NEWS

Train Cancelled: ಯಡಕಮುರಿ ಬಳಿ ಗುಡ್ಡ ಕುಸಿತ; ಬೆಂಗಳೂರು-ಮಂಗಳೂರು ಸಂಚಾರ ಬಂದ್!

ಗುಡ್ಡಕುಸಿತ ಬೆಂಗಳೂರು: ಕರಾವಳಿ ಹಾಗೂ ಮಲೆನಾಡಿನಲ್ಲಿ (Malenadu ) ಧಾರಾಕಾರ ಮಳೆ ಮುಂದುವರಿದಿದ್ದು ಅವಾಂತರಗಳ ಮೇಲೆ ಅವಾಂತರ ಸಂಭವಿಸುತ್ತಿವೆ. ಭಾರೀ ಮಳೆಯಿಂದಾಗಿ ಹಾಸನ-ಸುಬ್ರಹ್ಮಣ್ಯ ರೈಲ್ವೆ ಮಾರ್ಗದ (Hassan-Subrahmany Railway Line) ಯಡಕಮುರಿ ಬಳಿ ಗುಡ್ಡ ಕುಸಿದಿತ್ತು. ಪರಿಣಾಮ ಬೆಂಗಳೂರು-ಹಾಸನ-ಮಂಗಳೂರು (Bengaluru Hassan Mangaluru) ರೈಲು ಸಂಚಾರ ಬಂದ್‌ ಆಗಿದೆ. ಕುಸಿದ ಗುಡ್ಡದ ಮಣ್ಣು ತೆರವಿಗೆ ರೈಲ್ವೆ ಇಲಾಖೆ ಹರಸಾಹಸ ಪಡ್ತಿದೆ. ಹೀಗಾಗಿ ಇಂದು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗೋ ಸಾಧ್ಯತೆ ಇದೆ. ಬೆಂಗಳೂರು-ಹಾಸನ-ಮಂಗಳೂರು ಮಾರ್ಗ ಮಧ್ಯೆ ಸಂಚರಿಸುವ ಎಲ್ಲಾ ರೈಲುಗಳ ಸಂಚಾರ ಬಂದ್ ಆಗಿದ್ದು, ಹಾಸನ ಜಿಲ್ಲೆಯ ಮಲೆನಾಡು ‌ಭಾಗದಲ್ಲಿ ಮಳೆಯ ಆರ್ಭಟ ಮುಂದುವರಿದ ಕಾರಣ ಸಕಲೇಶಪುರ ತಾಲೂಕಿನ ಕಡಗರವಳ್ಳಿ-ಯಡಕುಮರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದೆ. ಈ ಹಿನ್ನೆಲೆಯಲ್ಲಿ ಈ ಮಾರ್ಗದ ಎಲ್ಲಾ ರೈಲುಗಳ‌ ಸಂಚಾರ ಬಂದ್ ಆಗೊದೆ. ಕಿಲೋಮೀಟರ್ ನಂಬರ್ 63 ರಲ್ಲಿ ರೈಲ್ವೆ ಹಳಿಯ ಮೇಲೆ‌ ಮಣ್ಣು ಕುಸಿತ ಆಗಿದ್ದು, ಸ್ಥಳಕ್ಕೆ ರೈಲ್ವೆ ಇಲಾಖೆ ಸಿಬ್ಬಂದಿ ದೌಡಾಯಿಸಿದ್ದಾರೆ. ಗುಡ್ಡ ಕುಸಿತ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಅಧಿಕಾರಿಗಳು ರೈಲು ಮಾರ್ಗ ಬದಲಿಸಿದ್ದಾರೆ. ಸುಬ್ರಹ್ಮಣ್ಯ-ಸಕಲೇಶಪುರ ರೈಲ್ವೆ ಘಾಟಿಯ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಪರಿಣಾಮ ರೈಲು ಸಂಚಾರ ಸ್ಥಗಿತವಾಗಿದ್ದು, ಸದ್ಯ ಅಧಿಕಾರಿಗಳು ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ. 1.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 06568 ಕಾರವಾರ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲನ್ನು ರದ್ದು. 2.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 16595 ಕ್ರಾ.ಸಂ.ರಾ ಬೆಂಗಳೂರು–ಕಾರವಾರ ಪಂಚಗಂಗಾ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆಗೊಂಡು ಕುಣಿಗಲ್,ಪಡೀಲು ಬೈಪಾಸ್ ಬದಲು ಯಶವಂತಪುರ, ಬಾನಸವಾಡಿ, ಜೋಲಾರ್ಪೇಟೆ ಕ್ಯಾಬಿನ್, ಸೇಲಂ, ಪೊದನೂರು, ಶೋರನೂರು, ಮಂಗಳೂರು ಜಂಕ್ಷನ್, ಸುರತ್ಕಲ್ ಮೂಲಕ ಓಡಲಿದೆ. 