NEWS

Karnataka Politics: ಸಿದ್ದರಾಮಯ್ಯ ಬದಲಾವಣೆ ಪಕ್ಕಾನಾ? ಸಿಎಂ ಕುರ್ಚಿಗಾಗಿ ಕಸರತ್ತು, ‘ಕೈ’ ನಾಯಕರ ಸರಣಿ ರಹಸ್ಯ ಸಭೆ!

ಕಾಂಗ್ರೆಸ್ ನಾಯಕರ ಸರಣಿ ಸಭೆ ಬೆಂಗಳೂರು: ಕಾಂಗ್ರೆಸ್‌ನಲ್ಲಿ (Congress) ಸಿಎಂ ಸಿದ್ದರಾಮಯ್ಯ (CM Siddaramaiah) ಮುಖ್ಯಮಂತ್ರಿ ಪಟ್ಟದಿಂದ ಇಳಿತಾರಾ? ಆದರೆ ಸ್ವತಃ ಸಿಎಂ ಕೂಡ ನಾನು ಬಗ್ಗಲ್ಲ ಜಗ್ಗಲ್ಲ ಎಂದಿದ್ದಾರೆ. ಆದರೆ ಕಾಂಗ್ರೆಸ್‌ನಲ್ಲಿ (Karnataka) ನಡೆಯುತ್ತಿರೋ ಬೆಳವಣಿಗೆಗಳು ಮಾತ್ರ ಏನೋ ನಡೆಯುತ್ತಿದೆ ಅನ್ನೋದನ್ನು ಸಾರಿ ಸಾರಿ ಹೇಳುತ್ತಿವೆ. ಹೈಕಮಾಂಡ್‌ ಸಂದೇಶ ತಲುಪಿಸಿದ್ರಾ ಸತೀಶ್? ಕಾಂಗ್ರೆಸ್‌ನಲ್ಲಿ ಏನಿಲ್ಲ ಏನಿಲ್ಲ ಎನ್ನುತ್ತಲೇ ಸರಣಿ ಸಭೆಗಲು ಗುಟ್ಟು ಗುಟ್ಟಾಗಿ ನಡೆಯುತ್ತಲೇ ಇದೆ. ಮೊದಲಿಗೆ ಪರಮೇಶ್ವರ್‌ ಮನೆಗೆ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್‌ ಭೇಟಿ ನೀಡಿ ಗಂಟೆಗಳ ಕಾಲ ಚರ್ಚೆ ನಡೆಸಿದರು. ಇದರ ಬೆನ್ನಲ್ಲೇ ಪರಮೇಶ್ವರ್‌‌ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಕುತೂಹಲ ಮೂಡಿಸಿದ್ದರು. ಚಕ್ಕುಲಿ ನಿಪ್ಪಟ್ಟು ಕಥೆ ಕಟ್ಟಿದ್ದ ಮಿನಿಸ್ಟರ್‌ ಮಹದೇವಪ್ಪ ಡಿಸಿಎಂ ಜೊತೆಗೆ ಪರಮೇಶ್ವರ್‌ ಭೇಟಿ ಮಾಡಿದ ಬಳಿಕ ಸಿಎಂ ಭೇಟಿ ಮಾಡಿದ್ದ ನಂತರ ಸಚಿವ ಮಹದೇವಪ್ಪ ಮನೆಯಲ್ಲಿ ದಲಿತ ಸಮುದಾಯ ಘಟಾನುಘಟಿ ನಾಯಕರಾದ ಸತೀಶ್‌ ಜಾರಕಿಹೊಳಿ, ಪರಮೇಶ್ವರ್‌, ಮಹದೇವಪ್ಪ ಚರ್ಚೆ ನಡೆಸಿದ್ದರು. ಚಕ್ಕುಲಿ ನಿಪ್ಪಟ್ಟು ತಿಂದು ಹೋದರು ಅಂತ ಸಚಿವ ಮಹದೇವಪ್ಪ ಹೇಳಿದ್ದರು. ಇದನ್ನೂ ಓದಿ: Pleasure Marriages: ಪ್ರವಾಸಿಗರನ್ನೇ ಟೆಂಪರವರಿ ಮದುವೆ ಆಗ್ತಿದ್ದಾರೆ ಸುಂದರ ಯುವತಿಯರು! ಟ್ರೆಂಡ್ ಆಗ್ತಿದೆ ಪ್ಲೆಷರ್ ಮ್ಯಾರೇಜ್, ಎಲ್ಲಿ ಗೊತ್ತಾ?