NEWS

Okra Water Benefits: ಬೆಂಡೆಕಾಯಿ ಮಾತ್ರವಲ್ಲ, ಇದರ ನೀರು ಕುಡಿಯೋದ್ರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಬೆಂಡೆಕಾಯಿ ನಾವು ಹೊಂದಿರುವ ಅನೇಕ ಆರೋಗ್ಯ ಸಮಸ್ಯೆಗಳಿಗೆ (Health Care) ಅನೇಕ ತರಕಾರಿ, ಹಣ್ಣುಗಳೇ ಔಷಧಗಳಾಗಿವೆ. ಉದಾಹರಣೆಗೆ ಲಿಂಬೆ ಹಣ್ಣು ಅನೇಕ ಪಿತ್ತದ ಸಮಸ್ಯೆಗಳಿಗೆ ರಾಮಬಾಣವಾಗಿದ್ದು, ವಾಂತಿ, ಅಜೀರ್ಣದಂತಹ ಆರೋಗ್ಯ ಸಮಸ್ಯೆಗಳಿಗೆ ದಾಳಿಂಬೆ ಹಾಗೂ ಅದರ ಸಿಪ್ಪೆ ಹೆಚ್ಚು ಪ್ರಯೋಜನಕಾರಿ ಎಂಬುದು ನಮಗೆ ಗೊತ್ತೇ ಇದೆ. ಹೀಗೆ ನಮಗೆ ಗೊತ್ತಿರುವ ಅನೇಕ ತರಕಾರಿ, ಹಣ್ಣುಗಳು ಸೊಪ್ಪುಗಳು ನಮ್ಮ ಆರೋಗ್ಯ ಸಮಸ್ಯೆಗಳಿಗೆ ಸರಳ ಪರಿಹಾರಗಳನ್ನೊದಗಿಸುತ್ತವೆ. ನಮಗೆಲ್ಲರಿಗೂ ಬೆಂಡೆ ಕಾಯಿ ಬಗ್ಗೆ ಗೊತ್ತೇ ಇದೆ. ಸಾಂಬಾರ್, ಪಲ್ಯ, ಮೇಲೋಗರ, ಹುಳಿ ಹೀಗೆ ಎಲ್ಲಾ ತರಹದ ಅಡುಗೆಗಳಿಗೆ ಕೂಡ ಬೆಂಡೆ ಕಾಯಿ ಹೇಳಿ ಮಾಡಿಸಿದ ತರಕಾರಿಯಾಗಿದೆ. ಇದರೊಂದಿಗೆ ಬೆಂಡೆ ಕಾಯಿ ಅನೇಕ ಆರೋಗ್ಯ ಸಮಸ್ಯೆಗಳಿಗೂ ರಾಮಬಾಣವಾಗಿದೆ. ಬೆಂಡೆ ಕಾಯಿ ನೀರಿನ ಕುರಿತು ಇಂದಿನ ಲೇಖನದಲ್ಲಿ ನಾವು ತಿಳಿದುಕೊಳ್ಳಲಿದ್ದು, ಇದನ್ನು ತಯಾರಿಸುವುದು ಹೇಗೆ ಇದರ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ ಬೆಂಡೆ ಕಾಯಿ ನೀರು ಎಂದರೇನು? ಬೆಂಡೆ ಕಾಯಿಯ ತೊಟ್ಟು ಹಾಕಿಟ್ಟ ನೀರು ಬೆಂಡೆ ಕಾಯಿ ನೀರಾಗಿದೆ. ರಾತ್ರಿ ಪೂರ್ತಿ ಬೆಂಡೆ ಕಾಯಿ ತೊಟ್ಟನ್ನು ಒಂದು ಲೋಟದಷ್ಟು ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಗ್ಗೆ ಈ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಅನೇಕ ಪೋಷಕಾಂಶಗಳನ್ನೊಳಗೊಂಡ ಈ ಬೆಂಡೆ ಕಾಯಿ ನೀರು ದೇಹವನ್ನು ನಿರ್ವಿಷಗೊಳಿಸುತ್ತದೆ. ಇದನ್ನೂ ಓದಿ: ಬೆಳಗ್ಗೆ ಎದ್ದ ತಕ್ಷಣವೇ ನಿಮಗೆ ಸುಸ್ತಾಗುತ್ತಾ? ಹಾಗಾದ್ರೆ ಇದೇ ಕಾರಣ! ಬೆಂಡೆ ಕಾಯಿ ನೀರಿನಲ್ಲಿರುವ ಪೋಷಕಾಂಶಗಳೇನು? ವಿಟಮಿನ್‌ಗಳು ಬೆಂಡೆ ವಿಟಮಿನ್‌ಗಳಾದ ಎ, ಸಿ, ಕೆ ಯನ್ನೊಳಗೊಂಡಿದೆ. ಇದು ರೋಗ ನಿರೋಧಕ ಶಕ್ತಿಯನ್ನು ವರ್ಧಿಸುತ್ತದೆ ಜೊತೆಗೆ ತ್ವಚೆಯ ಆರೋಗ್ಯ ಹಾಗೂ ಮೂಳೆಯ ಶಕ್ತಿಯನ್ನು ವರ್ಧಿಸುತ್ತದೆ. ಖನಿಜಾಂಶಗಳು ಮೆಗ್ನೇಶಿಯಮ್, ಪೊಟಾಶಿಯಮ್, ಕ್ಯಾಲ್ಶಿಯಮ್ ಇದರಲ್ಲಿದ್ದು ಮೂಳೆಗಳ ಆರೋಗ್ಯಕ್ಕೆ ಇದು ಬೇಕು. ಆ್ಯಂಟಿಆಕ್ಸಿಡೆಂಟ್ಸ್ ಬೆಂಡೆ ಕಾಯಿಯಲ್ಲಿ ಕ್ವೆರೆಸಿಟೀನ್ ಹಾಗೂ ಫ್ಲೇವನಾಯ್ಡ್ಸ್‌ಗಳೆಂಬ ಆ್ಯಂಟಿಆಕ್ಸಿಡೆಂಟ್‌ಗಳಿವೆ ಇದು ದೇಹದ ಆಕ್ಸಿಡೇಟೀವ್ ಒತ್ತಡವನ್ನು ನಿರ್ವಹಿಸಲು ಸಹಕಾರಿಯಾಗಿದೆ. ಬೆಂಡೆ ಕಾಯಿ ನೀರಿನ ಇನ್ನಷ್ಟು ಪ್ರಯೋಜನಗಳು ಕರುಳಿನ ವ್ಯವಸ್ಥೆಗೆ ಉತ್ತಮ ಬೆಂಡೆ ಕಾಯಿ ನೀರಿನಲ್ಲಿ ಫೈಬರ್ ಅಂಶ ಅಧಿಕವಿದೆ. ಇದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ. ಮಲಬದ್ಧತೆಯನ್ನು ನಿವಾರಿಸಿ ನಿಯಮಿತ ಕರುಳಿನ ಚಲನೆಗಳನ್ನು ಪೋಷಿಸುತ್ತದೆ. ಹೃದಯದ ಆರೋಗ್ಯಕ್ಕೆ ಉತ್ತಮ ಬೆಂಡೆ ಕಾಯಿ ನೀರಿನಲ್ಲಿರುವ ಆ್ಯಂಟಿಆಕ್ಸಿಡೆಂಟ್‌ಗಳು ಹಾಗೂ ಕರಗಬಲ್ಲ ಫೈಬರ್ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡಿ ಹೃದಯದ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ. ಇದು ಹೃದಯದ ಕಾಯಿಲೆಯನ್ನು ಕಡಿಮೆ ಮಾಡುತ್ತದೆ. ಹೊಳೆಯುವ ತ್ವಚೆ ನಿಮ್ಮ ಕೂದಲು, ತ್ವಚೆಯ ಆರೋಗ್ಯಕ್ಕೆ ಕೂಡ ಬೆಂಡೆ ನೀರು ಉತ್ತಮವಾಗಿದೆ. ನಳ ನಳಿಸುವ ಹೊಳೆಯುವ ಕೂದಲು ಹಾಗೂ ತ್ವಚೆ ನಿಮ್ಮದಾಗಬೇಕು ಎಂದಾದರೆ ನಿತ್ಯವೂ ಬೆಂಡೆ ಕಾಯಿ ನೀರು ಸೇವಿಸಿ. ತೂಕ ಇಳಿಕೆ ತೂಕ ಇಳಿಕೆಗೂ ಈ ಬೆಂಡೆ ನೀರು ಸಹಕಾರಿಯಾಗಿದೆ. ಇದರಲ್ಲಿ ಫೈಬರ್ ಅಂಶವಿರುವುದರಿಂದ ತೂಕ ಇಳಿಕೆಗೆ ಸಹಾಯ ಮಾಡುತ್ತದೆ. ರೋಗನಿರೋಧಕ ಶಕ್ತಿ ಸಾಕಷ್ಟಿದೆ ಬೆಂಡೆ ಕಾಯಿ ನೀರಿನಲ್ಲಿ ವಿಟಮಿನ್ ಸಿ ಅಂಶವಿದ್ದು ಇದು ರೋಗ ನಿರೋಧಕ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಯಾರೆಲ್ಲಾ ಬೆಂಡೆ ನೀರನ್ನು ಸೇವಿಸಬಹುದು ಮತ್ತು ಯಾವಾಗ ಸಾಮಾನ್ಯವಾಗಿ ಎಲ್ಲರೂ ಬೆಂಡೆ ನೀರನ್ನು ಸೇವಿಸಬಹುದು ಇದರಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಅದರಲ್ಲೂ ಮಧುಮೇಹಿಗಳು, ತೂಕ ಇಳಿಕೆಗೆ ಶ್ರಮಿಸುತ್ತಿರುವವರು, ಜೀರ್ಣಕ್ರಿಯೆ ಸಮಸ್ಯೆಗಳನ್ನು ಹೊಂದಿರುವವರು ಅಗತ್ಯವಾಗಿ ಬೆಂಡೆ ಕಾಯಿ ನೀರನ್ನು ನಿತ್ಯವೂ ಸೇವಿಸಬಹುದು. ಅದರಲ್ಲೂ ಬೆಳಗ್ಗಿನ ಸಮಯ ಖಾಲಿ ಹೊಟ್ಟೆಯಲ್ಲಿ ಬೆಂಡೆ ಕಾಯಿ ನೀರು ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳಿವೆ. ಮಧುಮೇಹಿಗಳು ಬೆಂಡೆ ನೀರು ರಕ್ತದ ಸಕ್ಕರೆ ಮಟ್ಟವನ್ನು ನಿರ್ವಹಿಸಲು ಸಹಕಾರಿಯಾಗಿದೆ ಹಾಗಾಗಿ ಮಧುಮೇಹಿಗಳಿಗೆ ಇದು ಪರಿಣಾಮಕಾರಿಯಾಗಿದೆ. ತೂಕ ಇಳಿಸುವವರಿಗೆ ಬೆಂಡೆ ನೀರಿನಲ್ಲಿ ಫೈಬರ್ ಅಂಶವಿರುವುದರಿಂದ ತೂಕ ಇಳಿಸುವವರಿಗೆ ಬೆಂಡೆ ನೀರು ಉತ್ತಮ ಪಾನೀಯ ಎಂದೆನಿಸಿದೆ. ಜೀರ್ಣಕ್ರಿಯೆ ಸಮಸ್ಯೆ ಹೊಂದಿರುವವರಿಗೆ ಮಲಬದ್ಧತೆ, ಜೀರ್ಣಕ್ರಿಯೆ ಸಮಸ್ಯೆ ಹೊಂದಿರುವವರಿಗೆ ಕೂಡ ಬೆಂಡೆ ನೀರು ಕೂಡ ಉತ್ತಮವಾಗಿದೆ. ಇದು ಕರುಳಿನ ಆರೋಗ್ಯವನ್ನು ಪೋಷಿಸುತ್ತದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.