೊಳ್ಳುತ್ತಿದ್ದರು ಹಾಗೂ ಇವರು ಯಾವುದೇ ವೈದ್ಯಕೀಯ ನಿರ್ದೇಶನಗಳನ್ನು ಅನುಸರಿಸುತ್ತಿರಲಿಲ್ಲ ಎಂಬುದು ತಿಳಿದು ಬಂದಿದೆ. ಕೀಲುಗಳ ಆರೋಗ್ಯ ಹಾಗೂ ಸಂಧಿವಾತಕ್ಕೆ ಅರಶಿನ, ಶಕ್ತಿಯ ಮಟ್ಟವನ್ನು ಹೆಚ್ಚಿಸಲು ಗ್ರೀನ್ ಟೀ, ತೂಕ ನಷ್ಟಕ್ಕೆ ಜಿ. ಕ್ಯಾಂಬೋಜಿಯಾ, ದದ್ದುಗಳ ನಿವಾರಣೆಗೆ ಕಪ್ಪು ಕೋಹೊಶ್ ಹಾಗೂ ಹೃದಯದ ಆರೋಗ್ಯಕ್ಕಾಗಿ ಕೆಂಪು ಯೀಸ್ಟ್ ಅಕ್ಕಿ ಹೀಗೆ ಪೂರಕಗಳನ್ನು ತೆಗೆದುಕೊಳ್ಳುತ್ತಿದ್ದರು ಎಂಬುದು ತಿಳಿದು ಬಂದಿದೆ. ಆಸ್ಪತ್ರೆಗೆ ದಾಖಲಾದವರ ಪ್ರಮಾಣದಲ್ಲಿ ಹೆಚ್ಚಳ ಈ ಸಪ್ಲಿಮೆಂಟ್‌ಗಳು ಪಿತ್ತಜನಕಾಂಗದ ಮೇಲೆ ವಿಷಕಾರಿ ಪ್ರಭಾವವನ್ನು ಬೀರುತ್ತದೆ ಎಂಬುದು ಗೊತ್ತಿರುವ ಸುದ್ದಿಯಾಗಿದ್ದರೂ 2022 ರ ಅಧ್ಯಯನವು ಸಪ್ಲಿಮೆಂಟ್ ಸೇವಿಸುವವರಲ್ಲಿ ಅನಾರೋಗ್ಯದ ಅಪಾಯಗಳು ಈಗ ಸ್ವಲ್ಪ ಸಮಯದಿಂದ ಹೆಚ್ಚುತ್ತಿದೆ ಎಂದು ಉಲ್ಲೇಖಿಸಿದೆ. ವೈದ್ಯಕೀಯ ಸಂಶೋಧಕರು ಹೇಳುವಂತೆ ಸಪ್ಲಿಮೆಂಟ್‌ಗಳನ್ನು ಸೇವಿಸುವ ಜನರು ಇವುಗಳ ಮಿತಿಮೀರಿದ ಬಳಕೆಯಿಂದ ಗಂಭೀರ ಅಪಾಯಕ್ಕೊಳಗಾಗುತ್ತಿದ್ದಾರೆ ಹಾಗೂ ಅವರಿಗೆ ಇದರ ಬಗ್ಗೆ ಅರಿವಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಈ ಕಾರಣದಿಂದ ಆರೋಗ್ಯ ತುರ್ತು ಪರಿಸ್ಥಿತಿಗಳು ಏರ್ಪಟ್ಟಿದ್ದು, 2004 ಮತ್ತು 2014 ರ ನಡುವಿನ ದಶಕದಲ್ಲಿ ಆಸ್ಪತ್ರೆಗೆ ದಾಖಲಾದವರ ಸಂಖ್ಯೆ 7% ರಿಂದ 20% ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ. ಹೆಪಟೊಟಾಕ್ಸಿಸಿಟಿ ಅಪಾಯ ಗಿಡಮೂಲಿಕೆ ಹಾಗೂ ಡಯೆಟರಿ ಸಪ್ಲಿಮೆಂಟ್ಸ್ (ಎಚ್‌ಡಿಎಸ್) ಬಳಕೆಯು ಡ್ರಗ್ ಹೆಪಟೊಟಾಕ್ಸಿಸಿಟಿ ಪ್ರಕರಣಗಳನ್ನು ಅಧಿಕವಾಗಿಸಿದೆ ಎಂದು ಗ್ಯಾಸ್ಟ್ರೋಎಂಟರಾಲಜಿಯ ಸಹಾಯಕ ಪ್ರಾಧ್ಯಾಪಕರಾದ ಅಲಿಸಾ ಲಿಖಿಟ್‌ಸಪ್ ಹೇಳಿದ್ದಾರೆ. ಹೆಪಟೊಟಾಕ್ಸಿಸಿಟಿ ಎಂಬುದು ತೀವ್ರವಾದ ಅಥವಾ ದೀರ್ಘಕಾಲದ ಪಿತ್ತಜನಕಾಂಗದ ಗಾಯವಾಗಿದ್ದು, ಇದನ್ನು ವಿಷಕಾರಿ ಯಕೃತ್ತಿನ ಕಾಯಿಲೆ ಎಂದೂ ಕರೆಯುತ್ತಾರೆ. ಚರ್ಮ ಹಳದಿ ಬಣ್ಣಕ್ಕೆ ತಿರುಗುವುದು, ಆಯಾಸ, ವಾಕರಿಕೆ, ದದ್ದು, ತುರಿಕೆ ಮೇಲ್ಭಾಗದ ಬಲ ಹೊಟ್ಟೆಯಲ್ಲಿನ ನೋವು ಸೇರಿದಂತೆ ಅನೇಕ ರೋಗಲಕ್ಷಣಗಳನ್ನು ಹೊಂದಿದೆ. ವಿಷದ ಅಂಶಗಳನ್ನು ಹೋಗಲಾಡಿಸುವ ಚಿಕಿತ್ಸೆಯನ್ನು ರೋಗಿಗೆ ನೀಡಬಹುದಾದರೂ, ರೋಗಿಗೆ ಯಕೃತ್ತಿನ ಕಸಿಯ ಅಗತ್ಯವಿರುತ್ತದೆ. ಚಿಕಿತ್ಸೆ ನೀಡದಿದ್ದರೆ ಇಲ್ಲವೇ ಚಿಕಿತ್ಸೆಯಿಂದ ತಪ್ಪಿಸಿಕೊಂಡರೆ ಅದರಿಂದ ಸಾವು ಸಂಭವಿಸಬಹುದು ಎಂದು ಅಲಿಸಾ ಹೇಳುತ್ತಾರೆ. ಚಿಟಿಕೆ ಅರಶಿನ ಕೂಡ ಅಪಾಯಕಾರಿಯೇ? ಈ ಸಪ್ಲಿಮೆಂಟ್‌ಗಳಲ್ಲಿ ನಿಯಂತ್ರಕ ಪ್ರಕ್ರಿಯೆಗಳು ಪ್ರಿಸ್ಕ್ರಿಪ್ಷನ್ ಔಷಧಿಗಳಂತೆ ಕಟ್ಟುನಿಟ್ಟಾಗಿಲ್ಲ, ಉತ್ಪನ್ನಗಳ ರಾಸಾಯನಿಕ ಪರೀಕ್ಷೆಯು ಕೂಡ ಸಮರ್ಪಕ ಮಾಹಿತಿಗಳನ್ನು ನೀಡುತ್ತಿಲ್ಲ ಎಂದವರು ಸೂಚಿಸಿದ್ದಾರೆ. ಇನ್ನೂ ಆಹಾರಗಳಲ್ಲಿ ಇಲ್ಲವೇ ಅಡುಗೆ ರೂಪದಲ್ಲಿ ಬಳಕೆಯಾಗುವ ಅರಶಿನವು ಪಿತ್ತಜನಕಾಂಗದ ಗಾಯವನ್ನುಂಟು ಮಾಡುವುದಿಲ್ಲ ಏಕೆಂದರೆ ಅಡುಗೆಗೆ ಚಿಟಿಕೆಯಷ್ಟು ಅರಶಿನ ಬಳಸುವುದು ಹಾಗೂ ಗಿಡಮೂಲಿಕೆಯುಕ್ತ ಅರಶಿನ ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳುವುದಕ್ಕೂ ವ್ಯತ್ಯಾಸವಿದೆ ಎಂದು ಅಲಿಸಾ ತಿಳಿಸಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.