​​ ಆ ಚರ್ಚೆ ನಡುವೆಯೇ ದೆಹಲಿಗೆ ಹಾರಿದ್ದ ಸಚಿವ ಸತೀಶ್‌ ಜಾರಕಿಹೊಳಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದು ಕೂಡ ಭಾರೀ ಗುಮಾನಿ ಹುಟ್ಟುಹಾಕಿತ್ತು. ಅದರ ಬೆನ್ನಲ್ಲೇ ತುಮಕೂರಿನಲ್ಲಿ ಪರಮೇಶ್ವರ್‌ ಒಡೆತನದ ಸಿದ್ಧಾರ್ಥ ಇಂಜಿನಿಯರಿಂಗ್ ಕಾಲೇಜ್‌ನ ಅತಿಥಿ ಗೃಹದಲ್ಲಿ ಭೇಟಿಯಾಗಿ ಕುತೂಹಲ ಮೂಡಿಸಿದ್ದಾರೆ. ಆದರೆ ಊಟಕ್ಕೆ ಬಂದಿದ್ದೆ ಅಂತಾ ಸತೀಶ್‌ ಜಾರಕಿಹೊಳಿ ತೇಪೆ ಹಾಕಿದ್ದರು. ಇದರ ನಡುವೆಯೂ ಸತೀಶ್‌ ಜಾರಕಿಹೊಳಿ ಮುಂದಿನ ಸಿಎಂ ಅನ್ನೋ ಕೂಗು ಬೆಂಬಲಿಗರಿಂದ ಕೇಳಿಬಂತು. ಭೇಟಿಗೂ ಮುನ್ನ ಬೆಂಗಳೂರಲ್ಲಿ ಮಾತನಾಡಿದ್ದ ಗೃಹ ಸಚಿವ ಪರಮೇಶ್ವರ್‌, ಯಾವ ರಹಸ್ಯ ಸಭೆಯೂ ಇಲ್ಲ ಅಂದಿದರು. ಸಂಜೆ ಬಳಿಕ ರಹಸ್ಯ ಸಭೆಯನ್ನೇ ಮಾಡಿದರು. ದಲಿತರಿಗೆ ಮಾತ್ರವಲ್ಲ ಮುಸ್ಲಿಮರಿಗೂ ಆಸೆಯಿದೆ! ದಲಿತ ಸಿಎಂ ವಿಚಾರವಾಗಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ದಾವಣಗೆರೆಯಲ್ಲಿ ಸಚಿವ ಜಮೀರ್ ಅಹಮ್ಮದ್ ಮಾತನಾಡಿ, ಸಿಎಂ ಆಗಲು ಎಲ್ಲರಿಗೂ ಆಸೆ ಇದ್ದೇ ಇರುತ್ತದೆ. ಮುಸ್ಲಿಮರಿಗೂ ಆಸೆ ಇರುತ್ತದೆ. ದಲಿತರಿಗೆ, ಒಕ್ಕಲಿಗರಿಗೆ ಎಲ್ಲರಿಗೂ ಇರುತ್ತೆ ಎಂದಿದ್ದಾರೆ. ಈ ನಡುವೆ ಹುಬ್ಬಳ್ಳಿಯಲ್ಲಿ ಮಾತನಾಡಿರುವ ಬಿಜೆಪಿ ಶಾಸಕ ಮಹೇಶ್ ಟೆಂಗಿನಕಾಯಿ, ದಸಾರ ನಂತರ ಸಿಎಂ ಕುರ್ಚಿ ಬಿಟ್ಟು ಇಳಿಯೋದು ಖಚಿತ ಎಂದಿದ್ದಾರೆ. ಬಂಡೆ ತಾನೇ ಮುಂದಿನ ಸಿಎಂ ಅಂತಾ ಬಿಂಬಿಸುತ್ತಿದ್ದಾರೆ. ಆದರೆ ಎಂ.ಬಿ. ಪಾಟೀಲ್‌, ಆರ್.ವಿ. ದೇಶಪಾಂಡೆ, ಜಾರಕಿಹೊಳಿ ಸಹ ಟವೆಲ್ ಹಾಕಿದ್ದಾರೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ನಾನು ಜಗ್ಗೋದು ಇಲ್ಲ. ಬಗ್ಗೋದು ಇಲ್ಲ ಎನ್ನುತ್ತಿದ್ದಾರೆ. ಆದರೆ ಕಾಂಗ್ರೆಸ್‌ನ ಒಳಗೆ ಏನೋ ನಿಗೂಢ ನಡೆಗಳನ್ನು ಇಡಲಾಗ್ತಿದೆ ಅನ್ನೋದು ಮಾತ್ರ ಸತ್ಯ. ಈ ನಡುವೆ ದಲಿತ ಸಿಎಂ ಅಷ್ಟೇ ಅಲ್ಲ ಮುಸ್ಲಿಮರಿಗೂ ಸಿಎಂ ಸ್ಥಾನ ಬೇಕು ಅನ್ನೋ ಆಸೆ ವ್ಯಕ್ತವಾಗ್ತಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.