3.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆಗೊಂಡು ಹಾಸನ ಬದಲು ಸುಬ್ರಹ್ಮಣ್ಯ ರಸ್ತೆ, ಪಡೀಲ್, ಸುರತ್ಕಲ್, ಕಾರವಾರ, ಮಡಗಾಂವ್, ಕೂಲಂ, ಕ್ಯಾಸ್ಟಲ್ ರಾಕ್, ಲೊಂಡಾ, ಶ್ರೀ ಸಿದ್ಧರೂಡ ಸ್ವಾಮೀಜಿ ಹುಬ್ಬಳ್ಳಿ ಜಂಕ್ಷನ್ ಮೂಲಕ ಓಡಲಿದೆ. 4.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 16586 ಮುರಡೇಶ್ವರ–ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನ ಮಾರ್ಗ ಬದಲಾವಣೆಗೊಂಡು ಹಾಸನ,ಮೈಸೂರು ಬದಲು ಮಂಗಳೂರು ಜಂಕ್ಷನ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಓಡಲಿದೆ. 5.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 16512 ಕಣ್ಣೂರು–ಕ್ರಾ.ಸಂ.ರಾ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಕುಣಿಗಲ್ ಬದಲು ಮಂಗಳೂರು ಸೆಂಟ್ರಲ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಓಡಲಿದೆ. 6.ದಿನಾಂಕ 26.07.2024ರಂದು ಹೊರಡುವ ರೈಲು ಸಂಖ್ಯೆ 16596 ಕಾರವಾರ-ಕ್ರಾ.ಸಂ.ರಾ ಬೆಂಗಳೂರು ಪಂಚಗಂಗಾ ಎಕ್ಸ್‌ಪ್ರೆಸ್ ಪಡೀಲು ಬೈಪಾಸ್ ಬದಲು ಮಂಗಳೂರು ಜಂಕ್ಷನ್, ಶೋರನೂರು, ಸೇಲಂ, ಜೋಲಾರ್ಪೇಟೆ ಕ್ಯಾಬಿನ್ ಮೂಲಕ ಓಡಲಿದೆ. 7.ರೈಲು ಸಂಖ್ಯೆ 16511 ಕ್ರಾ.ಸಂ.ರಾ ಬೆಂಗಳೂರು–ಕಣ್ಣೂರು ಎಕ್ಸ್‌ಪ್ರೆಸ್ ಕುಣಿಗಲ್ ಬದಲು ಜೋಲಾರ್ಪೇಟೆ ಕ್ಯಾಬಿನ್, ಸೇಲಂ, ಶೋರನೂರು, ಮಂಗಳೂರು ಜಂಕ್ಷನ್ ಮೂಲಕ ಓಡಲಿದೆ. ಇದನ್ನೂ ಓದಿ: Success Story: ಒಂದೇ ಜಿಲ್ಲೆಯಲ್ಲಿ IAS, IPS; ಜನ ಸೇವೆಯೇ ಮೂಲಕ ಖ್ಯಾತಿ ಪಡೆದ ದಂಪತಿಯ ಕ್ಯೂಟ್ ಲವ್ ಸ್ಟೋರಿ ರೈಲು ಮಾರ್ಗ ಮಾತ್ರವಲ್ಲದೆ, ಬೆಂಗಳೂರು ಮಂಗಳೂರು ಸಂಪರ್ಕ ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‌ನಲ್ಲೂ ಗುಡ್ಡ ಕುಸಿದು ಅವಾಂತರವಾಗಿತ್ತು. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರದ ಬಳಿ ಗುಡ್ಡ ಕುಸಿದಿತ್ತು. ಪರಿಣಾಮ ಮಂಗಳೂರು ಕಡೆಗೆ ಹೋಗ್ತಿದ್ದ ಎಲ್ಲಾ ವಾಹನಗಳಿಗೂ ತಡೆ ನೀಡಲಾಗಿತ್ತು. ಹೀಗಾಗಿ ಟ್ರಾಫಿಕ್‌ ನಿಂದ ವಾನಹ ಸವಾರರು ಪರದಾಡಬೇಕಾಯಿತು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.