NEWS

Breakfast Recipe: ಸಿಂಪಲ್ ಆಗಿ ಐದೇ ನಿಮಿಷದಲ್ಲಿ ಈ ತಿಂಡಿ ಮಾಡಿ! ರೆಸಿಪಿ ಇಲ್ಲಿದೆ

ಸಂಗ್ರಹ ಚಿತ್ರ ದಿನಾ ಬೆಳಗ್ಗೆ ಎದ್ದು ಶಾಲೆಗೆ ಹೋಗುವ ಮಕ್ಕಳಿಗೆ ಮತ್ತು ಆಫೀಸಿಗೆ ಹೋಗುವ ಗಂಡನಿಗೆ ಏನಪ್ಪಾ ಉಪಾಹಾರ (Breakfast) ಮಾಡಿ ಕೊಡಬೇಕು ಅನ್ನೋ ಚಿಂತೆ ಗೃಹಿಣಿಯರಿಗೆ ತುಂಬಾನೇ ಕಾಡುತ್ತಿರುತ್ತದೆ. ಅದರಲ್ಲೂ ಮಕ್ಕಳು ತಿನ್ನುವ ತಿಂಡಿಯನ್ನು ಗಂಡ ಬೇಡ ಅಂತ ಹೇಳಿದರೆ ಎರಡು ಮೂರು ವಿಧಗಳ ಉಪಾಹಾರಗಳನ್ನು ತಯಾರಿಸಬೇಕಾಗಿ ಬರುತ್ತದೆ. ಒಟ್ಟಿನಲ್ಲಿ ದಿನಾ ಬೆಳಗ್ಗೆ ಹಾಸಿಗೆಯಿಂದ ಎದ್ದ ತಕ್ಷಣ ಬಹುತೇಕ ಗೃಹಿಣಿಯರಿಗೆ ಉಪಾಹಾರದ ಆಯ್ಕೆಯ ಬಗ್ಗೆ ತುಂಬಾನೇ ತಲೆ ನೋವಿರುತ್ತದೆ ಅಂತ ಹೇಳಿದರೆ ಬಹುಶಃ ತಪ್ಪಾಗಲಿಕ್ಕಿಲ್ಲ. ಕೆಲವರು ರಾತ್ರಿ ಮಲಗುವ ಮುಂಚೆಯೇ ತಮ್ಮ ಮಕ್ಕಳನ್ನು ಮತ್ತು ಗಂಡನನ್ನು ಕೇಳಿ ಬೆಳಗ್ಗೆ ಯಾವ ತಿಂಡಿ ಮಾಡಬೇಕು ಅಂತ ನಿರ್ಧಾರ ಮಾಡಿಕೊಂಡು ತಯಾರಿ ಸಹ ಮಾಡಿಕೊಂಡಿರುತ್ತಾರೆ. ಈ ಉಪಾಹಾರದ ಆಯ್ಕೆ ತಲೆ ಬಿಸಿ ವಿಚಾರ ಬರೀ ಗೃಹಿಣಿಯರಿಗಷ್ಟೇ ಅಲ್ಲದೆ, ಈ ದೂರದ ಊರುಗಳಿಂದ ಬಂದು ನಗರದ ಹಾಸ್ಟೆಲ್‌ಗಳಲ್ಲಿ ರೂಂ ಮಾಡಿಕೊಂಡು ಓದಲು ಇರುವ ವಿದ್ಯಾರ್ಥಿಗಳಿಗೂ ಸಹ ತುಂಬಾನೇ ತಲೆ ನೋವಾಗಿರುತ್ತದೆ. ಹಾಸ್ಟೆಲ್‌ನಲ್ಲಿ ಕೊಡುವ ಉಪಾಹಾರ ತಿಂದು ತಿಂದು ಎಷ್ಟೋ ವಿದ್ಯಾರ್ಥಿಗಳು ಬೇಸತ್ತು ಹೋಗಿರುತ್ತಾರೆ. ಅಲ್ಲದೆ ಕೆಲ ಉದ್ಯೋಗಸ್ಥ ಮಹಿಳೆಯರು ಮತ್ತು ಪುರುಷರು ಸಹ ಇಂತಹ ಹಾಸ್ಟೆಲ್‌ಗಳಲ್ಲಿ ಇರುತ್ತಾರೆ. ಇವರಿಗೆಲ್ಲಾ ಬೆಳಗ್ಗೆ ಆದರೆ ಸಾಕು ಉಪಾಹಾರ ಏನು ಮಾಡೋದು ಎಂಬ ಚಿಂತೆಯೇ ಕಾಡುತ್ತಿರುತ್ತದೆ ಅಂತ ಹೇಳಬಹುದು. ಬನ್ನಿ ಹಾಗಾದರೆ ನೀವು ಹಾಸ್ಟೆಲ್‌ಗಳಲ್ಲಿ ತಂಗಿದ್ದು, ಬೆಳಗ್ಗೆ ಎದ್ದು ಏನಪ್ಪಾ ಉಪಾಹಾರ ಮಾಡೋದು ಎಂಬ ಚಿಂತೆಯಲ್ಲಿ ಅಥವಾ ಗೊಂದಲದಲ್ಲಿದ್ದರೆ, ಇಲ್ಲಿದೆ ಅದಕ್ಕೆ ಪರಿಹಾರ. ಇದನ್ನೂ ಓದಿ: ಕೂದಲ ಆರೈಕೆಗೆ ಈ ಎಣ್ಣೆಯನ್ನು ಬಳಸಿ! ಉದುರುತ್ತೆ ಅನ್ನೋ ಪ್ರಾಬ್ಲಂ ಇರಲ್ಲ ಬೇಗನೆ ಮಾಡಿಕೊಳ್ಳಬಹುದಾದ ಉಪಾಹಾರ ಆಯ್ಕೆಗಳಿವು ನೋಡಿ ಬೆಳಗ್ಗೆ ಎದ್ದು ಏನು ತಿನ್ನಬೇಕೆಂದು ನಿರ್ಧರಿಸುವುದು ಅನೇಕ ಹಾಸ್ಟೆಲ್‌ ನಿವಾಸಿಗಳಿಗೆ ಗೊಂದಲವಾದ ವಿಷಯವಾಗಿರುತ್ತದೆ. ಸತ್ತು ಶರಬತ್ ಬೇಸಿಗೆಯಲ್ಲಿ ಈ ಸತ್ತು ಶರಬತ್ ಹೇಳಿ ಮಾಡಿಸಿದ ಉಪಾಹಾರದ ಆಯ್ಕೆಯಾಗಿದೆ, ಇದರಲ್ಲಿ ಜೀರಿಗೆ, ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಕಪ್ಪು ಉಪ್ಪನ್ನು ನೀರಿನೊಂದಿಗೆ ಬೆರೆಸಿ ತಯಾರಿಸಿದ ಅದ್ಭುತ ಪಾನೀಯ ಇದಾಗಿರುತ್ತದೆ. ಇದು ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾದ ರುಚಿಕರವಾದ ಮತ್ತು ಆರೋಗ್ಯಕರ ಪಾನೀಯವಾಗಿದೆ. ಈ ಆಹಾರದಲ್ಲಿ ಒಳಗೊಂಡಿರುವ ಹೆಚ್ಚಿನ ಫೈಬರ್ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಬಿಹಾರದ ಮೂಲೆ ಮೂಲೆಯಲ್ಲಿ ಸಹ ಸತ್ತು ಶರಬತ್‌ನ ಸವಿಯನ್ನು ಸವಿಯಬಹುದು. ಒಟ್ಸ್ ರಾತ್ರಿಯೇ ತಯಾರಿಸಿಟ್ಟುಕೊಂಡಿರುವ ಓಟ್ಸ್ ಬೆಳಗ್ಗೆ ಒಳ್ಳೆಯ ಉಪಾಹಾರದ ಆಯ್ಕೆಯಾಗಿರುತ್ತದೆ. ಇದಕ್ಕೆ ಬೇಕಾಗಿರುವುದು ಓಟ್ಸ್, ಹಾಲು ಮತ್ತು ಹಣ್ಣುಗಳು ಅಂತ ಹೇಳಬಹುದು. ಓಟ್ಸ್ ಅನ್ನು ರಾತ್ರಿಯಿಡೀ ಹಾಲಿನಲ್ಲಿ ನೆನೆಸಿಡಿ. ಆ ಜಾರ್ ಅನ್ನು ರೆಫ್ರಿಜರೇಟರ್‌ನಲ್ಲಿ ಇರಿಸಿ ಮತ್ತು ಮರುದಿನ ಬೆಳಗ್ಗೆ ಅದನ್ನು ಹೊರಗೆ ತೆಗೆದುಕೊಂಡು ಕುಡಿಯಿರಿ. ಹಣ್ಣಿನ ಬೌಲ್ ಹಣ್ಣಿನ ಬೌಲ್ ತಯಾರಿಸಿಕೊಳ್ಳುವುದಕ್ಕೆ ತುಂಬಾನೇ ಕಡಿಮೆ ಸಮಯ ಬೇಕಾಗುತ್ತದೆ. ನಿಮಗೆ ಬೆಳಗ್ಗೆ ಅಷ್ಟೊಂದು ಸಮಯ ಇರದೆ ಇದ್ದರೆ ಬೇಗನೆ ನಿಮ್ಮ ಬಳಿ ಇರುವ ಹಣ್ಣುಗಳನ್ನು ಬಳಸಿಕೊಂಡು ಹಣ್ಣಿನ ಬೌಲ್ ಮಾಡಿಕೊಳ್ಳಬಹುದು. ಈ ಹಣ್ಣುಗಳ ಮೇಲೆ ಸ್ವಲ್ಪ ರುಚಿಗೆ ಅಂತ ಚಾಟ್ ಮಸಾಲವನ್ನು ಸಿಂಪಡಿಸಿಕೊಳ್ಳಿ ಮತ್ತು ತಿನ್ನಿರಿ. ಸ್ಪ್ರೌಟ್ಸ್ ಸೌತೆಕಾಯಿ, ಟೊಮೆಟೊ, ಹಸಿರು ಮೆಣಸಿನಕಾಯಿ, ನಿಂಬೆ ರಸ ಮತ್ತು ಕಪ್ಪು ಉಪ್ಪಿನೊಂದಿಗೆ ಮೊಳಕೆಯೊಡೆದ ಹಸಿರು ಬೇಳೆಗಳನ್ನು ಎಲ್ಲವನ್ನೂ ಮಿಶ್ರಣ ಮಾಡಿಕೊಂಡು ಈ ಸ್ಪ್ರೌಟ್ಸ್ ಅನ್ನು ತಯಾರಿಸಿಕೊಳ್ಳಬಹುದು. ಇದು ಕಡಿಮೆ ಸಮಯ ತೆಗೆದುಕೊಳ್ಳುತ್ತದೆ, ಅಷ್ಟೇ ಆರೋಗ್ಯಕರ ಸಹ ಆಗಿರುತ್ತದೆ. ಸ್ಯಾಂಡ್‌ವಿಚ್ ಸ್ಯಾಂಡ್‌ವಿಚ್ ತಯಾರಿಸಿಕೊಳ್ಳಲು ತುಂಬಾನೇ ಸುಲಭ ಅಂತ ಹೇಳಬಹುದು, ಅಷ್ಟೇ ಅಲ್ಲದೆ ಇದನ್ನು ಅನೇಕ ವಿಧಗಳಲ್ಲಿ ತಯಾರಿಸಿಕೊಳ್ಳಬಹುದು. ಸ್ಯಾಂಡ್‌ವಿಚ್‌ ಮಾಡಿಕೊಳ್ಳಲು ಯಾವುದೇ ಕಟ್ಟುನಿಟ್ಟಾದ ಪಾಕವಿಧಾನವಿಲ್ಲ ಮತ್ತು ನಿಮ್ಮ ಇಚ್ಛೆಯಂತೆ ಇದನ್ನು ಮಾಡಿಕೊಳ್ಳಬಹುದು. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.