NEWS

Bigg Boss Kannada Season 11: ಕ್ಯಾಪ್ಟನ್ ಮನೆಯಲ್ಲಿ ಏನ್ ಬದಲಾವಣೆ ತರಬೇಕು? ಬಿಗ್​ಬಾಸ್ ಕ್ವಶ್ಚನ್​ಗೆ ನೆಟ್ಟಿಗರು ಕೊಟ್ರು ಮಾಸ್ ಆನ್ಸರ್

ಹಂಸ ಬಿಗ್​ಬಾಸ್ ಸೀಸನ್ 11 ಶುರುವಾಗಿದೆ. ಮೊದಲ ವೀಕೆಂಡ್ ವಿತ್ ಕಿಚ್ಚ ಕೂಡಾ ಮುಗಿದಿದೆ. ಈ ಬಾರಿ ಲಾಯರ್ ಜಗದೀಶ್​ಗೆ ಕಿಚ್ಚ ಸರಿಯಾಗಿ ಕ್ಲಾಸ್ ತಗೊಳ್ತಾರೆ ಎಂದು ಜನ ಅಂದುಕೊಂಡರೂ ಕೂಡಾ ಅವರು ಸಾಫ್ಟ್ ಆಗಿಯೇ ಸ್ಟ್ರಾಂಗ್ ಏಟೊಂದನ್ನು ಕೊಟ್ಟಿದ್ದಾರೆ. ಅಂತೂ ಬಿಗ್​ಬಾಸ್ ಮನೆಯಲ್ಲಿ ಮಸ್ತ್ ಬೆಳವಣಿಗೆಗಳು ನಡೆಯುತ್ತಿದ್ದು ಕ್ಯಾಪ್ಟನ್ ಕೂಡಾ ಬದಲಾಗಿದ್ದಾರೆ. ಕ್ಯಾಪ್ಟನ್ ಆಗಿರುವ ಹಂಸ ಅವರು ಮನೆಯನ್ನು ಮುನ್ನಡೆಸಲಿದ್ದಾರೆ. ಅವರು ಬಿಗ್​ಬಾಸ್ ಮನೆಯ ಹೊಸ ಕ್ಯಾಪ್ಟನ್ ಆಗಿದ್ದು ಸಖತ್ ಇಂಟ್ರೆಸ್ಟಿಂಗ್ ಆಗಿ ಈ ಶೋ ಮೂಡಿ ಬರಲಿದೆ. ಬಿಗ್​ಬಾಸ್ ಕ್ವಶ್ಚನ್ ಕ್ಯಾಪ್ಟನ್ ತರಬೇಕಿರೋ ಒಂದು ಬದಲಾವಣೆ? ಎಂದು ಬಿಗ್​ಬಾಸ್ ಒಂದು ಪ್ರಶ್ನೆಯನ್ನು ಹಾಕಿದೆ. ಬಿಗ್​ಬಾಸ್ ಮನೆಯಲ್ಲಿ ನಟಿ ಹಂಸ ಅವರು ಹೊಸ ಕ್ಯಾಪ್ಟನ್ ಆಗಿದ್ದಾರೆ. ಹಾಗಾಗಿ ಅವರು ಮನೆಯಲ್ಲಿ ಏನು ಬದಲಾವಣೆ ತರಬೇಕು ಎಂದು ಪ್ರಶ್ನೆ ಮಾಡಲಾಗಿದೆ. ನೆಟ್ಟಿಗರೇನಂದ್ರು? ಏನು ಬದಲಾವಣೆ ಮಾಡಬೇಕು ಎಂದು ಕೇಳಿದರೆ ಕ್ಯಾಪ್ಟನ್ ನೇ ಬದಲು ಮಾಡ್ಬೇಕು ಮೊದಲು ಎಂದಿದ್ದಾರೆ ನೆಟ್ಟಿಗರು. ಬೆಣ್ಣೆ ಶಾಂತಮ್ಮನ್ನ ಯಾರು ಕ್ಯಾಪ್ಟನ್ ಮಾಡಿದ್ದೂ ಎಂದು ಕೇಳಿದ್ದಾರೆ ಇನ್ನೊಬ್ಬರು. ನರಕದಲ್ಲಿ ಇರುವವರು ಸ್ವರ್ಗಕ್ಕೆ ಬರಬೇಕು ಸ್ವರ್ಗದಲ್ಲಿ ಇರುವವರು ನರಕಕ್ಕೆ ಬರಬೇಕು ಈ ಬದಲಾವಣೆ ಮಾಡಬೇಕು ಎಂದಿದ್ದಾರೆ ನೆಟ್ಟಿಗರು. ಜಗದೀಶ್ ಅಂಕಲ್ ನ ನರಕಕ್ಕೆ ಹಾಕಿದ್ರೆ, ಬದಲಾವಣೆ ತನ್ನಿಂತಾನಾಗಿಯೇ ಆಗುತ್ತೆ ಎಂದಿದ್ದಾರೆ ಇನ್ನೊಬ್ಬರು. ಮೊದಲು ಕ್ಯಾಪ್ಟನ್ ನ ಬದಲಾಯಿಸಿ ನಂತರ ಎಲ್ಲಾ ಬದಲಾಗುತ್ತದೆ ಎಂದಿದ್ದಾರೆ ಮತ್ತೊಬ್ಬರು. ಹಂಸ ಕ್ಯಾಪ್ಟನ್ ಆಗಿದ್ದು ಮನೆಯವರಿಗೂ ಇಷ್ಟವಾಗಿಲ್ಲ ಹಂಸ ಅವರು ಬಿಗ್​ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದರೂ ಕೂಡಾ ಅವರು ಕ್ಯಾಪ್ಟನ್ ಆಗುವುದು ಯಾರಿಗೂ ಇಷ್ಟವಾಗಿಲ್ಲ. ಅವರು ಕ್ಯಾಪ್ಟನ್ ಆಗಿದ್ದು ಇಷ್ಟವಾಗಿಲ್ಲ ಎಂದು ಮನೆಯಲ್ಲಿದ್ದವರೇ ಹೇಳಿದ್ದಾರೆ. ಅಷ್ಟೇ ಅಲ್ಲದೆ ಹಂಸ ಅವರಿಗೆ ಇನ್ನೊಂದು ಬೆನಿಫಿಟ್ ಇದೆ. ಅವರು ಮುಂದಿನ ವಾರ ಎಲಿಮಿನೇಟ್ ಆಗುವುದಿಲ್ಲ. ಸೂಪರ್ ಸಂಡೇ ವಿತ್ ಕಿಚ್ಚ ಎಪಿಸೋಡ್​ನಲ್ಲಿ ಖುಷಿ ಖುಷಿಯಾಗಿದ್ದ ಯಮುನಾಗೆ ಎಲಿಮಿನೇಷನ್​ ಬಿಗ್ ಶಾಕ್ ನೀಡಿತ್ತು. ಕೊನೆಯಲ್ಲಿ ಚೈತ್ರಾ, ಜಗದೀಶ್ ಸೇಫ್​ ಆಗ್ತಿದ್ದಂತೆ ಯಮುನಾ ದೊಡ್ಮನೆಯಿಂದ ಔಟ್ ಆದ್ರು. ಒಂದೇ ವಾರಕ್ಕೆ ಜರ್ನಿ ಮುಗಿಸಿದ ಬೇಸರ ಯಮುನಾ ಅವರ ಮುಖದಲ್ಲೂ ಇತ್ತು. ಇದನ್ನೂ ಓದಿ: Bigg Boss 11: ಬಿಗ್ ಬಾಸ್ ಮನೆಯಲ್ಲಿ ಒಡಕು, ಬಿರುಕು, ಮಸಿ! ಮನೆ ಈಗ ರಣಾಂಗಣ ಒಂದೇ ವಾರದಕ್ಕೆ ನಟಿ ಯಮುನಾ ಬಿಗ್ ಬಾಸ್​ ಮನೆಯಿಂದ ಹೊರಗೆ ಬಂದಿದ್ದಾರೆ. ಹೆಚ್ಚು ಆ್ಯಕ್ಟಿವ್ ಆಗಿರದ ಕಾರಣ, ವೋಟಿಂಗ್ ಕಡಿಮೆ ಬಂದಿರಬಹುದು ಎನ್ನಲಾಗ್ತಿದೆ. ಎಲಿಮಿನೇಷನ್ ಆದ ಬಳಿಕ ಯಮುನಾ ದೊಡ್ಮನೆಯಿಂದ ಹೊರಗೆ ಬಂದು ಕಿಚ್ಚನ ಮುಂದೆ ಎಲಿಮಿನೇಷನ್ ವಿಚಾರಕ್ಕೆ ಗರಂ ಆಗಿದ್ದಾರೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.