NEWS

Hair Care: ಬಾಚಿದ್ರೆ ಗೊಂಚಲು-ಗೊಂಚಲು ಕೂದಲು ಕೈಗೆ ಬರ್ತಿದ್ಯಾ? ಜಸ್ಟ್​ ಈ ಟಿಪ್ಸ್​ ಫಾಲೋ ಮಾಡಿ ಹೇರ್ ಫಾಲ್​ಗೆ ಬ್ರೇಕ್ ಹಾಕಿ!

ಸಾಂದರ್ಭಿಕ ಚಿತ್ರ ಚಳಿಗಾಲದಲ್ಲಿ (Winter) ಅನೇಕ ಮಂದಿ ಕೂದಲು ಉದುರುವಿಕೆ ಮತ್ತು ತಲೆ ಹೊಟ್ಟು (Dandruff) ಸಮಸ್ಯೆಯಿಂದ ಬಳಲುತ್ತಿರುತ್ತಾರೆ. ಆದರೆ ಪ್ರತಿದಿನ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಕೂದಲು ಉದುರುವಿಕೆ ಸಮಸ್ಯೆಯನ್ನು (Hair Fall) ತಡೆಗಟ್ಟಬಹುದು. ಇದಲ್ಲದೇ, ಕೂದಲಿನ ಬೆಳವಣಿಗೆ ಹೆಚ್ಚಾಗುತ್ತದೆ. ಹಾಗಾದ್ರೆ ಮನೆಯಲ್ಲಿ ಸುಲಭವಾಗಿ ತಯಾರಿಸಬಹುದಾದ ಹೇರ್​ ಪ್ಯಾಕ್​ಗಳು (Hair Pack) ಯಾವುವು ಎಂದು ನೋಡೋಣ ಬನ್ನಿ. ಗ್ರೀನ್​ ಟೀ ಗ್ರೀನ್ ಟೀ ಆರೋಗ್ಯಕ್ಕೆ ಮಾತ್ರವಲ್ಲದೇ ಕೂದಲಿನ ಬೆಳವಣಿಗೆಗೂ ಒಳ್ಳೆಯದು. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇದಕ್ಕಾಗಿ ಮೊದಲು ಗ್ರೀನ್​ ಟೀಯನ್ನು ಕುದಿಸಿ, ಅದು ತಣ್ಣಗಾಗಲು ಬಿಡಿ. ನಂತರ ಸ್ನಾನ ಮಾಡಿ ಗ್ರೀನ್​ ಟೀ ನೀರಿನಿಂದ ಮಸಾಜ್ ಮಾಡಿ. ನಿಮ್ಮ ಕೂದಲನ್ನು ಒಂದು ಗಂಟೆ ಹಾಗೆಯೇ ನೆನೆಯ ಬಿಡಿ. ನಂತರ ನಿಮ್ಮ ಕೂದಲನ್ನು ತಣ್ಣೀರಿನಿಂದ ತೊಳೆಯಿರಿ. ಇದು ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿರಿಸುತ್ತದೆ. ತೆಂಗಿನ ಎಣ್ಣೆ ತೆಂಗಿನ ಎಣ್ಣೆಯಲ್ಲಿ ಕೊಬ್ಬಿನಾಮ್ಲಗಳಿವೆ. ಇವು ಕೂದಲಲ್ಲಿ ಪ್ರೊಟೀನ್ ನಷ್ಟವಾಗುವುದನ್ನು ತಡೆಯುತ್ತವೆ. ಹೀಗಾಗಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ, ತಲೆಗೆ ಮಸಾಜ್ ಮಾಡಿ ರಾತ್ರಿ ಪೂರ್ತಿ ಬಿಡಿ. ನಂತರ ಬೆಳಗ್ಗೆ ಸ್ನಾನ ಮಾಡಿದರೆ ಕೂದಲಿಗೆ ಉತ್ತಮ ಪೋಷಣೆ ದೊರೆಯುತ್ತದೆ. ಒಣ ಕೂದಲು ಕಡಿಮೆಯಾಗಿ ಆರೋಗ್ಯಕರ ಕೂದಲು ನಿಮ್ಮದಾಗುತ್ತದೆ. ಮೆಂತ್ಯ ಕೂದಲಿನ ಸಮಸ್ಯೆಗಳನ್ನು ಹೋಗಲಾಡಿಸುವಲ್ಲಿ ಮೆಂತ್ಯ ಚೆನ್ನಾಗಿ ಕೆಲಸ ಮಾಡುತ್ತದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಇವುಗಳಲ್ಲಿ ಪ್ರೋಟೀನ್, ನಿಕೋಟಿನಿಕ್ ಆಮ್ಲ ಮತ್ತು ಇತರ ಪೋಷಕಾಂಶಗಳಿವೆ. ಇವು ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತವೆ. ರೋಸ್ಮರಿ ಎಣ್ಣೆ ರೋಸ್ಮರಿ ಎಣ್ಣೆಯು ತಲೆಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ನೆತ್ತಿಯ ಕೋಶಕಗಳನ್ನು ಸುಧಾರಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ರೋಸ್ಮರಿ ಎಣ್ಣೆಯ ಕೆಲವು ಹನಿಗಳನ್ನು ತೆಗೆದುಕೊಂಡು ಅದನ್ನು ನೆತ್ತಿಯ ಮೇಲೆ ಮಸಾಜ್ ಮಾಡಿ. ನಂತರ ಅರ್ಧ ಗಂಟೆ ಅಥವಾ ರಾತ್ರಿಯಿಡೀ ಹಾಗೆಯೇ ಬಿಡಿ. ಬಳಿಕ ಬೆಳಗ್ಗೆ ಶಾಂಪೂವಿನಿಂದ ತಲೆ ಕೂದಲನ್ನು ವಾಶ್​ ಮಾಡಿ. ನಿಯಮಿತವಾಗಿ ಈ ನಿಯಮವನ್ನು ಅನುಸರಿಸಿದರೆ, ನಿಮ್ಮ ಕೂದಲು ಬೆಳವಣಿಗೆ ಆಗುವುದನ್ನು ನೀವು ಕಾಣುತ್ತೀರಿ. ಆಪಲ್ ಸೈಡರ್ ವಿನೆಗರ್ ಆಪಲ್ ಸೈಡರ್ ವಿನೆಗರ್ ನೆತ್ತಿಯ ಪಿಹೆಚ್ ಅನ್ನು ಸಮತೋಲನಗೊಳಿಸುತ್ತದೆ. ಇದು ಕೂದಲು ಉದುರುವಿಕೆಯನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ. ಕೂದಲಿಗೆ ಹೊಳಪನ್ನು ನೀಡುತ್ತದೆ ಮತ್ತು ನೆತ್ತಿಯ ಆರೋಗ್ಯವನ್ನು ಉತ್ತೇಜಿಸುತ್ತದೆ. ಕ್ಯಾಸ್ಟರ್ ಆಯಿಲ್ ಕ್ಯಾಸ್ಟರ್ ಆಯಿಲ್ ಕೂಡ ಕೂದಲಿನ ಬೆಳವಣಿಗೆಗೆ ಒಳ್ಳೆಯದು. ಅಲೆವೆರಾ ಜೆಲ್ ಅನ್ನು ಹೇರ್ ಪ್ಯಾಕ್ ಆಗಿ ಹಚ್ಚುವುದರಿಂದ ಕೂದಲಿಗೆ ಉತ್ತಮ ಪೋಷಣೆ ದೊರೆಯುತ್ತದೆ. ಎಗ್ ಮಾಸ್ಕ್ ಕೂಡ ಉತ್ತಮ ಫಲಿತಾಂಶವನ್ನು ನೀಡುತ್ತದೆ. ಆದ್ದರಿಂದ ನಿಮ್ಮ ಕೂದಲ ರಕ್ಷಣೆಗೆ ಪ್ರತಿದಿನ ಇವುಗಳನ್ನು ಬಳಸಿದರೆ ಕೂದಲು ಉದುರುವಿಕೆ ಕಡಿಮೆಯಾಗುತ್ತದೆ ಮತ್ತು ಕೂದಲು ಬೆಳವಣಿಗೆ ಆಗುವುದು ಕಾಣುತ್ತೀರಿ. ಅಲ್ಲದೇ ಇವುಗಳನ್ನು ನಿರಂತರವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ಸಿಗುತ್ತದೆ. ಜೊತೆಗೆ ಕೂದಲು ಉದುರುವಿಕೆ ಕೂಡ ಕಡಿಮೆಯಾಗಿ ಉದ್ದ ಕೂದಲು ನಿಮ್ಮದಾಗುತ್ತದೆ. ಇದನ್ನೂ ಓದಿ: ಗ್ಲಾಸ್‌ನಂತೆ ಹೊಳೆಯುವ ತ್ವಚೆ ನಿಮ್ಮದಾಗಬೇಕೇ? ಹಾಗಿದ್ರೆ ಈ ಟಿಪ್ಸ್ ಫಾಲೋ ಮಾಡಿ ಈರುಳ್ಳಿ ರಸ ಈರುಳ್ಳಿ ರಸವನ್ನು ತಲೆಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ. ಇದರಲ್ಲಿರುವ ಸಲ್ಫರ್ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಅಲ್ಲದೇ ಕೂದಲನ್ನು ಸ್ಟ್ರಾಂಗ್ ಆಗಿಸುತ್ತದೆ. ಇದು ತಲೆಯಲ್ಲಿ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್ಲ) None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.