NEWS

Health Care: ಮೂಳೆ ಮುರಿತದ ಅಪಾಯವನ್ನು ವಿಟಮಿನ್ ಡಿ ತಡೆಗಟ್ಟುವುದಿಲ್ಲ! ಹೊಸ ಅಧ್ಯಯನದಿಂದ ಆಘಾತಕಾರಿ ವಿಷಯ ಬಯಲು

ನಮ್ಮ ದೇಹಕ್ಕೆ ಹೆಚ್ಚಿನ ಪ್ರೊಟೀನ್ (Protein), ವಿಟಮಿನ್‌ಗಳು (Vitamins) ಬೇಕಾಗುತ್ತವೆ. ಇದು ದೇಹದ (Body) ಕೆಲವೊಂದು ಅಂಗಗಳ ದುರಸ್ತಿಗೆ ಅವುಗಳ ಅಗತ್ಯವಿದೆ. ವಿಟಮಿನ್ ಡಿ ಕೊರತೆಯಿಂದ ಮೂಳೆ ಹಾಗೂ ಸ್ನಾಯುವಿನ ಆರೋಗ್ಯ ಕ್ಷೀಣಿಸುತ್ತದೆ, ಇದರಿಂದ ಆಗಾಗ್ಗೆ ಬೀಳುವುದು ಗಾಯಗಳುಂಟಾಗುವುದು ಮೂಳೆ ಮುರಿತ ಕೂಡ ಸಂಭವಿಸುವ ಅಪಾಯವಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಸೇವನೆ ಕಡಿಮೆಯಾದರೆ ಅಪಾಯ ಮೂಳೆ ಸಾಂದ್ರತೆ ಕಡಿಮೆ ಇರುವ ಹಾಗೂ ಮೂಳೆ ಮುರಿತದ ಅಪಾಯದಲ್ಲಿರುವ ರೋಗಿಗಳು ಕ್ರಮವಾಗಿ 400-800 IU ಮತ್ತು 800-1200 mg ದೈನಂದಿನ ಪ್ರಮಾಣದಲ್ಲಿ ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ಪ್ರಮಾಣವನ್ನು ಸೇವಿಸಬೇಕು ಎಂದು ತಜ್ಞರು ತಿಳಿಸುತ್ತಾರೆ. ಆದರೆ ಯುಎಸ್ ಪ್ರಿವೆಂಟೀವ್ ಸರ್ವೀಸಸ್ ಟಾಸ್ಕ್ ಫೋರ್ಸ್ ಹೊಸ ಶಿಫಾರಸುಗಳು ಹೇಳಿರುವಂತೆ ಆರೋಗ್ಯವಂತ ಹಿರಿಯಲ್ಲಿ ವಿಟಮಿನ್ ಡಿ ಸೇವನೆಯು ಬೀಳುವುದು ಅಥವಾ ಮೂಳೆ ಮುರಿತದ ಅಪಾಯವನ್ನು ಕಡಿಮೆ ಮಾಡುವುದಿಲ್ಲ ಎಂದಿದೆ. ಇದನ್ನೂ ಓದಿ: Fitness Tips: ವರ್ಕೌಟ್‌ ಮಾಡದೇ ಸ್ಲಿಮ್‌ ಆಗಬೇಕಾ? ಚಿಂತೆ ಬೇಡ, ಹೀಗೆ ಮಾಡೋದರಿಂದಲೂ ಸಣ್ಣ ಆಗಬಹುದು ನೋಡಿ ವಯಸ್ಸಾದವರು ವಿಟಮಿನ್ ಡಿ ಸಪ್ಲಿಮೆಂಟ್‌ಗಳನ್ನು ಸೇವಿಸಬಾರದು, ಸಂಪೂರ್ಣ ಆರೋಗ್ಯಕ್ಕಾಗಿ ಸೇವಿಸಬೇಕು, ಬೀಳುವುದು ಹಾಗೂ ಮೂಳೆ ಮುರಿತದ ಅಪಾಯಕ್ಕೆ ಅವರು ನಿರ್ದಿಷ್ಟ ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕೆಂದು ಹೇಳಿದೆ. ಟಾಸ್ಕ್ ಫೋರ್ಸ್ ಇಂತಹ ಶಿಫಾರಸನ್ನು ಮಾಡಿರುವುದು ಇದು ಮೊದಲಲ್ಲ. 2018 ರಲ್ಲಿ ಋತುಬಂಧಕ್ಕೊಳಗಾದ ಮಹಿಳೆಯರಲ್ಲಿ ಮುರಿತದ ತಡೆಗಟ್ಟುವಿಕೆಗಾಗಿ 400 ಯೂನಿಟ್ ಅಥವಾ ಕಡಿಮೆ ವಿಟಮಿನ್ ಡಿ ಮತ್ತು 1,000 ಮಿಲಿಗ್ರಾಂ ಅಥವಾ ಕಡಿಮೆ ಕ್ಯಾಲ್ಸಿಯಂ ಅನ್ನು ದಿನವೂ ಸೇವಿಸಬೇಕೆಂದು ಸೂಚಿಸಿತ್ತು. ಟಾಸ್ಕ್ ಪೋರ್ಸ್ ಮಾಡಿರುವ ಹೊಸ ಸಲಹೆ ಏನು? ಇದೇ ಟಾಸ್ಕ್ ಫೋರ್ಸ್ ಮಾಡಿರುವ ಹೊಸ ಶಿಫಾರಸಿನ ಪ್ರಕಾರ 60 ಹಾಗೂ ಅದಕ್ಕೂ ಮೇಲ್ಪಟ್ಟ ವಯಸ್ಸಿನವರು ಸಪ್ಲಿಮೆಂಟ್‌ಗಳನ್ನು ತೆಗೆದುಕೊಳ್ಳಬಾರದು ಎಂದು ತಿಳಿಸಿದೆ. ನಿರ್ದಿಷ್ಟ ಡೋಸ್‌ಗಳನ್ನು ತೆಗೆದುಕೊಳ್ಳುವ ಸಲಹೆಯನ್ನು ಅದು ನಿರಾಕರಿಸಿದೆ. ಈ ಶಿಫಾರಸು ಇನ್ನು ಸಾರ್ವಜನಿಕ ಅನಿಸಿಕೆಗಳಿಗೆ ಮುಕ್ತವಾಗಿಲ್ಲ. ಫ್ಯಾಮಿಲಿ ಮೆಡಿಸಿನ್ ಹಾಗೂ ಕಮ್ಯುನಿಟಿ ಹೆಲ್ತ್‌ನ ಪ್ರಮುಖರಾದ ಗೌತಮ್ ರಾವ್, 2018 ರಲ್ಲಿ ಮಾಡಿದ ಶಿಫಾರಸುಗಳಲ್ಲಿ ಪುರುಷರ ಭಾಗವಹಿಸುವಿಕೆಯ ಮಾಹಿತಿ ಇಲ್ಲ, ಹಾಗಾಗಿ ಇದನ್ನೇ ಅಂತಿಮ ಎಂದು ನಿರ್ಣಯಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: Zodiac Sign: 2025ರಲ್ಲಿ ಈ ಮೂರು ರಾಶಿಯವರಿಗೆ ಆರ್ಥಿಕ ನಷ್ಟವಾಗುತ್ತೆ ಎಚ್ಚರ! ನಿಮ್ಮ ವ್ಯವಹಾರದಲ್ಲಿ ಹೆಚ್ಚು ಜಾಗರೂಕರಾಗಿರಿ ರೋಗನಿರೋಧಕ ಶಕ್ತಿಯನ್ನು ವರ್ಧಿಸಲು ಪ್ರಯೋಜನಕಾರಿ ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂನ ಹೆಚ್ಚಿನ ಡೋಸ್‌ಗಳು ಪ್ರಯೋಜನಕಾರಿಯಾಗದೇ ಇರಬಹುದು ಎಂಬ ಪ್ರಶ್ನೆಗಳು ಇವೆ ಆದರೆ ಇಂತಿಷ್ಟು ಡೋಸ್‌ಗಳ ಸೇವನೆ ಪ್ರಯೋಜನಕಾರಿ ಎಂಬುದಕ್ಕೆ ಮಾಹಿತಿ ಇಲ್ಲ ಎಂದಿದ್ದಾರೆ. ತಜ್ಞರು ಹೇಳಿರುವಂತೆ ವಿಟಮಿನ್ ಡಿ ಎಂಬುದು ಪ್ರಮುಖ ಪೋಷಕಾಂಶವಾಗಿದ್ದು ಇದು ದೇಹ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ನೆರವಾಗುತ್ತದೆ. ರೋಗನಿರೋಧಕ ಶಕ್ತಿಯನ್ನು ವರ್ಧಿಸಲು ಪ್ರಯೋಜನಕಾರಿಯಾಗಿದೆ, ಇದರೊಂದಿಗೆ ಮೆದುಳು ಹಾಗೂ ಸ್ನಾಯುಗಳ ಕಾರ್ಯನಿರ್ವಹಣೆಗೂ ಅಗತ್ಯವಾಗಿದೆ ಎಂದಿದ್ದಾರೆ. ಯಾವುದೇ ಸಮಿತಿಯು ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಅನ್ನು ಸೇವಿಸಬಾರದು ಎಂದು ಹೇಳುತ್ತಿಲ್ಲ, ಏಕೆಂದರೆ ನ್ಯಾಶನಲ್ ಅಕಾಡೆಮಿ ಆಫ್ ಮೆಡಿಸಿನ್, ದಿನವೂ ಎಷ್ಟು ಪ್ರಮಾಣದ ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಅನ್ನು ಸೇವಿಸಬೇಕೆಂದು ಸೂಚಿಸಿದೆ. ಅಲ್ಲದೆ ಇವುಗಳ ಸೇವನೆಯು ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ ಹಾಗೂ ಮೆದುಳಿನ ಆರೋಗ್ಯವನ್ನು ಪುಷ್ಠೀಕರಿಸುತ್ತದೆ ಎಂದು ರಾವ್ ತಿಳಿಸುತ್ತಾರೆ. ಈ ಕುರಿತು ಅಧ್ಯಯನಗಳು ಏನು ಹೇಳುತ್ತವೆ? ಮುರಿತ ಹಾಗೂ ಬೀಳುವುದನ್ನು ಕಡಿಮೆ ಮಾಡಲು ದಿನವೂ ವಿಟಮಿನ್ ಡಿ ಡೋಸ್‌ನ 800 ರಿಂದ 1,000 ಐಯುವನ್ನು ಸೇವಿಸಬೇಕೆಂದು ತಿಳಿಸಿದೆ. ಜಾಮಾ ನೆಟ್‌ವರ್ಕ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ವಿಟಮಿನ್ ಡಿ ಹಾಗೂ ಕ್ಯಾಲ್ಸಿಯಂ ಸಪ್ಲಿಮೆಂಟ್‌ಗಳ ನಿತ್ಯದ ಸೇವನೆಯು ಹಿಪ್ ಫ್ರಾಕ್ಚರ್‌ನ ಅಪಾಯವನ್ನು 16% ದಷ್ಟು ಕಡಿಮೆ ಮಾಡುತ್ತದೆ ಎಂದು ತಿಳಿಸಿದೆ. None

About Us

Get our latest news in multiple languages with just one click. We are using highly optimized algorithms to bring you hoax-free news from various sources in India.